ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಹೋಳಿ ಹಬ್ಬದ ಮುನ್ನಾ ದಿನದಂದು ಭಾರತದ ರಾಷ್ಟ್ರಪತಿ ಅವರ ಶುಭಾಶಯಗಳು

Posted On: 13 MAR 2025 6:38PM by PIB Bengaluru

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಹೋಳಿ ಹಬ್ಬದ ಮುನ್ನಾದಿನದಂದು ತಮ್ಮ ಸಹ ನಾಗರೀಕರಿಗೆ ಶುಭಾಶಯ ಕೋರಿದ್ದಾರೆ.

ಹೋಳಿ ಹಬ್ಬದ ಶುಭ ಸಂದರ್ಭದ ವೇಳೆ ತಮ್ಮ ಸಂದೇಶದಲ್ಲಿ, ‘‘ಭಾರತ ಮತ್ತು ವಿದೇಶಗಳಲ್ಲಿ ವಾಸಿಸುವ ಎಲ್ಲಾ ಭಾರತೀಯರಿಗೆ ನಾನು ಆತ್ಮೀಯ ಶುಭಾಶಯಗಳನ್ನು ಮತ್ತು ಹಾರೈಕೆಗಳನ್ನು ಸಲ್ಲಿಸುತ್ತೇನೆ.

ಬಣ್ಣಗಳ ಹಬ್ಬವಾದ ಹೋಳಿ ಸಂತೋಷ ಮತ್ತು ಉತ್ಸಾಹವನ್ನು ತರುತ್ತದೆ. ಈ ಹಬ್ಬವು ನಮ್ಮ ಜೀವನದಲ್ಲಿ ಏಕತೆ ಮತ್ತು ಸಹೋದರತ್ವದ ಮನೋಭಾವವನ್ನು ಪೋಷಿಸುತ್ತದೆ. ಹೋಳಿಯ ವೈವಿಧ್ಯಮಯ ಬಣ್ಣಗಳು ವೈವಿಧ್ಯತೆಯಲ್ಲಿಏಕತೆಯ ಮೌಲ್ಯಗಳನ್ನು ಪ್ರತಿಬಿಂಬಿಸುತ್ತವೆ. ಈ ಹಬ್ಬವು ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯವನ್ನು ಸಂಕೇತಿಸುತ್ತದೆ. ನಮ್ಮ ಸುತ್ತಲೂ ಪ್ರೀತಿ ಮತ್ತು ಸಕಾರಾತ್ಮಕತೆಯನ್ನು ಹರಡಲು ಇದು ನಮಗೆ ಕಲಿಸುತ್ತದೆ.

ಬಣ್ಣಗಳ ಈ ಹಬ್ಬವು ನಿಮ್ಮ ಜೀವನವನ್ನು ಸಂತೋಷ ಮತ್ತು ಸಮೃದ್ಧಿಯಿಂದ ತುಂಬಲಿ,’’ ಎಂದಿದ್ದಾರೆ.

Please click here to see the President's message - 

 

*****


(Release ID: 2111346) Visitor Counter : 16