ಸಹಕಾರ ಸಚಿವಾಲಯ
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ನವದೆಹಲಿಯಲ್ಲಿ ಸಹಕಾರ ಸಚಿವಾಲಯದ ಸಂಸದೀಯ ಸಮಾಲೋಚನಾ ಸಮಿತಿಯ ಮೊದಲ ಸಭೆಯ ಅಧ್ಯಕ್ಷತೆ ವಹಿಸಿದ್ದರು
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೇಶಾದ್ಯಂತ ರೈತರು ಮತ್ತು ಗ್ರಾಮೀಣ ವಲಯದ ಹಿತದೃಷ್ಟಿಯಿಂದ ಸಹಕಾರ ಸಚಿವಾಲಯವನ್ನು ರಚಿಸುವ ಮೂಲಕ ‘ಸಹಕಾರ್ ಸೆ ಸಮೃದ್ಧಿ’ ಮಂತ್ರವನ್ನು ನೀಡಿದರು
ಶೀಘ್ರದಲ್ಲೇ, ಪಿಎಸಿಎಸ್ ವಿಮಾನಯಾನ ಟಿಕೆಟ್‌ಗಳನ್ನು ಸಹ ಮಾರಾಟ ಮಾಡಲು ಸಾಧ್ಯವಾಗುತ್ತದೆ
ತ್ರಿಭುವನ್ ಸಹಕಾರಿ ವಿಶ್ವವಿದ್ಯಾಲಯ ರಚನೆಯ ಮಸೂದೆಯನ್ನು ಶೀಘ್ರದಲ್ಲೇ ಸಂಸತ್ತು ಅಂಗೀಕರಿಸಲಿದೆ
ವಿಶ್ವವಿದ್ಯಾಲಯ ರಚನೆಯ ನಂತರ, ಸಹಕಾರಿ ಕ್ಷೇತ್ರಕ್ಕೆ ಬರುವ ವೃತ್ತಿಪರರು ತಾಂತ್ರಿಕ ಶಿಕ್ಷಣ, ಮಾಹಿತಿ ಮತ್ತು ಲೆಕ್ಕಪತ್ರ ನಿರ್ವಹಣೆ ಮತ್ತು ಆಡಳಿತಕ್ಕೆ ಸಂಬಂಧಿಸಿದ ತರಬೇತಿ ಪಡೆಯಲು ಸಾಧ್ಯವಾಗುತ್ತದೆ
Posted On:
12 FEB 2025 4:25PM by PIB Bengaluru
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ನವದೆಹಲಿಯಲ್ಲಿ‘ಸಹಕಾರ ಸಂಘಗಳನ್ನು ಬಲಪಡಿಸಲು ಕೈಗೊಂಡ ಮತ್ತು ಪ್ರಸ್ತುತ ತೆಗೆದುಕೊಳ್ಳುತ್ತಿರುವ ಉಪಕ್ರಮಗಳ’ ಕುರಿತು ಸಹಕಾರ ಸಚಿವಾಲಯದ ಸಂಸದೀಯ ಸಮಾಲೋಚನಾ ಸಮಿತಿಯ ಮೊದಲ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಕೇಂದ್ರ ಸಹಕಾರ ಖಾತೆ ರಾಜ್ಯ ಸಚಿವರಾದ ಶ್ರೀ ಕೃಷ್ಣ ಪಾಲ್ ಮತ್ತು ಶ್ರೀ ಮುರಳೀಧರ್ ಮೊಹೋಲ್, ಸಮಿತಿಯ ಸದಸ್ಯರು, ಸಹಕಾರ ಸಚಿವಾಲಯದ ಕಾರ್ಯದರ್ಶಿ ಮತ್ತು ಸಚಿವಾಲಯದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಸಹಕಾರ ಸಚಿವಾಲಯವು ಸ್ಥಾಪನೆಯಾದಾಗಿನಿಂದ ಕೈಗೊಂಡ ಉಪಕ್ರಮಗಳು ಮತ್ತು ಸಹಕಾರಿ ಸಂಘಗಳನ್ನು ಸಬಲೀಕರಣಗೊಳಿಸಲು ಪ್ರಸ್ತುತ ನಡೆಯುತ್ತಿರುವ ಪ್ರಯತ್ನಗಳಿಗೆ ಸಂಬಂಧಿಸಿದ ವಿವಿಧ ವಿಷಯಗಳ ಬಗ್ಗೆ ಸಮಿತಿಯು ಚರ್ಚಿಸಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೇಶಾದ್ಯಂತ ರೈತರು ಮತ್ತು ಗ್ರಾಮೀಣ ಪ್ರದೇಶಗಳ ಕಲ್ಯಾಣಕ್ಕಾಗಿ ಪ್ರತ್ಯೇಕ ಸಹಕಾರ ಸಚಿವಾಲಯವನ್ನು ಸ್ಥಾಪಿಸಿದರು ಮತ್ತು "ಸಹಕಾರ್ ಸೆ ಸಮೃದ್ಧಿ" ಮಂತ್ರವನ್ನು ನೀಡಿದರು ಎಂದು ಹೇಳಿದರು. ಸಹಕಾರದಿಂದ, ಉದ್ಯೋಗ ಸೃಷ್ಟಿ ಮತ್ತು ಗ್ರಾಮೀಣ ಪ್ರದೇಶಗಳ ಸಮೃದ್ಧಿ ಸಾಧ್ಯ ಎಂದು ನರೇಂದ್ರ ಮೋದಿ ಸರ್ಕಾರ ನಂಬಿದೆ ಎಂದು ಅವರು ಉಲ್ಲೇಖಿಸಿದರು.

