ವಾರ್ತಾ ಮತ್ತು ಪ್ರಸಾರ ಸಚಿವಾಲಯ
ವೇವ್ಸ್ ಪ್ರೋಮೋ ವೀಡಿಯೊ ಚಾಲೆಂಜ್
Posted On:
21 FEB 2025 6:24PM
|
Location:
PIB Bengaluru
ನಿಮ್ಮ ಚಿಂತನಾಕ್ರಮವನ್ನು ಶೃಂಗಸಭೆಯ ಸಿಗ್ನೇಚರ್ ಕ್ಲಿಪ್ (ವಿಶಿಷ್ಟ ತುಣುಕು) ಆಗಿಸಿ
ಪರಿಚಯ
ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜಿನ ಭಾಗವಾಗಿರುವ ವೇವ್ಸ್ ಪ್ರೋಮೋ ವಿಡಿಯೋ ಚಾಲೆಂಜ್, ಮುಂಬರುವ ವಿಶ್ವ ಆಡಿಯೊ ದೃಶ್ಯ ಮತ್ತು ಮನರಂಜನಾ ಶೃಂಗಸಭೆ (ವೇವ್ಸ್) 2025ರ ಸ್ಫೂರ್ತಿಯನ್ನು ಸಾಕಾರಗೊಳಿಸುವ ಆಕರ್ಷಕ ವೀಡಿಯೊಗಳನ್ನು ರಚಿಸಲು ಸೃಷ್ಟಿಕರ್ತರು, ದೂರದೃಷ್ಟಿದಾರರು ಮತ್ತು ಕಥೆಗಾರರಿಗೆ ಕರೆ ನೀಡುತ್ತದೆ. "ಬನ್ನಿ, ನಮ್ಮೊಂದಿಗೆ ಪ್ರಯಾಣಿಸಿ" ("Come, Sail With Us) ಎಂಬ ವಿಷಯದ ಸುತ್ತ ಕೇಂದ್ರೀಕೃತವಾಗಿರುವ ಈ ಚಾಲೆಂಜ್ ದೂರದೃಷ್ಟಿಯ ನಿರ್ದೇಶಕ, ಸೃಜನಶೀಲ ಜಾಹೀರಾತುದಾರ ಅಥವಾ ಪ್ರವರ್ತಕ ಪ್ರಸಾರಕರಾಗಿರಲಿ, ಜೀವನದ ಎಲ್ಲಾ ಹಂತಗಳ ಭಾಗವಹಿಸುವವರನ್ನು ಹೊಸ ದೃಷ್ಟಿಕೋನಗಳನ್ನು ತರಲು ಮತ್ತು ಅವರ ಪ್ರತಿಭೆಯನ್ನು ಪ್ರದರ್ಶಿಸಲು ಆಹ್ವಾನಿಸುತ್ತದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಸಹಯೋಗದೊಂದಿಗೆ ಇಂಡಿಯನ್ ಬ್ರಾಡ್ಕಾಸ್ಟಿಂಗ್ ಅಂಡ್ ಡಿಜಿಟಲ್ ಫೌಂಡೇಶನ್ (ಐಬಿಡಿಎಫ್) ಆಯೋಜಿಸಿರುವ ಈ ಉಪಕ್ರಮವು 2025 ರ ಮೇ 1-4 ರವರೆಗೆ ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ ಮತ್ತು ಜಿಯೋ ವರ್ಲ್ಡ್ ಗಾರ್ಡನ್ಸ್ನಲ್ಲಿ ನಡೆಯಲಿರುವ ವೇವ್ಸ್ಗೆ ವೇದಿಕೆಯನ್ನು ಸಿದ್ಧಪಡಿಸುವ ಗುರಿಯನ್ನು ಹೊಂದಿದೆ.

