ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
ಪರೀಕ್ಷಾ ಪೇ ಚರ್ಚಾ – 2025ನ 6ನೇ ಸಂಚಿಕೆಯಲ್ಲಿ ವಿಕ್ರಾಂತ್ ಮಸ್ಸೆ ಮತ್ತು ಭೂಮಿ ಪಡ್ನೇಕರ್ ವಿದ್ಯಾರ್ಥಿಗಳೊಂದಿಗೆ ಸಂವಾದ
Posted On:
16 FEB 2025 8:43PM by PIB Bengaluru
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಪರೀಕ್ಷಾ ಪೇ ಚರ್ಚಾ – 2025ನ ಉದ್ಘಾಟನಾ ಸಂಚಿಕೆಯಲ್ಲಿ ನಡೆಸಿದ ಉತ್ಕೃಷ್ಟ ಸಂವಾದದ ಮುಂದುವರಿದ ಭಾಗವಾಗಿ ಇಂದು ಪ್ರಸಾರವಾದ 6ನೇ ಸಂಚಿಕೆಯಲ್ಲಿ ಕಲಾವಿದರಾದ ವಿಕ್ರಾಂತ ಮಸ್ಸೆ ಮತ್ತು ಭೂಮಿ ಪಡ್ನೇಕರ್ ಅವರು ವಿದ್ಯಾರ್ಥಿಗಳೊಂದಿಗೆ ವೇಗವಾಗಿ ಸೃಜನಶೀಲತೆ ಅಳವಡಿಕೆ ಮತ್ತು ಜೀವನದಲ್ಲಿ ಸಕಾರಾತ್ಮಕತೆ ಬೆಳೆಸಿಕೊಳ್ಳುವ ಕುರಿತು ಸಂವಾದ ನಡೆಸಿದರು.
ವಿಕ್ರಾಂತ್ ಅವರು, ದೃಶ್ಯೀಕರಣದ ಶಕ್ತಿಯನ್ನು ಒತ್ತಿ ಹೇಳಿದರು ಮತ್ತು ವಿದ್ಯಾರ್ಥಿಗಳಿಗೆ ತಮ್ಮ ದಿನನಿತ್ಯದ ಚಟುವಟಿಕೆಗಳ ಜರ್ನಲ್ ನಿರ್ವಹಣೆ ಮಾಡುವಂತೆ ಉತ್ತೇಜಿಸಿದರು. ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು, ವಿದ್ಯಾರ್ಥಿಗಳು ಮುಕ್ತವಾಗಿ ತಮ್ಮ ಭಾವನೆಗಳು ಹಾಗೂ ಅನಿಸಿಕೆಗಳನ್ನು ಪೋಷಕರ ಜತೆ ಹಂಚಿಕೊಳ್ಳಬೇಕು ಎಂದು ಸಲಹೆ ನೀಡಿದರು. ಯುಎಇಯ ದುಬೈನಲ್ಲಿನ ಇಂಡಿಯನ್ ಹೈಸ್ಕೂಲ್ ನ ವಿದ್ಯಾರ್ಥಿ, ಒತ್ತಡ ನಿರ್ವಹಣೆ ಮತ್ತು ಜೀವನದಲ್ಲಿ ಸಮತೋಲನ ಕಾಯ್ದುಕೊಳ್ಳುವ ಬಗ್ಗೆ ವಿಕ್ರಾಂತ್ ಅವರ ಮಾರ್ಗದರ್ಶನ ಕೋರಿದರು.
ಶಾಲೆಗಳಲ್ಲಿ ಕೌಶಲ್ಯಾಭಿವೃದ್ಧಿಗೆ ಉತ್ತೇಜನ ನೀಡುತ್ತಿರುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದ ವಿಕ್ರಾಂತ್ ಅವರು, ವಿದ್ಯಾರ್ಥಿಗಳು ಉನ್ನತ ಗುರಿಗಳನ್ನು ಹೊಂದಿರಬೇಕು ಎಂದು ಸಲಹೆ ನೀಡಿದರು. ಭಾವನೆಗಳ ನಿರ್ವಹಣೆ ಕುರಿತಂತೆ ಚಟುವಟಿಕೆಗಳನ್ನು ನಡೆಸಿದ ಅವರು, ಪರೀಕ್ಷೆಗಳಿಗೆ ಮುನ್ನ ಆರೋಗ್ಯ ಸ್ವಾಸ್ಥ್ಯ ಕಾಯ್ದುಕೊಳ್ಳುವ ಪ್ರಾಮುಖ್ಯತೆಯನ್ನು ವಿವರಿಸಿದರು. ಅವರು ವಿದ್ಯಾರ್ಥಿಗಳಿಗೆ ನೀಡಿದ ಪ್ರಮುಖ ಸಂದೇಶವೆಂದರೆ “ಚೆನ್ನಾಗಿ ತಿನ್ನಿ, ಒಳ್ಳೆಯ ವಿಶ್ರಾಂತಿ ಪಡೆಯಿರಿ, ಸದಾ ಸುಧಾರಿಸಿಕೊಳ್ಳಿ, ಹೋಗಿ, ಆಟವಾಡಿ” ಎಂದು ಹೇಳಿದರು.

