ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
azadi ka amrit mahotsav

ಆನೆಕಾಲು ರೋಗ (ಲಿಂಫಾಟಿಕ್ ಫೈಲೇರಿಯಾಸಿಸ್) ಸಾಂಕ್ರಾಮಿಕ ಗುರುತಿಸಿರುವ 13 ರಾಜ್ಯಗಳಾದ್ಯಂತ ಎಲ್ ಎಫ್ ನಿರ್ಮೂಲನೆಗಾಗಿ ಕೇಂದ್ರ ಆರೋಗ್ಯ ಸಚಿವರಾದ ಶ್ರೀ ಜಗತ್ ಪ್ರಕಾಶ್ ನಡ್ಡಾ ಅವರಿಂದ ರಾಷ್ಟ್ರೀಯ ಸಾಮೂಹಿಕ ಔಷಧ ನೀಡುವ ಸುತ್ತಿಗೆ ಚಾಲನೆ


ದುರ್ಬಲಗೊಳಿಸುವ ಈ ಕಾಯಿಲೆಯಿಂದ ಲಕ್ಷಾಂತರ ಜನರನ್ನು ರಕ್ಷಿಸುವುದು ಮತ್ತು ಆನೆಕಾಲು ರೋಗ (ಲಿಂಫಾಟಿಕ್ ಫೈಲೇರಿಯಾಸಿಸ್) ವಿರುದ್ಧ ಭಾರತದ ಹೋರಾಟಕ್ಕೆ ವೇಗ ನೀಡುವುದು ಈ ಉಪಕ್ರಮದ ಗುರಿ

ಫೆಬ್ರವರಿ 10 ರಿಂದ 111 ಸಾಂಕ್ರಾಮಿಕ ಜಿಲ್ಲೆಗಳಲ್ಲಿ 17.5 ಕೋಟಿಗೂ ಅಧಿಕ ಜನರಿಗೆ ಉಚಿತವಾಗಿ ಔಷಧಿಗಳನ್ನು ಲಭ್ಯವಾಗುವಂತೆ ಮಾಡಲಾಗುವುದು: ಶ್ರೀ ಜೆ ಪಿ ನಡ್ಡಾ

2030ರ ಸುಸ್ಥಿರ ಅಭಿವೃದ್ಧಿ ಗುರಿ(ಎಸ್ ಡಿಜಿ)ಗಿಂತ ಮುಂಚಿತವಾಗಿ ಅನೆಕಾಲು ರೋಗ ನಿರ್ಮೂಲನೆಗೆ ಐದು-ಹಂತದ ಕಾರ್ಯವಿಧಾನ ಜಾರಿಗೊಳಿಸಲು ಕರೆ

ಜನಾಂದೋಲನ ಮತ್ತು ಜನ ಭಾಗೀದಾರಿ ಸ್ಪೂರ್ತಿಯೊಂದಿಗೆ "ಇಡೀ ಸರ್ಕಾರದ" ವಿಧಾನದ ಮಹತ್ವದ ಪ್ರಾಮುಖ್ಯತೆ

“ಲಿಂಫಾಟಿಕ್ ಫೈಲೇರಿಯಾಸಿಸ್ ನಿರ್ಮೂಲನೆಗೆ ಭಾರತವು ತನ್ನ ಬದ್ಧತೆ ಹೊಂದಿದೆ ಮತ್ತು ಅದನ್ನು ಮುಂದುವರಿಸುತ್ತದೆ. 2027ರ ವೇಳೆಗೆ ಆ ಗುರಿಯನ್ನು ಸಾಧಿಸುವುದು ನಮ್ಮ ಸಂಕಲ್ಪವಾಗಿದೆ"

