ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಎಲೆಕ್ಟ್ರಾನಿಕ್ ಸಂಗೀತ ನಿರ್ಮಾಪಕರು ಮತ್ತು ಡಿಜೆಗಳಿಗಾಗಿ ವೇವ್ಸ್ 2025 ವೇದಿಕೆ: ‘ರೆಸೊನೇಟ್: ದಿ ಇಡಿಎಂ ಚಾಲೆಂಜ್’


ಇಡಿಎಂ ಪ್ರಕಾರದ ಸಂಗೀತ ಸಾಧಕರ ಪ್ರತಿಭೆ ಪ್ರದರ್ಶನಕ್ಕೆ ‘ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜ್’

ಭಾಗವಹಿಸುವವರಿಗೆ ನೋಂದಣಿ ಪ್ರಕ್ರಿಯೆ 2025ರ ಮಾರ್ಚ್ 10ಕ್ಕೆ  ಮುಕ್ತಾಯ

Posted On: 18 FEB 2025 7:12PM by PIB Bengaluru

ನೀವು ಎಲೆಕ್ಟ್ರಾನಿಕ್ ಸಂಗೀತ ನಿರ್ಮಾಪಕರಾಗಿದ್ದರೆ ಮತ್ತು ಡಿಜೆಯಿಂಗ್‌ನಲ್ಲಿ ನೈಪುಣ್ಯತೆ ಹೊಂದಿದ್ದರೆ, ವಿಶ್ವ ಆಡಿಯೋ ವಿಷುಯಲ್ ಮತ್ತು ಮನರಂಜನಾ ಶೃಂಗಸಭೆ (ವೇಮ್ಸ್‌ ) 2025 ನಿಮ್ಮ ಪ್ರತಿಭಾ ಪ್ರದರ್ಶನಕ್ಕೆ ಅಂತಿಮ ವೇದಿಕೆಯಾಗಿದೆ ! ಭಾರತೀಯ ಸಂಗೀತ ಉದ್ಯಮ (ಐಎಂಐ), ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ (ಐ&ಬಿ) ಸಹಭಾಗಿತ್ವದಲ್ಲಿ 'ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜ್' ನ ಭಾಗವಾಗಿ "ರೆಸೊನೇಟ್: ದಿ ಇಡಿಎಂ ಚಾಲೆಂಜ್" ಅನ್ನು ಆಯೋಜಿಸುತ್ತಿದೆ. ಇದು ಆಡಿಯೋ, ದೃಶ್ಯ ಮತ್ತು ಮನರಂಜನಾ ಜಗತ್ತಿನಲ್ಲಿ ನಿಮ್ಮ ಸೃಜನಶೀಲ ಪ್ರತಿಭೆ ಮತ್ತು ನಾವೀನ್ಯತೆ ಪ್ರದರ್ಶನಕ್ಕೆ ಒಂದು ಅಕರ್ಷಕ ಅವಕಾಶ ಒದಗಿಸುತ್ತದೆ. ಈ ಚಾಲೆಂಜ್‌ ಸಂಗೀತ ಸಮ್ಮೇಳನ, ಎಲೆಕ್ಟ್ರಾನಿಕ್ ಸಂಗೀತ ಮತ್ತು ಡಿಜೆಯಿಂಗ್ ಕಲಾತ್ಮಕತೆಗೆ ಜಾಗತಿಕ ಕೇಂದ್ರವಾಗಿ ಭಾರತದ ಸ್ಥಾನವನ್ನು ಮತ್ತಷ್ಟು ಬಲವರ್ಧನೆಗೊಳಿಸಲು ಪ್ರಯತ್ನಿಸುತ್ತದೆ.

