ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಚಲನಚಿತ್ರ ನಿರ್ಮಾಪಕರು ಮತ್ತು ಆನಿಮೇಟರ್‌ಗಳಿಗಾಗಿ ವಿಶೇಷ ಮಾಸ್ಟರ್‌ಕ್ಲಾಸ್ ಸರಣಿ: ಪ್ರಮುಖ ಕ್ರಿಯೇಟಿವ್ ಸ್ಟುಡಿಯೊ ಜೊತೆ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಪಾಲುದಾರಿಕೆ
ಅನಿಮೇಷನ್ ಚಲನಚಿತ್ರ ನಿರ್ಮಾಪಕರ ಸ್ಪರ್ಧೆ(ಎ ಎಫ್ ಸಿ): ಜಾಗತಿಕ ಮನ್ನಣೆ, ಮಾರ್ಗದರ್ಶನ ಮತ್ತು ಹಣಕಾಸು ಅವಕಾಶಗಳಿಗೆ ಒಂದು ಪ್ರವೇಶದ್ವಾರ
ಚಲನಚಿತ್ರ ನಿರ್ಮಾಪಕರು ಮತ್ತು ಅನಿಮೇಟರ್‌ಗಳಿಗಾಗಿ ಉದ್ಯಮದ ಪ್ರಮುಖ ತಜ್ಞರು ವಿಶೇಷ ಮಾಸ್ಟರ್‌ಕ್ಲಾಸ್‌ಗಳನ್ನು ಆಯೋಜಿಸಲಿದ್ದಾರೆ
Posted On:
27 FEB 2025 6:29PM by PIB Bengaluru
ವಾರ್ತಾ ಮತ್ತು ಪ್ರಸಾರ ಸಚಿವಾಲಯ(ಎಂಐಬಿ) ಮತ್ತು ಡ್ಯಾನ್ಸಿಂಗ್ ಆಟಮ್ಸ್(ಲಾಸ್ ಏಂಜಲೀಸ್ ಮತ್ತು ಭಾರತದಲ್ಲಿ ನೆಲೆಗೊಂಡಿರುವ ಸೃಜನಶೀಲ ಸ್ಟುಡಿಯೊ) ಜತೆಯಾಗಿ ವಿಶ್ವ ದೃಶ್ಯ ಶ್ರವಣ (ಆಡಿಯೊ ವಿಷುಯಲ್) ಮತ್ತು ಮನರಂಜನಾ ಶೃಂಗಸಭೆ(WAVES) - ಅನಿಮೇಷನ್ ಚಲನಚಿತ್ರ ನಿರ್ಮಾಪಕರ ಸ್ಪರ್ಧೆ(ಎಎಫ್ ಸಿ)ಯ ಭಾಗವಾಗಿ ವಿಶೇಷ ಮಾಸ್ಟರ್‌ಕ್ಲಾಸ್ ಸರಣಿಯನ್ನು ತರುತ್ತಿವೆ. ವಿಜೇತರು ಜಾಗತಿಕ ಮನ್ನಣೆ, ಉನ್ನತ ವೃತ್ತಿಪರರಿಂದ ಮಾರ್ಗದರ್ಶನ ಮತ್ತು ಹಣಕಾಸು ಮತ್ತು ವಿತರಣೆಯ ಅವಕಾಶಗಳನ್ನು ಪಡೆಯುತ್ತಾರೆ.

ಸ್ವತಂತ್ರ ಚಿತ್ರ ತಯಾರಕರು(ಸೃಷ್ಟಿಕರ್ತರು), ವಿದ್ಯಾರ್ಥಿಗಳು ಮತ್ತು ಸ್ಟುಡಿಯೊಗಳಿಗೆ ತಮ್ಮ ಅನಿಮೇಟೆಡ್ ಕಿರುಚಿತ್ರಗಳನ್ನು ಪ್ರದರ್ಶಿಸಲು ಎಎಫ್ ಸಿ ಮುಕ್ತವಾಗಿದೆ. ಈ ಸರಣಿಯು ಚಿತ್ರಕಥೆ ಬರವಣಿಗೆ, ಚಲನಚಿತ್ರ ವಿನ್ಯಾಸ, ನಿರ್ಮಾಣ, ಕಥೆ ಹೇಳುವಿಕೆ, ಅನಿಮೇಷನ್ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳ ಕುರಿತು ಉದ್ಯಮದ ಉನ್ನತ ತಜ್ಞರು ತಮ್ಮ ಒಳನೋಟಗಳನ್ನು ಹಂಚಿಕೊಳ್ಳಲಿದ್ದಾರೆ.