Posted On: 10 FEB 2025 1:09PM by PIB Bengaluru

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ಜಗತ್ ಪ್ರಕಾಶ್ ನಡ್ಡಾ ಅವರು ಇಂದು  ಆನೆಕಾಲು ರೋಗ (ಎಲ್ ಎಫ್‌ ) ಕಾಯಿಲೆ ಗುರುತಿಸುವ 13 ರಾಜ್ಯಗಳ ಆರೋಗ್ಯ ಸಚಿವರು ಮತ್ತು ಸ್ಥಳೀಯ ರಾಜ್ಯಗಳ ಹಿರಿಯ ಅಧಿಕಾರಿಗಳೊಂದಿಗೆ ವೀಡಿಯೊ ಕಾನ್ಫರೆನ್ಸ್ ಮೂಲಕ ಲಿಂಫಾಟಿಕ್ ಫೈಲೇರಿಯಾಸಿಸ್ (ಎಲ್ ಎಫ್) ನಿರ್ಮೂಲನೆಗಾಗಿ ವಾರ್ಷಿಕ ರಾಷ್ಟ್ರವ್ಯಾಪಿ ಸಾಮೂಹಿಕ ಔಷಧ ವಿತರಿಸುವ (ಎಂಡಿಎ) ಅಭಿಯಾನಕ್ಕೆ ಚಾಲನೆ ನೀಡಿದರು. ಭಾಗವಹಿಸಿದವರಿಗೆ ಅಭಿಯಾನ, ಅದರ ಉದ್ದೇಶಗಳು, ಕೈಗೊಳ್ಳುತ್ತಿರುವ ಪ್ರಮುಖ ಕಾರ್ಯತಂತ್ರದ ಚಟುವಟಿಕೆಗಳು ಮತ್ತು ಎಂಡಿಎ ಕಾರ್ಯಕ್ರಮದೊಂದಿಗೆ ಹೆಚ್ಚಿನ ವ್ಯಾಪ್ತಿ ಮತ್ತು ಅನುಸರಣೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ರಾಜ್ಯಗಳ ನಿರ್ಣಾಯಕ ಪಾತ್ರದ ಬಗ್ಗೆ ಒಂದು ಸ್ಥೂಲನೋಟವನ್ನು ನೀಡಲಾಯಿತು. ಈ ಅಭಿಯಾನವು 13 ರಾಜ್ಯಗಳಾದ್ಯಂತ 111 ಸ್ಥಳೀಯ ಜಿಲ್ಲೆಗಳನ್ನು ಒಳಗೊಳ್ಳುತ್ತದೆ, ಜೊತೆಗೆ ಮನೆ-ಮನೆಗೆ ಫೈಲೇರಿಯಾ ತಡೆಗಟ್ಟುವ ಔಷಧಿಗಳನ್ನು ಒದಗಿಸುತ್ತದೆ.

