ವಾರ್ತಾ ಮತ್ತು ಪ್ರಸಾರ ಸಚಿವಾಲಯ
ರೀಲ್ ತಯಾರಕರು ಮತ್ತು ವೃತ್ತಿಪರ ಜಾಹೀರಾತು ಚಲನಚಿತ್ರ ನಿರ್ಮಾಪಕರಿಗೆ ಸೆಲೆಬ್ರಿಟಿಗಳಾಗಿ ಮಿಂಚಲು ವೇವ್ಸ್ (WAVES) ಒಂದು ಸುವರ್ಣ ಅವಕಾಶವನ್ನು ನೀಡುತ್ತದೆ ಒದಗಿಸುತ್ತಿದೆ!
ಬೇಗ ಬನ್ನಿ! ಕೇವಲ ಎರಡು ದಿನಗಳು ಉಳಿದಿವೆ, ನಿಮ್ಮ ಕೆಲಸಕ್ಕೆ ಜಾಗತಿಕ ವೇದಿಕೆಯಲ್ಲಿ ಮನ್ನಣೆ ಪಡೆಯುವ ಈ ಅವಕಾಶವನ್ನು ಕಳೆದುಕೊಳ್ಳಬೇಡಿ, ಫೆಬ್ರವರಿ 15ರೊಳಗೆ ನಿಮ್ಮ ಕೃತಿಗಳನ್ನು ಸಲ್ಲಿಸಿ
ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜ್ ಭಾಗವಾಗಿ WAVES ಅವಾರ್ಡ್ಸ್ ಆಫ್ ಎಕ್ಸಲೆನ್ಸ್, ಜಾಗತಿಕ ಸಲ್ಲಿಕೆಗಳನ್ನು ಆಕರ್ಷಿಸುತ್ತದೆ, ಡಜನ್‌ಗಿಂತಲೂ ಹೆಚ್ಚು ದೇಶಗಳು ಮತ್ತು NID ಗಳು, IIT ಗಳು ಮತ್ತು SRFTI ನಂತಹ 52ಕ್ಕೂ ಹೆಚ್ಚು ಭಾರತೀಯ ಸಂಸ್ಥೆಗಳಿಂದ ಕ್ರಿಯೇಟರ್ ಗಳನ್ನು ಒಗ್ಗೂಡಿಸುತ್ತದೆ
Posted On:
12 FEB 2025 6:46PM by PIB Bengaluru
ನಿಮ್ಮ ಕಣ್ಣುಗಳಲ್ಲಿ ಕಥೆಯ ಕನಸುಗಳಿವೆಯೇ? ಪ್ರತಿ ಚೌಕಟ್ಟಿನಲ್ಲಿ ಕಥೆ ತೆರೆದುಕೊಳ್ಳುವ ದೃಶ್ಯವಿದೆಯೇ? ಸೃಜನಶೀಲತೆ ನಿಮ್ಮ ರಕ್ತದಲ್ಲಿ ಹರಿಯುತ್ತಿದ್ದರೆ, WAVES ಅವಾರ್ಡ್ಸ್ ಆಫ್ ಎಕ್ಸಲೆನ್ಸ್ ಒಂದು ಸುವರ್ಣಾವಕಾಶವನ್ನು ಒದಗಿಸುತ್ತದೆ.
ವಿದ್ಯಾರ್ಥಿ ಶೋರೀಲ್ಸ್ ಮತ್ತು ವೃತ್ತಿಪರ ಜಾಹೀರಾತು ಚಿತ್ರ ಸ್ಪರ್ಧೆಗೆ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ! ಫೆಬ್ರವರಿ 15ರೊಳಗೆ ನಿಮ್ಮ ಅರ್ಜಿಯನ್ನು ಸಲ್ಲಿಸಿ.

ವಾರ್ತಾ ಮತ್ತು ಪ್ರಸಾರ ಸಚಿವಾಲಯವು, ಯುನೆಸ್ಕೋ ಮಾನ್ಯತೆ ಪಡೆದ ಜಾಗತಿಕ ಸಂಸ್ಥೆಯಾದ ASIFA ಇಂಡಿಯಾದ ಸಹಯೋಗದೊಂದಿಗೆ, ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜ್ ಅಡಿಯಲ್ಲಿ WAVES ಎಕ್ಸಲೆನ್ಸ್ ಪ್ರಶಸ್ತಿಗಳನ್ನು ಆಯೋಜಿಸುತ್ತಿದೆ. ಅನಿಮೇಷನ್, ವಿಷುಯಲ್ ಎಫೆಕ್ಟ್ಸ್ ಮತ್ತು ಎಕ್ಸ್‌ಟೆಂಡೆಡ್ ರಿಯಾಲಿಟಿ (XR) ನಲ್ಲಿನ ಅತ್ಯುತ್ತಮ ಸಾಧನೆಗಳನ್ನು ಗುರುತಿಸುವ ಈ ಪ್ರಶಸ್ತಿಗಳು, ಜಾಗತಿಕವಾಗಿ ಭಾರತದ ಸೃಜನಶೀಲ ಶಕ್ತಿಯನ್ನು ಪ್ರದರ್ಶಿಸುತ್ತವೆ.
