ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ನವದೆಹಲಿಯಲ್ಲಿ ಏಪ್ರಿಲ್ 9 ರಂದು ನವ್ ಕಾರ್ ಮಹಾಮಂತ್ರ ದಿವಸ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಭಾಗಿ


ಪವಿತ್ರ ಜೈನ ಪಠಣದ ಮೂಲಕ ಶಾಂತಿ, ಆಧ್ಯಾತ್ಮಿಕ ಜಾಗೃತಿ ಮತ್ತು ಸಾರ್ವತ್ರಿಕ ಸಾಮರಸ್ಯವನ್ನು ಪೋಷಿಸುವ ಜಾಗತಿಕ ಉಪಕ್ರಮದಲ್ಲಿ 108ಕ್ಕೂ ಹೆಚ್ಚು ದೇಶಗಳ ಜನರು ಭಾಗಿ

Posted On: 07 APR 2025 5:24PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವ್ ಕಾರ್ ಮಹಾಮಂತ್ರ ದಿವಸ ಅಂಗವಾಗಿ ಏಪ್ರಿಲ್ 9 ರಂದು ಬೆಳಗ್ಗೆ 8 ಗಂಟೆ  ನವದೆಹಲಿಯ ವಿಜ್ಞಾನ ಭವನದಲ್ಲಿ ಆಯೋಜನೆಯಾಗಿರುವ ಕಾರ್ಯಕ್ರಮಲ್ಲಿ ಭಾಗಿಯಾಗಲಿದ್ದಾರೆ. ಈ ಸಂದರ್ಭದಲ್ಲಿ ಅವರು ನೆರೆದಿರುವವರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ನವ್ ಕಾರ್ ಮಹಾಮಂತ್ರ ದಿವಸವು ಆಧ್ಯಾತ್ಮಿಕ ಸಾಮರಸ್ಯ ಮತ್ತು ನೈತಿಕ ಪ್ರಜ್ಞೆಯ ಮಹತ್ವದ ಆಚರಣೆಯಾಗಿದ್ದು, ಜೈನ ಧರ್ಮದ ಅತ್ಯಂತ ಪೂಜನೀಯ ಮತ್ತು ಸಾರ್ವತ್ರಿಕ ಪಠಣವಾದ ನವ್ ಕಾರ್ ಮಹಾಮಂತ್ರ (ನಮೋಕಾರ ಮಂತ್ರ)ದ ಸಾಮೂಹಿಕ ಪಠಣದ ಮೂಲಕ ಜನರನ್ನು ಒಂದುಗೂಡಿಸಲು ಪ್ರಯತ್ನಿಸುತ್ತದೆ. ಅಹಿಂಸೆ, ನಮ್ರತೆ ಮತ್ತು ಆಧ್ಯಾತ್ಮಿಕ ಉನ್ನತಿಯ ತತ್ವಗಳಲ್ಲಿ ಬೇರೂರಿರುವ ಮಂತ್ರವು ಪ್ರಬುದ್ಧ ಜೀವಿಗಳ ಸದ್ಗುಣಗಳನ್ನು ಗೌರವಿಸುತ್ತದೆ ಮತ್ತು ಆಂತರಿಕ ರೂಪಾಂತರವನ್ನು ಪ್ರೇರೇಪಿಸುತ್ತದೆ. ಸ್ವಯಂ-ಶುದ್ಧೀಕರಣ, ಸಹಿಷ್ಣುತೆ ಮತ್ತು ಸಾಮೂಹಿಕ ಯೋಗಕ್ಷೇಮದ ಮೌಲ್ಯಗಳ ಬಗ್ಗೆ ಚಿಂತನೆಯನ್ನು ಈ ದಿನವು ಪ್ರೋತ್ಸಾಹಿಸುತ್ತದೆ. 108 ಕ್ಕೂ ಹೆಚ್ಚು ದೇಶಗಳ ಜನರು ಶಾಂತಿ ಮತ್ತು ಒಗ್ಗಟ್ಟಿಗಾಗಿ ಜಾಗತಿಕ ಪಠಣ ಮಾಡಲು ಒಂದೆಡೆ ಸೇರಲಿದ್ದಾರೆ.

 

*****


(Release ID: 2119955) Visitor Counter : 24