ರಾಜ್ಯಗಳ ಆರೋಗ್ಯ ಸಚಿವರಾದ ಶ್ರೀ ಸತ್ಯ ಕುಮಾರ್ ಯಾದವ್ (ಆಂಧ್ರ ಪ್ರದೇಶ), ಶ್ರೀ ಅಶೋಕ್ ಸಿಂಘಾಲ್ (ಅಸ್ಸಾಂ), ಶ್ರೀ ಶ್ಯಾಮ್ ಬಿಹಾರಿ ಜೈಸ್ವಾಲ್ (ಛತ್ತೀಸ್‌ಗಢ), ಶ್ರೀ ಋಷಿಕೇಶ್ ಗಣೇಶ್ ಭಾಯ್  ಪಟೇಲ್ (ಗುಜರಾತ್), ಶ್ರೀ ಇರ್ಫಾನ್ ಅನ್ಸಾರಿ (ಜಾರ್ಖಂಡ್), ಶ್ರೀ ದಿನೇಶ್ ಗುಂಡೂರಾವ್ (ಕರ್ನಾಟಕ), ಶ್ರೀ ರಾಜೇಂದ್ರ ಶುಕ್ಲಾ (ಮಧ್ಯಪ್ರದೇಶ), ಶ್ರೀ ಮುಕೇಶ್ ಮಹಾಲಿಂಗ್ (ಒಡಿಶಾ), ಶ್ರೀ ಮಂಗಲ್ ಪಾಂಡೆ (ಬಿಹಾರ), ಶ್ರೀ ಪ್ರಕಾಶ್ ರಾವ್ ಅಬಿತ್ಕರ್ (ಮಹಾರಾಷ್ಟ್ರ) ಮತ್ತು ಶ್ರೀ ಬ್ರಿಜೇಶ್ ಪಾಠಕ್ (ಉತ್ತರ ಪ್ರದೇಶ) ಅವರು ಸಭೆಯಲ್ಲಿ ಭಾಗವಹಿಸಿದ್ದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಡಿಯಲ್ಲಿ ಬರುವ ರಾಷ್ಟ್ರೀಯ ವೆಕ್ಟರ್ ಬೋರ್ನ್ ಡಿಸೀಸಸ್ ಕಂಟ್ರೋಲ್ (NCVBDC) ನೇತೃತ್ವದ ಭಾರತದ ಎಲ್ ಎಫ್ ನಿರ್ಮೂಲನ ಕಾರ್ಯವಿಧಾನದ ಪ್ರಮುಖ ಅಂಶವೆಂದರೆ ಎಂಡಿಎ ಅಭಿಯಾನ. ಈ ಕಾರ್ಯಕ್ರಮವು ಜನರ ಮನೆ ಮನೆಗೆ ತೆರಳಿ ಫೈಲೇರಿಯಲ್ ನಿಗ್ರಹ ಔಷಧಿಗಳನ್ನು ನೀಡುವುದರ ಮೇಲೆ ಕೇಂದ್ರೀಕರಿಸುತ್ತದೆ, ಪ್ರತಿಯೊಬ್ಬ ಅರ್ಹ ವ್ಯಕ್ತಿಯು ರೋಗ ಹರಡುವುದನ್ನು ತಡೆಯಲು ಸೂಚಿಸಲಾದ ಔಷಧಿಯನ್ನು ಸೇವಿಸುವುದನ್ನು ಖಚಿತಪಡಿಸುತ್ತದೆ. ಸಾಮಾನ್ಯವಾಗಿ "ಹಾಥಿ ಪಾವೊನ್" ಎಂದು ಕರೆಯಲ್ಪಡುವ ಎಲ್ ಎಫ್, ಸೋಂಕಿತ ಸೊಳ್ಳೆಗಳಿಂದ ಹರಡುವ ಪರಾವಲಂಬಿ ಕಾಯಿಲೆಯಾಗಿದೆ. ಇದು ಲಿಂಫೋಡೆಮಾ (ಕೈಕಾಲುಗಳ ಊತ) ಮತ್ತು ಹೈಡ್ರೋಸೆಲ್ (ಸ್ಕ್ರೋಟಲ್ ಊತ) ದಂತಹ ದೈಹಿಕ ಅಂಗವೈಕಲ್ಯಗಳಿಗೆ ಕಾರಣವಾಗಬಹುದು ಮತ್ತು ಬಾಧಿತ ವ್ಯಕ್ತಿಗಳು ಮತ್ತು ಕುಟುಂಬಗಳ ಮೇಲೆ ದೀರ್ಘಕಾಲೀನ ಹೊರೆಗಳನ್ನು ಹೇರುತ್ತದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಆರೋಗ್ಯ ಸಚಿವರು, "ಎಲ್‌ಎಫ್ ಮುಕ್ತ ಭಾರತ ನಮ್ಮ ಬದ್ಧತೆಯಾಗಿದೆ ಮತ್ತು ಈ ಗುರಿಯನ್ನು ಸಾಧಿಸಲು ಪ್ರತಿಯೊಬ್ಬ ನಾಗರಿಕರ ಪಾಲ್ಗೊಳ್ಳುವಿಕೆ ಮತ್ತು ಸಕ್ರಿಯ ಸಮುದಾಯದ ಒಳಗೊಳ್ಳುವಿಕೆ ಅಗತ್ಯವಿದೆ. ಜವಾಬ್ದಾರಿಯ ಹಂಚಿಕೆಯ ಪ್ರಜ್ಞೆಯೊಂದಿಗೆ, ನಾವು ಲಿಫಾಂಟೆಕ್ ಫೈಲೇರಿಯಾಸಿಸ್ ಅನ್ನು ತೊಡೆದುಹಾಕಬಹುದು, ಕೋಟ್ಯಂತರ ಜನರಿಗೆ ರಕ್ಷಣೆ ಖಾತ್ರಿಪಡಿಸಿಕೊಳ್ಳಬಹುದು" ಎಂದು ಒತ್ತಿ ಹೇಳಿದರು. "ನಮ್ಮ ಗೌರವಾನ್ವಿತ ಪ್ರಧಾನಿಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಸಮರ್ಥ ನಾಯಕತ್ವದಲ್ಲಿ ಈ ಅಭಿಯಾನವು ಜನ ಭಾಗೀದಾರಿ ಮನೋಭಾವದಿಂದ ಮುನ್ನಡೆಸಲ್ಪಡುತ್ತದೆ, ಅದನ್ನು ಜನಾಂದೋಲನವಾಗಿ ಪರಿವರ್ತಿಸುತ್ತದೆ ಮತ್ತು ಸಕ್ರಿಯ ಸಮುದಾಯದ ಭಾಗವಹಿಸುವಿಕೆ ಮತ್ತು ಸಾಮೂಹಿಕ ಮಾಲೀಕತ್ವದ ಪ್ರಜ್ಞೆಯೊಂದಿಗೆ ಭಾರತವು ಲಿಫಾಂಟೆಕ್ ಫೈಲೇರಿಯಾಸಿಸ್ ಅನ್ನು ತೊಡೆದುಹಾಕಬಹುದು, ಲಕ್ಷಾಂತರ ಜನರನ್ನು ಈ ಕಾಯಿಲೆಯಿಂದ ರಕ್ಷಿಸಬಹುದೆಂಬುದನ್ನು ಖಾತ್ರಿಪಡಿಸುತ್ತದೆ" ಎಂದು ಅವರು ಪುನರುಚ್ಚರಿಸಿದರು.

