ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ವಿಶ್ವ ಆಡಿಯೊ ವಿಷುಯಲ್ ಎಂಟರ್ಟೈನ್ಮೆಂಟ್ ಶೃಂಗಸಭೆ (ವೇವ್ಸ್), ಐಇಐಸಿ ಮತ್ತು ವಿನ್ಜೋ ಜಾಗತಿಕ ವೇದಿಕೆಗಳಲ್ಲಿ ಭಾರತದ ಗೇಮಿಂಗ್ ನಾವೀನ್ಯತೆಯನ್ನು ಪ್ರದರ್ಶಿಸಲು ಟೆಕ್ ಟ್ರಯಂಫ್ ಸೀಸನ್ 3 ಪ್ರಾರಂಭಿಸುತ್ತಿವೆ


ರಾಷ್ಟ್ರದ ಅತಿದೊಡ್ಡ ಗೇಮಿಂಗ್ ಸ್ಪರ್ಧೆಯಾದ ಟೆಕ್ ಟ್ರಯಂಫ್ ಸೀಸನ್ 3ರಲ್ಲಿ ಗೆಲ್ಲಿರಿ ಮತ್ತು ಮಾರ್ಚ್ 17 ರಿಂದ 21ರವರೆಗೆ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಡೆಯಲಿರುವ ಗೇಮ್ ಡೆವಲಪರ್ಸ್ ಕಾನ್ಫರೆನ್ಸ್ 2025 ನಲ್ಲಿ ನಿಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಅವಕಾಶವನ್ನು ಪಡೆಯಿರಿ


ವೇವ್ಸ್ ಒಂದು ಸುವರ್ಣಾವಕಾಶವನ್ನು ನೀಡುತ್ತದೆ: ಫೆಬ್ರವರಿ 20 ರೊಳಗೆ ನಿಮ್ಮ ಫಾರ್ಮ್ ಅನ್ನು ಸಲ್ಲಿಸಿ, ನೋಂದಣಿಗಳು ಶೀಘ್ರದಲ್ಲೇ ಕೊನೆಗೊಳ್ಳುತ್ತವೆ, ನಿಮ್ಮ ಅವಕಾಶವನ್ನು ಕಳೆದುಕೊಳ್ಳಬೇಡಿ

Posted On: 15 FEB 2025 5:32PM by PIB Bengaluru

 ಗೇಮಿಂಗ್ ಉದ್ಯಮದಲ್ಲಿ ವೃತ್ತಿಜೀವನವನ್ನು ನಿರ್ಮಿಸಲು ಮಹತ್ವಾಕಾಂಕ್ಷೆ ಇದೆ, ಆದರೆ ಸರಿಯಾದ ಪ್ಲಾಟ್ ಫಾರ್ಮ್ ಮತ್ತು ಧನಸಹಾಯ ಕೊರತೆಯಿಂದ  ಹೆಣಗಾಡುತ್ತಿದ್ದೀರಾ? ವರ್ಲ್ಡ್ ಆಡಿಯೊ ವಿಷುಯಲ್ ಎಂಟರ್ಟೈನ್ಮೆಂಟ್ ಶೃಂಗಸಭೆ (ವೇವ್ಸ್) ಟೆಕ್ ಟ್ರಯಂಫ್ ಸೀಸನ್ 3 ನೀವು ಭಾರತದಲ್ಲಿರಲಿ ಅಥವಾ ವಿದೇಶದಲ್ಲಿರಲಿ ನಿಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ನಂಬಲಾಗದ ಅವಕಾಶವನ್ನು ನೀಡುತ್ತದೆ! ದೇಶೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸುವವರಿಗೆ ಮುಕ್ತವಾಗಿರುವ ಚಾಲೆಂಜ್ ಗೆ  ಅರ್ಜಿ ಸಲ್ಲಿಸಲು ಇರುವ ದಿನಾಂಕವನ್ನು 2025ರ ಫೆಬ್ರವರಿ 20 ರವರೆಗೆ ವಿಸ್ತರಿಸಲಾಗಿದೆ.