ಪ್ರಶಸ್ತಿಗಳ ಬಗ್ಗೆ
ಸ್ಪರ್ಧೆಯಲ್ಲಿ ಎರಡು ವಿಭಾಗಗಳಿವೆ: ವಿದ್ಯಾರ್ಥಿ ಶೋರೀಲ್‌ಗಳು (ಸಮಯ ಮಿತಿಯಿಲ್ಲ) ಮತ್ತು ವೃತ್ತಿಪರ ಜಾಹೀರಾತು ಚಿತ್ರಗಳು (ಗರಿಷ್ಠ 60 ಸೆಕೆಂಡುಗಳು). ಈ ಸಲ್ಲಿಕೆಗಳು ಭಾರತದ ಸಾಮಾಜಿಕ-ಸಾಂಸ್ಕೃತಿಕ ಪರಿಸರ ಮತ್ತು ಆಧುನಿಕ ತಂತ್ರಜ್ಞಾನದ ಕುರಿತಾಗಿರುತ್ತವೆ, ಉದಾಹರಣೆಗೆ:
• ಆಧುನಿಕ ಸಂದರ್ಭದಲ್ಲಿ ಪುರಾಣ ಮತ್ತು ಜಾನಪದ
• ಸುಸ್ಥಿರತೆ ಮತ್ತು ಹವಾಮಾನ ಬದಲಾವಣೆಯ ಜಾಗೃತಿ
• ಆರೋಗ್ಯ ಮತ್ತು ಯೋಗ
• ಕೃತಕ ಬುದ್ಧಿಮತ್ತೆ ಮತ್ತು ಕಥೆ ಹೇಳುವಿಕೆಯ ಭವಿಷ್ಯ
• ಅನಿಮೇಷನ್ ಮತ್ತು ವಿಎಫ್ಎಕ್ಸ್ ಮೂಲಕ ಭಾರತದ ಅನ್ಟೋಲ್ಡ್ ಸ್ಟೋರೀಸ್
• ಸಾಮಾಜಿಕ ಪರಿಣಾಮಕ್ಕಾಗಿ ಗೇಮಿಂಗ್
• ವರ್ಚುವಲ್ ಪ್ರೊಡಕ್ಷನ್ ಮತ್ತು XR ಇನೋವೇಷನ್ಸ್
• ಸ್ಟಾಪ್ ಮೋಷನ್ ಆನಿಮೇಷನ್ ಬಳಸಿ ಹನುಮಾನ್ ಚಾಲಿಸಾದಂತಹ ಆಚರಣೆಗಳು ಮತ್ತು ಪೌರಾಣಿಕ ಕೃತಿಗಳನ್ನು ಅನಿಮೇಷನ್ ಮಾಡುವುದು
• ಮಹಿಳೆಯರ ಸುರಕ್ಷತೆ ಮತ್ತು ಚುಡಾಯಿಸುವಿಕೆ
• ಜಾಹೀರಾತು ಪ್ರಪಂಚ ಮತ್ತು ಅದರ ಬದಲಾಗುತ್ತಿರುವ ಆಯಾಮಗಳು
ASIFA ಇಂಡಿಯಾವು ಉತ್ಸಾಹಭರಿತ ಭಾಗವಹಿಸುವಿಕೆಯೊಂದಿಗೆ ಅಸಾಧಾರಣ ಪ್ರತಿಕ್ರಿಯೆಯನ್ನು ಕಂಡಿದೆ
ASIFA ಇಂಡಿಯಾವು 1238 ಸಲ್ಲಿಕೆಗಳೊಂದಿಗೆ ಉತ್ತಮ ಪ್ರತಿಕ್ರಿಯೆ ಕಂಡಿದೆ. ಈ ಅರ್ಜಿಗಳಲ್ಲಿ ವೈವಿಧ್ಯಮಯ ಭಾಗವಹಿಸುವಿಕೆ ಕಂಡುಬಂದಿದೆ: ವಿದ್ಯಾರ್ಥಿಗಳು (75%) ವೃತ್ತಿಪರರು (25%) ಮಹಿಳೆಯರು (35%) ಮತ್ತು ಉದಯೋನ್ಮುಖ ಕ್ರಿಯೇಟರ್ (50%). ಮಹಿಳೆಯರು ಮತ್ತು ಯುವ ಕ್ರಿಯೇಟರ್ ಗಳು ಹೆಚ್ಚಿನ ಸಂಖ್ಯೆಯ ಭಾಗವಹಿಸುವಿಕೆಯು, ಭಾರತದ AVGC ವಲಯದಲ್ಲಿ ವೈವಿಧ್ಯತೆ ಮತ್ತು ಹೊಸ ಆಲೋಚನೆಗಳನ್ನು ಪ್ರೋತ್ಸಾಹಿಸುವಲ್ಲಿ ಸವಾಲಿನ ಮಹತ್ವವನ್ನು ಸಾರಿ ಹೇಳುತ್ತದೆ.