ಲಿಂಟಾಫೆಟೆಕ್ ಫೈಲೇರಿಯಾಸಿಸ್ ಜನರನ್ನು ಅಶಕ್ತಗೊಳಿಸುತ್ತದೆ ಮತ್ತು ಅವರ ಜೀವನದ ಗುಣಮಟ್ಟವನ್ನು ಹದಗೆಡಿಸುತ್ತದೆ ಎಂದ ಸಚಿವ ಶ್ರೀ ನಡ್ಡಾ ಅವರು 2030ರ ಸುಸ್ಥಿರ ಅಭಿವೃದ್ಧಿ ಗುರಿಗಿಂತ ಮುಂಚಿತವಾಗಿ ಈ ರೋಗವನ್ನು ನಿರ್ಮೂಲನೆ ಮಾಡಲು ಐದು ಅಂಶಗಳ ಕಾರ್ಯತಂತ್ರವನ್ನು ಜಾರಿಗೊಳಿಸಬೇಕೆಂದು ಕರೆ ನೀಡಿದರು. 13 ರಾಜ್ಯಗಳ 111 ಜಿಲ್ಲೆಗಳಲ್ಲಿ ವರ್ಷಕ್ಕೆ ಎರಡು ಬಾರಿ ನಡೆಯುವ ಎಂಡಿಎ ಅಭಿಯಾನದ ಸಂದರ್ಭದಲ್ಲಿ ಯಾರೊಬ್ಬರೂ ಸಹ ಹೊರಗುಳಿಯದಂತೆ ನೋಡಿಕೊಳ್ಳುವ ಮಹತ್ವವನ್ನು ಅವರು ಒತ್ತಿ ಹೇಳಿದರು. "ಫೆಬ್ರವರಿ 10 ರಿಂದ ಬಾಧಿತ ಜಿಲ್ಲೆಗಳಲ್ಲಿ 17.5 ಕೋಟಿಗೂ ಅಧಿಕ ಜನಸಂಖ್ಯೆಗೆ ಈ ಔಷಧಿಗಳನ್ನು ಉಚಿತವಾಗಿ ಲಭ್ಯವಾಗುವಂತೆ ಮಾಡಲಾಗುವುದು. ಈ ಪ್ರದೇಶಗಳ ನಿವಾಸಿಗಳು ಔಷಧಿಗಳನ್ನು ಸೇವಿಸುವುದು ಕಡ್ಡಾಯವಾಗಿದೆ. ಈ ದುರ್ಬಲಗೊಳಿಸುವ ಕಾಯಿಲೆಯಿಂದ ತಮ್ಮನ್ನು ಮತ್ತು ತಮ್ಮ ಕುಟುಂಬಗಳನ್ನು ರಕ್ಷಿಸಿಕೊಳ್ಳುತ್ತಾರೆ." ಗರಿಷ್ಠ ಪ್ರಮಾಣದ ಜನರಿಗೆ ಔಷಧಿಯನ್ನು ತಲುಪಿಸುವ ಮಹತ್ವವನ್ನು ಎತ್ತಿ ತೋರಿಸಿದ ಅವರು, "ಬಾಧಿತ ಜಿಲ್ಲೆಗಳು ಅರ್ಹ ಜನಸಂಖ್ಯೆಯ ಶೇ.90 ಕ್ಕಿಂತ ಅಧಿಕ ಜನರು ಫೈಲೇರಿಯಾ ನಿಗ್ರಹ ಔಷಧಿಗಳನ್ನು ಸೇವಿಸುವುದನ್ನು ಖಾತ್ರಿಪಡಿಸಿಕೊಳ್ಳಬೇಕು. ನಮ್ಮ ಸಾಮೂಹಿಕ ಬದ್ಧತೆ ಮತ್ತು ದೃಢಸಂಕಲ್ಪವು ಜೀವನವನ್ನು ಪರಿವರ್ತಿಸಲು ಮತ್ತು ಲೆಂಫಾಟೆಕ್ ಫೈಲೇರಿಯಾಸಿಸ್‌ನಿಂದ ಮುಕ್ತ ಭವಿಷ್ಯವನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ’’ ಎಂದರು.

