ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ವಿಕಸಿತ  ಭಾರತವನ್ನು ರೂಪಿಸುವಲ್ಲಿ ಅಸಾಧಾರಣ ಮಹಿಳೆಯರ ಕೊಡುಗೆಗಳನ್ನು ಪ್ರಧಾನಮಂತ್ರಿ ಸ್ಮರಿಸಿದರು

Posted On: 08 MAR 2025 11:54AM by PIB Bengaluru

ಈ ಅಂತಾರಾಷ್ಟ್ರೀಯ ಮಹಿಳಾ ದಿನದಂದು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸುತ್ತಿರುವ ಮಹಿಳೆಯರಿಗೆ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಹಸ್ತಾಂತರಿಸುವ ಮೂಲಕ ಭಾರತದಾದ್ಯಂತ ಮಹಿಳೆಯರ ಅಪಾರ ಕೊಡುಗೆಗಳನ್ನು ಆಚರಿಸುವಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದಾರೆ.

ಬೆಳಗ್ಗೆಯಿಂದ ಅಸಾಧಾರಣ ಮಹಿಳೆಯರು ತಮ್ಮ ಸ್ವಂತ ಪ್ರಯಾಣವನ್ನು ಹಂಚಿಕೊಳ್ಳುವ ಮತ್ತು ಇತರ ಮಹಿಳೆಯರಿಗೆ ಸ್ಫೂರ್ತಿ ನೀಡುವ ಸ್ಪೂರ್ತಿದಾಯಕ ಪೋಸ್ಟ್ ಗಳನ್ನು ನಾವು ನೋಡುತ್ತಿದ್ದೇವೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. "ಅವರ ದೃಢನಿಶ್ಚಯ ಮತ್ತು ಯಶಸ್ಸು ಮಹಿಳೆಯರು ಹೊಂದಿರುವ ಅಪರಿಮಿತ ಸಾಮರ್ಥ್ಯವನ್ನು ನಮಗೆ ನೆನಪಿಸುತ್ತದೆ. ಇಂದು ಮತ್ತು ಪ್ರತಿದಿನ, ನಾವು ವಿಕಸಿತ ಭಾರತವನ್ನು ರೂಪಿಸುವಲ್ಲಿ ಅವರ ಕೊಡುಗೆಗಳನ್ನು ಆಚರಿಸುತ್ತೇವೆ", ಎಂದು ಪ್ರಧಾನಿ ಹೇಳಿದರು.

ಈ ಸಂಬಂಧ ಪ್ರಧಾನಮಂತ್ರಿ ಅವರು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ:

"ಬೆಳಗ್ಗೆಯಿಂದ, ಅಸಾಧಾರಣ ಮಹಿಳೆಯರು ತಮ್ಮ ಸ್ವಂತ ಪ್ರಯಾಣವನ್ನು ಹಂಚಿಕೊಳ್ಳುವ ಮತ್ತು ಇತರ ಮಹಿಳೆಯರಿಗೆ ಸ್ಫೂರ್ತಿ ನೀಡುವ ಸ್ಪೂರ್ತಿದಾಯಕ ಪೋಸ್ಟ್ ಗಳನ್ನು ನೀವೆಲ್ಲರೂ ನೋಡಿದ್ದೀರಿ. ಈ ಮಹಿಳೆಯರು ಭಾರತದ ವಿವಿಧ ಭಾಗಗಳಿಗೆ ಸೇರಿದವರು ಮತ್ತು ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ, ಆದರೆ ಒಂದು ಅಂತರ್ಗತ ವಿಷಯವಿದೆ - ಭಾರತದ ನಾರಿ ಶಕ್ತಿಯ ಪರಾಕ್ರಮ.

ಅವರ ದೃಢನಿಶ್ಚಯ ಮತ್ತು ಯಶಸ್ಸು ಮಹಿಳೆಯರು ಹೊಂದಿರುವ ಅಪರಿಮಿತ ಸಾಮರ್ಥ್ಯವನ್ನು ನಮಗೆ ನೆನಪಿಸುತ್ತದೆ. ಇಂದು ಮತ್ತು ಪ್ರತಿದಿನ, ವಿಕಸಿತ ಭಾರತವನ್ನು ರೂಪಿಸುವಲ್ಲಿ ಅವರ ಕೊಡುಗೆಗಳನ್ನು ನಾವು ಆಚರಿಸುತ್ತೇವೆ,’’  ಎಂದಿದ್ದಾರೆ.

 

 

*****


(Release ID: 2109401) Visitor Counter : 51