ಹಣಕಾಸು ಸಚಿವಾಲಯ
ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಯುನೈಟೆಡ್ ಕಿಂಗ್‌ಡಮ್ ಮತ್ತು ಆಸ್ಟ್ರಿಯಾಕ್ಕೆ ಅಧಿಕೃತ ಭೇಟಿ
ಕೇಂದ್ರ ಹಣಕಾಸು ಸಚಿವರು 13ನೇ ಸುತ್ತಿನ ಭಾರತ-ಯುಕೆ ಆರ್ಥಿಕ ಮತ್ತು ಹಣಕಾಸು ಸಂವಾದದಲ್ಲಿ (13 ನೇ ಇಎಫ್‌ಡಿ) ಭಾಗಿ; ಜೊತೆಗೆ ಯುನೈಟೆಡ್ ಕಿಂಗ್‌ಡಮ್ ಮತ್ತು ಆಸ್ಟ್ರಿಯಾ ಎರದೂ ರಾಷ್ಟ್ರಗಳ ವಾಣಿಜ್ಯ ನಾಯಕರೊಂದಿಗೆ ದ್ವಿಪಕ್ಷೀಯ ಸಭೆಗಳು, ಚಿಂತಕರ ಚಾವಡಿಗಳು, ಹೂಡಿಕೆದಾರರೊಂದಿಗೆ ಸಭೆ
Posted On:
07 APR 2025 1:03PM by PIB Bengaluru
ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು 2025ರ ಏಪ್ರಿಲ್ 8 ರಿಂದ 13 ರವರೆಗೆ ಯುನೈಟೆಡ್ ಕಿಂಗ್‌ಡಮ್ ಮತ್ತು ಆಸ್ಟ್ರಿಯಾಕ್ಕೆ ಅಧಿಕೃತ ಪ್ರವಾಸ ಕೈಗೊಳ್ಳಲಿದ್ದಾರೆ. ಶ್ರೀಮತಿ ಸೀತಾರಾಮನ್ ಅವರು ಎರಡೂ ದೇಶಗಳಲ್ಲಿ ಸಚಿವ ಮಟ್ಟದ ದ್ವಿಪಕ್ಷೀಯ ಸಭೆಗಳಲ್ಲಿ ಭಾಗವಹಿಸಲಿದ್ದಾರೆ.

ಕೇಂದ್ರ ಹಣಕಾಸು ಸಚಿವರು ತಮ್ಮ ಭೇಟಿಯ ವೇಳೆ, 13ನೇ ಸುತ್ತಿನ ಭಾರತ - ಯುಕೆ ಆರ್ಥಿಕ ಮತ್ತು ಹಣಕಾಸು ಸಂವಾದದಲ್ಲಿ ಭಾಗವಹಿಸಲಿದ್ದಾರೆ ಮತ್ತು ಯುನೈಟೆಡ್ ಕಿಂಗ್‌ಡಮ್ ಮತ್ತು ಆಸ್ಟ್ರಿಯಾದಲ್ಲಿನ ಚಿಂತಕರು, ಹೂಡಿಕೆದಾರರು, ವಾಣಿಜ್ಯ ನಾಯಕರೊಂದಿಗೆ ಮಾತುಕತೆ ನಡೆಸಲಿದ್ದಾರೆ.
ಭಾರತ-ಯುಕೆ ಆರ್ಥಿಕ ಮತ್ತು ಹಣಕಾಸು ಸಂವಾದದ (13ನೇ ಇಎಫ್‌ಡಿ) 13 ನೇ ಸುತ್ತಿನ ಸಭೆಯು 2025ರ ಏಪ್ರಿಲ್ 9 ರಂದು ಯುನೈಟೆಡ್ ಕಿಂಗ್‌ಡಮ್‌ನ ಲಂಡನ್‌ನಲ್ಲಿ ನಡೆಯಲಿದೆ. 13ನೇ ಇಎಫ್‌ಡಿ ಸಂವಾದದ ಸಹ-ಅಧ್ಯಕ್ಷತೆಯನ್ನು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರು ಮತ್ತು ಯುಕೆ ಖಜಾನೆಯ ಚಾನ್ಸೆಲರ್ ವಹಿಸಲಿದ್ದಾರೆ.
