ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಇನ್ನೋವೇಟ್2ಎಜುಕೇಟ್


ವಿನೋದ ಮತ್ತು ನಾವೀನ್ಯತೆಯೊಂದಿಗೆ ಕಲಿಕೆ

Posted On: 19 FEB 2025 3:38PM by PIB Bengaluru

ವಿನೋದ ಮತ್ತು ನಾವೀನ್ಯತೆಯೊಂದಿಗೆ ಕಲಿಕೆ

 

ಪರಿಚಯ

ಇನ್ನೋವೇಟ್2ಎಜುಕೇಟ್ ಹ್ಯಾಂಡ್‌ಹೆಲ್ಡ್ ಸಾಧನದ ವಿನ್ಯಾಸ ಚಾಲೆಂಜ್ ಮಕ್ಕಳ ಕಲಿಕೆಯ ಅನುಭವಗಳನ್ನು ಪರಿವರ್ತಿಸುವ ಗುರಿಯನ್ನು ಹೊಂದಿರುವ ಒಂದು ಉತ್ತೇಜಕ ಸ್ಪರ್ಧೆಯಾಗಿದೆ. ಇದು ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜ್ ಸೀಸನ್ 1 ರ ಭಾಗವಾಗಿದೆ ಮತ್ತು ಇದನ್ನು ವೇವ್ಸ್‌ (ವರ್ಲ್ಡ್ ಆಡಿಯೋ ವಿಷುಯಲ್ & ಎಂಟರ್‌ಟೈನ್‌ಮೆಂಟ್ ಶೃಂಗಸಭೆ) ಅಡಿಯಲ್ಲಿ ಆಚರಿಸಲಾಗುತ್ತದೆ, ಇದು ನಾಲ್ಕು ಪ್ರಮುಖ ಸ್ತಂಭಗಳ ಮೇಲೆ ಕೇಂದ್ರೀಕರಿಸುತ್ತದೆ: ಪ್ರಸಾರ & ಮಾಹಿತಿ ಮನರಂಜನೆ, ಎವಿಜಿಸಿ-ಎಕ್ಸ್‌ ಆರ್, ಡಿಜಿಟಲ್ ಮಾಧ್ಯಮ & ನಾವೀನ್ಯತೆ ಮತ್ತು ಚಲನಚಿತ್ರಗಳು. ಇನ್ನೋವೇಟ್2ಎಜುಕೇಟ್ ಎವಿಜಿಸಿ-ಎಕ್ಸ್‌ ಆರ್ (ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್, ಕಾಮಿಕ್ಸ್ ಮತ್ತು ವಿಸ್ತೃತ ರಿಯಾಲಿಟಿ, ವರ್ಚುವಲ್ ರಿಯಾಲಿಟಿ ಮತ್ತು ಮೆಟಾವರ್ಸ್‌ ನಂತಹ ಅತ್ಯಾಧುನಿಕ ತಂತ್ರಜ್ಞಾನಗಳು) ಗೆ ಮೀಸಲಾಗಿರುವ ವೇವ್ಸ್ ನ 2ನೇ ಸ್ತಂಭಕ್ಕೆ ಅನುಗುಣವಾಗಿದೆ.

ಈ ಕಾರ್ಯಕ್ರಮವನ್ನು ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಇಂಡಿಯನ್ ಡಿಜಿಟಲ್ ಗೇಮಿಂಗ್ ಸೊಸೈಟಿ (ಐಡಿಜಿಎಸ್) ಜೊತೆಗೂಡಿ ಆಯೋಜಿಸುತ್ತಿದ್ದು, ಹ್ಯಾಕ್2ಸ್ಕಿಲ್‌ ಇನ್ನೋವೇಶನ್ ಪಾಲುದಾರನಾಗಿದ್ದರೆ ಮತ್ತು ಐಸಿಟಿ ಅಕಾಡೆಮಿ ಕೌಶಲ್ಯ ಪಾಲುದಾರನಾಗಿದೆ. 3 ಅಂತರರಾಷ್ಟ್ರೀಯ ಭಾಗವಹಿಸುವವರು ಸೇರಿದಂತೆ ಒಟ್ಟು 334 ಅಭ್ಯರ್ಥಿಗಳು ಇಲ್ಲಿಯವರೆಗೆ ನೋಂದಾಯಿಸಿಕೊಂಡಿದ್ದಾರೆ.