"ರೆಸೊನೇಟ್: ದಿ ಇಡಿಎಂ ಚಾಲೆಂಜ್" ವೈಯಕ್ತಿಕ ಕಲಾವಿದರು ಮತ್ತು ಸೃಜನಶೀಲ ತಂಡಗಳಿಗೆ ಉದ್ಯಮ ತಜ್ಞರು, ಭಾರತೀಯ ಸಂಗೀತ ಗ್ರಾಹಕರು ಮತ್ತು ಜಾಗತಿಕ ಪ್ರೇಕ್ಷಕರ ಮುಂದೆ ಪ್ರದರ್ಶನ ನೀಡಲು ಮತ್ತು ಎಲೆಕ್ಟ್ರಾನಿಕ್ ಸಂಗೀತದ ಮೇಲಿನ ವ್ಯಾಮೋಹವನ್ನು ಅಂತಾರಾಷ್ಟ್ರೀಯ ಮನ್ನಣೆಯಾಗಿ ಪರಿವರ್ತಿಸಲು ಮುಕ್ತವಾಗಿದೆ. ಈ ವೇದಿಕೆಯು ಉದಯೋನ್ಮುಖ ಮತ್ತು ಅನುಭವಿ ಸಂಗೀತಗಾರರಿಗೆ ಎರಡು ರೋಚಕ ಹಂತಗಳಲ್ಲಿ ಸ್ಪರ್ಧಿಸಲು ಮುಕ್ತವಾಗಿದೆ:

  • ಪ್ರಾಥಮಿಕ ಸುತ್ತು: ಭಾಗವಹಿಸುವವರು ತಮ್ಮ ಮೂಲ ಇಡಿಎಂ ಟ್ರ್ಯಾಕ್‌ಗಳನ್ನು ಆನ್‌ಲೈನ್‌ನಲ್ಲಿ ಸಲ್ಲಿಸಬೇಕು. ಅದನ್ನು ಉದ್ಯಮ ತಜ್ಞರ ಸಮಿತಿಯು ಅಗ್ರ 10 ಪ್ರವೇಶಗಳನ್ನು ಶಾರ್ಟ್‌ಲಿಸ್ಟ್ ಮಾಡಲು ಮೌಲ್ಯಮಾಪನ ಮಾಡುತ್ತದೆ.
  • ಗ್ರ್ಯಾಂಡ್ ಫಿನಾಲೆ: ಅಂತಿಮ ಸ್ಪರ್ಧಿಗಳು ವೇವ್ಸ್ 2025 ರಲ್ಲಿ ನೇರ ಪ್ರದರ್ಶನ ನೀಡಬೇಕಾಗುತ್ತದೆ. ವಿಶೇಷ ತೀರ್ಪುಗಾರರು ಮತ್ತು ಜಾಗತಿಕ ಪ್ರೇಕ್ಷಕರ ಮುಂದೆ ಉನ್ನತ ಗೌರವಗಳಿಗಾಗಿ ಸ್ಪರ್ಧಿಸಬೇಕಾಗುತ್ತದೆ.

ವಿಜೇತರು ಗಣನೀಯ ಪ್ರಮಾಣದ ನಗದು ಬಹುಮಾನ (ಗ್ರಾಂಡ್ ಪ್ರೈಜ್ ವಿಜೇತರಿಗೆ 2,00,000 ರೂ. ಮತ್ತು ರನ್ನರ್ ಅಪ್‌ಗೆ 50,000 ರೂ.) ಪಡೆಯುತ್ತಾರೆ, ಜೊತೆಗೆ ಪ್ರಚಾರ ಸಾಮಗ್ರಿಗಳಲ್ಲಿ ಕಾಣಿಸಿಕೊಳ್ಳಲು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನ ನೀಡಲು ಮತ್ತು ಜಾಗತಿಕ ವೇದಿಕೆಯಲ್ಲಿ ಪ್ರದರ್ಶನ ನೀಡಲು ಅವಕಾಶ ದೊರಕುತ್ತದೆ.

ಸವಾಲಿನ ಕುರಿತು ವಿವರವಾದ ಮಾಹಿತಿಗಾಗಿ, ದಯವಿಟ್ಟು https://indianmi.org/resonate-the-edm-challenge/ ವೆಬ್‌ಸೈಟ್‌ಗೆ ಭೇಟಿ ನೀಡಿ.