ದೇಶದ ಅತಿದೊಡ್ಡ ಗೇಮಿಂಗ್ ಸ್ಪರ್ಧೆಯ ವಿಜೇತರು ಮಾರ್ಚ್ 17 ರಿಂದ 21 ರವರೆಗೆ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಡೆಯಲಿರುವ ಗೇಮ್ ಡೆವಲಪರ್ಸ್ ಕಾನ್ಫರೆನ್ಸ್ (ಜಿಡಿಸಿ) 2025ರಲ್ಲಿ ತಮ್ಮ ಉತ್ಪನ್ನ, ಐಪಿ ಮತ್ತು ತಂತ್ರಜ್ಞಾನವನ್ನು ಪ್ರದರ್ಶಿಸಲು ಅವಕಾಶವನ್ನು ಪಡೆಯುತ್ತಾರೆ.

ಟೆಕ್ ಟ್ರಯಂಫ್  ಪ್ರೋಗ್ರಾಂ

ಟೆಕ್ ಟ್ರಯಂಫ್ ಪ್ರೋಗ್ರಾಂ (ಟಿಟಿಪಿ) ಯನ್ನು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ (ಎಂಐಬಿ) ಸಹಭಾಗಿತ್ವದಲ್ಲಿ ಇಂಟರ್ಯಾಕ್ಟಿವ್ ಎಂಟರ್ಟೈನ್ಮೆಂಟ್ ಅಂಡ್ ಇನ್ನೋವೇಶನ್ ಕೌನ್ಸಿಲ್ (ಐಇಐಸಿ) ಪ್ರಾರಂಭಿಸಿದೆ. ವರ್ಲ್ಡ್ ಆಡಿಯೊ ವಿಷುಯಲ್ ಎಂಟರ್ಟೈನ್ಮೆಂಟ್ ಶೃಂಗಸಭೆ (ವೇವ್ಸ್) ಗೆ ಮುಂಚಿತವಾಗಿ, ಈ ಚಾಲೆಂಜ್ 2025 ರ ಗೇಮ್ ಡೆವಲಪರ್ ಕಾನ್ಫರೆನ್ಸ್ನಲ್ಲಿ ವೇವ್ಸ್ ಮತ್ತು ಇಂಡಿಯಾ ಪೆವಿಲಿಯನ್ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ಗೇಮಿಂಗ್ ಪ್ರತಿಭೆಯನ್ನು ಗುರುತಿಸುತ್ತದೆ, ಪರಿಗಣಿಸುತ್ತದೆ ಮತ್ತು ಪ್ರದರ್ಶಿಸುತ್ತದೆ.

ಟೆಕ್ ಟ್ರಯಂಫ್ ಸೀಸನ್ 3 ಎಂದು ಈಗಾಗಲೇ ನೋಂದಾಯಿಸಲ್ಪಟ್ಟಿರುವ 1,000 ಕ್ಕೂ ಹೆಚ್ಚು ಭಾರತದ ಗೇಮಿಂಗ್ ಪರಿಸರ ವ್ಯವಸ್ಥೆಯು ಅಂತರರಾಷ್ಟ್ರೀಯ ವೇದಿಕೆಯಲ್ಲಿ ಶಾಶ್ವತ ಪರಿಣಾಮ ಬೀರಲು ಸಜ್ಜಾಗಿದೆ, ಕ್ರಿಯಾತ್ಮಕ ಮತ್ತು ಜಾಗತಿಕವಾಗಿ ಗುರುತಿಸಲ್ಪಟ್ಟ 'ಮೇಡ್ ಇನ್ ಇಂಡಿಯಾ' ಟೆಕ್ ಉದ್ಯಮಕ್ಕಾಗಿ ರಾಷ್ಟ್ರದ ಮಹತ್ವಾಕಾಂಕ್ಷೆಗಳನ್ನು ಮುನ್ನಡೆಸುತ್ತಿದೆ.

ಉಪಕ್ರಮವು ಗೇಮಿಂಗ್ ತಂತ್ರಜ್ಞಾನ ಮತ್ತು ಬೌದ್ಧಿಕ ಆಸ್ತಿಯಲ್ಲಿ ಜಾಗತಿಕ ಶಕ್ತಿಕೇಂದ್ರವಾಗುವ ಭಾರತದ ದೃಷ್ಟಿಕೋನದೊಂದಿಗೆ ಹೊಂದಿಕೆಯಾಗುತ್ತದೆ, ಇದು ಭಾರತದ ಎವಿಜಿಸಿ ಮತ್ತು (ಎಕ್ಸ್ಟೆಂಡೆಡ್ ರಿಯಾಲಿಟಿ) ಎಕ್ಸ್ಆರ್ ಕ್ಷೇತ್ರಗಳ ಬೆಳವಣಿಗೆಯಿಂದ ಬಲಗೊಂಡಿದೆ, ಇದು ಈಗ ಆರ್ಥಿಕತೆಗೆ ಗಮನಾರ್ಹವಾಗಿ ಕೊಡುಗೆ ನೀಡುತ್ತದೆ. ಎಫ್ಐಸಿಸಿಐ-ಇವೈ ವರದಿಯ ಪ್ರಕಾರ, ಡಿಜಿಟಲ್ ಮತ್ತು ಆನ್ಲೈನ್ ಗೇಮಿಂಗ್ ಭಾರತೀಯ ಮಾಧ್ಯಮ ವಲಯದಲ್ಲಿ ಹೆಚ್ಚು ಬೆಳೆದಿದೆ.

ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಭೇಟಿ ನೀಡಿhttps://www.thetechtriumph.com/

ಸ್ಪರ್ಧೆಯ ವಿವಿಧ ಹಂತಗಳು

1. ಫೆಬ್ರವರಿ 20, 2025 - ಆಟ ಸಲ್ಲಿಕೆ
ಸ್ಪರ್ಧೆಗೆ ನೋಂದಾಯಿಸಿ
2. ಫೆಬ್ರವರಿ 23, 2025 - ತಜ್ಞರ ಮೌಲ್ಯಮಾಪನ
ಶಾರ್ಟ್ ಲಿಸ್ಟ್ ಮಾಡಿದ ಅಭ್ಯರ್ಥಿಗಳು ತೀರ್ಪುಗಾರರ ಮುಂದೆ ಬರುತ್ತಾರೆ.
3. ಫೆಬ್ರವರಿ 28, 2025 - ಗ್ರ್ಯಾಂಡ್ ಫಿನಾಲೆ
ಫಲಿತಾಂಶ ಘೋಷಣೆ
4. ಮಾರ್ಚ್ 5, 2025 – ಈವೆಂಟ್ಗಳಿಗೆ(ಕಾರ್ಯಕ್ರಮಗಳಿಗೆ)  ಸಜ್ಜಾಗುವಿಕೆ/ತಯಾರಾಗುವಿಕೆ
ಜಾಗತಿಕ ಪ್ರದರ್ಶನಕ್ಕಾಗಿ ನಮ್ಮೊಂದಿಗೆ ತಯಾರಾಗುವುದು.

ಅರ್ಹತಾ ಮಾನದಂಡಗಳು

ಗೇಮಿಂಗ್-ಸಂಬಂಧಿತ ತಂತ್ರಜ್ಞಾನಗಳ ಜೊತೆಗೆ ಪಿಸಿ, ಕನ್ಸೋಲ್ ಮತ್ತು ಮೊಬೈಲ್ ಆಟಗಳ ಮೇಲೆ ಗಮನ ಕೇಂದ್ರೀಕರಿಸಿದ ಡೆವಲಪರ್ಗಳು, ಸ್ಟುಡಿಯೋಗಳು, ಸ್ಟಾರ್ಟ್ಅಪ್ಗಳು ಮತ್ತು ಟೆಕ್ ಕಂಪನಿಗಳು ಸೇರಿದಂತೆ ಸಂವಾದಾತ್ಮಕ ಮನರಂಜನಾ ಪರಿಸರ ವ್ಯವಸ್ಥೆಯೊಳಗಿನ ಎಲ್ಲಾ ಘಟಕಗಳು ಅಥವಾ ವ್ಯಕ್ತಿಗಳಿಗೆ ಇದು ಮುಕ್ತವಾಗಿದೆ. ಸ್ಪರ್ಧಿಗಳು ಅಭಿವೃದ್ಧಿಯ ಯಾವುದೇ ಹಂತದಲ್ಲಿರಬಹುದು ಆದರೆ ಕನಿಷ್ಠ ಕೆಲಸ ಮಾಡುವ ಮೂಲಮಾದರಿಯನ್ನು ಹೊಂದಿರಬೇಕು.

