ವಾರ್ತಾ ಮತ್ತು ಪ್ರಸಾರ ಸಚಿವಾಲಯ
ವೇವ್ಸ್ ಟ್ರೇಲರ್ ನಿರ್ಮಾಣ ಸ್ಪರ್ಧೆ
ಸೃಜನಶೀಲತೆ- ಸಿನಿಮಾ ಸಂಗಮ
Posted On:
18 FEB 2025 3:36PM by PIB Bengaluru
ಸೃಜನಶೀಲತೆ- ಸಿನಿಮಾ ಸಂಗಮ
ಪರಿಚಯ
ವೇವ್ಸ್ ಸೃಜನಶೀಲತೆಯ ಅನಾವರಣ: ಟ್ರೇಲರ್ ನಿರ್ಮಾಣ ಸ್ಪರ್ಧೆಯು ನೆಟ್‌ಫ್ಲಿಕ್ಸ್ ನ ವ್ಯಾಪಕ ವಿಷಯ ಭಂಡಾರವನ್ನು ಬಳಸಿಕೊಂಡು ಆಕರ್ಷಕ ಟ್ರೇಲರ್ ಗಳನ್ನು ರಚಿಸಲು ಮಹತ್ವಾಕಾಂಕ್ಷೆಯ ಚಲನಚಿತ್ರ ನಿರ್ಮಾತೃಗಳಿಗೆ ಒಂದು ಉತ್ತೇಜಕ ಅವಕಾಶವಾಗಿದೆ. ವಿಶ್ವ ಧ್ವನಿ ದೃಶ್ಯ & ಮನರಂಜನಾ ಶೃಂಗಸಭೆಯ (ವೇವ್ಸ್) 4ನೇ ಸ್ತಂಭದ (ಚಲನಚಿತ್ರಗಳು) ಅಡಿಯಲ್ಲಿ ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜ್ ನ ಭಾಗವಾಗಿ, ಈ ಸ್ಪರ್ಧೆಯು ಭಾಗವಹಿಸುವವರಿಗೆ ಟ್ರೇಲರ್ ನಿರ್ಮಾಣ ಕಲೆಯ ಮೂಲಕ ಸಾಂಪ್ರದಾಯಿಕ ದೃಶ್ಯಗಳನ್ನು ಮರು-ಕಲ್ಪನೆ ಮಾಡಲು ಅಥವಾ ಹೊಸ ವಿಧಾನಗಳನ್ನು ಪ್ರಸ್ತುತಪಡಿಸಲು ಪ್ರೋತ್ಸಾಹಿಸುತ್ತದೆ. ಈ ಸ್ತಂಭವು ಚಲನಚಿತ್ರ ತಯಾರಿಕೆ, ನಿರ್ಮಾಣ ಮತ್ತು ಜಾಗತೀಕರಣದ ಜಗತ್ತನ್ನು ಅನ್ವೇಷಿಸುತ್ತದೆ, ಭಾಗವಹಿಸುವವರಿಗೆ ತಮ್ಮ ಸೃಜನಶೀಲ ಕೌಶಲ್ಯಗಳನ್ನು ಪ್ರದರ್ಶಿಸಲು ಒಂದು ವೇದಿಕೆಯನ್ನು ನೀಡುತ್ತದೆ. ವಾರ್ತಾ ಮತ್ತು ಪ್ರಸಾರ ಸಚಿವಾಲಯ ಮತ್ತು ನೆಟ್‌ಫ್ಲಿಕ್ಸ್ ಸೃಜನಶೀಲ ಪಾಲುದಾರರಾಗಿ ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಘಗಳ ಒಕ್ಕೂಟ ಮತ್ತು ರಿಸ್ಕಿಲ್ ಆಯೋಜಿಸಿರುವ ಈ ಸ್ಪರ್ಧೆಯು ಮುಂದಿನ ಪೀಳಿಗೆಯ ಕಂಟೆಂಟ್ ರಚನೆಕಾರರನ್ನು ಪ್ರೇರೇಪಿಸುವ ಮತ್ತು ಸಜ್ಜುಗೊಳಿಸುವ ಗುರಿಯನ್ನು ಹೊಂದಿದೆ.

ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ ಮತ್ತು ಜಿಯೋ ವರ್ಲ್ಡ್ ಗಾರ್ಡನ್ಸ್ ನಲ್ಲಿ ಮೇ 1 ರಿಂದ 4, 2025 ರವರೆಗೆ ನಡೆಯಲಿರುವ ವೇವ್ಸ್, ಮಾಧ್ಯಮ ಮತ್ತು ಮನರಂಜನಾ (ಎಂ&ಇ) ಉದ್ಯಮದಲ್ಲಿ ಒಂದು ಹೆಗ್ಗುರುತು ಕಾರ್ಯಕ್ರಮವಾಗಲಿದೆ. ಉದ್ಯಮದ ನಾಯಕರು, ಸೃಜನಶೀಲರು ಮತ್ತು ನಾವೀನ್ಯಕಾರರನ್ನು ಒಟ್ಟುಗೂಡಿಸುವ ವೇವ್ಸ್, ಉದಯೋನ್ಮುಖ ಪ್ರವೃತ್ತಿಗಳು, ಅವಕಾಶಗಳು ಮತ್ತು ಸವಾಲುಗಳ ಕುರಿತು ಚರ್ಚೆಗಳಿಗೆ ಜಾಗತಿಕ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ವಿಶ್ವ ವೇದಿಕೆಯಲ್ಲಿ ಭಾರತದ ಸೃಜನಶೀಲ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ.
ವೇವ್ಸ್‌ನ ಕೇಂದ್ರಭಾಗವಾಗಿ, ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜ್ ಸೃಜನಶೀಲತೆ ಮತ್ತು ನಾವೀನ್ಯತೆಗೆ ವೇಗವರ್ಧಕವಾಗಿ ಹೊರಹೊಮ್ಮಿದೆ. ಪ್ರಪಂಚದಾದ್ಯಂತ 70,000 ಕ್ಕೂ ಹೆಚ್ಚು ನೋಂದಣಿಗಳೊಂದಿಗೆ, ಈ ಸವಾಲುಗಳು ಸೃಜನಶೀಲರನ್ನು ಗಡಿಗಳನ್ನು ಮೀರಲು ಮತ್ತು ಕಥೆ ಹೇಳುವಿಕೆಯನ್ನು ಮರುವ್ಯಾಖ್ಯಾನಿಸಲು ಅವಕಾಶ ನೀಡುತ್ತಿವೆ. ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಪ್ರಮುಖ ಉಪಕ್ರಮವಾಗಿ, ಈ ಸವಾಲುಗಳು ಕಂಟೆಂಟ್ ರಚನೆ ಮತ್ತು ಸಹಯೋಗಕ್ಕಾಗಿ ಪೂರಕ ವ್ಯವಸ್ಥೆಯನ್ನು ಪೋಷಿಸುತ್ತಿವೆ, ಆ ಮೂಲಕ ಭಾರತವನ್ನು ಸೃಜನಶೀಲ ಶ್ರೇಷ್ಠತೆಯ ಜಾಗತಿಕ ಕೇಂದ್ರವಾಗಿ ಸ್ಥಾಪಿಸುತ್ತಿವೆ.
ಅರ್ಹತೆ ಮತ್ತು ತೀರ್ಪಿನ ಮಾನದಂಡಗಳು
- ಈ ಸ್ಪರ್ಧೆಯು ವಿದ್ಯಾರ್ಥಿಗಳು ಮತ್ತು ವೀಡಿಯೊ ಸಂಕಲನ, ಚಲನಚಿತ್ರ ನಿರ್ಮಾಣ ಅಥವಾ ಕಂಟೆಂಟ್ ರಚನೆಯಲ್ಲಿ ಉತ್ಸಾಹ ಹೊಂದಿರುವ ಮಹತ್ವಾಕಾಂಕ್ಷಿ ಚಲನಚಿತ್ರ ನಿರ್ಮಾತೃಗಳಿಗೆ ಮುಕ್ತವಾಗಿದೆ. ಅರ್ಜಿದಾರರು ಭಾಗವಹಿಸಲು ಕನಿಷ್ಠ 18 ವರ್ಷ ವಯಸ್ಸಿನವರಾಗಿರಬೇಕು.
