ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಎಐ ಅವತಾರ್ ಕ್ರಿಯೇಟರ್

Posted On: 20 FEB 2025 4:17PM by PIB Bengaluru

ಕಲ್ಪನೆಯನ್ನು ವಾಸ್ತವಕ್ಕೆ ಪರಿವರ್ತಿಸಿ

ಎಐ ಅವತಾರ್‌ ಗಳು ಡಿಜಿಟಲ್ ಕ್ಷೇತ್ರವನ್ನು ಬದಲಾಯಿಸುತ್ತಿವೆ, ವರ್ಚುವಲ್ ಸ್ಥಳಗಳಲ್ಲಿ ಮಾನವ ಪ್ರಭಾವಿಗಳಂತೆ ತೊಡಗಿಸಿಕೊಳ್ಳುವ ವೈಯಕ್ತಿಕಗೊಳಿಸಿದ, ಸಂವಾದಾತ್ಮಕ, ಎಐ -ಚಾಲಿತ ಡಿಜಿಟಲ್ ವ್ಯಕ್ತಿತ್ವಗಳನ್ನು ಪರಿಚಯಿಸುತ್ತಿವೆ. ಈ ತಂತ್ರಜ್ಞಾನವು ವಿಕಸನಗೊಳ್ಳುವುದನ್ನು ಮುಂದುವರೆಸಿದಂತೆ, ಎಐ ಅವತಾರ್‌ ಗಳು ಮಾರ್ಕೆಟಿಂಗ್, ಕಂಟೆಂಟ್ ರಚನೆ ಮತ್ತು ಮನರಂಜನೆಯಲ್ಲಿ ಪ್ರಬಲ ಸಾಧನಗಳಾಗುತ್ತಿವೆ. ವಾರ್ತಾ ಮತ್ತು ಪ್ರಸಾರ ಸಚಿವಾಲಯ ಮತ್ತು Avtr ಮೆಟಾ ಲ್ಯಾಬ್ಸ್ ಆಯೋಜಿಸಿರುವ ಎಐ ಅವತಾರ್ ಕ್ರಿಯೇಟರ್ ಚಾಲೆಂಜ್, ಎಐ ಅವತಾರ್‌ ಗಳ ಅನಂತ ಸಾಧ್ಯತೆಗಳನ್ನು ಅನ್ವೇಷಿಸಲು ನಾವೀನ್ಯಕಾರರನ್ನು ಆಹ್ವಾನಿಸುತ್ತದೆ. 102 ಅಂತರರಾಷ್ಟ್ರೀಯ ಭಾಗವಹಿಸುವವರು ಸೇರಿದಂತೆ ಒಟ್ಟು 1,251 ಮಂದಿ ಇಲ್ಲಿಯವರೆಗೆ ನೋಂದಾಯಿಸಿಕೊಂಡಿದ್ದಾರೆ.

ಈ ಸವಾಲು ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜ್ ಸೀಸನ್ 1 ರ ಭಾಗವಾಗಿದೆ ಮತ್ತು ವೇವ್ಸ್ ನ (ವಿಶ್ವ ಧ್ವನಿ ದೃಶ್ಯ & ಮನೋರಂಜನಾ ಶೃಂಗಸಭೆ) ಎರಡನೇ ಸ್ತಂಭದ ಅಡಿಯಲ್ಲಿ ಬರುತ್ತದೆ, ಇದು ಎವಿಜಿಸಿ-ಎಕ್ಸ್‌ ಆರ್ (ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್, ಕಾಮಿಕ್ಸ್ ಮತ್ತು ವಿಸ್ತೃತ ರಿಯಾಲಿಟಿ, ವರ್ಚುವಲ್ ರಿಯಾಲಿಟಿ ಮತ್ತು ಮೆಟಾವರ್ಸ್ ನಂತಹ ಅತ್ಯಾಧುನಿಕ ತಂತ್ರಜ್ಞಾನಗಳಿಗೆ) ಸಮರ್ಪಿತವಾಗಿದೆ. ಈ ಕಾರ್ಯಕ್ರಮವು ಮೇ 1-4, 2025 ರವರೆಗೆ ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ ಮತ್ತು ಜಿಯೋ ವರ್ಲ್ಡ್ ಗಾರ್ಡನ್ಸ್‌ ನಲ್ಲಿ ನಡೆಯಲಿದೆ.