ವಿಶ್ವದಾದ್ಯಂತ ಪ್ರಚಾರದ ಫಲವಾಗಿ, 13 ದೇಶಗಳಿಂದ 60ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಸ್ಪೇನ್, ಯುನೈಟೆಡ್ ಕಿಂಗ್‌ಡಮ್, ಯುನೈಟೆಡ್ ಸ್ಟೇಟ್ಸ್, ಗ್ರೀಸ್, ಸೈಪ್ರಸ್, ಇರಾನ್, ಫಿನ್‌ಲ್ಯಾಂಡ್, ಫಿಲಿಪೈನ್ಸ್, ಜರ್ಮನಿ, ಶ್ರೀಲಂಕಾ, ಪೋರ್ಟೊ ರಿಕೊ, ಚೀನಾ ಮತ್ತು ಮೆಕ್ಸಿಕೋ ಈ ದೇಶಗಳಲ್ಲಿ ಸೇರಿವೆ. ಜಾಗತಿಕ ಅನಿಮೇಷನ್ ಸಂಸ್ಥೆ ASIFA ತನ್ನ 40 ಶಾಖೆಗಳ ಮೂಲಕ ಜಗತ್ತಿನಾದ್ಯಂತ ಈ ಸ್ಪರ್ಧೆಯನ್ನು ಪ್ರಚಾರ ಮಾಡುತ್ತಿದೆ.
ASIFA ಭಾರತ ಮತ್ತು ವಿದೇಶಗಳಲ್ಲಿರುವ 52 ಕ್ಕೂ ಹೆಚ್ಚು ಸಂಸ್ಥೆಗಳಿಂದ ಅರ್ಜಿಗಳನ್ನು ಸ್ವೀಕರಿಸಿದೆ. BAU ಸೆಂಟ್ರೊ ಯೂನಿವರ್ಸಿಟೇರಿಯೊ ಡಿ ಆರ್ಟೆಸ್ ವೈ ಡಿಸೆನೊ ಡಿ ಬಾರ್ಸಿಲೋನಾ, UTD ಯಲ್ಲಿ ಬಾಸ್ ಸ್ಕೂಲ್ ಆಫ್ ಆರ್ಟ್ಸ್, ಹ್ಯುಮಾನಿಟೀಸ್ ಮತ್ತು ಟೆಕ್ನಾಲಜಿ, ಟೆಹ್ರಾನ್ ಯೂನಿವರ್ಸಿಟಿ ಆಫ್ ಆರ್ಟ್, ಫಿಲ್ಮಾ ಅಕಾಡೆಮಿ ಬಾಡೆನ್-ವುರ್ಟೆಂಬರ್ಗ್, ಅಕಾಡೆಮಿ ಆಫ್ ಆರ್ಟ್ ಯೂನಿವರ್ಸಿಟಿ, ಅಕಾಡೆಮಿ ಆಫ್ ಡಿಸೈನ್, ಕೊಲಂಬೊ, ಕೆನ್ನೆಸಾ ಸ್ಟೇಟ್ ಯೂನಿವರ್ಸಿಟಿ ವಿದ್ಯಾರ್ಥಿಗಳು ಈ ಪ್ರತಿಷ್ಠಿತ ಉತ್ಸವಕ್ಕೆ ತಮ್ಮ ಅತ್ಯುತ್ತಮ ಕೃತಿಗಳನ್ನು ಸಲ್ಲಿಸಿದ್ದಾರೆ.
