WAVES BANNER 2025
ವಾರ್ತಾ ಮತ್ತು ಪ್ರಸಾರ ಸಚಿವಾಲಯ

ರೋಡ್ ಟು ಗೇಮ್ ಜಾಮ್

 Posted On: 18 FEB 2025 5:48PM |   Location: PIB Bengaluru

ಭಾರತದ ಗೇಮ್ ಡೆವಲಪರ್‌ಗಳನ್ನು ಸಬಲೀಕರಣಗೊಳಿಸುವುದು

 

ಪರಿಚಯ

"ರೋಡ್ ಟು ಗೇಮ್ ಜಾಮ್" ಭಾರತದ ಆಟದ ಅಭಿವರ್ಧಕರಿಗೆ (ಗೇಮ್ ಡೆವಲಪರ್‌) ತಮ್ಮ ಸೃಜನಶೀಲತೆ ಮತ್ತು ನಾವೀನ್ಯತೆಯನ್ನು ಪ್ರದರ್ಶಿಸಲು ಒಂದು ಉತ್ತೇಜನಕಾರಿ ಅವಕಾಶವಾಗಿದೆ. ಗೇಮ್ ಡೆವಲಪರ್ ಅಸೋಸಿಯೇಷನ್ ​​ಆಫ್ ಇಂಡಿಯಾ (ಜಿಡಿಎಐ) KGeN (ಕ್ರ್ಯಾಟೋಸ್ ಗೇಮರ್ ನೆಟ್‌ವರ್ಕ್) ಸಹಯೋಗದೊಂದಿಗೆ ಆಯೋಜಿಸಲಾಗಿರುವ ಈ ಉಪಕ್ರಮವು ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜ್ ಸೀಸನ್ 1 ರ ಮಹತ್ವದ ಭಾಗವಾಗಿದೆ ಮತ್ತು ಎವಿಜಿಸಿ-ಎಕ್ಸ್‌ ಆರ್ (ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್ ಮತ್ತು ಕಾಮಿಕ್ಸ್, ಜೊತೆಗೆ ಆಗ್ಮೆಂಟೆಡ್ ರಿಯಾಲಿಟಿ/ವರ್ಚುವಲ್ ರಿಯಾಲಿಟಿ ಮತ್ತು ಮೆಟಾವರ್ಸ್) ಮೇಲೆ ಕೇಂದ್ರೀಕರಿಸುವ ವೇವ್ಸ್‌ ನ 2 ನೇ ಸ್ತಂಭದ ಅಡಿಯಲ್ಲಿ ಬರುತ್ತದೆ. ಈ ಕಾರ್ಯಕ್ರಮವು ವೇಗವಾಗಿ ವಿಕಸನಗೊಳ್ಳುತ್ತಿರುವ ಉದ್ಯಮದಲ್ಲಿ ಅತ್ಯಾಧುನಿಕ ವಿನ್ಯಾಸಗಳು ಮತ್ತು ಸೃಜನಶೀಲ ಪರಿಕಲ್ಪನೆಗಳನ್ನು ಪ್ರಸ್ತುತಪಡಿಸುವ ಮೂಲಕ ಗೇಮಿಂಗ್‌ ನ ಭವಿಷ್ಯವನ್ನು ರೂಪಿಸಲು ಗೇಮ್‌ ಡೆವಲಪರ್‌ ಗಳಿಗೆ ವೇದಿಕೆಯನ್ನು ಒದಗಿಸುತ್ತದೆ.

ನೋಂದಣಿ ಮತ್ತು ಗಡುವು

ಈ ಕಾರ್ಯಕ್ರಮದ ನೋಂದಣಿ ಫೆಬ್ರವರಿ 16, 2025 ರವರೆಗೆ ನಡೆಯಿತು, ಇದರಲ್ಲಿ 5,569 ಗೇಮ್‌ ಡೆವಲಪರ್ ಉತ್ಸಾಹಿಗಳು ನೋಂದಾಯಿಸಿಕೊಂಡಿದ್ದಾರೆ. ಇದರ ಫಲಿತಾಂಶಗಳನ್ನು ಮಾರ್ಚ್ 16, 2025 ರಂದು ಘೋಷಿಸಲಾಗುತ್ತದೆ. ಡೆವಲಪರ್‌ ಗಳು ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಲು ಮತ್ತು ಅಭಿವೃದ್ಧಿ ಹೊಂದುತ್ತಿರುವ ಗೇಮಿಂಗ್ ಉದ್ಯಮದಲ್ಲಿ ಮನ್ನಣೆ ಪಡೆಯಲು ಇದು ಉತ್ತಮ ಅವಕಾಶವನ್ನು ಒದಗಿಸುತ್ತದೆ. ಗೇಮ್ ಜಾಮ್ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಾಗಿದ್ದು, ಇದು ಭಾರತದ ಉದಯೋನ್ಮುಖ ಗೇಮ್‌ ಅಭಿವೃದ್ಧಿ ಉದ್ಯಮದಲ್ಲಿ ಸೃಜನಶೀಲತೆ ಮತ್ತು ನಾವೀನ್ಯತೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.

ಗೇಮ್‌ ಅಭಿವೃದ್ಧಿಯಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ಮತ್ತು ಯುವ ಉತ್ಸಾಹಿಗಳು ಇದರಲ್ಲಿ ಭಾಗವಹಿಸುತ್ತಿದ್ದಾರೆ.

ಗೇಮ್ ಜಾಮ್ ಥೀಮ್ಗಳು

ಗೇಮ್ ಜಾಮ್‌ ಗಾಗಿ ವಿಶಿಷ್ಟ ಥೀಮ್‌ ಗಳು ಇಲ್ಲಿವೆ, ಪ್ರತಿಯೊಂದನ್ನೂ ನವೀನ ಕಥೆ ಹೇಳುವಿಕೆ ಮತ್ತು ಆಟದ ಶೈಲಿಯನ್ನು ಪ್ರೇರೇಪಿಸಲು ವಿನ್ಯಾಸಗೊಳಿಸಲಾಗಿದೆ.

ಬಹುಮಾನಗಳು

ಈ ಸ್ಪರ್ಧೆಯು ಗೇಮ್‌ ಡೆವಲಪರ್‌ ಗಳಿಗೆ ಅಮೂಲ್ಯವಾದ ಅನುಭವ, ಮಾರ್ಗದರ್ಶನ ಅವಕಾಶಗಳು ಮತ್ತು ಉನ್ನತ ಮಟ್ಟದ ವೇದಿಕೆಗಳು ಮತ್ತು ಉದ್ಯಮ ಸಂಪರ್ಕಗಳ ಮೂಲಕ ತಮ್ಮ ವೃತ್ತಿಜೀವನವನ್ನು ಮುನ್ನಡೆಸಲು ಅವಕಾಶವನ್ನು ನೀಡುತ್ತದೆ.

 

ಉಲ್ಲೇಖಗಳು

 

Click here to see in PDF:

 

*****

 

 


Release ID: (Release ID: 2104859)   |   Visitor Counter: 37