ಶ್ರೀ ನಡ್ಡಾ, ಬಾಧಿತ ಜನರ ಆರಂಭಿಕ ರೋಗಪತ್ತೆಯನ್ನು ಖಾತ್ರಿಪಡಿಸಿಕೊಳ್ಳಲು ರಾಜ್ಯ ಮಟ್ಟದಲ್ಲಿ ಅಭಿಯಾನವನ್ನು ಮೇಲ್ವಿಚಾರಣೆ ಮಾಡಲು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ಕರೆ ನೀಡಿದರು. ಅದಕ್ಕಾಗಿ ಗುರುತಿಸಲಾದ ರಾಜ್ಯ/ಜಿಲ್ಲಾ ಮಟ್ಟದಲ್ಲಿ ರಾಜಕೀಯ ಮತ್ತು ಆಡಳಿತಾತ್ಮಕ ನಾಯಕತ್ವದ ವೈಯಕ್ತಿಕ ಒಳಗೊಳ್ಳುವಿಕೆಗೆ ಅವರು ಕರೆ ನೀಡಿದರು.

ಪ್ರಚಾರ ಚಟುವಟಿಕೆಗಳನ್ನು ಬೆಂಬಲಿಸಲು ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳನ್ನು ತೊಡಗಿಸಿಕೊಳ್ಳುವ ಮೂಲಕ ಸಂಪೂರ್ಣ ಸರ್ಕಾರದ ವಿಧಾನವನ್ನು ಅಳವಡಿಸಿಕೊಳ್ಳುವ ಮಹತ್ವವನ್ನು ಕೇಂದ್ರ ಸಚಿವರು ಒತ್ತಿ ಹೇಳಿದರು. ಈ ಸಂಯೋಜಿತ ವಿಧಾನವು ಮಿತ್ರ ಸಚಿವಾಲಯಗಳಲ್ಲಿ ಉನ್ನತ ಮಟ್ಟದ ವಕಾಲತ್ತು ಜೊತೆಗೆ ಅಂತರ-ಒಳಗೊಳ್ಳುವಿಕೆಯನ್ನು ಉತ್ತೇಜಿಸುತ್ತದೆ ಎಂದು ಅವರು ಬಲವಾಗಿ ಪ್ರತಿಪಾದಿಸಿದರು.

ಜನರಲ್ಲಿ ಜಾಗೃತಿಯನ್ನು ಹೆಚ್ಚಿಸಲು ಪರಿಣಾಮಕಾರಿ ಐಇಸಿ ಚಟುವಟಿಕೆಗಳನ್ನು ಜಾರಿಗೆ ತರಲು ಶ್ರೀ ನಡ್ಡಾ ರಾಜ್ಯಗಳಿಗೆ ಕರೆ ನೀಡಿದರು. ವ್ಯಾಪಕ ಜನರನ್ನು ತಲುಪಲು ಡಿಜಿಟಲ್ ತಂತ್ರಜ್ಞಾನಗಳನ್ನು ತೊಡಗಿಸಿಕೊಳ್ಳಲು ಅವರು ಕರೆ ನೀಡಿದರು. ಅವರು ಯುಪಿ ಮತ್ತು ಒಡಿಶಾ ಮಾಡಿದ ಉತ್ತಮ ಕೆಲಸವನ್ನು ಉಲ್ಲೇಖಿಸಿದರು ಮತ್ತು ಡಿಜಿಟಲ್ ತಂತ್ರಜ್ಞಾನಗಳನ್ನು ಪರಿಣಾಮಕಾರಿಯಾಗಿ ಬಳಸುವುದನ್ನು ಶ್ಲಾಘಿಸಿದರು.