13ನೇ ಇಎಫ್‌ಡಿ ಎರಡು ದೇಶಗಳ ನಡುವಿನ ಮಹತ್ವದ ದ್ವಿಪಕ್ಷೀಯ ವೇದಿಕೆಯಾಗಿದ್ದು, ಇದು ಸಚಿವರ ಮಟ್ಟ, ಅಧಿಕಾರಿ ಮಟ್ಟ, ಕಾರ್ಯಕಾರಿ ಗುಂಪುಗಳು ಮತ್ತು ಹೂಡಿಕೆ ವಿಷಯಗಳು, ಹಣಕಾಸು ಸೇವೆಗಳು, ಹಣಕಾಸು ನಿಯಮಗಳು, ಯುಪಿಐ ಪರಸ್ಪರ ಸಂಪರ್ಕಗಳು, ತೆರಿಗೆ ವಿಷಯಗಳು ಮತ್ತು ಅಕ್ರಮ ಹಣಕಾಸಿನ ಹರಿವುಗಳು ಸೇರಿ ಹಣಕಾಸು ಸಹಭಾಗಿತ್ವದ ನಾನಾ ಅಂಶಗಳಲ್ಲಿ ಆಯಾ ನಿಯಂತ್ರಕ ಸಂಸ್ಥೆಗಳ ನಡುವೆ ವಿಶ್ವಾಸಾರ್ಹವಾಗಿ ತೊಡಗಿಸಿಕೊಳ್ಳಲು ಅವಕಾಶಗಳನ್ನು ನೀಡುತ್ತದೆ.
13ನೇ ಇಎಫ್ ಡಿ ಸಂವಾದದಲ್ಲಿ ಭಾರತದ ಕಡೆಯಿಂದ ಪ್ರಮುಖ ಆದ್ಯತೆಗಳಲ್ಲಿ ಐಎಫ್ ಎಸ್ ಸಿ ಗಿಫ್ಟ್ ಸಿಟಿ, ಹೂಡಿಕೆ, ವಿಮೆ ಮತ್ತು ಪಿಂಚಣಿ ವಲಯಗಳು, ಫಿನ್‌ಟೆಕ್ ಮತ್ತು ಡಿಜಿಟಲ್ ಆರ್ಥಿಕತೆ ಮತ್ತು ಕೈಗೆಟುಕುವ ಮತ್ತು ಸುಸ್ಥಿರ ಹವಾಮಾನ ಹಣಕಾಸು ಸಜ್ಜುಗೊಳಿಸುವಿಕೆ ಮತ್ತಿತರ ಅಂಶಗಳು ಸೇರಿವೆ.
ಕೇಂದ್ರ ಹಣಕಾಸು ಸಚಿವರು ಮತ್ತು ನಿವೃತ್ತ ಖಜಾನೆ ಕುಲಪತಿಗಳು ಮತ್ತಷ್ಟು ಸಹಯೋಗಕ್ಕಾಗಿ ವಿವಿಧ ವರದಿಗಳು ಮತ್ತು ಹೊಸ ಉಪಕ್ರಮಗಳನ್ನು ಘೋಷಿಸಲು ಮತ್ತು ಆರಂಭಿಸಲು ಸಿದ್ಧರಾಗಿದ್ದಾರೆ.
ಭಾರತ-ಯುಕೆ 13ನೇ ಇಎಫ್ ಡಿಯ ಹೊರತಾಗಿ ಶ್ರೀಮತಿ ಸೀತಾರಾಮನ್ ಪ್ರಮುಖ ಗಣ್ಯರೊಂದಿಗೆ ದ್ವಿಪಕ್ಷೀಯ ಸಭೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ, ಹೂಡಿಕೆದಾರರ ದುಂಡುಮೇಜಿನ ಸಭೆಗಳಲ್ಲಿ ಮತ್ತು ಪ್ರಮುಖ ಹಣಕಾಸು ಸಂಸ್ಥೆಗಳು ಮತ್ತು ಕಂಪನಿಗಳ ಮುಖ್ಯಸ್ಥರೊಂದಿಗೆ ಇತರ ಸಭೆಗಳಲ್ಲಿ ಭಾಗವಹಿಸಲಿದ್ದಾರೆ.