ಎಲ್ಲಾ NID, IITಗಳು (ವಿವಿಧ IITಗಳಲ್ಲಿ IDC ಸ್ಕೂಲ್ ಆಫ್ ಡಿಸೈನ್ ಮತ್ತು DOD), SRFTI, ಸಿಂಬಿಯೋಸಿಸ್, ಸರ್ JJ ಇನ್ಸ್ಟಿಟ್ಯೂಟ್ ಆಫ್ ಅಪ್ಲೈಡ್ ಆರ್ಟ್, ಬನಸ್ಥಲಿ ವಿದ್ಯಾಪೀಠ, ಅಜೀಂಕ್ಯ ಡಿ ವೈ ಪಾಟೀಲ್ ವಿಶ್ವವಿದ್ಯಾಲಯ, ಬಿಐಟಿ ಮೆಸ್ರಾ, ಯುಐಡಿ, ಸೃಷ್ಟಿ ಮಣಿಪಾಲ್ ಸೇರಿದಂತೆ ಪ್ರತಿಷ್ಠಿತ ಭಾರತೀಯ ಸಂಸ್ಥೆಗಳ ವಿದ್ಯಾರ್ಥಿಗಳು ಸಹ ತಮ್ಮ ಅತ್ಯುತ್ತಮ ಕೃತಿಗಳನ್ನು ಸಲ್ಲಿಸಿದ್ದಾರೆ.

ವೇವ್ಸ್ ಶ್ರೇಷ್ಠತಾ ಪ್ರಶಸ್ತಿಗಳ ಸಲ್ಲಿಕೆಗಳ ನೋಟಗಳು
WAVES ವಿಜೇತರು ಜಾಗತಿಕ ಅವಕಾಶಗಳನ್ನು ಪಡೆದುಕೊಳ್ಳುತ್ತಾರೆ
ವಿಜೇತರಿಗೆ ತಜ್ಞರಿಂದ ಪೋರ್ಟ್‌ಫೋಲಿಯೊ ವಿಮರ್ಶೆಗಾಗಿ ವೈಯಕ್ತಿಕವಾಗಿ ಸಹಾಯ ದೊರೆಯುತ್ತದೆ. US, ಗ್ರೀಸ್ ಮತ್ತು ಭಾರತದ ಜಾಗತಿಕ ತೀರ್ಪುಗಾರರೊಂದಿಗೆ ಸಂವಾದ ನಡೆಸುವ ಅವಕಾಶವೂ ಅವರಿಗೆ ಲಭ್ಯವಿರುತ್ತದೆ. ಅಂತರರಾಷ್ಟ್ರೀಯ ಸ್ಟುಡಿಯೋಗಳು, ನಿರ್ಮಾಪಕರು ಮತ್ತು ಸರ್ಕಾರಿ ಅಧಿಕಾರಿಗಳು ಸೇರಿದಂತೆ ಪ್ರಮುಖ ವ್ಯಕ್ತಿಗಳೊಂದಿಗೆ ನೇರ ಸಂಪರ್ಕ ಸಾಧಿಸುವ ಮೂಲಕ ನೆಟ್‌ವರ್ಕಿಂಗ್ ಅವಕಾಶಗಳನ್ನು ಪಡೆಯುತ್ತಾರೆ, ಇದು ಉದ್ಯೋಗಾವಕಾಶಗಳಿಗೆ ದಾರಿ ಮಾಡಿಕೊಡಬಹುದು. ಅನಿಮೇಷನ್ ಸ್ಟುಡಿಯೋಗಳು ಮತ್ತು ಸ್ವತಂತ್ರ ಡೆವಲಪರ್‌ಗಳು ಹಣಕಾಸು, ಐಪಿ ಅಭಿವೃದ್ಧಿ ಮತ್ತು ವ್ಯವಹಾರ ಸ್ಕೇಲೆಬಿಲಿಟಿ ಕುರಿತು ಮಾರ್ಗದರ್ಶನವನ್ನು ಪಡೆಯುತ್ತಾರೆ.
