ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಭಾರತ್ ಟೆಕ್ ಟ್ರಯಂಫ್ ಕಾರ್ಯಕ್ರಮ
Posted On:
21 FEB 2025 6:16PM by PIB Bengaluru
ಭಾರತದ ಗೇಮಿಂಗ್ ಸಾಮರ್ಥ್ಯವನ್ನು ಅನ್ಲಾಕ್ ಮಾಡುತ್ತದೆ
ಪರಿಚಯ
ಭಾರತದ ಗೇಮಿಂಗ್ ಉದ್ಯಮವು ವಿಶೇಷವಾಗಿ ಡಿಜಿಟಲ್ ಮತ್ತು ಆನ್ಲೈನ್ ಗೇಮಿಂಗ್ ನಲ್ಲಿ ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ, ಇದು ದೇಶದ ಮಾಧ್ಯಮ ಮತ್ತು ಮನರಂಜನಾ ಭೂದೃಶ್ಯದಲ್ಲಿ ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರಗಳಲ್ಲಿ ಒಂದಾಗಿದೆ. ಈ ಬೆಳವಣಿಗೆಯನ್ನು ಬೆಂಬಲಿಸಲು, ಭಾರತ್ ಟೆಕ್ ಟ್ರಯಂಫ್ ಪ್ರೋಗ್ರಾಂ (ಟಿಟಿಪಿ) ಯನ್ನು ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜ್ ಸೀಸನ್ 1 ರ ಭಾಗವಾಗಿ ಪ್ರಾರಂಭಿಸಲಾಗಿದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯದ (ಎಂಐಬಿ) ಸಹಭಾಗಿತ್ವದಲ್ಲಿ ಇಂಟರ್ಯಾಕ್ಟಿವ್ ಎಂಟರ್ಟೈನ್ಮೆಂಟ್ ಅಂಡ್ ಇನ್ನೋವೇಶನ್ ಕೌನ್ಸಿಲ್ (ಐಇಐಸಿ) ಆಯೋಜಿಸಿರುವ ಈ ಕಾರ್ಯಕ್ರಮವು ಅಂತರರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ಗೇಮಿಂಗ್ ಪ್ರತಿಭೆಯನ್ನು ಗುರುತಿಸುವ ಮತ್ತು ಪ್ರದರ್ಶಿಸುವ ಗುರಿಯನ್ನು ಹೊಂದಿದೆ.

ಈ ಉಪಕ್ರಮವು 2025 ರಲ್ಲಿ ವಿಶ್ವ ಆಡಿಯೊ ವಿಷುಯಲ್ ಎಂಟರ್ಟೈನ್ಮೆಂಟ್ ಶೃಂಗಸಭೆ (ವೇವ್ಸ್) ಮತ್ತು ಗೇಮ್ ಡೆವಲಪರ್ ಕಾನ್ಫರೆನ್ಸ್ (ಜಿಡಿಸಿ) ನಲ್ಲಿ ಇಂಡಿಯಾ ಪೆವಿಲಿಯನ್ನಲ್ಲಿ ಮುಕ್ತಾಯಗೊಳ್ಳಲಿದ್ದು, ಭಾರತೀಯ ನಾವೀನ್ಯಕಾರರಿಗೆ/ಅನ್ವೇಷಣಕಾರರಿಗೆ ಅವರ ಪ್ರತಿಭೆ ಪ್ರಕಾಶಿಸಲು ಜಾಗತಿಕ ವೇದಿಕೆಯನ್ನು ಒದಗಿಸುತ್ತದೆ.
ವರ್ಲ್ಡ್ ಆಡಿಯೊ ವಿಶುವಲ್ & ಎಂಟರ್ಟೈನ್ಮೆಂಟ್ ಶೃಂಗಸಭೆ (ವೇವ್ಸ್) ತನ್ನ ಮೊದಲ ಆವೃತ್ತಿಯಲ್ಲಿ ಇಡೀ ಮಾಧ್ಯಮ ಮತ್ತು ಮನರಂಜನೆ (ಎಂ & ಇ) ವಲಯದ ಸಂಯೋಜನೆಗೆ ಹಬ್ ಆಂಡ್ ಸ್ಪೋಕ್ (ಸಣ್ಣ ಕೇಂದ್ರದಿಂದ ದೊಡ್ಡ ಕೇಂದ್ರದತ್ತ ಸಾಗುವ ಮಾದರಿ) ರೀತಿಯ ವಿಶಿಷ್ಟ ವ್ಯವಸ್ಥೆಯನ್ನು ಒದಗಿಸಿದೆ. ಈ ಕಾರ್ಯಕ್ರಮವು ಪ್ರಮುಖ ಜಾಗತಿಕ ಕಾರ್ಯಕ್ರಮವಾಗಿದ್ದು, ಜಾಗತಿಕ ಎಂ &ಇ ಉದ್ಯಮದ ಗಮನವನ್ನು ಭಾರತದತ್ತ ಸೆಳೆಯುವ ಮತ್ತು ಅದರ ಪ್ರತಿಭೆಯೊಂದಿಗೆ ಭಾರತೀಯ ಎಂ &ಇ ವಲಯವನ್ನು ಜೋಡಿಸುವ ಗುರಿಯನ್ನು ಹೊಂದಿದೆ.
