ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಸಿಟಿ ಕ್ವೆಸ್ಟ್: ಶೇಡ್ಸ್ ಆಫ್ ಭಾರತ್


ಭಾರತದ ನಗರಾಭಿವೃದ್ಧಿಗೆ ಜೀವ ತುಂಬುವ ಕಾರ್ಡ್ ಗೇಮ್

Posted On: 20 FEB 2025 3:23PM by PIB Bengaluru

ಭಾರತದ ನಗರಾಭಿವೃದ್ಧಿಗೆ ಜೀವ ತುಂಬುವ ಕಾರ್ಡ್ ಗೇಮ್

ಪರಿಚಯ

ವೇವ್ಸ್ ಸಿಟಿ ಕ್ವೆಸ್ಟ್: ಶೇಡ್ಸ್ ಆಫ್ ಭಾರತ್ ಒಂದು ನವೀನ ಶೈಕ್ಷಣಿಕ ಆಟವಾಗಿದ್ದು, ಇದು ಭಾರತದ ನಗರಾಭಿವೃದ್ಧಿಯನ್ನು ಮೋಜಿನ ಮತ್ತು ಆಕರ್ಷಕ ಅನುಭವದ ಮೂಲಕ ಜೀವಂತಗೊಳಿಸುತ್ತದೆ. ನಗರ ಯೋಜನೆಗಾಗಿ ಪ್ರಧಾನಿ ನರೇಂದ್ರ ಮೋದಿಯವರ ದೃಷ್ಟಿಕೋನಕ್ಕೆ ಅನುಗುಣವಾಗಿ ವಿನ್ಯಾಸಗೊಳಿಸಲಾದ ಈ ಆಟವು ನೀತಿ ಆಯೋಗ ನಿಗದಿಪಡಿಸಿದ ಸುಸ್ಥಿರ ಅಭಿವೃದ್ಧಿ ಗುರಿಗಳ (ಎಸ್‌ ಡಿ ಜಿ) ಕುರಿತು ಆಟಗಾರರಿಗೆ ಶಿಕ್ಷಣ ನೀಡುತ್ತದೆ.

ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಸಹಯೋಗದೊಂದಿಗೆ ಇ-ಗೇಮಿಂಗ್ ಫೆಡರೇಶನ್ (ಇಜಿಎಫ್) ಅಭಿವೃದ್ಧಿಪಡಿಸಿದ ಈ ಕಾರ್ಡ್ ಆಧಾರಿತ ಆಟವು ಆಟಗಾರರಿಗೆ ಭಾರತದಾದ್ಯಂತ 56  ನಗರಗಳನ್ನು ಸ್ವಚ್ಛತೆ, ಆರೋಗ್ಯ ರಕ್ಷಣೆ, ಶಿಕ್ಷಣ ಮತ್ತು ಮೂಲಸೌಕರ್ಯದಂತಹ ಪ್ರಮುಖ ಅಭಿವೃದ್ಧಿ ಸೂಚಕಗಳ ಆಧಾರದ ಮೇಲೆ ಹೋಲಿಸಲು ಅನುವು ಮಾಡಿಕೊಡುತ್ತದೆ. ನಗರದ ಸಾಮರ್ಥ್ಯದ ಆಧಾರದ ಮೇಲೆ ಅಂಕಗಳನ್ನು ಗಳಿಸಲು ಸ್ಪರ್ಧಿಸುವ ಮೂಲಕ, ಭಾಗವಹಿಸುವವರು ಬಾಲ್ಯದ ಟ್ರಂಪ್ ಕಾರ್ಡ್ ಆಟಗಳ ನೆನಪುಗಳನ್ನು ಮೆಲುಕು ಹಾಕುವಾಗ ನಗರ ಸವಾಲುಗಳು ಮತ್ತು ಪ್ರಗತಿಯ ಬಗ್ಗೆ ಒಳನೋಟಗಳನ್ನು ಪಡೆಯುತ್ತಾರೆ. ಫೆಬ್ರವರಿ 15, 2025 ರ ಹೊತ್ತಿಗೆ, 1,920 ಮಂದಿ ಸಿಟಿ ಕ್ವೆಸ್ಟ್‌ ನಲ್ಲಿ ಭಾಗವಹಿಸಲು ನೋಂದಾಯಿಸಿಕೊಂಡಿದ್ದಾರೆ.