ವೇವ್ಸ್ ಭಾರತದ ಮಾಧ್ಯಮ ಮತ್ತು ಮನರಂಜನೆ ಉದ್ಯಮವನ್ನು ಹೊಸ ಯಶಸ್ಸಿನ ಮಟ್ಟಕ್ಕೆ ಕೊಂಡೊಯ್ಯುವ ಗುರಿಯನ್ನು ಹೊಂದಿರುವ ಪ್ರವರ್ತಕ ವೇದಿಕೆಯಾಗಿದೆ. ವೇವ್ಸ್ ನಾಲ್ಕು ಪ್ರಮುಖ ಸ್ತಂಭಗಳ ಮೇಲೆ ಕೇಂದ್ರೀಕರಿಸುತ್ತದೆ: ಪ್ರಸಾರ ಮತ್ತು ಮಾಹಿತಿ ಮನರಂಜನೆ, ಎವಿಜಿಸಿ-ಎಕ್ಸ್‌ ಆರ್ (ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್, ಕಾಮಿಕ್ಸ್ ಮತ್ತು ವಿಸ್ತೃತ ರಿಯಾಲಿಟಿ), ಡಿಜಿಟಲ್ ಮಾಧ್ಯಮ ಮತ್ತು ನಾವೀನ್ಯತೆ ಮತ್ತು ಚಲನಚಿತ್ರಗಳು. ಎಐ ಅವತಾರ್ ಕ್ರಿಯೇಟರ್ ಚಾಲೆಂಜ್ ವಿಸ್ತೃತ ರಿಯಾಲಿಟಿ, ವರ್ಚುವಲ್ ರಿಯಾಲಿಟಿ ಮತ್ತು ಮೆಟಾವರ್ಸ್‌ ನಂತಹ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಎವಿಜಿಸಿ-ಎಕ್ಸ್‌ ಆರ್ ಸ್ತಂಭಕ್ಕೆ ಅನುಗುಣವಾಗಿದೆ.

ಮಾರ್ಗಸೂಚಿಗಳು

ಎಐ ಅವತಾರ್ ಕ್ರಿಯೇಟರ್ ಸವಾಲಿಗೆ ಸ್ವೀಕರಿಸುವ ಮೊದಲು ಈ ಪ್ರಮುಖ ವಿವರಗಳನ್ನು ನೋಡೋಣ:

  • ಭಾಗವಹಿಸುವವರು ಕನಿಷ್ಠ 18 ವರ್ಷ ವಯಸ್ಸಿನವರಾಗಿರಬೇಕು ಮತ್ತು ವಯಸ್ಸಿನ ಪರಿಶೀಲನೆಗಾಗಿ ಮಾನ್ಯವಾದ ಐಡಿಯನ್ನು ಒದಗಿಸಬೇಕು.
  • ಈ ಸ್ಪರ್ಧೆಯು ಪ್ರಪಂಚದಾದ್ಯಂತದ ರಚನೆಕಾರರಿಗೆ ಮುಕ್ತವಾಗಿದೆ ಮತ್ತು ಪ್ರತಿಯೊಂದು ಸಲ್ಲಿಕೆಯು ಅನನ್ಯ ಹೆಸರು ಮತ್ತು ಪ್ರೊಫೈಲ್‌ ಗಳೊಂದಿಗೆ ಸಂಪೂರ್ಣವಾಗಿ ಎಐ- ರಚಿತವಾಗಿದ್ದರೆ ನೀವು ಬಹು ಎಐ ಅವತಾರ್‌ ಗಳನ್ನು ಸಲ್ಲಿಸಬಹುದು.
  • ಭಾಗವಹಿಸುವ ಮೂಲಕ, ನಿಮ್ಮ ಎಐ ಅವತಾರವು ಮೂಲ ರಚನೆಯಾಗಿದೆ ಮತ್ತು ಇತರ ನಿಜ ಜೀವನ ಅಥವಾ ಎಐ ಮಾದರಿಗಳ ಹಕ್ಕುಗಳನ್ನು ಉಲ್ಲಂಘಿಸುವುದಿಲ್ಲ ಎಂದು ನೀವು ದೃಢೀಕರಿಸುತ್ತೀರಿ. ಒಪ್ಪಿಗೆಯಿಲ್ಲದೆ ಇತರರ ಕೆಲಸ ಅಥವಾ ಗುರುತನ್ನು ನಕಲಿಸುವ ಯಾವುದೇ ಸಲ್ಲಿಕೆಗಳು ಅನರ್ಹತೆಗೆ ಕಾರಣವಾಗುತ್ತವೆ.

ನೋಂದಣಿ ಪ್ರಕ್ರಿಯೆ

ಭಾಗವಹಿಸುವವರು Avtr ಮೆಟಾ ಲ್ಯಾಬ್ಸ್ ಜಾಲತಾಣದ ಮೂಲಕ ಪ್ರತ್ಯೇಕವಾಗಿ ಸ್ಪರ್ಧೆಗೆ ನೋಂದಾಯಿಸಿಕೊಳ್ಳಬೇಕು. ಜಾಲತಾಣದಲ್ಲಿರುವ "ಆಸಕ್ತಿಯನ್ನು ನೋಂದಾಯಿಸಿ" ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು ನಿಮ್ಮ ಹೆಸರು, ಸಂಪರ್ಕ ಮಾಹಿತಿ, ನಿಮ್ಮ ಎಐ ಅವತಾರ್‌ ನ ಪರಿಕಲ್ಪನೆ ಮತ್ತು ಉದ್ದೇಶ ಮತ್ತು ನಿಮ್ಮ ಸ್ಥಳ ಸೇರಿದಂತೆ ನಿಮ್ಮ ವಿವರಗಳನ್ನು ಭರ್ತಿ ಮಾಡಿ. ಅರ್ಜಿ ಸಲ್ಲಿಸುವ ಮೊದಲು ಎಲ್ಲಾ ಪ್ರಮುಖ ನಿಯಮಗಳು ಮತ್ತು ಷರತ್ತುಗಳನ್ನು ಪರಿಶೀಲಿಸಲು ಮರೆಯದಿರಿ. ಚಾಲೆಂಜ್ ಸಲ್ಲಿಕೆಗೆ ಕೊನೆಯ ದಿನಾಂಕ ಫೆಬ್ರವರಿ 28, 2025.‌