ಈ ಶೃಂಗಸಭೆಯು 2025 ರ ಮೇ 1 ರಿಂದ 4 ರವರೆಗೆ ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ ಮತ್ತು ಜಿಯೋ ವರ್ಲ್ಡ್ ಗಾರ್ಡನ್ಸ್ ನಲ್ಲಿ ನಡೆಯಲಿದೆ. ಬ್ರಾಡ್ಕಾಸ್ಟಿಂಗ್ ಮತ್ತು ಇನ್ಫೋಟೈನ್ಮೆಂಟ್, ಎವಿಜಿಸಿ-ಎಕ್ಸ್ಆರ್, ಡಿಜಿಟಲ್ ಮೀಡಿಯಾ & ಇನ್ನೋವೇಶನ್ ಮತ್ತು ಫಿಲ್ಮ್ಸ್-ವೇವ್ಸ್ ಎಂಬ ನಾಲ್ಕು ಪ್ರಮುಖ ಆಧಾರ ಸ್ತಂಭಗಳ ಮೇಲೆ ಗಮನ ಕೇಂದ್ರೀಕರಿಸಿ, ಭಾರತದ ಮನರಂಜನಾ ಉದ್ಯಮದ ಭವಿಷ್ಯವನ್ನು ಪ್ರದರ್ಶಿಸಲು ನಾಯಕರು, ಸೃಷ್ಟಿಕರ್ತರು ಮತ್ತು ತಂತ್ರಜ್ಞರನ್ನು ಒಟ್ಟುಗೂಡಿಸುತ್ತದೆ.
ಎವಿಜಿಸಿ-ಎಕ್ಸ್ಆರ್ (ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್, ಕಾಮಿಕ್ಸ್ ಮತ್ತು ಆಗ್ಮೆಂಟೆಡ್ ರಿಯಾಲಿಟಿ, ವರ್ಚುವಲ್ ರಿಯಾಲಿಟಿ ಮತ್ತು ಮೆಟಾವರ್ಸ್ನಂತಹ ಅತ್ಯಾಧುನಿಕ ತಂತ್ರಜ್ಞಾನಗಳು) ಸ್ತಂಭವು ವಿಶೇಷವಾಗಿ ಭಾರತ್ ಟೆಕ್ ಟ್ರಯಂಫ್ ಕಾರ್ಯಕ್ರಮದ ಉದ್ದೇಶಗಳೊಂದಿಗೆ ಹೊಂದಿಕೆಯಾಗುತ್ತದೆ, ಇದು ಗೇಮಿಂಗ್, ಅನಿಮೇಷನ್, ದೃಶ್ಯ ಪರಿಣಾಮಗಳು ಮತ್ತು ಎಆರ್, ವಿಆರ್ ಮತ್ತು ಮೆಟಾವರ್ಸ್ನಂತಹ ಆಳವಾದ ತಂತ್ರಜ್ಞಾನಗಳ ಪರಸ್ಪರ ಛೇದನಕ್ಕೆ್ ಒತ್ತು ನೀಡುತ್ತದೆ.