ಸಿಟಿ ಕ್ವೆಸ್ಟ್: ಶೇಡ್ಸ್ ಆಫ್ ಭಾರತ್, ವಿಶ್ವ ಧ್ವನಿ ದೃಶ್ಯ & ಮನರಂಜನಾ ಶೃಂಗಸಭೆ (ವೇವ್ಸ್) ಅಡಿಯಲ್ಲಿ ಪ್ರಮುಖ ಉಪಕ್ರಮವಾದ ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜಸ್‌‌ ನ ಅಂಗವಾಗಿದೆ. 2025 ರ ಮೇ 1 ರಿಂದ 4 ರವರೆಗೆ ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ & ಜಿಯೋ ವರ್ಲ್ಡ್ ಗಾರ್ಡನ್ಸ್‌ ನಲ್ಲಿ ನಡೆಯಲಿರುವ ವೇವ್ಸ್, ಭಾರತದ ಮಾಧ್ಯಮ ಮತ್ತು ಮನರಂಜನೆ ಉದ್ಯಮವನ್ನು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯಲು ವಿನ್ಯಾಸಗೊಳಿಸಲಾದ ಒಂದು ಹೆಗ್ಗುರುತು ವೇದಿಕೆಯಾಗಿದೆ. ವೇವ್ಸ್‌ ಶೃಂಗಸಬೆಯನ್ನು ನಾಲ್ಕು ಪ್ರಮುಖ ಸ್ತಂಭಗಳ ಮೇಲೆ ನಿರ್ಮಿಸಲಾಗಿದೆ ಅಂದರೆ ಪ್ರಸಾರ ಮತ್ತು ಮಾಹಿತಿ ಮನರಂಜನೆ, ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್, ಕಾಮಿಕ್ಸ್ ಮತ್ತು ವಿಸ್ತೃತ ರಿಯಾಲಿಟಿ (ಎವಿಜಿಸಿ-ಎಕ್ಸ್‌ ಆರ್), ಡಿಜಿಟಲ್ ಮಾಧ್ಯಮ ಮತ್ತು ನಾವೀನ್ಯತೆ ಮತ್ತು ಚಲನಚಿತ್ರಗಳು. ಈ ಸವಾಲು ಎರಡನೇ ಸ್ತಂಬವಾದ ಎವಿಜಿಸಿ-ಎಕ್ಸ್‌ ಆರ್ ಅಡಿಯಲ್ಲಿ ಬರುತ್ತದೆ, ಇದು ತಲ್ಲೀನಗೊಳಿಸುವ ಕಥೆ ಹೇಳುವಿಕೆ ಮತ್ತು ಸಂವಾದಾತ್ಮಕ ಅನುಭವಗಳನ್ನು ನೀಡುತ್ತದೆ. ತಂತ್ರಜ್ಞಾನವನ್ನು ಸೃಜನಶೀಲತೆಯೊಂದಿಗೆ ಬೆರೆಸುವ ಮೂಲಕ, ಈ ಸ್ತಂಭವು ಗೇಮಿಂಗ್, ಅನಿಮೇಷನ್ ಮತ್ತು ವಿಸ್ತೃತ ರಿಯಾಲಿಟಿ ಪ್ರಗತಿಗಳನ್ನು ಪ್ರದರ್ಶಿಸುತ್ತದೆ, ಉದ್ಯಮದ ನಾಯಕರು ಮತ್ತು ಪಾಲುದಾರರಿಗೆ ಹೊಸ ಗಡಿಗಳ ಅನ್ವೇಷಣೆಗೆ ಅವಕಾಶ ಒದಗಿಸುತ್ತದೆ.

73,000 ಕ್ಕೂ ಹೆಚ್ಚು ನೋಂದಣಿಗಳೊಂದಿಗೆ, ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜ್‌ ಗಳು ಸೃಜನಶೀಲತೆ ಮತ್ತು ನಾವೀನ್ಯತೆಯನ್ನು ಉತ್ತೇಜಿಸಿವೆ, ವೈವಿಧ್ಯಮಯ ಹಿನ್ನೆಲೆಗಳಿಂದ ಬಂದ ಮಹತ್ವಾಕಾಂಕ್ಷಿ ಮತ್ತು ವೃತ್ತಿಪರ ಸೃಜನಶೀಲರನ್ನು ತೊಡಗಿಸಿಕೊಂಡಿವೆ.