ಸ್ವಾತಂತ್ರ್ಯದ ನಂತರ ಕೆಲವು ವರ್ಷಗಳ ಕಾಲ ದೇಶದಲ್ಲಿ ಸಹಕಾರ ಚಳವಳಿ ಪ್ರಬಲವಾಗಿತ್ತು, ಆದರೆ ನಂತರ ಹೆಚ್ಚಿನ ರಾಜ್ಯಗಳಲ್ಲಿಅದು ದುರ್ಬಲಗೊಂಡಿತು ಎಂದು ಶ್ರೀ ಅಮಿತ್ ಶಾ ಹೇಳಿದರು. ಕೇಂದ್ರದಲ್ಲಿ ಸಹಕಾರ ಸಚಿವಾಲಯ ರಚನೆಯಾದ ನಂತರ, ರಾಜ್ಯಗಳ ಸಹಯೋಗದೊಂದಿಗೆ ಪ್ರಾಥಮಿಕ ಕೃಷಿ ಕ್ರೆಡಿಟ್ ಸೊಸೈಟಿಗಳ (ಪಿಎಸಿಎಸ್) ಡೇಟಾಬೇಸ್ ರಚಿಸುವುದು ಮತ್ತು ಎರಡು ಲಕ್ಷ ಪಿಎಸಿಎಸ್ ನೋಂದಾಯಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸುವುದು ಮೊದಲ ಕಾರ್ಯವಾಗಿದೆ ಎಂದು ಅವರು ಉಲ್ಲೇಖಿಸಿದರು. ರಾಷ್ಟ್ರೀಯ ಸಹಕಾರಿ ಡೇಟಾಬೇಸ್‌ಅನ್ನು ಅಭಿವೃದ್ಧಿಪಡಿಸುವ ಕೆಲಸವು ಬಹುತೇಕ ಪೂರ್ಣಗೊಂಡಿದೆ ಮತ್ತು ಈಗ, ಪ್ರದೇಶವಾರು ವರ್ಗೀಕರಿಸಲಾದ ದೇಶಾದ್ಯಂತದ ಸಹಕಾರಿ ಸಂಘಗಳ ಬಗ್ಗೆ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯವಿದೆ ಎಂದು ಅವರು ಹೇಳಿದರು. ಪಿಎಸಿಎಸ್‌ನ ಗಣಕೀಕರಣಕ್ಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಮುಂಬರುವ ದಿನಗಳಲ್ಲಿ, ಪಿಎಸಿಎಸ್ ಲಭ್ಯವಿಲ್ಲದ ಒಂದೇ ಒಂದು ಪಂಚಾಯತ್ ದೇಶದಲ್ಲಿಇರುವುದಿಲ್ಲ ಎಂದುರು.

ಪಿಎಸಿಎಸ್ ಅನ್ನು ‘ಕಾರ್ಯಸಾಧ್ಯ’ ಮಾಡಲು ರಚಿಸಲಾದ ಮಾದರಿ ಉಪವಿಧಿಗಳನ್ನು ದೇಶದ ಬಹುತೇಕ ಎಲ್ಲಾ ರಾಜ್ಯಗಳು ಅಳವಡಿಸಿಕೊಂಡಿವೆ ಎಂದು ಕೇಂದ್ರ ಸಹಕಾರ ಸಚಿವರು ಹೇಳಿದರು. ಪಿಎಸಿಎಸ್‌ಅನ್ನು 20ಕ್ಕೂ ಹೆಚ್ಚು ಚಟುವಟಿಕೆಗಳೊಂದಿಗೆ ಸಂಪರ್ಕಿಸಲಾಗಿದೆ ಮತ್ತು ಈಗ ಸಾಮಾನ್ಯ ಸೇವಾ ಕೇಂದ್ರಗಳು, ಜನೌಷಧಿ ಕೇಂದ್ರಗಳು ಮತ್ತು ಇತರ ಸೇವೆಗಳನ್ನು ಒದಗಿಸಲು ಪ್ರಾರಂಭಿಸಿದೆ ಎಂದು ಹೇಳಿದರು.