ಮಾಸ್ಟರ್‌ಕ್ಲಾಸ್ ವೇಳಾಪಟ್ಟಿ ಮತ್ತು ಮುಂಬರುವ ಕಲಾಪ ವಿವರಗಳು:
1. ಮಾರ್ಚ್ 3 - ಬ್ಲಾಕ್‌ಬಸ್ಟರ್ ಚಲನಚಿತ್ರಗಳ ನಿರ್ಮಾಣ
ಭಾಷಣಕಾರ: ಶೋಬು ಯಾರ್ಲಗಡ್ಡ (ನಿರ್ಮಾಪಕ, ಬಾಹುಬಲಿ ಸರಣಿ)
- ಮುಖ್ಯಾಂಶಗಳು: ಹೆಚ್ಚಿನ ಪ್ರಭಾವ ಬೀರುವ ಚಲನಚಿತ್ರಗಳ ಅಭಿವೃದ್ಧಿ, ಹಣಕಾಸು ಒದಗಿಸುವುದು ಮತ್ತು ನಿರ್ಮಾಣ
- ಜೂಮ್ ಮೂಲಕ ಸೇರಿ:
https://us06web.zoom.us/j/87875515586?pwd=rBBuTksjMQzVw4if3hEIc71Hg1nFMB.1
2. ಮಾರ್ಚ್ 4 – ಜಾಗತಿಕ ಪ್ರೇಕ್ಷಕರಿಗಾಗಿ ಚಿತ್ರ ನಿರ್ಮಾಣ
ಭಾಷಣಕಾರ: ಗುಣೀತ್ ಮೋಂಗಾ (ಆಸ್ಕರ್ ವಿಜೇತ ನಿರ್ಮಾಪಕ)
- ಮುಖ್ಯಾಂಶಗಳು: ಭಾರತೀಯ ಚಲನಚಿತ್ರಗಳನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೆ ಕೊಂಡೊಯ್ಯುವುದು ಹೇಗೆ?; ಸಹ-ನಿರ್ಮಾಣ, ಹಣಕಾಸು ಮತ್ತು ವಿತರಣೆ
- ಜೂಮ್ ಮೂಲಕ ಸೇರಿ:
https://us06web.zoom.us/j/87875515586?pwd=rBBuTksjMQzVw4if3hEIc71Hg1nFMB.1
3. ಮಾರ್ಚ್ 5 (ಟಿಬಿಸಿ) – ಪಾತ್ರ ಅನಿಮೇಷನ್ ಮತ್ತು ವಿಶ್ವ ನಿರ್ಮಾಣ
ಭಾಷಣಕಾರ: ಅರ್ನೌ ಒಲ್ಲೆ ಲೋಪೆಜ್ (ಅನಿಮೇಷನ್ ತಜ್ಞ)
- ಮುಖ್ಯಾಂಶಗಳು: ಪಾತ್ರ-ಚಾಲಿತ ಕಥೆ ಹೇಳುವಿಕೆ ಮತ್ತು ವಿಶ್ವ ಚಲನಚಿತ್ರ ನಿರ್ಮಾಣವನ್ನು ಅರ್ಥ ಮಾಡಿಕೊಳ್ಳುವುದು.