ಯುನೈಟೆಡ್ ಕಿಂಗ್ ಡಂ ನ ಅಧಿಕೃತ ಭೇಟಿಯ ವೇಳೆ, ಕೇಂದ್ರ ಹಣಕಾಸು ಸಚಿವರು ಭಾರತ-ಯುಕೆ ಹೂಡಿಕೆದಾರರ ದುಂಡುಮೇಜಿನ ಸಭೆಯಲ್ಲಿ ಅಂತಾರಾಷ್ಟ್ರೀಯ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಸಮ್ಮುಖದಲ್ಲಿ ಪ್ರಾಸ್ತವಾವಿಕ ಭಾಷಣ ಮಾಡಲಿದ್ದಾರೆ, ಅದರಲ್ಲಿ ಪಿಂಚಣಿ ನಿಧಿಗಳು, ವಿಮಾ ಕಂಪನಿಗಳು, ಬ್ಯಾಂಕುಗಳು ಮತ್ತು ಹಣಕಾಸು ಸೇವಾ ಸಂಸ್ಥೆಗಳನ್ನು ಒಳಗೊಂಡ ಯುಕೆ ಹಣಕಾಸು ಪರಿಸರ ವ್ಯವಸ್ಥೆಯ ಪ್ರಮುಖ ನಿರ್ವಹಣಾ ಸಿಬ್ಬಂದಿ ಸೇರಿ ಮತ್ತಿತರರು ಭಾಗವಹಿಸಲಿದ್ದಾರೆ.
ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಮತ್ತು ಯುಕೆ ವ್ಯವಹಾರ ಮತ್ತು ವ್ಯಾಪಾರ ಕಾರ್ಯದರ್ಶಿ ಗೌರವಾನ್ವಿತ ಜೋನಾಥನ್ ರೆನಾಲ್ಡ್ಸ್ ಅವರು ಲಂಡನ್ ನಗರದ ಸಹಭಾಗಿತ್ವದಲ್ಲಿ ದುಂಡುಮೇಜಿನ ಸಹ-ಆತಿಥ್ಯ ವಹಿಸಲಿದ್ದಾರೆ, ಯುಕೆಯಲ್ಲಿನ ಪ್ರಮುಖ ಪಿಂಚಣಿ ನಿಧಿಗಳ ಉನ್ನತ ಸಿಇಒಗಳು ಮತ್ತು ಹಿರಿಯ ನಿರ್ವಹಣೆ ಮತ್ತು ಆಸ್ತಿ ವ್ಯವಸ್ಥಾಪಕರು ಪಾಲ್ಗೊಳ್ಳಲಿದ್ದಾರೆ.
ಆಸ್ಟ್ರಿಯನ್ ಅಧಿಕೃತ ಭೇಟಿಯ ಸಮಯದಲ್ಲಿ ಕೇಂದ್ರ ಹಣಕಾಸು ಸಚಿವರು ಆಸ್ಟ್ರಿಯಾದ ಹಣಕಾಸು ಸಚಿವರಾದ ಶ್ರೀ ಮಾರ್ಕಸ್ ಮಾರ್ಟರ್‌ಬೌರ್ ಮತ್ತು ಆಸ್ಟ್ರಿಯಾದ ಫೆಡರಲ್ ಚಾನ್ಸೆಲರ್ ಗೌರವಾನ್ವಿತ ಶ್ರೀ ಕ್ರಿಶ್ಚಿಯನ್ ಸ್ಟಾಕರ್ ಸೇರಿದಂತೆ ಹಿರಿಯ ಆಸ್ಟ್ರಿಯನ್ ಸರ್ಕಾರಿ ನಾಯಕರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ.
ಶ್ರೀಮತಿ ಸೀತಾರಾಮನ್ ಅವರು, ಆಸ್ಟ್ರಿಯಾದ ಆರ್ಥಿಕತೆ, ಇಂಧನ ಮತ್ತು ಪ್ರವಾಸೋದ್ಯಮ ಸಚಿವರಾದ ಮತ್ತು ಶ್ರೀ ವೋಲ್ಫ್‌ಗಾಂಗ್ ಹ್ಯಾಟ್‌ಮನ್ಸ್‌ಡೋರ್ಫರ್ ಅವರೊಂದಿಗೆ ಜಂಟಿ ಅಧ್ಯಕ್ಷತೆಯಲ್ಲಿ ಪ್ರಮುಖ ಆಸ್ಟ್ರಿಯಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಎರಡೂ ದೇಶಗಳ ನಡುವೆ ಆಳವಾದ ಹೂಡಿಕೆ ಸಹಯೋಗಕ್ಕಾಗಿ ಭಾರತದಲ್ಲಿ ಅಸ್ತಿತ್ವದಲ್ಲಿರುವ ಮತ್ತು ಮುಂಬರುವ ಅವಕಾಶಗಳ ಬಗ್ಗೆ ಅವರಿಗೆ ತಿಳಿಸಿಕೊಡಲಿದ್ದಾರೆ.
*****
(Release ID: 2119761)
Visitor Counter : 13