ಗೇಮಿಂಗ್ ಸ್ಟುಡಿಯೋಗಳು ಮತ್ತು ಎಸ್ಪೋರ್ಟ್ಸ್ - ವೈಯಕ್ತಿಕ ಡೆವಲಪರ್ಗಳು, ಸ್ಟುಡಿಯೋಗಳು, ಆಟಗಳನ್ನು ರಚಿಸುವ ಇಂಡಿ ಸ್ಟಾರ್ಟ್ಅಪ್ಗಳು (ಪಿಸಿ / ಮೊಬೈಲ್ / ಕನ್ಸೋಲ್) ಮತ್ತು ಈವೆಂಟ್ ಪ್ರೊಡಕ್ಷನ್ ಮತ್ತು ಟ್ಯಾಲೆಂಟ್ ಮ್ಯಾನೇಜ್ಮೆಂಟ್, ಎಸ್ಪೋರ್ಟ್ಸ್ ಕ್ಲಬ್ಗಳು ಮತ್ತು ಎಸ್ಪೋರ್ಟ್ಸ್ ಪ್ರಭಾವಶಾಲಿಗಳು ಸೇರಿದಂತೆ ಎಸ್ಪೋರ್ಟ್ಸ್ನಲ್ಲಿ ತೊಡಗಿರುವ ಘಟಕಗಳು.

ಗೇಮಿಂಗ್ ವ್ಯವಹಾರ - ಗೇಮಿಂಗ್ ಕಂಪನಿಗಳಿಗೆ ನಿರ್ಣಾಯಕ ಕಾರ್ಯಗಳಿಗೆ ಪರಿಹಾರಗಳನ್ನು ಅಭಿವೃದ್ಧಿಪಡಿಸುವ ವ್ಯವಹಾರಗಳು: ಪಾವತಿಗಳು, ಭದ್ರತೆ, ಲೈವ್ ಆಪ್ಸ್, ತೊಡಗಿಸಿಕೊಳ್ಳುವಿಕೆ, ವಿತರಣೆ, ಹಣಗಳಿಕೆ, ಸ್ಥಳೀಕರಣ, ಗುಣಮಟ್ಟ ಭರವಸೆ, ಕಾನೂನು ಮತ್ತು ಹಣಕಾಸು ಸೇವೆಗಳು.

ಭಾಗವಹಿಸುವುದು ಹೇಗೆ?

ಹಂತ 1: ಆಟ ಸಲ್ಲಿಕೆ: ಅಧಿಕೃತ ಸ್ಪರ್ಧೆಯ ವೆಬ್ಸೈಟ್ನಲ್ಲಿ (ಜಾಲತಾಣದಲ್ಲಿ) ಲಭ್ಯವಿರುವ ಸ್ಪರ್ಧೆಯ ಫಾರ್ಮ್ ಮೂಲಕ ನಿಮ್ಮ ಆಟವನ್ನು ಸಲ್ಲಿಸುವ ಮೂಲಕ ನಿಮ್ಮ ಪ್ರಯಾಣವನ್ನು ಪ್ರಾರಂಭಿಸಿ.
ಹಂತ 2: ತಜ್ಞರ ಮೌಲ್ಯಮಾಪನ: ನಮ್ಮ ಗೌರವಾನ್ವಿತ ತಜ್ಞರ ಸಮಿತಿಯು ಎಲ್ಲಾ ಸಲ್ಲಿಕೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತದೆ, ಪಿಚಿಂಗ್ ಸುತ್ತಿಗೆ ಅತ್ಯುತ್ತಮ ನಮೂದುಗಳನ್ನು ಶಾರ್ಟ್ಲಿಸ್ಟ್ ಮಾಡುತ್ತದೆ. ಪಿಚ್ಗಳ ನಂತರ, ಅಂತಿಮ ಫಲಿತಾಂಶಗಳನ್ನು ತೀರ್ಪುಗಾರರು ಅನಾವರಣಗೊಳಿಸುತ್ತಾರೆ.
ಹಂತ 3: ಈವೆಂಟ್ ಗಳಿಗೆ ಸಜ್ಜಾಗುವುದು: ವಿಜೇತರನ್ನು ಘೋಷಿಸಿದ ನಂತರ, ನಮ್ಮ ಸಂಘಟಕರು ಈವೆಂಟ್ ಗಳಲ್ಲಿ ಅವರ ಪ್ರಮುಖ ಪ್ರದರ್ಶನಕ್ಕೆ ಸಜ್ಜಾಗಲು ಮಾರ್ಗದರ್ಶನ ಮತ್ತು ಸಹಾಯ ಮಾಡಲು ತಕ್ಷಣದಿಂದಲೇ  ಸಂಪರ್ಕದಲ್ಲಿರುತ್ತಾರೆ.

aboutUsImage

ಟೆಕ್ ಟ್ರಯಂಫ್ ವಿವಿಧ ಸೀಸನ್ ಗಳ ಬಗ್ಗೆ

ಟೆಕ್ ಟ್ರಯಂಫ್ ಉನ್ನತ ಗೇಮಿಂಗ್ ಮತ್ತು ಸಂವಾದಾತ್ಮಕ ಮನರಂಜನಾ ಆವಿಷ್ಕಾರಗಳನ್ನು ಗುರುತಿಸುವ ಮತ್ತು ಸಬಲೀಕರಣಗೊಳಿಸುವ ಸ್ಪರ್ಧೆಯಾಗಿದೆ.