ಮೌಲ್ಯಮಾಪನ ಮಾನದಂಡಗಳು

ತಜ್ಞರ ಸಮಿತಿಯು ಎಐ ಅವತಾರ್ ಕ್ರಿಯೇಟರ್ ಸವಾಲನ್ನು ಮೌಲ್ಯಮಾಪನ ಮಾಡುತ್ತದೆ, ಪ್ರತಿ ನಮೂದನ್ನು ಪ್ರಮುಖ ಮಾನದಂಡಗಳ ಆಧಾರದ ಮೇಲೆ ನಿರ್ಣಯಿಸುತ್ತದೆ. ಕೌಶಲ್ಯ, ತಂತ್ರಜ್ಞಾನ ಮತ್ತು ಉದ್ದೇಶ ಎಂಬ ಮೂರು ಪ್ರಮುಖ ಕ್ಷೇತ್ರಗಳ ಮೇಲೆ ತೀರ್ಪು ಕೇಂದ್ರೀಕರಿಸುತ್ತದೆ.

ಅಂಕ-ಆಧಾರಿತ ವ್ಯವಸ್ಥೆಯು ಪ್ರತಿ ಕ್ರಿಯೇಟರ್‌ ಗೆ ಮೂರು ವಿಭಾಗಗಳಲ್ಲಿ ಅಂಕಗಳನ್ನು ನೀಡುತ್ತದೆ, ಪ್ರತಿ ಸ್ಪರ್ಧಿಗೂ ಒಟ್ಟಾರೆ ಅಂಕವನ್ನು ನೀಡಲಾಗುತ್ತದೆ.

ಬಹುಮಾನ

ಅಂತಿಮ ಅಗ್ರ 10 ಸಲ್ಲಿಕೆಗಳನ್ನು ಆಯ್ಕೆ ಮಾಡಲಾಗುತ್ತದೆ. ಅಗ್ರ 3 ಸ್ಪರ್ಧಿಗಳನ್ನು ವೇವ್ಸ್‌ 2025 ಶೃಂಗಸಭೆಯಲ್ಲಿ ತಮ್ಮ ಕೆಲಸವನ್ನು ಪ್ರಸ್ತುತಪಡಿಸಲು ಆಹ್ವಾನಿಸಲಾಗುತ್ತದೆ, ಅಲ್ಲಿ ಅವರು ತಮ್ಮ ಯೋಜನೆಗಳನ್ನು ಉದ್ಯಮ ತಜ್ಞರಿಗೆ ಪ್ರದರ್ಶಿಸಬಹುದು. ವಿಜೇತರು 100,000 ರೂ. ನಗದು ಬಹುಮಾನವನ್ನು ಪಡೆಯುತ್ತಾರೆ ಮತ್ತು ಎಲ್ಲಾ ಅಗ್ರ 10 ನಮೂದುಗಳು ವಾರ್ತಾ ಮತ್ತು ಪ್ರಸಾರ ಸಚಿವಾಲಯದಿಂದ ಭಾಗವಹಿಸುವಿಕೆಯ ಪ್ರಮಾಣಪತ್ರವನ್ನು ಪಡೆಯುತ್ತವೆ.

ವಿಜೇತ ಅಥವಾ ರನ್ನರ್-ಅಪ್ ಎಂದು ಘೋಷಿಸಿದ ನಂತರ, ಭಾಗವಹಿಸುವವರು ತಮ್ಮ ಎಐ ಅವತಾರ್‌ ನ ಚಿತ್ರಗಳು ಮತ್ತು ಸಂಬಂಧಿತ ಸಾಮಾಜಿಕ ಮಾಧ್ಯಮ ಚಾನಲ್‌ ಗಳನ್ನು ಮಾಧ್ಯಮ/ಪಿಆರ್, ಪಾವತಿಸಿದ ಜಾಹೀರಾತು, ಸಾಮಾಜಿಕ ಮಾಧ್ಯಮ ಮತ್ತು ಆನ್‌ಲೈನ್ ಪ್ಲಾಟ್‌ಫಾರ್ಮ್‌ ಗಳು ಸೇರಿದಂತೆ ಮಾರ್ಕೆಟಿಂಗ್ ವಸ್ತುಗಳಲ್ಲಿ ಅನಿರ್ದಿಷ್ಟವಾಗಿ ಬಳಸಲು ಅನುಮತಿ ನೀಡುತ್ತಾರೆ.

ಉಲ್ಲೇಖಗಳು:

 

Kindly find the pdf file 

 

*****


(Release ID: 2105236) Visitor Counter : 7