ಉದ್ದೇಶ

ಈ ಚಾಲೆಂಜ್‌ ನಲ್ಲಿ ಶೈಕ್ಷಣಿಕ ಸಂಸ್ಥೆ, ವಿನ್ಯಾಸಕರು, ಎಂಜಿನಿಯರ್‌ ಗಳು ಮತ್ತು ನಾವೀನ್ಯಕಾರರು ಭಾಗವಹಿಸಿ ಶೈಕ್ಷಣಿಕ ಹ್ಯಾಂಡ್‌ಹೆಲ್ಡ್ ಸಾಧನದ ಈ ಕೆಳಗಿನ ಮೂಲಮಾದರಿಯನ್ನು ರಚಿಸಬಹುದು:

  • ಮಕ್ಕಳನ್ನು ಗಣಿತ ಕಲಿಕೆಯಲ್ಲಿ ತೊಡಗಿಸುವುದು
  • ಒಗಟುಗಳ ಮೂಲಕ ಸಮಸ್ಯೆ ಪರಿಹಾರವನ್ನು ಪ್ರೋತ್ಸಾಹಿಸುವುದು
  • ಸಂವಾದಾತ್ಮಕ ವಿಷಯದೊಂದಿಗೆ ಅರಿವಿನ ಕೌಶಲ್ಯಗಳನ್ನು ಹೆಚ್ಚಿಸುವುದು
  • ಕೈಗೆಟುಕುವ ಮತ್ತು ವಿಶಾಲ ಪ್ರೇಕ್ಷಕರಿಗೆ ಲಭ್ಯವಾಗುವುದು

ಸ್ಪರ್ಧೆಯ ಮಾರ್ಗಸೂಚಿಗಳು ಶಿಕ್ಷಣವನ್ನು ಮನರಂಜನೆಯೊಂದಿಗೆ ಸಂಯೋಜಿಸುವ ನವೀನ ಹ್ಯಾಂಡ್‌ಹೆಲ್ಡ್ ಸಾಧನವನ್ನು ವಿನ್ಯಾಸಗೊಳಿಸುವುದನ್ನು ಒತ್ತಿಹೇಳುತ್ತವೆ. ಭಾಗವಹಿಸುವವರು ಅನುಸರಿಸಬೇಕಾದ ಪ್ರಮುಖ ಮಾರ್ಗಸೂಚಿಗಳು ಇಲ್ಲಿವೆ:

ಸ್ಪರ್ಧೆಯ ಹಂತಗಳು

ಸ್ಪರ್ಧೆಯು ಮೂರು ಪ್ರಮುಖ ಹಂತಗಳನ್ನು ಒಳಗೊಂಡಿದೆ, ಪ್ರತಿಯೊಂದನ್ನೂ ಭಾಗವಹಿಸುವವರನ್ನು ಪರಿಕಲ್ಪನೆಯಿಂದ ಅಂತಿಮ ಉತ್ಪನ್ನಕ್ಕೆ ಮಾರ್ಗದರ್ಶನ ಮಾಡಲು ವಿನ್ಯಾಸಗೊಳಿಸಲಾಗಿದೆ. ಆರಂಭಿಕ ಪರಿಕಲ್ಪನೆಗಳನ್ನು ಸಲ್ಲಿಸುವುದರಿಂದ ಹಿಡಿದು ಪೂರ್ಣಗೊಂಡ ಮೂಲಮಾದರಿಗಳನ್ನು ಪ್ರಸ್ತುತಪಡಿಸುವವರೆಗಿನ ಪ್ರಕ್ರಿಯೆಯನ್ನು ಕೆಳಗೆ ನೀಡಲಾಗಿದೆ.

ನೋಂದಣಿ ಪ್ರಕ್ರಿಯೆ

ನಿಮ್ಮ ನೋಂದಣಿಯನ್ನು ಪೂರ್ಣಗೊಳಿಸಲು ಈ ಹಂತಗಳನ್ನು ಅನುಸರಿಸಿ:

  • ಹಂತ 1: ಆನ್‌ಲೈನ್‌ ನಲ್ಲಿ ನೋಂದಾಯಿಸಿ

ನೋಂದಣಿ ಪ್ರಕ್ರಿಯೆಯು ಫೆಬ್ರವರಿ 23, 2025 ರಂದು (ರಾತ್ರಿ 11:59 ಭಾರತೀಯ ಕಾಲಮಾನ) ಕೊನೆಗೊಳ್ಳುತ್ತದೆ

  • ಹಂತ 2: ನಿಮ್ಮ ಪರಿಕಲ್ಪನೆಯನ್ನು ಸಲ್ಲಿಸಿ

ವಿವರವಾದ ರೇಖಾಚಿತ್ರಗಳು, ವಿವರಣೆಗಳು ಮತ್ತು ಪ್ರಮುಖ ವೈಶಿಷ್ಟ್ಯಗಳನ್ನು ಒದಗಿಸಿ.

  • ಹಂತ 3: ನಿಮ್ಮ ಮೂಲಮಾದರಿಯನ್ನು ಅಭಿವೃದ್ಧಿಪಡಿಸಿ ಮತ್ತು ಸಲ್ಲಿಸಿ

ಆಯ್ಕೆಯಾದ ಭಾಗವಹಿಸುವವರನ್ನು ಕೆಲಸ ಮಾಡುವ ಮೂಲಮಾದರಿಯನ್ನು ನಿರ್ಮಿಸಲು ಮತ್ತು ಪ್ರಸ್ತುತಪಡಿಸಲು ಆಹ್ವಾನಿಸಲಾಗುತ್ತದೆ.