ಟೆಕ್ ಟ್ರಯಂಫ್: ಭಾರತ್ ಸೀಸನ್ 3

ಟಿಟಿಟಿ ಭಾರತ್ ಸೀಸನ್ 3 ಜಾಗತಿಕ ವೇದಿಕೆಗಳಲ್ಲಿ ಪ್ರಸ್ತುತಪಡಿಸಲು ನಾವೀನ್ಯಕಾರರಿಗೆ ಅವಕಾಶಗಳನ್ನು ಒದಗಿಸುವ ಮೂಲಕ ಭಾರತವನ್ನು ವಿಶ್ವ ವೇದಿಕೆಯಲ್ಲಿ ತಂತ್ರಜ್ಞಾನದಲ್ಲಿ ನಾಯಕನಾಗಿ ಬೆಳೆಸುವ ಗುರಿಯನ್ನು ಹೊಂದಿದೆ. ಟಿಟಿಟಿ ಅತ್ಯಾಧುನಿಕ ಆವಿಷ್ಕಾರಗಳನ್ನು ಉತ್ತೇಜಿಸುವತ್ತ ಗಮನ ಹರಿಸುತ್ತದೆ, ಭಾಗವಹಿಸುವವರಿಗೆ ಜಾಗತಿಕ ವೇದಿಕೆಯಲ್ಲಿ ತಮ್ಮ ತಂತ್ರಜ್ಞಾನಗಳನ್ನು ಪ್ರದರ್ಶಿಸಲು ವೇದಿಕೆಯನ್ನು ಒದಗಿಸುತ್ತದೆ.

ಟೆಕ್ ಟ್ರಯಂಫ್: ಭಾರತ್ ಸೀಸನ್ 2

ಟೆಕ್ ಟ್ರಯಂಫ್ ಭಾರತ್ ಸೀಸನ್ 2, ಬ್ರೆಜಿಲ್ ಸಾವೊ ಪಾಲೊದಲ್ಲಿ ನಡೆದ ಗೇಮ್ಸ್ ಕಾಮ್ ಲ್ಯಾಟಮ್ 2024 ರ ಸಂದರ್ಭದಲ್ಲಿ ಇಂಡಿಯಾ ಪೆವಿಲಿಯನ್ ನಲ್ಲಿ ಭಾರತದ ವಿಕಸನಗೊಳ್ಳುತ್ತಿರುವ ಗೇಮಿಂಗ್ ಪರಿಸರ ವ್ಯವಸ್ಥೆಯನ್ನು ಪ್ರದರ್ಶಿಸಲು ಡೆವಲಪರ್ ಗಳಿಗೆ ವೇದಿಕೆಯನ್ನು ಒದಗಿಸಿತು.

ಟೆಕ್ ಟ್ರಯಂಫ್: ಭಾರತ್ ಸೀಸನ್ 1

ವಿನ್ಜೋ ಮತ್ತು ಐಜಿಡಿಸಿ ನಡುವಿನ ಸಹಯೋಗವಾದ ಭಾರತ್ ಟೆಕ್ ಟ್ರಯಂಫ್ನ ಸೀಸನ್ 1, ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಡೆದ ಜಿಡಿಸಿ 2024 ರಲ್ಲಿ ಭಾರತದ ಅಭಿವೃದ್ಧಿ ಹೊಂದುತ್ತಿರುವ ಗೇಮಿಂಗ್ ಭೂದೃಶ್ಯವನ್ನು ಪ್ರಸ್ತುತಪಡಿಸಲು ಡೆವಲಪರ್ಗಳಿಗೆ ವೇದಿಕೆಯನ್ನು ಒದಗಿಸಿತು.