ಸಹಕಾರ ಸಚಿವಾಲಯವು ತ್ರಿಭುವನ್ ಸಹಕಾರಿ ವಿಶ್ವವಿದ್ಯಾಲಯ ಸ್ಥಾಪನೆಗಾಗಿ ಮಸೂದೆಯನ್ನು ಪರಿಚಯಿಸಿದೆ, ಅದನ್ನು ಶೀಘ್ರದಲ್ಲೇ ಸಂಸತ್ತು ಅಂಗೀಕರಿಸಲಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಈ ವಿಶ್ವವಿದ್ಯಾಲಯದ ಸ್ಥಾಪನೆಯು ಸಹಕಾರಿ ಕ್ಷೇತ್ರಕ್ಕೆ ಪ್ರವೇಶಿಸುವ ವೃತ್ತಿಪರರಿಗೆ ತಾಂತ್ರಿಕ ಶಿಕ್ಷಣ, ಲೆಕ್ಕಪತ್ರ ನಿರ್ವಹಣೆ, ಆಡಳಿತಾತ್ಮಕ ಜ್ಞಾನ ಮತ್ತು ತರಬೇತಿಯನ್ನು ಒದಗಿಸುತ್ತದೆ. ಇದು ಸಹಕಾರಿ ವಲಯದಲ್ಲಿ ತರಬೇತಿ ಪಡೆದ ಮಾನವಶಕ್ತಿಯ ಲಭ್ಯತೆಯನ್ನು ಖಚಿತಪಡಿಸುತ್ತದೆ ಎಂದು ಶ್ರೀ ಅಮಿತ್ ಶಾ ಹೇಳಿದರು.
ರಾಷ್ಟ್ರೀಯ ಸಹಕಾರಿ ರಫ್ತು ನಿಯಮಿತ (ಎನ್‌ಸಿಇಎಲ್), ರಾಷ್ಟ್ರೀಯ ಸಹಕಾರಿ ಸಾವಯವ ನಿಯಮಿತ (ಎನ್‌ಸಿಒಎಲ್) ಮತ್ತು ಭಾರತೀಯ ಬೀಜ ಸಹಕಾರಿ ಸಮೃದ್ಧಿ ಲಿಮಿಟೆಡ್ (ಬಿಬಿಎಸ್‌ಎಸ್‌ಎಲ್) ನಂತಹ ರಾಷ್ಟ್ರೀಯ ಮಟ್ಟದ ಸಹಕಾರಿ ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ, ಇದು ಸಹಕಾರಿ ವಲಯದಲ್ಲಿ ರಫ್ತು, ಸಾವಯವ ಉತ್ಪನ್ನಗಳು ಮತ್ತು ಸುಧಾರಿತ ಬೀಜಗಳನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ ಎಂದು ಕೇಂದ್ರ ಸಹಕಾರ ಸಚಿವರು ಹೇಳಿದರು. ಈ ಉಪಕ್ರಮಗಳು ಮುಂಬರುವ ವರ್ಷಗಳಲ್ಲಿ ಸಹಕಾರಿ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗಳಿಗೆ ಕಾರಣವಾಗುತ್ತವೆ ಎಂದು ಅವರು ಹೇಳಿದರು.
ಕಾರ್ಪೊರೇಟ್ ವಲಯದಂತೆಯೇ ಸಹಕಾರಿ ವಲಯಕ್ಕೂ ಅವಕಾಶಗಳು ಸಿಗಬೇಕು ಎಂಬುದು ಸರ್ಕಾರದ ಪ್ರಯತ್ನವಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಸಹಕಾರ ಸಚಿವಾಲಯವು ಹಣಕಾಸು ಸಚಿವಾಲಯ, ರಿಸರ್ವ್ ಬ್ಯಾಂಕ್ ಮತ್ತು ಆದಾಯ ತೆರಿಗೆ ಇಲಾಖೆಯ ಸಹಯೋಗದೊಂದಿಗೆ ಕಾರ್ಪೊರೇಟ್ ಮತ್ತು ಸಹಕಾರಿ ಕ್ಷೇತ್ರಗಳಿಗೆ ಒಂದೇ ತೆರಿಗೆ ರಚನೆಯನ್ನು ಮಾಡಲು ಕ್ರಮಗಳನ್ನು ಕೈಗೊಂಡಿದೆ ಎಂದು ಅವರು ಹೇಳಿದರು. ದೇಶದ ಸಹಕಾರಿ ಕ್ಷೇತ್ರಕ್ಕೆ ಸಂಬಂಧಿಸಿದ ಉದ್ಯಮಗಳು ಕಾರ್ಪೊರೇಟ್ ಜಗತ್ತಿನೊಂದಿಗೆ ಪೈಪೋಟಿಯಲ್ಲಿ ಪ್ರಗತಿ ಸಾಧಿಸುತ್ತವೆ ಮತ್ತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಸಹಕಾರ ಸೆ ಸಮೃದ್ಧಿ ದೃಷ್ಟಿಕೋನವನ್ನು ಈಡೇರಿಸುತ್ತವೆ ಎಂಬ ವಿಶ್ವಾಸವನ್ನು ಸಹಕಾರ ಸಚಿವರು ವ್ಯಕ್ತಪಡಿಸಿದರು.