- ಜೂಮ್ ಮೂಲಕ ಸೇರಿ:
https://us06web.zoom.us/j/88513001690?pwd=ac2Ra8475uuWBQrt7CCiXjgYsZpOhA.1
4. ಮಾರ್ಚ್ 6 – ಮಾಧ್ಯಮಗಳಲ್ಲಿ ಕಥೆ ಹೇಳುವುದು
ಭಾಷಣಕಾರ: ಅನು ಸಿಂಗ್ ಚೌಧರಿ (ಚಿತ್ರಕಥೆಗಾರ್ತಿ ಮತ್ತು ಪತ್ರಕರ್ತೆ
- ಮುಖ್ಯಾಂಶಗಳು: ಚಲನಚಿತ್ರಗಳು, ಸರಣಿಗಳು ಮತ್ತು ಪುಸ್ತಕಗಳಿಗೆ ಚಿತ್ರಕಥೆ ತಂತ್ರಗಳು ಮತ್ತು ಕಥೆ ಹೇಳುವಿಕೆ
- ಜೂಮ್ ಮೂಲಕ ಸೇರಿ:
https://us06web.zoom.us/j/87830821165?pwd=AdPFfRBzlyuauTKblJt2brbWQGlmzL.1
ಇದಕ್ಕೂ ಮೊದಲು, ಫೆಬ್ರವರಿ 26 ಮತ್ತು 27ರಂದು 2 ಮಾಸ್ಟರ್‌ಕ್ಲಾಸ್ ಕಲಾಪಗಳನ್ನು ನಡೆಸಲಾಯಿತು. ಫೆಬ್ರವರಿ 26ರಂದು ಬರಹಗಾರ ಮತ್ತು ಚಿತ್ರಕಥೆ ತಜ್ಞ ಫಾರೂಖ್ ಧೋಂಡಿ ಅವರು ಚಿತ್ರಕಥೆ ಬರೆಯುವುದು ಮತ್ತು ಟ್ರೇಲರ್‌ಗಳು ಎಂಬ ವಿಷಯ ಕುರಿತು 1 ಕಲಾಪ ನಡೆಸಿಕೊಟ್ಟರು. ಕಥೆ ಹೇಳುವಿಕೆ, ಚಿತ್ರಕಥೆ ಬರೆಯುವುದು ಮತ್ತು ಬರವಣಿಗೆಯ ವ್ಯವಹಾರದ ಬಗ್ಗೆ ಅವರು ಒಳನೋಟಗಳನ್ನು ನೀಡಿದರು. ಫೆಬ್ರವರಿ 27ರಂದು ನಿರ್ಮಾಣ ವಿನ್ಯಾಸಕಿ ಮತ್ತು ದೃಶ್ಯ ಕಲಾವಿದೆ ರೂಪಾಲಿ ಗಟ್ಟಿ ಅವರು, ಚಲನಚಿತ್ರ ವಿನ್ಯಾಸ ಮತ್ತು ದೃಶ್ಯ ಅಭಿವೃದ್ಧಿಯ ಕುರಿತು 1 ಕಲಾಪ ನಡೆಸಿದರು, ಅನಿಮೇಷನ್ ಮತ್ತು ಲೈವ್-ಆಕ್ಷನ್ ಯೋಜನೆಗಳಿಗಾಗಿ ತಲ್ಲೀನಗೊಳಿಸುವ ದೃಶ್ಯ ಪ್ರಪಂಚಗಳನ್ನು ರಚಿಸುವ ಕುರಿತು ಅವರು ಪ್ರಾಯೋಗಿಕ ಒಳನೋಟಗಳನ್ನು ಒದಗಿಸಿದರು.
ನೆಟ್‌ವರ್ಕಿಂಗ್ ಮತ್ತು ಪ್ರಾಜೆಕ್ಟ್ ಸಲ್ಲಿಕೆಗಳು
ಭಾರತದ ಅತ್ಯುತ್ತಮ ಸೃಜನಶೀಲ ಪ್ರತಿಭೆ ಪ್ರದರ್ಶಿಸುವ ಜಾಗತಿಕ ಮಾರುಕಟ್ಟೆಯಾದ ವೇವ್ಸ್ ಬಜಾರ್‌ಗೆ ತಮ್ಮ ಯೋಜನೆಗಳನ್ನು ಸಲ್ಲಿಸಲು ವೇವ್ಸ್(WAVES), ಭಾರತೀಯ ಚಿತ್ರ ತಯಾರಕ(ಸೃಷ್ಟಿಕರ್ತರು)ರನ್ನು ಪ್ರೋತ್ಸಾಹಿಸುತ್ತದೆ. ಈ ಉಪಕ್ರಮವು ಭಾರತೀಯ ವಿಷಯವನ್ನು ಅಂತಾರಾಷ್ಟ್ರೀಯ ಖರೀದಿದಾರರೊಂದಿಗೆ ಸಂಪರ್ಕಿಸುತ್ತದೆ, ನೆಟ್‌ವರ್ಕಿಂಗ್, ಸಹಭಾಗಿತ್ವ ಮತ್ತು ಜಾಗತಿಕ ಅವಕಾಶಗಳನ್ನು ಬೆಳೆಸುತ್ತದೆ. ಹೆಚ್ಚಿನ ವಿವರಗಳಿಗಾಗಿ, waves@dancingatoms.com ಇಲ್ಲಿ ಸಂಪರ್ಕಿಸಿ
ವೇವ್ಸ್(WAVES) ಬಗ್ಗೆ
ಮಾಧ್ಯಮ ಮತ್ತು ಮನರಂಜನೆ(ಎಂ&ಇ) ವಲಯದ ಮಹತ್ವಾಕಾಂಕ್ಷಿ ಕಾರ್ಯಕ್ರಮವಾದ ಮೊದಲ ವಿಶ್ವ ಆಡಿಯೊ ವಿಷುಯಲ್ ಮತ್ತು ಮನರಂಜನಾ ಶೃಂಗಸಭೆ(WAVES)ಯನ್ನು ಭಾರತ ಸರ್ಕಾರವು 2025 ಮೇ 1ರಿಂದ 4ರ ವರೆಗೆ ಮಹಾರಾಷ್ಟ್ರದ ಮುಂಬೈನಲ್ಲಿ ಆಯೋಜಿಸಲಿದೆ.