ವೇವ್ಸ್, ತನ್ನ ಮೊದಲ ಆವೃತ್ತಿಯಲ್ಲಿ, ಇಡೀ ಮಾಧ್ಯಮ ಮತ್ತು ಮನರಂಜನೆ (ಎಂ &ಇ) ವಲಯದ ಸಂಯೋಜನೆಗೆ ಸಜ್ಜಾಗಿರುವ ವಿಶಿಷ್ಟ ಹಬ್-ಅಂಡ್-ಸ್ಪೋಕ್ ವೇದಿಕೆಯಾಗಿದೆ. ಈ ಕಾರ್ಯಕ್ರಮವು ಪ್ರಮುಖ ಜಾಗತಿಕ ವೇದಿಕೆಯಾಗಿದ್ದು, ಜಾಗತಿಕ ಎಂ &ಇ ಉದ್ಯಮದ ಗಮನವನ್ನು ಭಾರತದತ್ತ ಸೆಳೆಯುವ ಮತ್ತು ಅದರ ಪ್ರತಿಭೆಯೊಂದಿಗೆ ಭಾರತೀಯ ಎಂ &ಇ ವಲಯದೊಂದಿಗೆ ಬೆಸೆಯುವ ಗುರಿಯನ್ನು ಹೊಂದಿದೆ. ಬ್ರಾಡ್ಕಾಸ್ಟಿಂಗ್ ಮತ್ತು ಇನ್ಫೋಟೈನ್ಮೆಂಟ್, ಎವಿಜಿಸಿ-ಎಕ್ಸ್ಆರ್ (ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್, ಕಾಮಿಕ್ಸ್ ಮತ್ತು ಎಕ್ಸ್ಟೆಂಡೆಡ್ ರಿಯಾಲಿಟಿ), ಡಿಜಿಟಲ್ ಮೀಡಿಯಾ ಮತ್ತು ಇನ್ನೋವೇಶನ್ ಹಾಗು ಫಿಲ್ಮ್ಸ್ ಸೇರಿದಂತೆ ನಾಲ್ಕು ಪ್ರಮುಖ ಸ್ತಂಭಗಳ ಮೇಲೆ ನಿರ್ಮಿಸಲಾದ “ವೇವ್ಸ್” ಪ್ರೋಮೋ ವಿಡಿಯೋ ಚಾಲೆಂಜ್, ಪ್ರಸಾರ ಮತ್ತು ಇನ್ಫೋಟೈನ್ಮೆಂಟ್ ವಿಭಾಗದ ಭಾಗವಾಗಿದೆ, ಇದು ಜಾಗತಿಕ ಪ್ರೇಕ್ಷಕರೊಂದಿಗೆ ಸಂಪರ್ಕ ಸಾಧಿಸುವಾಗ ವಿಷಯ ವಿತರಣೆಯ ಸಾಂಪ್ರದಾಯಿಕ ಮತ್ತು ಉದಯೋನ್ಮುಖ ರೂಪ/ಮಾದರಿಗಳನ್ನು ಎತ್ತಿ ತೋರಿಸುತ್ತದೆ.
ವೇವ್ಸ್ ಪ್ರಮುಖ ಉಪಕ್ರಮವಾದ ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜ್ಸ್ ಜಾಗತಿಕವಾಗಿ 73,000 ಕ್ಕೂ ಹೆಚ್ಚು ಭಾಗವಹಿಸುವವರನ್ನು ತೊಡಗಿಸಿಕೊಂಡಿದೆ, ಹೊಸ ಆಲೋಚನೆಗಳು ಅಭಿವೃದ್ಧಿ ಹೊಂದುವ ಮತ್ತು ಕಥೆ ಹೇಳುವ ಗಡಿಗಳನ್ನು ನಿರಂತರವಾಗಿ ಮರುಕಲ್ಪಿಸುವ ಸೃಜನಶೀಲ ಪರಿಸರ ವ್ಯವಸ್ಥೆಯನ್ನು ಇದು ಬೆಳೆಸುತ್ತದೆ.
ಅರ್ಹತಾ ಮಾನದಂಡಗಳು
ಭಾಗವಹಿಸುವ ಗುರಿ: ಸ್ಪರ್ಧೆಯು ಭಾರತ ಮತ್ತು ಪ್ರಪಂಚದಾದ್ಯಂತದ ಎಲ್ಲಾ ಸೃಜನಶೀಲ ವೃತ್ತಿಪರರು ಮತ್ತು ಮಹತ್ವಾಕಾಂಕ್ಷಿ ವಿಷಯ ರಚನೆಕಾರರಿಗೆ ಮುಕ್ತವಾಗಿದೆ.
ವಯಸ್ಸು: ಭಾಗವಹಿಸುವವರು 18 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿರಬೇಕು.
ಭೌಗೋಳಿಕ ವ್ಯಾಪ್ತಿ: ಭಾರತ ಮತ್ತು ವಿದೇಶಗಳ ವ್ಯಕ್ತಿಗಳು ಭಾಗವಹಿಸಲು ಸ್ವಾಗತ.
ಪ್ರಯತ್ನಗಳು: ಭಾಗವಹಿಸುವವರು ಬಹು ನಮೂದುಗಳನ್ನು ಮಾಡಬಹುದು.
ಸ್ವಂತಿಕೆ: ಎಲ್ಲಾ ಸಲ್ಲಿಕೆಗಳು ಈ ಸ್ಪರ್ಧೆಗಾಗಿ ವಿಶೇಷವಾಗಿ ರಚಿಸಲಾದ ಮೂಲ ಕೃತಿಗಳಾಗಿರಬೇಕು. ಯಾವುದೇ ರೀತಿಯ ಕೃತಿಚೌರ್ಯ ಅಥವಾ ಅನುಮತಿಯಿಲ್ಲದೆ ಹಕ್ಕುಸ್ವಾಮ್ಯ ಪಡೆದ ವಸ್ತುಗಳ ಬಳಕೆಯು ಅನರ್ಹತೆಗೆ ಕಾರಣವಾಗುತ್ತದೆ.
ಸೃಜನಾತ್ಮಕ ಮಾರ್ಗಸೂಚಿಗಳು