ಅರ್ಹತಾ ಮಾನದಂಡಗಳು

ಭಾರತ್ ಟೆಕ್ ಟ್ರಯಂಫ್ ಕಾರ್ಯಕ್ರಮವು ಡೆವಲಪರ್ ಗಳು, ಸ್ಟುಡಿಯೋಗಳು, ನವೋದ್ಯಮಗಳು (ಸ್ಟಾರ್ಟ್ ಅಪ್) ಮತ್ತು ಟೆಕ್ ಕಂಪನಿಗಳು ಸೇರಿದಂತೆ ಸಂವಾದಾತ್ಮಕ ಮನರಂಜನಾ ಉದ್ಯಮದ ವೈವಿಧ್ಯಮಯ ಪಾಲುದಾರರನ್ನು/ಪ್ರತಿನಿಧಿಗಳನ್ನು ಸ್ವಾಗತಿಸುತ್ತದೆ. ಈ ಉಪಕ್ರಮವು ಗೇಮಿಂಗ್ ಅಭಿವೃದ್ಧಿ, ಎಸ್ಸ್ಪೋರ್ಟ್ಸ್ ಮತ್ತು ಗೇಮಿಂಗ್ ಪರಿಸರ ವ್ಯವಸ್ಥೆಗೆ ನಿರ್ಣಾಯಕವಾದ ವ್ಯವಹಾರ ಪರಿಹಾರಗಳಲ್ಲಿ ತೊಡಗಿರುವ ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ಮುಕ್ತವಾಗಿದೆ. ಪ್ರೋಗ್ರಾಂ ಅಭಿವೃದ್ಧಿಯ ವಿವಿಧ ಹಂತಗಳಿಂದ ಪ್ರವೇಶಗಳನ್ನು ಆಹ್ವಾನಿಸುತ್ತದೆ, ಆದರೆ ಅವರು ಕೆಲಸ ಮಾಡುವ ಮೂಲಮಾದರಿಯನ್ನು ಹೊಂದಿರ ಬೇಕಾಗುತ್ತದೆ.
ನೋಂದಣಿ ಪ್ರಕ್ರಿಯೆ
ಟೆಕ್ ಟ್ರಯಂಫ್ ಸೀಸನ್ 3, ಜಾಗತಿಕವಾಗಿ ಗುರುತಿಸಲ್ಪಡುವ 'ಮೇಡ್ ಇನ್ ಇಂಡಿಯಾ' ಟೆಕ್ ಉದ್ಯಮದ ನಿರ್ಮಾಣದಲ್ಲಿ ರಾಷ್ಟ್ರದ ಸಾಮರ್ಥ್ಯವನ್ನು ಪ್ರದರ್ಶಿಸುವ ಮೂಲಕ ಭಾರತದ ಗೇಮಿಂಗ್ ಪರಿಸರ ವ್ಯವಸ್ಥೆಯನ್ನು ಎತ್ತರಿಸಲು ಸಜ್ಜಾಗಿದೆ. 12 ಅಂತರರಾಷ್ಟ್ರೀಯ ಭಾಗವಹಿಸುವಿಕೆಯ ನೋಂದಣಿಗಳು ಸೇರಿದಂತೆ ಈಗಾಗಲೇ 1,078 ನೋಂದಣಿಗಳೊಂದಿಗೆ ಕಾರ್ಯಕ್ರಮವು ಹುರುಪಿನ ವೇಗವನ್ನು ಪಡೆಯುತ್ತಿದೆ.
ದಯವಿಟ್ಟು ಗಮನಿಸಿ, ಟೆಕ್ ಟ್ರಯಂಫ್ ಸೀಸನ್ 3 ಕ್ಕಾಗಿ ಅರ್ಜಿ ಸಲ್ಲಿಕೆಯು ಫೆಬ್ರವರಿ 20, 2025 ರಂದು ಕೊನೆಗೊಂಡಿದೆ.
ಸವಾಲು ಪ್ರಕ್ರಿಯೆಯ ಹಂತಗಳು:
ಹಂತ 1: ಆಟ ಸಲ್ಲಿಕೆ: ಅಧಿಕೃತ ವೆಬ್ಸೈಟ್ನಲ್ಲಿ (ಜಾಲತಾಣದಲ್ಲಿ ) ಲಭ್ಯವಿರುವ ಸ್ಪರ್ಧೆಯ ಫಾರ್ಮ್ ಮೂಲಕ ನಿಮ್ಮ ಆಟವನ್ನು ಸಲ್ಲಿಸುವುದರೊಂದಿಗೆ ನಿಮ್ಮ ಪ್ರಯಾಣ ಪ್ರಾರಂಭ.
ಹಂತ 2: ತಜ್ಞರ ಮೌಲ್ಯಮಾಪನ: ಗೌರವಾನ್ವಿತ ತಜ್ಞರ ಸಮಿತಿಯು ಎಲ್ಲಾ ಪ್ರವೇಶ ಸಲ್ಲಿಕೆಗಳನ್ನು ಎಚ್ಚರಿಕೆಯಿಂದ ಪರಿಶೀಲಿಸುತ್ತದೆ ಮತ್ತು ಪಿಚಿಂಗ್ ಸುತ್ತಿಗೆ ಉನ್ನತ ನಮೂದುಗಳನ್ನು/ಪ್ರವೇಶಗಳನ್ನು ಶಾರ್ಟ್ಲಿಸ್ಟ್ ಮಾಡುತ್ತದೆ. ಪಿಚ್ ಗಳ ನಂತರ ಅಂತಿಮ ಫಲಿತಾಂಶಗಳನ್ನು ವಿಶೇಷ ತೀರ್ಪುಗಾರರು ಪ್ರಕಟಿಸುತ್ತಾರೆ.