ನೀವು ಉದ್ಯಮ ವೃತ್ತಿಪರರಾಗಿರಲಿ, ಹೂಡಿಕೆದಾರರಾಗಿರಲಿ, ಸೃಷ್ಟಿಕರ್ತರಾಗಿರಲಿ ಅಥವಾ ನಾವೀನ್ಯಕಾರರಾಗಿರಲಿ, ಶೃಂಗಸಭೆಯು ಎಂ&ಇ ವಲಯಕ್ಕೆ ಸಂಪರ್ಕ ಸಾಧಿಸಲು, ಸಹಭಾಗಿತ್ವ ಹೊಂದಲು, ನಾವೀನ್ಯತೆ ನೀಡಲು ಮತ್ತು ಕೊಡುಗೆ ನೀಡಲು ಅಂತಿಮ ಜಾಗತಿಕ ವೇದಿಕೆ ಒದಗಿಸುತ್ತದೆ.
WAVES ಭಾರತದ ಸೃಜನಶೀಲ ಶಕ್ತಿಯನ್ನು ಹೆಚ್ಚಿಸಲು, ವಿಷಯ ಸೃಷ್ಟಿ, ಬೌದ್ಧಿಕ ಆಸ್ತಿ ಮತ್ತು ತಾಂತ್ರಿಕ ನಾವೀನ್ಯತಾ ಕೇಂದ್ರವಾಗಿ ತನ್ನ ಸ್ಥಾನ ಹೆಚ್ಚಿಸಲು ಸಜ್ಜಾಗಿದೆ. ಪ್ರಸಾರ, ಮುದ್ರಣ ಮಾಧ್ಯಮ, ದೂರದರ್ಶನ, ರೇಡಿಯೊ, ಚಲನಚಿತ್ರಗಳು, ಅನಿಮೇಷನ್, ದೃಶ್ಯ ಪರಿಣಾಮಗಳು, ಗೇಮಿಂಗ್, ಕಾಮಿಕ್ಸ್, ಧ್ವನಿ ಮತ್ತು ಸಂಗೀತ, ಜಾಹೀರಾತು, ಡಿಜಿಟಲ್ ಮಾಧ್ಯಮ, ಸಾಮಾಜಿಕ ಮಾಧ್ಯಮ ವೇದಿಕೆಗಳು, ಜನರೇಟಿವ್ ಎಐ, ವರ್ಧಿತ ರಿಯಾಲಿಟಿ(ಎಆರ್), ವರ್ಚುವಲ್ ರಿಯಾಲಿಟಿ(ವಿಆರ್), ಮತ್ತು ವಿಸ್ತೃತ ರಿಯಾಲಿಟಿ(ಎಕ್ಸ್ಆರ್) – ಈ ಎಲ್ಲಾ ತಂತ್ರಜ್ಞಾನಗಳು ಕೇಂದ್ರೀಕೃತವಾಗಿರುವ ಕೈಗಾರಿಕೆಗಳು ಮತ್ತು ವಲಯಗಳಾಗಿವೆ.
ಪ್ರಶ್ನೆಗಳಿವೆಯೇ? ಇಲ್ಲಿ ಉತ್ತರಗಳನ್ನು ಹುಡುಕಿ
ಬನ್ನಿ, ನಮ್ಮೊಂದಿಗೆ ಜತೆಗೂಡಿ! ಈಗಲೇ WAVESಗೆ ನೋಂದಾಯಿಸಿ(ಶೀಘ್ರದಲ್ಲೇ ಬರಲಿದೆ!).
*****
(Release ID: 2106870)
Visitor Counter : 29