ಸಂಪುಟ
ಫಾಸ್ಫೇಟಿಕ್ ಮತ್ತು ಪೊಟ್ಯಾಸಿಯಮ್ (ಪಿ & ಕೆ) ರಸಗೊಬ್ಬರಗಳ ಮೇಲೆ ಖಾರಿಫ್, 2025 ಕ್ಕೆ (01.04.2025 ರಿಂದ 30.09.2025 ರವರೆಗೆ) ಪೋಷಕಾಂಶ ಆಧಾರಿತ ಸಬ್ಸಿಡಿ (ಎನ್ ಬಿ ಎಸ್) ದರಗಳಿಗೆ ಸಂಪುಟದ ಅನುಮೋದನೆ
ಎನ್ ಪಿ ಕೆ ಎಸ್ ಶ್ರೇಣಿಗಳು ಸೇರಿದಂತೆ ಅಧಿಸೂಚಿತ ಪಿ & ಕೆ ರಸಗೊಬ್ಬರಗಳು ರೈತರಿಗೆ ಸಬ್ಸಿಡಿಯೊಂದಿಗೆ, ಕೈಗೆಟುಕುವ ಮತ್ತು ಸಮಂಜಸವಾದ ದರದಲ್ಲಿ ಲಭ್ಯವಿರುತ್ತವೆ
ಸಿಂಗಲ್ ಸೂಪರ್ ಫಾಸ್ಫೇಟ್ (ಎಸ್ ಎಸ್ ಪಿ) ಮೇಲಿನ ಸರಕು ಸಬ್ಸಿಡಿಯನ್ನು ಖಾರಿಫ್ 2025 ರವರೆಗೆ ವಿಸ್ತರಿಸಲಾಗಿದೆ
ಅಧಿಸೂಚಿತ ಪಿ & ಕೆ ರಸಗೊಬ್ಬರಗಳಿಗೆ ಸಬ್ಸಿಡಿ ದರಗಳಿಗೆ ಅನುಮೋದನೆ ನೀಡಿಕೆ ಕೃಷಿ ವಲಯ ಮತ್ತು ಭಾರತೀಯ ರೈತರಿಗೆ ಸರ್ಕಾರವು ನೀಡಿರುವ ಪ್ರಾಮುಖ್ಯತೆಗೆ ಮತ್ತೊಂದು ಉದಾಹರಣೆಯಾಗಿದೆ
ಪಿ & ಕೆ ರಸಗೊಬ್ಬರಗಳಿಗೆ ಸಬ್ಸಿಡಿ ನೀಡುವುದು ರೈತರು ಅಗತ್ಯವಿರುವ ಪೋಷಕಾಂಶಗಳನ್ನು ನ್ಯಾಯಯುತ ಬೆಲೆಯಲ್ಲಿ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ, ಆರೋಗ್ಯಕರ ಮಣ್ಣು ಆರೋಗ್ಯಕರ ಫಸಲಿಗೆ ಕಾರಣವಾಗುತ್ತದೆ ಮತ್ತು ರಾಷ್ಟ್ರಕ್ಕೆ ಆಹಾರ ಭದ್ರತೆಯನ್ನು ಖಚಿತಪಡಿಸುತ್ತದೆ
ದೇಶಾದ್ಯಂತ ಪಿ & ಕೆ ರಸಗೊಬ್ಬರಗಳ ಕೈಗೆಟುಕುವ, ಸಬ್ಸಿಡಿ ಮತ್ತು ಸಮಂಜಸವಾದ ದರಗಳನ್ನು ಖಚಿತಪಡಿಸಿಕೊಳ್ಳಲು ಖಾರಿಫ್ 2025 ಕ್ಕೆ 37,216.15 ಕೋಟಿ ರೂ.ಗಳ ಎನ್ಬಿಎಸ್ ಸಬ್ಸಿಡಿಗೆ ಸಂಪುಟ ಅನುಮೋದನೆ ನೀಡಿದೆ
Posted On:
28 MAR 2025 4:11PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, 2025ರ ಖಾರಿಫ್ ಋತುವಿಗೆ (01.04.2025 ರಿಂದ 30.09.2025 ರವರೆಗೆ) ಫಾಸ್ಫೇಟಿಕ್ ಮತ್ತು ಪೊಟ್ಯಾಸಿಕ್ (ಪಿ & ಕೆ) ರಸಗೊಬ್ಬರಗಳ ಮೇಲೆ ಪೋಷಕಾಂಶ ಆಧಾರಿತ ಸಬ್ಸಿಡಿ (ಎನ್ಬಿಎಸ್) ದರಗಳನ್ನು ನಿಗದಿಪಡಿಸುವ ರಸಗೊಬ್ಬರ ಇಲಾಖೆಯ ಪ್ರಸ್ತಾಪಕ್ಕೆ ತನ್ನ ಅನುಮೋದನೆ ನೀಡಿದೆ.
2024ರ ಖಾರಿಫ್ ಋತುವಿಗೆ ಬಜೆಟ್ ಅವಶ್ಯಕತೆ ಸುಮಾರು 37,216.15 ಕೋಟಿ ರೂ. ಇದು 2024-25ರ ರಬಿ ಋತುವಿನ ಬಜೆಟ್ ಅಗತ್ಯಕ್ಕಿಂತ ಅಂದಾಜು 13,000 ಕೋಟಿ ರೂ.ಗಳಷ್ಟು ಹೆಚ್ಚು.