ASIFA ಇಂಡಿಯಾ, ಮುಂಬರುವ WAVES ಅವಾರ್ಡ್ಸ್ ಆಫ್ ಎಕ್ಸಲೆನ್ಸ್‌ನಲ್ಲಿ ಭಾಗವಹಿಸಲು ಕ್ರಿಯೇಟರ್ ಗಳನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ, ಭಾರತದ 15 ಉಪಘಟಕಗಳಲ್ಲಿ ಸರಣಿ ಸಭೆಗಳನ್ನು ಆಯೋಜಿಸಿತು. 'ಗುರುಗಳಿಂದ ಶ್ರೇಷ್ಠತೆಯ ಒಳನೋಟ' (Deep Dive into Excellence from Mentors) ಕಾರ್ಯಕ್ರಮದಲ್ಲಿ, ಅಮೆರಿಕಾದ ಬ್ರಿಯಾನಾ ಯಾರ್ ಹೌಸ್ ಮತ್ತು ಗ್ರೀಸ್‌ನ ಅಥೆನ್ಸ್ ನ ಡಾ. ಅನಸ್ತಾಸಿಯಾ ಡಿಮಿಟ್ರಾ ಅವರಂತಹ ಅಂತಾರಾಷ್ಟ್ರೀಯ ತಜ್ಞರು ಪಾಲ್ಗೊಳ್ಳುವವರಿಗೆ ಮಾರ್ಗದರ್ಶನ ನೀಡಿದರು.

ಇತ್ತೀಚೆಗೆ ನಡೆದ ವರ್ಚುವಲ್ ಸಭೆಯಲ್ಲಿ, ಖ್ಯಾತ ಜಾಗತಿಕ ತೀರ್ಪುಗಾರರಾದ ಬ್ರಿಯಾನಾ ಯಾರ್ ಹೌಸ್ ಮತ್ತು ಡಾ. ಅನಸ್ತಾಸಿಯಾ ಡಿಮಿಟ್ರಾ ತಮ್ಮ ಅಪಾರ ಪರಿಣತಿಯನ್ನು ಹಂಚಿಕೊಂಡರು. ಆಸ್ಕರ್ ಪ್ರಶಸ್ತಿಯ ಸದಸ್ಯರಾದ ಡಿಯಾನಾ ಮೋರ್ಸ್, ಸೆಲೆಬ್ರಿಟಿ ಕಲಾವಿದ ಧೀಮಂತ್ ವ್ಯಾಸ್, ಬಿ.ಎನ್. ವಿಚಾರ ಮತ್ತು ಇತರ ಗಣ್ಯರು ಸಹ ಈ ಸಭೆಯಲ್ಲಿ ಭಾಗವಹಿಸಿದ್ದರು. ASIFA ಇಂಡಿಯಾದ ಅಧ್ಯಕ್ಷ ಸಂಜಯ್ ಖಿಮೆಸರಾ ಮತ್ತು ಕೋರ್ ಕಮಿಟಿ ಸದಸ್ಯೆ ವಿನಿತಾ ಬಚ್ಚಾನಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸಿದರು.
ಹೆಚ್ಚಿನ ಮಾಹಿತಿಗಾಗಿ ಮತ್ತು ನಿಮ್ಮ ಕೃತಿಗಳನ್ನು ಸಲ್ಲಿಸಲು, ದಯವಿಟ್ಟು ಇಲ್ಲಿರುವ ಪೋರ್ಟಲ್ ಬಳಸಿ:
https://www.asifaindia.com/waoe/
ASIFA ಇಂಡಿಯಾ ಕುರಿತು
ASIFA ಇಂಡಿಯಾ 2000ರಲ್ಲಿ ಸ್ಥಾಪಿತವಾದ ಒಂದು ಲಾಭೋದ್ದೇಶವಿಲ್ಲದ ಸಂಸ್ಥೆಯಾಗಿದೆ. ಭಾರತದಲ್ಲಿ VFX, ಅನಿಮೇಷನ್ ಮತ್ತು ಗೇಮಿಂಗ್‌ನ ಕಲೆ, ಕೌಶಲ್ಯ ಮತ್ತು ವೃತ್ತಿಯನ್ನು ಉತ್ತೇಜಿಸುವುದು ಇದರ ಮುಖ್ಯ ಗುರಿಯಾಗಿದೆ. ಅನಿಮೇಟರ್‌ಗಳು, VFX ಮತ್ತು ಗೇಮಿಂಗ್ ಕಲಾವಿದರು, ವಿದ್ಯಾರ್ಥಿಗಳು ಮತ್ತು ವೃತ್ತಿಪರರಂತಹ ಕ್ರಿಯೇಟರ್ ಗಳಿಗೆ ನೆಟ್‌ವರ್ಕ್ ಮಾಡಲು, ಕಲಿಯಲು ಮತ್ತು ತಮ್ಮ ಕೃತಿಗಳನ್ನು ಪ್ರದರ್ಶಿಸಲು ಒಂದು ವೇದಿಕೆಯನ್ನು ನಿರ್ಮಿಸಲು ಆಸಿಫಾ ಇಂಡಿಯಾ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ.
*****
(Release ID: 2102618)
Visitor Counter : 31