ಹಂತ 3: ಈವೆಂಟ್ ಗಳಿಗೆ ಸಜ್ಜಾಗುವುದು: ವಿಜೇತರನ್ನು ಘೋಷಿಸಿದ ನಂತರ, ಸಂಘಟಕರು ಈವೆಂಟ್ ಗಳಲ್ಲಿ ಪ್ರಮುಖ ಪ್ರದರ್ಶನಕ್ಕೆ ತಯಾರಿ ನಡೆಸಲು ಮಾರ್ಗದರ್ಶನ ಮತ್ತು ಸಹಾಯ ಮಾಡಲು ತಕ್ಷಣ ಅವರನ್ನು ಸಂಪರ್ಕಿಸುತ್ತಾರೆ.

ಮೌಲ್ಯಮಾಪನ ಮಾನದಂಡ
ಭಾರತ್ ಟೆಕ್ ಟ್ರಯಂಫ್ ಕಾರ್ಯಕ್ರಮದ ಮೌಲ್ಯಮಾಪನ ಮಾನದಂಡಗಳು ಯಶಸ್ಸಿನತ್ತ ನಿಮ್ಮ ಉತ್ಪನ್ನ, ಪಿಚ್ ಮತ್ತು ತಂಡದ ಪ್ರಮುಖ ಅಂಶಗಳನ್ನು ನಿರ್ಣಯಿಸುವತ್ತ ಗಮನ ಹರಿಸುತ್ತವೆ. ಪ್ರತಿ ಅಂಶವನ್ನು ಹೇಗೆ ಮೌಲ್ಯಮಾಪನ ಮಾಡಲಾಗುತ್ತದೆ ಎಂಬುದರ ವಿಭಜನವಾರು ವಿವರ ಇಲ್ಲಿದೆ:

ಬಹುಮಾನ
ಭಾರತ್ ಟೆಕ್ ಟ್ರಯಂಫ್ ಕಾರ್ಯಕ್ರಮದ ವಿಜೇತರು ತಮ್ಮ ಉತ್ಪನ್ನಗಳು, ಬೌದ್ಧಿಕ ಆಸ್ತಿ ಮತ್ತು ತಂತ್ರಜ್ಞಾನವನ್ನು ಜಾಗತಿಕ ವೇದಿಕೆಯಲ್ಲಿ ಪ್ರದರ್ಶಿಸಲು ನಂಬಲಸಾಧ್ಯವಾದಂತಹ ಅವಕಾಶವನ್ನು ಹೊಂದಿರುತ್ತಾರೆ. ಮಾರ್ಚ್ 17 ರಿಂದ 21 ರವರೆಗೆ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಡೆಯಲಿರುವ ಪ್ರತಿಷ್ಠಿತ ಗೇಮ್ ಡೆವಲಪರ್ಸ್ ಕಾನ್ಫರೆನ್ಸ್ (ಜಿಡಿಸಿ) 2025 ರಲ್ಲಿ ಮತ್ತು ನಂತರ ಭಾರತದಲ್ಲಿ “ವೇವ್ಸ್ನ”ಲ್ಲಿ ತಮ್ಮ ಆವಿಷ್ಕಾರಗಳನ್ನು ಪ್ರಸ್ತುತಪಡಿಸಲು ಅವರಿಗೆ ಸಂಪೂರ್ಣವಾಗಿ ಪ್ರಾಯೋಜಕತ್ವವನ್ನು ಒದಗಿಸಲಾಗುತ್ತದೆ. ಅಂತರರಾಷ್ಟ್ರೀಯ ಮಾನ್ಯತೆ ಪಡೆಯಲು ಮತ್ತು ಉದ್ಯಮದ ನಾಯಕರೊಂದಿಗೆ ಸಂಪರ್ಕ ಸಾಧಿಸಲು ಇದು ಒಂದು ಅನನ್ಯ ವೇದಿಕೆಯಾಗಿದೆ.

ಪರಾಮರ್ಶನ :
Click here to see PDF.
*****
(Release ID: 2106067)