ಸಂಚಿಕೆಯ ಎರಡನೇ ಅತಿಥಿಯಾಗಿದ್ದ ನಟಿ ಭೂಮಿ ಪಡ್ನೇಕರ್, ತಮ್ಮ ಬಾಲ್ಯದ ಅನುಭವಗಳನ್ನು ಹಂಚಿಕೊಂಡರು ಹಾಗೂ ವೈಯಕ್ತಿಕ ದುರಂತವನ್ನು ಹೇಗೆ ನಿಭಾಯಿಸಿದೆ ಮತ್ತು ತಾವು ಹೇಗೆ ವೃತ್ತಿಯನ್ನು ಆನಂದಿಸುತ್ತಿದ್ದೇನೆ ಎಂದು ಹಂಚಿಕೊಂಡರು. ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯಗಳಿಗೆ ಒತ್ತು ನೀಡುವಂತೆ ಅವರು ಸಲಹೆ ನೀಡಿದರು. ಅವರು ಜನರನ್ನು ಭೇಟಿ ಮಾಡುವುದು, ಪ್ರಯಾಣ ಮಾಡುವುದು ಮತ್ತು ಸ್ಥಳೀಯ ಖಾದ್ಯಗಳನ್ನು ಅನ್ವೇಷಿಸುವ ಕುರಿತು ತಮ್ಮ ಇಷ್ಟವನ್ನು ಹಂಚಿಕೊಂಡರು. ಯುಎಇ ದುಬೈನ ಇಂಡಿಯನ್ ಹೈಸ್ಕೂಲ್ ನ ವಿದ್ಯಾರ್ಥಿ ನಟಿಯೊಂದಿಗೆ ಸಂವಾದ ನಡೆಸಿದನು ಮತ್ತು ವಿದ್ಯಾರ್ಥಿಗಳು ತಮ್ಮ ಭಾವನೆಗಳನ್ನು ಪೋಷಕರ ಜತೆ ಮುಕ್ತವಾಗಿ ಹಂಚಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು. ಮಾಸ್ಟರ್ ಕ್ಲಾಸ್ ನಲ್ಲಿ ಅವರು, ಹೇಗೆ ಕಲಿಯುವುದು ಮತ್ತು ಸುಲಭವಾಗಿ ಹೇಗೆ ಪಠ್ಯವನ್ನು ನೆನಪಿನಲ್ಲಿಟ್ಟುಕೊಳ್ಳಬಹುದು ಎಂಬುದನ್ನು ವಿದ್ಯಾರ್ಥಿಗಳಿಗೆ ಕಲಿಸಿದರು. ಆಧ್ಯಾತ್ಮಿಕವಾಗಿರುವುದು ನಾವು ಸದಾ ಕೇಂದ್ರೀಕೃತವಾಗಿರಲು ಸಹಾಯಕವಾಗುತ್ತದೆ ಎಂದರು.

ಸಮಗ್ರ ಅಭಿವೃದ್ಧಿಗೆ ಕ್ರೀಡಾ ಐಕಾನ್ ಗಳು, ತಾಂತ್ರಿಕ ತಜ್ಞರು, ಸ್ಪರ್ಧಾತ್ಮಕ ಪರೀಕ್ಷೆಗಳ ಟಾಪರ್ ಗಳು, ಮನೋರಂಜನಾ ಉದ್ಯಮದ ವೃತ್ತಿಪರರು ಮತ್ತು ಧಾರ್ಮಿಕ ನಾಯಕರು ಸೇರಿದಂತೆ ವಿವಿಧ ವಲಯಗಳ ಗಣ್ಯ ವ್ಯಕ್ತಿಗಳು ಪಠ್ಯಗಳನ್ನು ಹೊರತುಪಡಿಸಿದಂತೆ ವಿದ್ಯಾರ್ಥಿಗಳಿಗೆ ತಮ್ಮ ಒಳನೋಟಗಳ ಮೂಲಕ ಸಾಕಷ್ಟು ಉತ್ಕೃಷ್ಟ ಸಂಗತಿಯನ್ನು ತಿಳಿಸಿಕೊಡುತ್ತಿದ್ದಾರೆ. ಈಗಾಗಲೇ ಮೂರು ಸಂಚಿಕೆಗಳು ಪ್ರಸಾರವಾಗಿದ್ದು, ಪ್ರತಿಯೊಂದು ಆವೃತ್ತಿಯಲ್ಲೂ ವಿದ್ಯಾರ್ಥಿಗಳಿಗೆ ತಮ್ಮ ಶೈಕ್ಷಣಿಕ ಹಾಗೂ ವೈಯಕ್ತಿಕ ಜೀವನದಲ್ಲಿ ಶ್ರೇಷ್ಠತೆಯನ್ನು ಸಾಧಿಸಲು ಅಗತ್ಯ ಸಾಧನಗಳು ಮತ್ತು ಕಾರ್ಯತಂತ್ರಗಳನ್ನು ಕಲಿಸುತ್ತಿದ್ದಾರೆ.
