ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಅನಿಮೇಷನ್ ಚಲನಚಿತ್ರ ನಿರ್ಮಾಪಕರ ಸ್ಪರ್ಧೆಯೊಂದಿಗೆ ಪರಿವರ್ತಕ ರೀತಿಯಲ್ಲಿ ಕಥೆ ಹೇಳುವ ಪ್ರಯಾಣವನ್ನು ಪ್ರಾರಂಭಿಸಿ - "ವೇವ್ಸ್ ಒರಿಜಿನಲ್ಸ್: ಸೃಜನಶೀಲತೆಯು ಅವಕಾಶವನ್ನು ಭೇಟಿಯಾಗುವ ವೇದಿಕೆ


ವಿಷನ್ ನಿಂದ ರಿಯಾಲಿಟಿಗೆ (ಚಿಂತನೆಯಿಂದ ವಾಸ್ತವಕ್ಕೆ) : ವಿದ್ಯಾರ್ಥಿಗಳು, ಹವ್ಯಾಸಿಗಳು ಮತ್ತು ವೃತ್ತಿಪರರು ತಮ್ಮ ಯೋಜನೆಗಳನ್ನು ಚಲನಚಿತ್ರ ಮತ್ತು ಟಿವಿ ನಿರ್ಮಾಪಕರು, ಹೂಡಿಕೆದಾರರು ಮತ್ತು ಉದ್ಯಮದ ನಾಯಕರಿಗೆ ಪ್ರದರ್ಶಿಸಲು ಅವಕಾಶ ಪಡೆಯುತ್ತಾರೆ

15 ಕ್ಕೂ ಹೆಚ್ಚು ದೇಶಗಳಿಂದ 1,200 ಕ್ಕೂ ಹೆಚ್ಚು ನೋಂದಣಿಗಳು ಮತ್ತು 400 ಸೃಜನಶೀಲ ಸಲ್ಲಿಕೆಗಳೊಂದಿಗೆ ಉತ್ಸಾಹದಾಯಕ  ಪ್ರತಿಕ್ರಿಯೆ ದಾಖಲು; ವಿಜೇತ ಯೋಜನೆಗಳು ರೂ. 5 ಲಕ್ಷದವರೆಗೆ ನಗದು ಬಹುಮಾನಗಳನ್ನು ಪಡೆಯುತ್ತವೆ

ಅಡ್ವಾನ್ಸಿಂಗ್ ಟ್ಯಾಲೆಂಟ್: ಎ ಎಫ್ ಸಿಯ 2 ನೇ ಸುತ್ತಿಗೆ 75 ಕ್ಕೂ ಹೆಚ್ಚು ಕಥೆಗಾರರನ್ನು ಶಾರ್ಟ್ಲಿಸ್ಟ್ ಮಾಡಲಾಗಿದೆ, ಗ್ಲೋಬಲ್ ಸಿನೆಮಾ ಐಕಾನ್ ಗಳಿಂದ ಮಾಸ್ಟರ್ ಕ್ಲಾಸ್ ಗಳೊಂದಿಗೆ ವೇವ್ಸ್ 2025 ಗೆ ಸೇರಲು ಸಜ್ಜು

ಅನಿಮೇಷನ್ ನಲ್ಲಿ ಮಹಿಳೆಯರಿಗೆ  ಉತ್ತೇಜನ: ಕಥೆ ಹೇಳುವ ಮಾನದಂಡಗಳನ್ನು ಮರುರೂಪಿಸುತ್ತಿರುವ ಸೃಜನಶೀಲ ಕೃತಿಗಳನ್ನು ರೂಪಿಸಿರುವ  ಪ್ರತಿಭಾವಂತ ಮಹಿಳಾ ಪ್ರತಿನಿಧಿಗಳನ್ನು  ಒಳಗೊಂಡಿದೆ  ವೇವ್ಸ್

ವೇವ್ಸ್ - ಇಂಟರ್ನ್ಯಾಷನಲ್ ಅನಿಮೇಷನ್ ಫಿಲ್ಮ್ ಮೇಕರ್ಸ್ ಕಾಂಪಿಟಿಷನ್ (ಎ ಎಫ್ ಸಿ) ಜಾಗತಿಕ ಅನಿಮೇಷನ್ ಸಮುದಾಯ ತೊಡಗಿಸಿಕೊಳ್ಳುವಿಕೆಯಲ್ಲಿ ಹೊಸ ಮಾನದಂಡವನ್ನು ಸ್ಥಾಪಿಸಿದೆ.