ರಾಜ್ಯಗಳ ಆರೋಗ್ಯ ಸಚಿವರ ರಾಜಕೀಯ ಒಳಗೊಳ್ಳುವಿಕೆಯ ಮಹತ್ವವನ್ನು ಅವರು ಒತ್ತಿ ಹೇಳಿದರು. ಇತರ ಚುನಾಯಿತ ಪ್ರತಿನಿಧಿಗಳನ್ನು, ವಿಶೇಷವಾಗಿ ಸಂಸತ್ತು ಮತ್ತು ಶಾಸಕಾಂಗ ಸಭೆಗಳು ಮತ್ತು ಮಂಡಳಿಗಳು, ಹಾಗೆಯೇ ಪಂಚಾಯತ್ ರಾಜ್ ಸಂಸ್ಥೆಗಳನ್ನು ಒಳಗೊಳ್ಳುವಂತೆ ಮತ್ತು ಎಂಡಿಎ ಚಟುವಟಿಕೆಗಳ ಪರಿಣಾಮಕಾರಿ ಅನುಷ್ಠಾನವನ್ನು ಖಾತ್ರಿಪಡಿಸಿಕೊಳ್ಳಲು ಸಮುದಾಯಗಳನ್ನು ಸಜ್ಜುಗೊಳಿಸುವಲ್ಲಿ ಅವರ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ಪ್ರೋತ್ಸಾಹಿಸುವಂತೆ ಅವರು ಉತ್ತೇಜನ ನೀಡಿದರು.

ಆಯುಷ್ಮಾನ್ ಆರೋಗ್ಯ ಮಂದಿರ (ಎಎಎಂ) ಸೌಲಭ್ಯಗಳಲ್ಲಿ ಎಂಎಂಡಿಪಿ ಸೇವೆಗಳನ್ನು ಸಂಪೂರ್ಣವಾಗಿ ಸಂಯೋಜಿಸುವ ಪ್ರಯತ್ನಗಳು ನಡೆಯುತ್ತಿವೆ ಮತ್ತು ಸುಮಾರು ಶೇ.50 ರಷ್ಟು ಲಿಂಫೋಡೆಮಾ ಪ್ರಕರಣಗಳು ವಾರ್ಷಿಕವಾಗಿ ರೋಗ ನಿರ್ವಹಣೆ ಮತ್ತು ಅಂಗವೈಕಲ್ಯ ತಡೆಗಟ್ಟುವಿಕೆ (ಎಂಎಂಡಿಪಿ) ಕಿಟ್‌ಗಳನ್ನು ಪಡೆಯುತ್ತವೆ ಎಂದು ಶ್ರೀ ನಡ್ಡಾ ಹೇಳಿದರು. ಎನ್ ಎಚ್ ಎಂ ಅಡಿಯಲ್ಲಿ ಹೈಡ್ರೋಸೆಲೆಕ್ಟಮಿ ಶಸ್ತ್ರಚಿಕಿತ್ಸೆಗಳಿಗೆ ಅವಕಾಶವಿದೆ ಮತ್ತು ಪಿಎಂಜೆಎವೈ ಯೋಜನೆಯು ಫಲಾನುಭವಿಗಳಿಗೆ ಹೈಡ್ರೋಸೆಲೆಕ್ಟಮಿ ಆಯ್ಕೆಯನ್ನು ಸಹ ಹೊಂದಿದೆ ಎಂದು ಅವರು ಹೇಳಿದರು. 2024ರಲ್ಲಿ ರಾಜ್ಯಗಳಲ್ಲಿ ಸುಮಾರು ಶೇ.50ರಷ್ಟು ಹೈಡ್ರೋಸೆಲೆಕ್ಟಮಿ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಈ ಪ್ರಯತ್ನಗಳ ಮೂಲಕ, ಆರೋಗ್ಯ ಮಂದಿರಗಳು ಎಲ್ ಎಫ್ ನ ಹೊರೆಯನ್ನು ತಗ್ಗಿಸಲು ಸಹಾಯ ಮಾಡುತ್ತದೆ, ಬಾಧಿತ ವ್ಯಕ್ತಿಗಳು ಆರೋಗ್ಯಕರ ಜೀವನವನ್ನು ನಡೆಸಲು ಅನುವು ಮಾಡಿಕೊಡುತ್ತದೆ ಮತ್ತು ರೋಗ ಮುಕ್ತ, ಅಭಿವೃದ್ಧಿ ಹೊಂದಿದ ವಿಕಸಿತ ಭಾರತದ ದೂರದೃಷ್ಟಿಯನ್ನು ಉತ್ತೇಜಿಸುತ್ತದೆ ಎಂದು ಅವರು ಪ್ರಮುಖವಾಗಿ ಪ್ರಸ್ತಾಪಿಸಿದರು.