ಪ್ರಯೋಜನಗಳು:
• ರೈತರಿಗೆ ಸಬ್ಸಿಡಿ ದರದಲ್ಲಿ, ಕೈಗೆಟುಕುವ ಮತ್ತು ಸಮಂಜಸವಾದ ಬೆಲೆಯಲ್ಲಿ ರಸಗೊಬ್ಬರಗಳ ಲಭ್ಯತೆಯನ್ನು ಖಚಿತಪಡಿಸುತ್ತದೆ.
• ರಸಗೊಬ್ಬರಗಳು ಮತ್ತು ಒಳಸುರಿಗಳ ಅಂತರರಾಷ್ಟ್ರೀಯ ಬೆಲೆಗಳಲ್ಲಿನ ಇತ್ತೀಚಿನ ಪ್ರವೃತ್ತಿಗಳನ್ನು ಗಮನದಲ್ಲಿಟ್ಟುಕೊಂಡು ಪಿ &ಕೆ ರಸಗೊಬ್ಬರಗಳ ಮೇಲಿನ ಸಬ್ಸಿಡಿಯನ್ನು ತರ್ಕಬದ್ಧಗೊಳಿಸುತ್ತದೆ.
ಅನುಷ್ಠಾನ ಕಾರ್ಯತಂತ್ರ ಮತ್ತು ಗುರಿಗಳು:
ರೈತರಿಗೆ ಕೈಗೆಟುಕುವ ಬೆಲೆಯಲ್ಲಿ ಈ ರಸಗೊಬ್ಬರಗಳ ಸುಗಮ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಖಾರಿಫ್ 2025 ರ ಅನುಮೋದಿತ ದರಗಳ ಆಧಾರದ ಮೇಲೆ (01.04.2025 ರಿಂದ 30.09.2025 ರವರೆಗೆ ಅನ್ವಯಿಸುತ್ತದೆ) ಎನ್ಪಿಕೆಎಸ್ ದರ್ಜೆಗಳು/ಶ್ರೇಣಿಗಳು ಸೇರಿದಂತೆ ಪಿ &ಕೆ ರಸಗೊಬ್ಬರಗಳ ಮೇಲೆ ಸಬ್ಸಿಡಿಯನ್ನು ನೀಡಲಾಗುವುದು.
ಹಿನ್ನೆಲೆ:
ಸರ್ಕಾರವು ರಸಗೊಬ್ಬರ ತಯಾರಕರು / ಆಮದುದಾರರ ಮೂಲಕ ರೈತರಿಗೆ ಸಬ್ಸಿಡಿ ದರದಲ್ಲಿ 28 ದರ್ಜೆಯ ಪಿ & ಕೆ ರಸಗೊಬ್ಬರಗಳನ್ನು ಒದಗಿಸುತ್ತಿದೆ. ಪಿ & ಕೆ ರಸಗೊಬ್ಬರಗಳ ಮೇಲಿನ ಸಬ್ಸಿಡಿಯನ್ನು 01.04.2010 ರಿಂದ ಎನ್ಬಿಎಸ್ ಯೋಜನೆಯಿಂದ ನಿಯಂತ್ರಿಸಲಾಗುತ್ತದೆ. ತನ್ನ ರೈತ ಸ್ನೇಹಿ ವಿಧಾನಕ್ಕೆ ಅನುಗುಣವಾಗಿ, ರೈತರಿಗೆ ಕೈಗೆಟುಕುವ ಬೆಲೆಯಲ್ಲಿ ಪಿ & ಕೆ ರಸಗೊಬ್ಬರಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಬದ್ಧವಾಗಿದೆ. ರಸಗೊಬ್ಬರಗಳು ಮತ್ತು ಒಳಸುರಿಗಳಾದ ಯೂರಿಯಾ, ಡಿಎಪಿ, ಎಂಒಪಿ ಮತ್ತು ಗಂಧಕದ (ಸಲ್ಫರಿನ) ಅಂತಾರಾಷ್ಟ್ರೀಯ ಬೆಲೆಗಳಲ್ಲಿನ ಇತ್ತೀಚಿನ ಪ್ರವೃತ್ತಿಗಳನ್ನು ಗಮನದಲ್ಲಿಟ್ಟುಕೊಂಡು, ಎನ್ ಪಿ ಕೆ ಎಸ್ ಶ್ರೇಣಿಗಳು ಸೇರಿದಂತೆ ಫಾಸ್ಫೇಟಿಕ್ ಮತ್ತು ಪೊಟ್ಯಾಸಿಕ್ (ಪಿ & ಕೆ) ರಸಗೊಬ್ಬರಗಳ ಮೇಲೆ 01.04.25 ರಿಂದ 30.09.25 ರವರೆಗೆ ಜಾರಿಗೆ ಬರುವಂತೆ ಖಾರಿಫ್ 2025 ರ ಎನ್ ಬಿ ಎಸ್ ದರಗಳನ್ನು ಅನುಮೋದಿಸಲು ಸರ್ಕಾರ ನಿರ್ಧರಿಸಿದೆ. ಅನುಮೋದಿತ ಮತ್ತು ಅಧಿಸೂಚಿತ ದರಗಳ ಪ್ರಕಾರ ರಸಗೊಬ್ಬರ ಕಂಪನಿಗಳಿಗೆ ಸಬ್ಸಿಡಿ ನೀಡಲಾಗುವುದು, ಇದರಿಂದ ರಸಗೊಬ್ಬರಗಳು ರೈತರಿಗೆ ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗುತ್ತವೆ.
(Release ID: 2116314)
Visitor Counter : 49
Read this release in:
Gujarati
,
Marathi
,
Telugu
,
Malayalam
,
English
,
Urdu
,
Hindi
,
Nepali
,
Bengali
,
Assamese
,
Punjabi
,
Odia
,
Tamil