Posted On: 07 FEB 2025 7:06PM by PIB Bengaluru

ವೇವ್ಸ್ - ಇಂಟರ್ನ್ಯಾಷನಲ್ ಅನಿಮೇಷನ್ ಫಿಲ್ಮ್ ಮೇಕರ್ಸ್ ಕಾಂಪಿಟಿಷನ್ (ಎ ಎಫ್ ಸಿ) ನ ಉದ್ಘಾಟನಾ ಆವೃತ್ತಿಯು ಅದ್ಭುತ ಉಪಕ್ರಮವಾಗಿ ಹೊರಹೊಮ್ಮಿದೆ, ಅದು ಅನಿಮೇಷನ್, ವಿಎಫ್ಎಕ್ಸ್, ಎಆರ್-ವಿಆರ್ ಮತ್ತು ವರ್ಚುವಲ್ ನಿರ್ಮಾಣದಲ್ಲಿ ಸೃಷ್ಟಿಕರ್ತರಿಗೆ ಜಾಗತಿಕ ವೇದಿಕೆಯನ್ನು ನೀಡಿದೆ.

ಅನಿಮೇಷನ್ ಚಲನಚಿತ್ರ ನಿರ್ಮಾಪಕರ ಸ್ಪರ್ಧೆ - "ವೇವ್ಸ್ ಒರಿಜಿನಲ್ಸ್"

ವಿಶ್ವ ಆಡಿಯೊ ವಿಷುಯಲ್ ಎಂಟರ್ಟೈನ್ಮೆಂಟ್ ಶೃಂಗಸಭೆಯ (ವೇವ್ಸ್) ಭಾಗವಾಗಿ 2024ರ ಸೆಪ್ಟೆಂಬರ್ 8 ರಂದು ಪ್ರಾರಂಭವಾದ ಸ್ಪರ್ಧೆಯು ಭಾಗವಹಿಸುವವರು ಮತ್ತು ಉದ್ಯಮದ ನಾಯಕರನ್ನು ಸಮಾನವಾಗಿ ಆಕರ್ಷಿಸಿದೆ, ಸೃಜನಶೀಲ ಕಥೆ ಹೇಳುವಿಕೆ ಮತ್ತು ತಾಂತ್ರಿಕ ನಾವೀನ್ಯತೆಗಳಿಗೆ ಪ್ರಮುಖ ತಾಣವಾಗಿ ತನ್ನ ಖ್ಯಾತಿಯನ್ನು ಗಟ್ಟಿಗೊಳಿಸಿದೆ.

ಮುಂಬರುವ ವಿಶ್ವ ಶ್ರಾವ್ಯ ದೃಶ್ಯ ಮತ್ತು ಮನರಂಜನಾ ಶೃಂಗಸಭೆಯ (ವೇವ್ಸ್) ಪ್ರಮುಖ ಕಾರ್ಯಕ್ರಮವಾದ ಅನಿಮೇಷನ್ ಚಲನಚಿತ್ರ ನಿರ್ಮಾಪಕರ ಸ್ಪರ್ಧೆಗಾಗಿ ಡಾನ್ಸಿಂಗ್ (ನೃತ್ಯ)  ಆಟಮ್ಸ್ ನೊಂದಿಗೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ (ಐ & ಬಿ) ಪಾಲುದಾರಿಕೆ ಹೊಂದಿದೆ. ಇದು ಐತಿಹಾಸಿಕ ಸಹಯೋಗವನ್ನು ಸೂಚಿಸುತ್ತದೆ, ಭಾರತದ ಸೃಜನಶೀಲ ಉದ್ಯಮದಲ್ಲಿ ಹೊಸ ಯುಗಕ್ಕೆ ದಾರಿ ಮಾಡಿಕೊಡುತ್ತದೆ ಮತ್ತು ಕ್ರಿಯೇಟ್ ಇನ್ ಇಂಡಿಯಾ ಸೀಸನ್ 1 ರ ಆರಂಭವನ್ನು ಸೂಚಿಸುತ್ತದೆ.
ಅಗಾಧ ಭಾಗವಹಿಸುವಿಕೆ
ಪ್ರಾರಂಭವಾದಾಗಿನಿಂದ, ಎಎಫ್ಸಿ 15 ಕ್ಕೂ ಹೆಚ್ಚು ದೇಶಗಳಿಂದ 1,200 ಕ್ಕೂ ಹೆಚ್ಚು ನೋಂದಣಿಗಳು ಮತ್ತು 400 ಕ್ಕೂ ಹೆಚ್ಚು ಸೃಜನಶೀಲ ಸಲ್ಲಿಕೆಗಳೊಂದಿಗೆ ಹೆಚ್ಚಿನ ಭಾಗವಹಿಸುವಿಕೆಯನ್ನು ಪಡೆದಿದೆ.