ಹೆಚ್ಚಿನ ಮರಣ ಪ್ರಮಾಣವನ್ನು ಹೊಂದಿರುವ ಈ ರೋಗವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಮಹತ್ವವನ್ನು ಪುನರುಚ್ಚರಿಸುವ ಮೂಲಕ ಕೇಂದ್ರ ಆರೋಗ್ಯ ಸಚಿವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು. ಇದು ಕೊನೆಯ ಹಂತದ ಸವಾಲು ಎಂದು ಹೇಳಿದ ಅವರು, ಆರೋಗ್ಯ ಕಾರ್ಯಕರ್ತರು ತಳಮಟ್ಟದಿಂದ ಗುರಿಯಿಟ್ಟುಕೊಂಡ ಪ್ರದೇಶಗಳಲ್ಲಿ ಹೆಚ್ಚಿನ ಗಮನಹರಿಸಿ ಕೆಲಸ ಮಾಡುವಂತೆ ಕರೆ ನೀಡಿದರು. "ಲಿಂಫಾಟೆಕ್  ಫೈಲೇರಿಯಾಸಿಸ್ ಅನ್ನು ನಿರ್ಮೂಲನೆ ಮಾಡುವ ಭದ್ಧತೆಯನ್ನು  ಭಾರತವುಹೊಂದಿದೆ ಮತ್ತು ಅದನ್ನು ಮುಂದುವರಿಸುತ್ತದೆ. 2027ರ ವೇಳೆಗೆ ಆ ಗುರಿಯನ್ನು ಸಾಧಿಸುವುದು ನಮ್ಮ ಸಂಕಲ್ಪವಾಗಿದೆ" ಎಂದು ಅವರು ಹೇಳಿದರು.

ಎಂಡಿಎ ಕುರಿತು :

ಈ ಎಂಡಿಎ ಅಭಿಯಾನವು ಆಂಧ್ರಪ್ರದೇಶ, ಅಸ್ಸಾಂ, ಬಿಹಾರ, ಛತ್ತೀಸ್‌ಗಢ, ಗುಜರಾತ್, ಜಾರ್ಖಂಡ್, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ 13 ರಾಜ್ಯಗಳ 111 ಸ್ಥಳೀಯ ಜಿಲ್ಲೆಗಳನ್ನು ಒಳಗೊಳ್ಳಲಿದೆ. ಸಮಗ್ರ ತಡೆಗಟ್ಟುವ ತಂತ್ರಗಳು, ವರ್ಧಿತ ಜಾಗೃತಿ ಮತ್ತು ಎಂಡಿಎ ಯೊಂದಿಗೆ ವ್ಯಾಪಕ ಅನುಸರಣೆಯನ್ನು ಖಚಿತಪಡಿಸಿಕೊಳ್ಳುವ ಮೂಲಕ ಲಿಫಾಂಟಿಕ್ ಫೈಲೇರಿಯಾಸಿಸ್ ಅನ್ನು ತೊಡೆದುಹಾಕಲು ಸರ್ಕಾರದ ಅಚಲ ಬದ್ಧತೆಯನ್ನು ಈ ಅಭಿಯಾನವು ಪುನರುಚ್ಚರಿಸುತ್ತದೆ.

ಸಾಮೂಹಿಕ ಔಷಧ ವಿತರಣೆ (ಎಂಡಿಎ) ಅಭಿಯಾನವು ಎಲ್ ಎಫ್ ಗುರುತಿಸಿರುವ ಎಲ್ಲಾ ಪ್ರದೇಶಗಳಲ್ಲಿನ ಎಲ್ಲಾ ಅರ್ಹ ವ್ಯಕ್ತಿಗಳಿಗೆ ರೋಗಲಕ್ಷಣಗಳನ್ನು ಹೊಂದಿದ್ದಾರೆಯೇ ಇಲ್ಲವೇ ಎಂಬುದನ್ನು ಲೆಕ್ಕಿಸದೆ, ಆಂಟಿ-ಫೈಲೇರಿಯಲ್ ಔಷಧಿಗಳ ಸಂಯೋಜನೆಯ ಮೇಲ್ವಿಚಾರಣೆಯನ್ನು ಒಳಗೊಂಡಿರುತ್ತದೆ. ಔಷಧಿ ಕಟ್ಟುಪಾಡು ಇವುಗಳನ್ನು ಒಳಗೊಂಡಿದೆ:

  • ಡಬಲ್ ಡ್ರಗ್ ರೆಜಿಮೆನ್ (DA): ಡೈಥೈಲ್‌ಕಾರ್ಬಮಜಿನ್ ಸಿಟ್ರೇಟ್ (DEC) ಮತ್ತು ಅಲ್ಬೆಂಡಜೋಲ್
  • ಟ್ರಿಪಲ್ ಡ್ರಗ್ ರೆಜಿಮೆನ್ (IDA): ಐವರ್ಮೆಕ್ಟಿನ್, ಡೈಥೈಲ್‌ಕಾರ್ಬಮಜಿನ್ ಸಿಟ್ರೇಟ್ (DEC), ಮತ್ತು ಅಲ್ಬೆಂಡಜೋಲ್

ಸೋಂಕಿತ ವ್ಯಕ್ತಿಗಳ ರಕ್ತ ಪ್ರವಾಹದಲ್ಲಿರುವ ಸೂಕ್ಷ್ಮ ಫೈಲೇರಿಯಲ್ ಪರಾವಲಂಬಿಗಳನ್ನು ತೆಗೆದುಹಾಕುವ ಮೂಲಕ ಎಲ್ ಎಫ್ ಹರಡುವಿಕೆಯನ್ನು ತಗ್ಗಿಸುವುದು ಎಂಡಿಎ ಗುರಿಯಾಗಿದೆ. ಹಾಗಾಗಿ ಸೊಳ್ಳೆಗಳಿಂದ ಮತ್ತಷ್ಟು ಹರಡುವುದನ್ನು ತಡೆಯುತ್ತದೆ. ಎಂಡಿಎ ಔಷಧಿಯು ಅತ್ಯಂತ ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿದ್ದರೂ, ಅದನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಬಾರದು. ಕೆಳಗಿನ ವರ್ಗದವರು ಔಷಧಿಗಳನ್ನು ಸೇವಿಸಬಾರದು:

- ಎರಡು ವರ್ಷದೊಳಗಿನ ಮಕ್ಕಳು

-ಗರ್ಭಿಣಿಯರು

- ಗಂಭೀರ ಕಾಯಿಲೆಗೆ ಒಳಗಾಗಿರುವ ಸಾರ್ವಜನಿಕರು

ಔಷಧದ ಸರಿಯಾದ ಬಳಕೆಯನ್ನು ಖಾತ್ರಿಪಡಿಸಿಕೊಳ್ಳಲು ಮತ್ತು ವ್ಯರ್ಥ ಅಥವಾ ದುರುಪಯೋಗವನ್ನು ತಪ್ಪಿಸಲು ಇತರ ಎಲ್ಲಾ ಅರ್ಹ ವ್ಯಕ್ತಿಗಳು ತರಬೇತಿ ಪಡೆದ ಆರೋಗ್ಯ ಕಾರ್ಯಕರ್ತರ ಸಮ್ಮುಖದಲ್ಲಿ ಔಷಧಿಯನ್ನು ಸೇವಿಸಬೇಕು.

ಕೇಂದ್ರ ಆರೋಗ್ಯ ಕಾರ್ಯದರ್ಶಿ ಶ್ರೀಮತಿ ಪುಣ್ಯ ಸಲೀಲಾ ಶ್ರೀವಾಸ್ತವ; ಆರೋಗ್ಯ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಮತ್ತು ಎಂಡಿ (ಎನ್‌ಎಚ್‌ಎಂ) ಶ್ರೀಮತಿ ಆರಾಧನಾ ಪಟ್ನಾಯಕ್; ಕೇಂದ್ರ ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಗಳು ಮತ್ತು ರಾಜ್ಯಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಮತ್ತು ಎಂಡಿ (ಎನ್‌ಎಚ್‌ಎಂ) ಸಭೆಯಲ್ಲಿ ಉಪಸ್ಥಿತರಿದ್ದರು.

 

*****


(Release ID: 2101354) Visitor Counter : 25