ಟೈಮ್‌ಲೈನ್

ಮೌಲ್ಯಮಾಪನ ಮಾನದಂಡಗಳು

ಬಹುಮಾನಗಳು ಮತ್ತು ಮನ್ನಣೆ
ಉನ್ನತ 5 ಪ್ರವೇಶಗಳ ಸೃಷ್ಟಿಕರ್ತರಿಗೆ ವೇವ್ಸ್ 2025 ಈವೆಂಟ್ ನಲ್ಲಿ ಭಾಗವಹಿಸಲು ಎಲ್ಲಾ ವೆಚ್ಚ-ಪಾವತಿಸಿದ ಸೌಲಭ್ಯದ ಪ್ರವಾಸದೊಂದಿಗೆ ನಗದು ಬಹುಮಾನಗಳನ್ನು ಪಡೆಯುವ ಅವಕಾಶವಿದೆ.

ತೀರ್ಮಾನ
ವೇವ್ಸ್ ಪ್ರೋಮೋ ವಿಡಿಯೋ ಚಾಲೆಂಜ್ ಸೃಷ್ಟಿಕರ್ತರಿಗೆ ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜ್ಗಳ ಮೂಲಕ ಜಾಗತಿಕ ವೇದಿಕೆಯಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಗಮನಾರ್ಹ ಅವಕಾಶವನ್ನು ನೀಡುತ್ತದೆ, ಇದು ವಿಶ್ವ ಆಡಿಯೊ ದೃಶ್ಯ ಮತ್ತು ಮನರಂಜನಾ ಶೃಂಗಸಭೆ (ವೇವ್ಸ್) 2025 ರ ಮೊದಲ ಆವೃತ್ತಿಗೆ ಕೊಡುಗೆ ನೀಡುತ್ತದೆ. ನಗದು ಬಹುಮಾನಗಳು ಮತ್ತು ಈವೆಂಟ್ಗೆ ಎಲ್ಲಾ ವೆಚ್ಚ-ಪಾವತಿಸಿದ ಪ್ರವಾಸ ಸೇರಿದಂತೆ ಆಕರ್ಷಕ ಬಹುಮಾನಗಳೊಂದಿಗೆ, ಈ ಸವಾಲು ಒಂದು ಸ್ಪರ್ಧೆಗಿಂತಲೂ ಮಿಗಿಲಾದುದಾಗಿದೆ. ಏಕೆಂದರೆ ಇದು ಸೃಜನಶೀಲ ದೃಷ್ಟಿಕೋನಗಳನ್ನು/ಚಿಂತನ ಧಾರೆಯನ್ನು ವಿಶ್ವಾದ್ಯಂತ ಪ್ರೇಕ್ಷಕರೊಂದಿಗೆ ಅನುರಣಿಸುವ ಪರಿಣಾಮಕಾರಿ ನಿರೂಪಣೆಗಳಾಗಿ ಪರಿವರ್ತಿಸುವ ವೇದಿಕೆಯಾಗಿದೆ. ಮಹತ್ವಾಕಾಂಕ್ಷೆಯ ಚಲನಚಿತ್ರ ನಿರ್ಮಾಪಕರು, ಜಾಹೀರಾತುದಾರರು ಮತ್ತು ಕಥೆಗಾರರು ಭಾರತದ ಸೃಜನಶೀಲ ಕ್ರಾಂತಿಯ ಭಾಗವಾಗಲು ಮತ್ತು ಅಂತರರಾಷ್ಟ್ರೀಯ ಮಾಧ್ಯಮ ಮತ್ತು ಮನರಂಜನಾ ಭೂದೃಶ್ಯದಲ್ಲಿ ಶಾಶ್ವತ ಛಾಪು ಮೂಡಿಸಲು ಈ ಅವಕಾಶವನ್ನು ಬಳಸಿಕೊಳ್ಳಲು ಪ್ರೋತ್ಸಾಹಿಸಲಾಗುತ್ತದೆ.
ಉಲ್ಲೇಖಗಳು:
Click here to see PDF.
*****
Release ID:
(Release ID: 2106069)
| Visitor Counter:
24