ಕೃಷಿಕ್ ಭಾರತಿ ಸಹಕಾರಿ ನಿಯಮಿತ (ಕ್ರಿಬ್ಕೊ), ಭಾರತೀಯ ರೈತರ ರಸಗೊಬ್ಬರ ಸಹಕಾರಿ ನಿಯಮಿತ (ಇಫ್ಕೊ), ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ (ಎನ್‌ಡಿಡಿಬಿ) ಮತ್ತು ಇತರ ಒಕ್ಕೂಟಗಳ ಸಹಯೋಗದೊಂದಿಗೆ ಸಹಕಾರಕ್ಕೆ ಸಂಬಂಧಿಸಿದ ರಾಷ್ಟ್ರೀಯ ಒಕ್ಕೂಟಗಳ ತ್ವರಿತ ಅಭಿವೃದ್ಧಿಗೆ ಮಾರ್ಗಸೂಚಿಯನ್ನು ರೂಪಿಸಲಾಗಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಸಮಾಲೋಚನಾ ಸಮಿತಿಗೆ ಮಾಹಿತಿ ನೀಡಿದರು. ಪ್ರಸ್ತುತ, ಪಿಎಸಿಎಸ್ ರೈಲ್ವೆ ಟಿಕೆಟ್ ಕಾಯ್ದಿರಿಸುವಲ್ಲಿ ತೊಡಗಿದೆ ಎಂದು ಉಲ್ಲೇಖಿಸಿದ ಅವರು, ಸಹಕಾರ ಸಚಿವಾಲಯದ ಉಪಕ್ರಮಗಳಿಂದಾಗಿ, ಪಿಎಸಿಎಸ್ ಶೀಘ್ರದಲ್ಲೇ ವಿಮಾನ ಟಿಕೆಟ್‌ಗಳನ್ನು ಸಹ ಮಾರಾಟ ಮಾಡಲು ಸಾಧ್ಯವಾಗುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ದೇಶದಲ್ಲಿ ಸಹಕಾರಿ ಸಂಸ್ಥೆಗಳ ಅಭಿವೃದ್ಧಿಯಲ್ಲಿ ಪ್ರಾದೇಶಿಕ ಅಸಮಾನತೆಯನ್ನು ಗಮನದಲ್ಲಿಟ್ಟುಕೊಂಡು, ಎಲ್ಲಾ ರಾಜ್ಯಗಳಲ್ಲಿ ಏಕರೂಪದ ಸಮತೋಲಿತ ಅಭಿವೃದ್ಧಿಯನ್ನು ತರಲು ಸರ್ಕಾರ ವಿಶೇಷ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು.
ಸಭೆಯಲ್ಲಿ, ಸಮಿತಿಯ ಸದಸ್ಯರು ದೇಶದಲ್ಲಿ ಸಹಕಾರಿ ಸಂಘಗಳ ಸಬಲೀಕರಣಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ತಮ್ಮ ಸಲಹೆಗಳನ್ನು ನೀಡಿದರು ಮತ್ತು ದೇಶದಲ್ಲಿ ಸಹಕಾರಿ ಚಳವಳಿಯನ್ನು ಬಲಪಡಿಸಲು ಸರ್ಕಾರ ಕೈಗೊಂಡ ಪ್ರಮುಖ ಕ್ರಮಗಳನ್ನು ಶ್ಲಾಘಿಸಿದರು.
*****
(Release ID: 2102417)
Visitor Counter : 29
Read this release in:
Khasi
,
English
,
Urdu
,
Marathi
,
Hindi
,
Nepali
,
Bengali-TR
,
Bengali
,
Punjabi
,
Gujarati
,
Odia
,
Tamil
,
Malayalam