8ನೇ ಆವೃತ್ತಿಯ ಪರೀಕ್ಷಾ ಪೇ ಚರ್ಚಾ (ಪಿಪಿಸಿ) 2025 ಅನ್ನು ಹೊಸ ಸ್ವರೂಪದಲ್ಲಿ ಮತ್ತು ಸಂವಾದಾತ್ಮಕ ರೂಪದಲ್ಲಿ ನೀಡಲಾಗುತ್ತಿದ್ದು, ಅದಕ್ಕೆ ದೇಶಾದ್ಯಂತ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರಿಂದ ವ್ಯಾಪಕ ಸ್ಪಂದನೆ ವ್ಯಕ್ತವಾಗುತ್ತಿದೆ. ಸಾಂಪ್ರದಾಯಿಕ ಟೌನ್ ಹಾಲ್ ವಿಧಾನವನ್ನು ಹೊರತುಪಡಿಸಿ, ಈ ವರ್ಷ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2025ರ ಫೆಬ್ರವರಿ 10ರಂದು ನವದೆಹಲಿಯ ಸೀನಿಕ್ ಸುಂದರ್ ನರ್ಸರಿಯಲ್ಲಿ ಸಂವಾದ ನಡೆಸುವ ಮೂಲಕ ಈ ವರ್ಷದ ಆವೃತ್ತಿಗೆ ಚಾಲನೆ ನೀಡಿದರು.
ಉದ್ಘಾಟನಾ ಸಂಚಿಕೆಯಲ್ಲಿ ಪ್ರಧಾನಮಂತ್ರಿ ಅವರು, ದೇಶಾದ್ಯಂತ 36 ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದರು ಮತ್ತು ಪೌಷ್ಠಿಕಾಂಶ ಮತ್ತು ಯೋಗಕ್ಷೇಮ, ಒತ್ತಡ ನಿರ್ವಹಣೆ, ಸವಾಲುಗಳನ್ನು ಎದುರಿಸುವುದು, ನಾಯಕತ್ವ ಕಲೆ, ಬಿಯಾಂಡ್ ಬುಕ್ಸ್ - 360º ಗ್ರೋತ್, ಸಕಾರಾತ್ಮಕ ಅಂಶಗಳನ್ನು ಗುರುತಿಸುವುದು ಸೇರಿದಂತೆ ಹಲವು ಒಳನೋಟಗಳ ಅಂಶಗಳ ಬಗ್ಗೆ ಸಂವಾದ ನಡೆಸಿದರು. ಅವರ ಮೌಲ್ಯಯುತ ಮಾರ್ಗದರ್ಶನ, ವಿದ್ಯಾರ್ಥಿಗಳಿಗೆ ಅತ್ಯಂತ ಧೈರ್ಯದಿಂದ ಶೈಕ್ಷಣಿಕ ಸವಾಲುಗಳನ್ನು ಎದುರಿಸಲು ವಾಸ್ತವಿಕ ಕಾರ್ಯತಂತ್ರಗಳನ್ನು ಒದಗಿಸಿದ್ದಲ್ಲದೆ, ಬೆಳವಣಿಗೆ ಮನಸ್ಥಿತಿ ಹಾಗೂ ಸಮಗ್ರ ಕಲಿಕೆಗೆ ಉತ್ತೇಜನ ನೀಡಿತು.
ಪರೀಕ್ಷಾ ಪೇ ಚರ್ಚಾ-2025 ಅನಾವರಣ ಮುಂದುವರಿದಿದ್ದು, ಅದು ವಿದ್ಯಾರ್ಥಿಗಳಿಗೆ ಸ್ಫೂರ್ತಿಯ ದಾರಿದೀಪವಾಗಿದೆ. ಅವರಲ್ಲಿ ಶೈಕ್ಷಣಿಕ ಮತ್ತು ಜೀವನದ ಸವಾಲುಗಳನ್ನು ಎದುರಿಸಲು ಸಕಾರಾತ್ಮಕ ಮನೋಭಾವದೊಂದಿಗೆ ವಿಶ್ವಾಸ ಮತ್ತು ಚೈತನ್ಯವನ್ನು ತುಂಬುತ್ತವೆ.
Link to watch the 1st episode: https://www.youtube.com/watch?v=G5UhdwmEEls
Link to watch the 2nd episode: https://www.youtube.com/watch?v=DrW4c_ttmew
Link to watch the 3rd episode: https://www.youtube.com/watch?v=wgMzmDYShXw
Link to watch the 4th episode: https://www.youtube.com/watch?v=3CfR4-5v5mk
Link to watch the 5th episode: https://www.youtube.com/watch?v=3GD_SrxsAx8
Link to watch the 6th episode: https://www.youtube.com/watch?v=uhI6UbZJgEQ
*****
(Release ID: 2103956)
Visitor Counter : 25