ಅರ್ಹತೆ ಮತ್ತು ಭಾಗವಹಿಸುವಿಕೆಯ ಘಟನಾವಳಿ

ಆಡುವುದು ಹೇಗೆ: ಸಿಟಿ ಕ್ವೆಸ್ಟ್ ನಿಯಮಗಳು

  • ಆಟಗಾರ vs. ವಿಶ್ವಕರ್ಮ (ಎಐ): ಆಟಗಾರ ಮತ್ತು ವಿಶ್ವಕರ್ಮ (ಎಐ) ತಲಾ 56 ನಗರ ಕಾರ್ಡ್‌ ಗಳಿಂದ ಯಾದೃಚ್ಛಿಕವಾಗಿ ಷಫಲ್ ಮಾಡಿದ 11 ಕಾರ್ಡ್‌ಗಳ ಡೆಕ್ ಅನ್ನು ಪಡೆಯುತ್ತಾರೆ.
  • ಡೀಲ್: ಆಟದ ಆರಂಭದಲ್ಲಿ, ಇಬ್ಬರೂ ಆಟಗಾರರಿಗೆ 11 ಮುಖಾಮುಖಿ ನಗರ ಕಾರ್ಡ್‌ಗಳನ್ನು ನೀಡಲಾಗುತ್ತದೆ.
  • ಬಹಿರಂಗಪಡಿಸು: ಪ್ರತಿ ಸುತ್ತಿನಲ್ಲಿ, ಆಟಗಾರ ಮತ್ತು ಎಐ ಇಬ್ಬರೂ ತಮ್ಮ ಆಯಾ ಡೆಕ್‌ಗಳಿಂದ ಮೇಲಿನ ನಗರ ಕಾರ್ಡ್ ಅನ್ನು ಬಹಿರಂಗಪಡಿಸುತ್ತಾರೆ. ಹಿಂದಿನ ಸುತ್ತನ್ನು ಗೆದ್ದ ಆಟಗಾರನು ಮೊದಲು ಹೋಲಿಕೆ ನಿಯತಾಂಕವನ್ನು ಆಯ್ಕೆ ಮಾಡುತ್ತಾನೆ.
  • ಹೋಲಿಕೆ: ಪ್ರತಿ ಕಾರ್ಡ್ ಸ್ವಚ್ಛತೆ, ಜನಸಂಖ್ಯೆ ಮತ್ತು ಶಿಕ್ಷಣದಂತಹ ಆರು ನಿಯತಾಂಕಗಳನ್ನು ಒಳಗೊಂಡಿದೆ. ಆಟಗಾರನು ಎಐ ಕಾರ್ಡ್‌ ಗೆ ಹೋಲಿಸಲು ನಿಯತಾಂಕವನ್ನು ಆಯ್ಕೆ ಮಾಡುತ್ತಾನೆ.
  • ಸ್ಕೋರಿಂಗ್: ಗೆದ್ದಿದ್ದಕ್ಕಾಗಿ +1 ಪಾಯಿಂಟ್, ಟೈ ಆದದ್ದಕ್ಕಾಗಿ +0.5 ಪಾಯಿಂಟ್‌ ಮತ್ತು ಸತತ ಗೆಲುವಿಗೆ ಹೆಚ್ಚುವರಿ +0.5 ಪಾಯಿಂಟ್‌ ಗಳನ್ನು ಗಳಿಸುತ್ತಾರೆ.
  • ಪಂದ್ಯದ ಗೆಲುವು: 11 ಸುತ್ತುಗಳ ನಂತರ, ಹೆಚ್ಚಿನ ಒಟ್ಟು ಸ್ಕೋರ್ ಹೊಂದಿರುವ ಆಟಗಾರನನ್ನು ವಿಜೇತ ಎಂದು ಘೋಷಿಸಲಾಗುತ್ತದೆ.

ಬಹುಮಾನ ವರ್ಗಗಳು

ಲೀಡರ್ಬೋರ್ಡ್

ಆಟ ಮುಗಿದ ನಂತರ, ಸ್ಕೋರ್‌ ಗಳನ್ನು ಡೈನಾಮಿಕ್ ಲೀಡರ್‌ ಬೋರ್ಡ್‌ ನಲ್ಲಿ ಅಪ್‌ ಡೇಟ್‌ ಮಾಡಲಾಗುತ್ತದೆ. ಮೂರು ರೀತಿಯ ಲೀಡರ್‌ ಬೋರ್ಡ್‌ ಗಳಿವೆ:

ಉಲ್ಲೇಖಗಳು:

 

Click here to see PDF.

 

*****


(Release ID: 2104991) Visitor Counter : 29