ಜಾಗತಿಕ ವೇದಿಕೆಯಲ್ಲಿ ಮಿಂಚಿದ ಟಿಟಿಪಿ ವಿಜೇತರು

ಹಿಂದಿನ ಆವೃತ್ತಿಗಳಲ್ಲಿ, ವಿನ್ಜೋ ಮತ್ತು ಐಇಐಸಿಯ ಟಿಟಿಪಿ 10 ವಿಜೇತರಿಗೆ ಜಿಡಿಸಿ 2024 (ಇಂಡಿಯಾ ಪೆವಿಲಿಯನ್), ಗೇಮ್ಸ್ಕಾಮ್ (ಜರ್ಮನಿ ಮತ್ತು ಬ್ರೆಜಿಲ್) ಮತ್ತು ಬ್ರೆಜಿಲ್ ಗೇಮಿಂಗ್ ಶೋನಂತಹ ಪ್ರತಿಷ್ಠಿತ ಜಾಗತಿಕ ಕಾರ್ಯಕ್ರಮಗಳಲ್ಲಿ ತಮ್ಮ ಆಟಗಳನ್ನು ಪ್ರದರ್ಶಿಸಲು ಅವಕಾಶ  ನೀಡಿದೆ. ಭಾರತ ಸರ್ಕಾರದ ಮಾಜಿ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್, ಬ್ರೆಜಿಲ್ನ ರಾಯಭಾರಿ ಸುರೇಶ್ ಕೆ ರೆಡ್ಡಿ, ಇನ್ಫೋ ಎಡ್ಜ್ ಸಹ ಸಂಸ್ಥಾಪಕ ಸಂಜೀವ್ ಭಿಕ್ಚಂದಾನಿ ಮತ್ತು ಕಲಾರಿ ಕ್ಯಾಪಿಟಲ್ ಎಂಡಿ ರಾಜೇಶ್ ರಾಜು ಸೇರಿದಂತೆ ಉನ್ನತ ಉದ್ಯಮ ಮತ್ತು ಸರ್ಕಾರದ ನಾಯಕರ ಮಾರ್ಗದರ್ಶನದೊಂದಿಗೆ, ಭಾಗವಹಿಸುವವರು ಅಮೂಲ್ಯವಾದ ಸಲಹೆ- ಸೂಚನೆ ಮತ್ತು ಅಂತರರಾಷ್ಟ್ರೀಯ ವೇದಿಕೆಯಲ್ಲಿ ಮಿಂಚುವ ಅವಕಾಶವನ್ನು ಪಡೆದಿದ್ದಾರೆ.

ಗೇಮ್ ಡೆವಲಪರ್ಸ್ ಕಾನ್ಫರೆನ್ಸ್ (ಜಿಡಿಸಿ) ಎಂದರೇನು?

ಗೇಮ್ ಡೆವಲಪರ್ಸ್ ಕಾನ್ಫರೆನ್ಸ್ (ಜಿಡಿಸಿ) ನಾವು ಇಷ್ಟಪಡುವ ಆಟಗಳನ್ನು ತಯಾರಿಸುವ ಡೆವಲಪರ್ ಗಳಿಗೆ ವಿಶ್ವದ ಪ್ರಮುಖ ಕಾರ್ಯಕ್ರಮ ವೇದಿಕೆಯಾಗಿದೆ. ಜಿಡಿಸಿ ಸೃಜನಶೀಲತೆ, ನಾವೀನ್ಯತೆ ಮತ್ತು ಉತ್ಕೃಷ್ಟತೆಯ ತಾಣವಾಗಿದೆ.

ಕಳೆದ 30 ವರ್ಷಗಳಲ್ಲಿ, ಜಿಡಿಸಿ ಸಾವಿರಾರು ಡೆವಲಪರ್ಗಳನ್ನು ಕಲಿಯಲು, ಬೆಳೆಯಲು ಮತ್ತು ಸಂಪರ್ಕಿಸಲು ಒಟ್ಟುಗೂಡಿಸಿದೆ. ನೀವು ಗೇಮ್ ಡೆವಲಪರ್, ಉದ್ಯಮದ ನಾಯಕ ಅಥವಾ ನಿಮ್ಮ ವ್ಯಾಪ್ತಿಯನ್ನು ಹೆಚ್ಚಿಸಲು ಮತ್ತು ನಿಮ್ಮ ಸಾಮರ್ಥ್ಯವನ್ನು ಅರಿತುಕೊಳ್ಳಲು ಬಯಸುವ ಕಂಪನಿಯಾಗಿರಲಿ, ಜಿಡಿಸಿ ನಿಮಗಾಗಿ ಇರುವ ವ್ಯವಸ್ಥೆಯಾಗಿದೆ. 

 

*****


(Release ID: 2103961) Visitor Counter : 20