ನಿಯಮಗಳು ಮತ್ತು ಷರತ್ತುಗಳೊಂದಿಗೆ ನೀವೇ ಚೆನ್ನಾಗಿ ತಿಳಿದುಕೊಳ್ಳುವುದು ಮುಖ್ಯ. ಸ್ಪರ್ಧೆಯ ಭಾಗವಹಿಸುವಿಕೆಯ ನಿಯಮಗಳು ಮತ್ತು ಮಾನದಂಡಗಳ ಕುರಿತು ವಿವರಗಳಿಗಾಗಿ, ದಯವಿಟ್ಟು ಕೆಳಗಿನ ಲಿಂಕ್ ಅನ್ನು ನೋಡಿ: Terms and Conditions.

ಭಾಗವಹಿಸುವಲು ನೋಂದಣಿಗೆ ಕೊನೆಯ ದಿನಾಂಕ 2025ರ ಮಾರ್ಚ್ 10. ಭಾಗವಹಿಸುವವರು ತಮ್ಮ ಭಾಗವಹಿಸುವಿಕೆಯ ಆಸಕ್ತಿಯನ್ನುwavesatinfo@indianmi.org ಗೆ ಮೇಲ್ ಮಾಡಬೇಕು. ಭಾಗವಹಿಸುವವರು ತಮ್ಮ ಭಾಗವಹಿಸುವಿಕೆಯ ವಿವರಗಳನ್ನು ಸಲ್ಲಿಸಲು ಒದಗಿಸಲಾದ ಟೆಂಪ್ಲೇಟ್ ಅನ್ನು ಬಳಸಬೇಕು, ಅದನ್ನು ಕೆಳಗಿನ ಲಿಂಕ್‌ನಲ್ಲಿ ಪಡೆಯಬಹುದು: Submission Template.

ವೇವ್ಸ್‌ 2025 ಕುರಿತು :

ವೇವ್ಸ್‌  2025 ಎಂಬುದು ಮುಂಬೈನ ಜಿಯೋ ಕನ್ವೆನ್ಷನ್ ಕೇಂದ್ರದಲ್ಲಿ 2025ರ ಮೇ 1 ರಿಂದ ಮೇ 4 ರವರೆಗೆ ನಡೆಯಲಿರುವ ಜಾಗತಿಕ ಶೃಂಗಸಭೆಯಾಗಿದ್ದು, ಮಾಧ್ಯಮ, ಮನರಂಜನೆ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ನಾವೀನ್ಯತೆ, ಸೃಜನಶೀಲತೆ ಮತ್ತು ಸಹಯೋಗವನ್ನು ಬೆಳೆಸುವ ಗುರಿ ಹೊಂದಿದೆ. ಅನಿಮೇಷನ್, ಗೇಮಿಂಗ್, ವಿಷುಯಲ್‌ ಎಫೆಕ್ಟ್‌  ಮತ್ತು ಎಕ್ಸ್‌ ಆರ್‌ (Extended Reality) ಯಲ್ಲಿ ಹೊಸ ಅವಕಾಶಗಳನ್ನು ಅನ್ವೇಷಿಸಲು ವೇವ್ಸ್‌ ಸೃಷ್ಟಿಕರ್ತರು, ಉದ್ಯಮ ನಾಯಕರು ಮತ್ತು ಹೂಡಿಕೆದಾರರನ್ನು ಒಗ್ಗೂಡಿಸುತ್ತದೆ. AVGC-XR ವಲಯದಲ್ಲಿ ಭಾರತವನ್ನು ಜಾಗತಿಕ ಶಕ್ತಿ ತಾಣವಾಗಿರುವ ದೂರದೃಷ್ಟಿಯೊಂದಿಗೆ, ವೇವ್ಸ್‌ 2025 ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಗಡಿಯಾಚೆಗಿನ ಸಹಯೋಗಗಳನ್ನು ಉತ್ತೇಜಿಸುತ್ತದೆ.

 

*****


(Release ID: 2104637) Visitor Counter : 20