- ಉದ್ಯಮ ತಜ್ಞರ ಸಮಿತಿಯು ಸೃಜನಶೀಲತೆ, ಕಥೆ ಹೇಳುವಿಕೆ, ತಾಂತ್ರಿಕತೆ ಬಳಕೆ ಮತ್ತು ಒಟ್ಟಾರೆ ಪ್ರಭಾವದ ಆಧಾರದ ಮೇಲೆ ಟ್ರೇಲರ್ ಗಳನ್ನು ಮೌಲ್ಯಮಾಪನ ಮಾಡುತ್ತದೆ. ಸ್ಕ್ರೀನಿಂಗ್ ಪ್ರಕ್ರಿಯೆಯು ಹಲವು ಸುತ್ತುಗಳಲ್ಲಿ ನಡೆಯುತ್ತದೆ, ಭಾಗವಹಿಸುವವರು ತಮ್ಮ ಸಲ್ಲಿಕೆಗಳನ್ನು ಸುಧಾರಿಸಲು ಸಹಾಯ ಮಾಡಲು ವಿವಿಧ ಹಂತಗಳಲ್ಲಿ ಅಭಿಪ್ರಾಯಗಳನ್ನು ಪಡೆಯುತ್ತಾರೆ.
ಘಟನಾವಳಿ

ನೋಂದಣಿ ವಿವರಗಳು
ನೋಂದಣಿಗಳು ಈಗ ತೆರೆದಿವೆ ಮತ್ತು 31ನೇ ಮಾರ್ಚ್ 2025 ರಂದು ಮುಕ್ತಾಯಗೊಳ್ಳಲಿವೆ. ಫೆಬ್ರವರಿ 15, 2025 ರವರೆಗೆ, ಪ್ರಪಂಚದಾದ್ಯಂತ ಒಟ್ಟು 3,313 ಭಾಗವಹಿಸುವವರು ನೋಂದಾಯಿಸಿಕೊಂಡಿದ್ದಾರೆ. ಕಂಟೆಂಟ್ ರಚನೆಕಾರರು ಮತ್ತು ವೀಡಿಯೊ ಸಂಕಲನಕಾರರಾಗಲು ಬಯಸುವ ಕಾಲೇಜು ವಿದ್ಯಾರ್ಥಿಗಳು, ಹಾಗೆಯೇ ತಮ್ಮ ಉತ್ಸಾಹವನ್ನು ಅನ್ವೇಷಿಸುವ ಅಥವಾ ಸಂಕಲನಕಾರರು ಮತ್ತು ರಚನೆಕಾರರಾಗಿ ತಮ್ಮ ಅನುಭವವನ್ನು ಸದುಪಯೋಗಪಡಿಸಿಕೊಳ್ಳುವ ವೃತ್ತಿಪರರನ್ನು ಒಳಗೊಂಡಂತೆ ಸ್ಪರ್ಧೆಯು ಭಾಗವಹಿಸುವವರ ವೈವಿಧ್ಯಮಯ ಗುಂಪನ್ನು ಆಕರ್ಷಿಸಿದೆ.
ಇಲ್ಲಿ ನೋಂದಾಯಿಸಿಕೊಳ್ಳಿ: https://reskilll.com/hack/wavesficci/signup
ಪುರಸ್ಕಾರಗಳು ಮತ್ತು ಬಹುಮಾನಗಳು

ರೋಡ್ ಶೋಗಳು: ಸೃಜನಶೀಲತೆ ಮತ್ತು ಸ್ಪರ್ಧೆಯನ್ನು ಉತ್ತೇಜಿಸುವುದು
ಟ್ರೇಲರ್ ತಯಾರಿಕೆ ಸ್ಪರ್ಧೆಯಲ್ಲಿ ರೋಡ್ ಶೋಗಳು ಕೇಂದ್ರಬಿಂದುವಾಗಿದ್ದು, ಸೃಜನಶೀಲ ಪ್ರತಿಭೆಯನ್ನು ಪ್ರೇರೇಪಿಸಲು ಮತ್ತು ಪೋಷಿಸಲು ಪ್ರಮುಖ ವೇದಿಕೆಗಳಾಗಿ ಕಾರ್ಯನಿರ್ವಹಿಸುತ್ತವೆ. ಗುರು ತೇಜ್ ಬಹದ್ದೂರ್ 4 ನೇ ಶತಮಾನೋತ್ಸವ ಎಂಜಿನಿಯರಿಂಗ್ ಕಾಲೇಜಿನಲ್ಲಿ (GTB4CEC) ಇತ್ತೀಚೆಗೆ ನಡೆದ ಕಾರ್ಯಕ್ರಮವು ಈ ಧ್ಯೇಯಕ್ಕೆ ಸಾಕ್ಷಿಯಾಗಿದ್ದು, ಮಹತ್ವಾಕಾಂಕ್ಷಿ ಚಲನಚಿತ್ರ ನಿರ್ಮಾತೃಗಳಿಗೆ ಪ್ರಾಯೋಗಿಕ ಕಲಿಕೆ ಮತ್ತು ಉದ್ಯಮದ ಅನುಭವವನ್ನು ನೀಡುತ್ತದೆ. ಈ ರೋಡ್ ಶೋಗಳು ಗ್ರ್ಯಾಂಡ್ ಫಿನಾಲೆಯತ್ತ ಆವೇಗವನ್ನು ಹೆಚ್ಚಿಸುತ್ತವೆ, ಭಾಗವಹಿಸುವವರಿಗೆ ಆಕರ್ಷಕ ಟ್ರೇಲರ್ ಗಳನ್ನು ತಯಾರಿಸಲು ಕೌಶಲ್ಯ ಮತ್ತು ಆತ್ಮವಿಶ್ವಾಸವನ್ನು ಒದಗಿಸುತ್ತವೆ.
ಭಾಗವಹಿಸುವವರ ಅನುಭವ:
- ಪ್ರಾಯೋಗಿಕ ಕಾರ್ಯಾಗಾರಗಳು: ಹಸಿರು ಪರದೆಯ ಸಂಕಲನ, ಬಣ್ಣ ತಿದ್ದುಪಡಿ ಮತ್ತು ಸುಧಾರಿತ ವೀಡಿಯೊ ಸಂಕಲನ ತಂತ್ರಗಳಲ್ಲಿ ಪ್ರಾಯೋಗಿಕ ತರಬೇತಿ.
- ಸೃಜನಾತ್ಮಕ ಸವಾಲು: ಭಾಗವಹಿಸುವವರು ಒದಗಿಸಿದ ಥೀಮ್ ಗಳ ಆಧಾರದ ಮೇಲೆ ಆಕರ್ಷಕ ಟ್ರೇಲರ್ ಗಳನ್ನು ರಚಿಸುತ್ತಾರೆ, ಅವರ ಕಥೆ ಹೇಳುವಿಕೆ ಮತ್ತು ತಾಂತ್ರಿಕ ಸಾಮರ್ಥ್ಯಗಳನ್ನು ಪ್ರದರ್ಶಿಸುತ್ತಾರೆ.
- ಉದ್ಯಮದ ಒಳನೋಟಗಳು: ತಜ್ಞರ ಸಮಿತಿಯು ಟ್ರೇಲರ್ ಗಳನ್ನು ಮೌಲ್ಯಮಾಪನ ಮಾಡುತ್ತದೆ, ಭಾಗವಹಿಸುವವರು ತಮ್ಮ ಕೌಶಲ್ಯವನ್ನು ಸುಧಾರಿಸಲು ಸಹಾಯ ಮಾಡಲು ಅಮೂಲ್ಯವಾದ ಅಭಿಪ್ರಾಯಗಳನ್ನು ನೀಡುತ್ತದೆ.
- ಪ್ರತಿಭಾ ಪ್ರದರ್ಶನ: ಉದಯೋನ್ಮುಖ ಚಲನಚಿತ್ರ ನಿರ್ಮಾತೃಗಳು ಮತ್ತು ಸಂಕಲನಕಾರರನ್ನು ಸಂಭ್ರಮಿಸುವುದು, ಸ್ಪರ್ಧೆಯ ಸೃಜನಶೀಲ ಪರಿಸರ ವ್ಯವಸ್ಥೆಯನ್ನು ಬಲಪಡಿಸುವುದು.
ಉಲ್ಲೇಖಗಳು:
https://wavesindia.org/challenges-2025
https://waves.ficci.in/#faqs
https://pib.gov.in/PressReleasePage.aspx?PRID=2099217
Click here to see PDF
*****
(Release ID: 2104543)
Visitor Counter : 14