ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಮಹಾಕುಂಭ 2025: ಯಾತ್ರಿಕರ ಸುರಕ್ಷತೆ ಮತ್ತು ಭದ್ರತೆಯನ್ನು ಕೇಂದ್ರ ಮೀಸಲು ಪೊಲೀಸ್ ಪಡೆ (ಸಿ.ಆರ್.ಪಿ.ಎಫ್) ಸಿಬ್ಬಂದಿ 24/7 ಖಚಿತಪಡಿಸಿಕೊಳ್ಳುತ್ತಿದ್ದಾರೆ; ಪ್ರತಿಯೊಂದು ತುರ್ತು ಕಠಿಣ ಪರಿಸ್ಥಿತಿಯನ್ನು ನಿಭಾಯಿಸಲು ಸಿದ್ಧರಿದ್ದಾರೆ
Posted On:
17 FEB 2025 4:49PM by PIB Bengaluru
ಮಹಾಕುಂಭ 2025ರ ಭವ್ಯತೆಯ ನಡುವೆ, ಕೇಂದ್ರ ಮೀಸಲು ಪೊಲೀಸ್ ಪಡೆ (ಸಿ.ಆರ್.ಪಿ.ಎಫ್) ಭಕ್ತರ ಸುರಕ್ಷತೆ ಮತ್ತು ಸೇವೆಯನ್ನು ಖಚಿತಪಡಿಸಿಕೊಳ್ಳಲು ಸಂಪೂರ್ಣವಾಗಿ ಬದ್ಧವಾಗಿದೆ. ಅವರ ಸಮರ್ಪಣೆ ಮತ್ತು ದೇಶಭಕ್ತಿ ಈ ಭವ್ಯ ಧಾರ್ಮಿಕ ಸಭೆಯಲ್ಲಿ ಗಮನಾರ್ಹ ಹಾಗೂ ಮಹತ್ತರವಾದ ಮಾದರಿ ಸೇವೆಯನ್ನು ಸ್ಥಾಪಿಸುತ್ತಿದೆ.
ಘಾಟ್ ಗಳು, ಮಹೋತ್ಸವ ಮೈದಾನಗಳು ಮತ್ತು ಪ್ರಮುಖ ಮಾರ್ಗಗಳಲ್ಲಿ 24/7 ಭದ್ರತೆಯನ್ನು ಸಿ.ಆರ್.ಪಿ.ಎಫ್ ಸಿಬ್ಬಂದಿ ನಿರ್ವಹಿಸುತ್ತಿದ್ದಾರೆ. ಆಧುನಿಕ ತಂತ್ರಜ್ಞಾನ ಮತ್ತು ಜಾಗರೂಕ ಮೇಲ್ವಿಚಾರಣೆಯೊಂದಿಗೆ, ಯಾವುದೇ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಅವರು ಉತ್ತಮ ರೀತಿಯಲ್ಲಿ ಸಿದ್ಧರಾಗಿದ್ದಾರೆ.

ಜನಸಂದಣಿ ನಿರ್ವಹಣೆ ಮತ್ತು ಮಾರ್ಗದರ್ಶನದಲ್ಲಿ ನಿರ್ಣಾಯಕ ಪಾತ್ರ
ಭಾರಿ ಜನಸಂದಣಿಯ ಮಧ್ಯೆ, ಭಕ್ತರಿಗೆ ಮಾರ್ಗದರ್ಶನ ಮತ್ತು ಸಹಾಯವನ್ನು ಸಿ.ಆರ್.ಪಿ.ಎಫ್ ಸಿಬ್ಬಂದಿ ಸಕ್ರಿಯವಾಗಿ ಒದಗಿಸುತ್ತಿದ್ದಾರೆ. ಅವರ ಸಭ್ಯ ವರ್ತನೆ ಮತ್ತು ಸಿದ್ಧತೆ ಸಂದರ್ಶಕರಿಗೆ ಸುಗಮ ಅನುಭವವನ್ನು ಖಚಿತಪಡಿಸುತ್ತಿದೆ. ಯಾವುದೇ ಬಿಕ್ಕಟ್ಟಿಗೆ ತ್ವರಿತವಾಗಿ ಪ್ರತಿಕ್ರಿಯಿಸಲು ಸಿ.ಆರ್.ಪಿ.ಎಫ್. ನ ವಿಪತ್ತು ನಿರ್ವಹಣಾ ತಂಡವು ಹೆಚ್ಚಿನ ಎಚ್ಚರಿಕೆಯನ್ನು ಹೊಂದಿದೆ. ಹೆಚ್ಚುವರಿಯಾಗಿ, ಕಳೆದುಹೋದ ಮಕ್ಕಳು ಮತ್ತು ವೃದ್ಧರನ್ನು ಅವರ ಕುಟುಂಬಗಳೊಂದಿಗೆ ಮತ್ತೆ ಒಂದುಗೂಡಿಸುವಲ್ಲಿ ಪಡೆ ನಿರ್ಣಾಯಕ ಪಾತ್ರ ವಹಿಸುತ್ತಿದೆ.

ರಾಷ್ಟ್ರ ಮೊದಲು: ಸೇವೆ ಮತ್ತು ಸಮರ್ಪಣೆಗೆ ಸಾಕ್ಷಿಯಾಗಿದೆ
ಪ್ರತಿಯೊಬ್ಬ ಸಿ.ಆರ್.ಪಿ.ಎಫ್. ಸಿಬ್ಬಂದಿ ಮಹಾ ಕುಂಭದಲ್ಲಿ 'ರಾಷ್ಟ್ರ ಮೊದಲು' ಎಂಬ ಮನೋಭಾವದಿಂದ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. ಅವರ ಅಚಲ ಬದ್ಧತೆ ಮತ್ತು ಸಮರ್ಪಣಾ ಭಾವದ ಕಾರ್ಯಚಟುವಟಿಕೆಗಳು, ಕಾರ್ಯಕ್ರಮಗಳ ಆಧ್ಯಾತ್ಮಿಕ ಸಾರವನ್ನು ಮತ್ತಷ್ಟು ಹೆಚ್ಚಿಸುತ್ತಿದೆ. 2025 ರ ಮಹಾಕುಂಭ ಮಹೋತ್ಸವದಲ್ಲಿ ಸಿ.ಆರ್.ಪಿ.ಎಫ್. ತಂಡದ ನಿಸ್ವಾರ್ಥ ಸೇವೆ ಮತ್ತು ಭಕ್ತಿಯು ಎಲ್ಲಡೆ ಭದ್ರತೆಯ ಭಾವನೆಯನ್ನು ಹುಟ್ಟುಹಾಕುವುದಲ್ಲದೆ, ಇಡೀ ರಾಷ್ಟ್ರಕ್ಕೆ ಸ್ಫೂರ್ತಿಯಾಗಿ ಕಾರ್ಯನಿರ್ವಹಿಸುತ್ತಿದೆ.

*****
(Release ID: 2104182)
Visitor Counter : 26