ಮೌಲ್ಯಮಾಪನ ಮಾನದಂಡಗಳು

ಭಾಗವಹಿಸುವವರ ಸಲ್ಲಿಕೆಗಳನ್ನು ಇವುಗಳ ಆಧಾರದ ಮೇಲೆ ಮೌಲ್ಯಮಾಪನ ಮಾಡಲಾಗುತ್ತದೆ:

  • ನಾವೀನ್ಯತೆ: ಸಾಧನ ವಿನ್ಯಾಸ ಮತ್ತು ವಿಷಯದಲ್ಲಿ ಸ್ವಂತಿಕೆ ಮತ್ತು ಸೃಜನಶೀಲತೆ.
  • ಶೈಕ್ಷಣಿಕ ಮೌಲ್ಯ: ಗಣಿತವನ್ನು ಕಲಿಸುವಲ್ಲಿ ಮತ್ತು ಅರಿವಿನ ಕೌಶಲ್ಯಗಳನ್ನು ಹೆಚ್ಚಿಸುವಲ್ಲಿ ಪರಿಣಾಮಕಾರಿತ್ವ.
  • ಬಳಕೆದಾರರ ಅನುಭವ: ಮಕ್ಕಳಿಗೆ ಸಾಧನವು ಎಷ್ಟು ಆಕರ್ಷಕ ಮತ್ತು ಬಳಕೆದಾರ ಸ್ನೇಹಿಯಾಗಿದೆ.
  • ವೆಚ್ಚದಾಯಕ: ಕೈಗೆಟುಕುವ ಬೆಲೆಯಲ್ಲಿ ಸಾಧನವನ್ನು ಉತ್ಪಾದಿಸುವ ಕಾರ್ಯಸಾಧ್ಯತೆ.
  • ಬಾಳಿಕೆ ಮತ್ತು ವಿನ್ಯಾಸ: ವಿನ್ಯಾಸದ ಪ್ರಾಯೋಗಿಕತೆ ಮತ್ತು ದೃಢತೆ.

ಬಹುಮಾನಗಳು

ಇನ್ನೋವೇಟ್2ಎಜುಕೇಟ್ ಚಾಲೆಂಜ್ ಸೃಜನಶೀಲತೆ ಮತ್ತು ನಾವೀನ್ಯತೆಗೆ ಪ್ರತಿಫಲ ನೀಡಲು ಅತ್ಯಾಕರ್ಷಕ ಬಹುಮಾನಗಳನ್ನು ನೀಡುತ್ತದೆ. ವಿಜೇತರಿಗೆ ನಗದು ಬಹುಮಾನಗಳು, ಮೂಲಮಾದರಿ ಅಭಿವೃದ್ಧಿಗೆ ಬೆಂಬಲ ಮತ್ತು ಪ್ರಮುಖ ಕಾರ್ಯಕ್ರಮಗಳಲ್ಲಿ ತಮ್ಮ ವಿನ್ಯಾಸಗಳನ್ನು ಪ್ರದರ್ಶಿಸುವ ಅವಕಾಶ ದೊರೆಯುತ್ತದೆ.

  • ಅತ್ಯುತ್ತಮ ಮೂರು ವಿನ್ಯಾಸಗಳಿಗೆ ನಗದು ಬಹುಮಾನಗಳನ್ನು ನೀಡಲಾಗುವುದು.
  • ಮೂಲಮಾದರಿ ಅಭಿವೃದ್ಧಿ ಬೆಂಬಲ: ವಿಜೇತ ಮೂಲಮಾದರಿಯನ್ನು ಸಂಸ್ಕರಿಸಲು ಮತ್ತು ಉತ್ಪಾದಿಸಲು ಸಹಾಯ.
  • ಪ್ರದರ್ಶಿಸಲು ಅವಕಾಶ: ವಿಜೇತ ವಿನ್ಯಾಸವನ್ನು ಪ್ರಮುಖ ಐಡಿಜಿಎಸ್ ಕಾರ್ಯಕ್ರಮಗಳಲ್ಲಿ ಪ್ರದರ್ಶಿಸಲಾಗುತ್ತದೆ ಮತ್ತು ಸಂಭಾವ್ಯ ಹೂಡಿಕೆದಾರರು ಮತ್ತು ತಯಾರಕರಿಗೆ ಪ್ರದರ್ಶಿಸಲಾಗುತ್ತದೆ.‌

ಉಲ್ಲೇಖಗಳು:

Click here to see PDF:

 

*****


(Release ID: 2104861) Visitor Counter : 24