ಸೃಜನಶೀಲ ಉತ್ಕೃಷ್ಟತೆ ಮತ್ತು ಅವಕಾಶಕ್ಕಾಗಿ ಮಾರ್ಗಗಳನ್ನು ರೂಪಿಸುವುದು
ಉಪಕ್ರಮದ ನಿಜವಾದ ಸಾರವೆಂದರೆ ಭಾಗವಹಿಸುವವರಿಗೆ ತಮ್ಮ ಕಥೆಗಳಿಗೆ ಜೀವ ತುಂಬಲು ಮಾನ್ಯತೆ ಮತ್ತು ಅವಕಾಶಗಳನ್ನು (ರೆಕ್ಕೆಗಳನ್ನು)  ನೀಡುವ ಮೂಲಕ ಅವರನ್ನು ಸಬಲೀಕರಣಗೊಳಿಸುವುದು. ಜೊತೆಗೆ ಸೃಜನಶೀಲತೆಯು ಅವಕಾಶಗಳನ್ನು ಪೂರೈಸುವ ಪರಿಸರ ವ್ಯವಸ್ಥೆಯನ್ನು ಎಎಫ್ ಸಿ ರಚಿಸಿದೆ, ಇದು ಕಥೆಗಾರರಿಗೆ ಬಲವಾದ ನಿರೂಪಣೆಗಳನ್ನು ರೂಪಿಸಲು ಮತ್ತು ಅವರ ದೃಷ್ಟಿಕೋನಗಳನ್ನು ವಾಸ್ತವವಾಗಿ ಪರಿವರ್ತಿಸಲು ಅನುವು ಮಾಡಿಕೊಡುತ್ತದೆ.
ಇದನ್ನು ಈ ಕಾರ್ಯಕ್ರಮದ  ಮೂಲಕ ಸಾಧಿಸಲಾಗುತ್ತದೆ:

  1. ಆನ್ಲೈನ್ ಮಾಸ್ಟರ್ ಕ್ಲಾಸ್: ಪ್ರಸಿದ್ಧ ಉದ್ಯಮ ತಜ್ಞರಾದ ಪಿಲಾರ್ ಅಲೆಸ್ಸಾಂಡ್ರಾ, ಸೆರ್ಗಿಯೋ ಪಾಬ್ಲೋಸ್ ಮತ್ತು ಸರಸ್ವತಿ ಬುಯಾಲಾ ನೇತೃತ್ವ ವಹಿಸಿದ್ದಾರೆ.
  2. ವೈಯಕ್ತಿಕ ಮತ್ತು ಹೈಬ್ರಿಡ್ ಕಾರ್ಯಾಗಾರಗಳು: ಸೃಜನಶೀಲ ಮಂಡನೆ (ಪಿಚಿಂಗ್) , ವೈಯಕ್ತಿಕ ಅಭಿವೃದ್ಧಿ, ಪರಿಣಾಮಕಾರಿ ನೆಟ್ವರ್ಕಿಂಗ್ ಮತ್ತು ವಿಕಸನಗೊಳ್ಳುತ್ತಿರುವ ಸೃಜನಶೀಲ ಆರ್ಥಿಕತೆಯನ್ನು ಅರ್ಥಮಾಡಿಕೊಳ್ಳುವಂತಹ ಅಗತ್ಯ ಕೌಶಲ್ಯಗಳನ್ನು ಒಳಗೊಂಡ ಕಾರ್ಯಾಗಾರಗಳನ್ನು ಭಾರತದಾದ್ಯಂತದ ಪ್ರಮುಖ ಸಂಸ್ಥೆಗಳಲ್ಲಿ ನಡೆಸಲಾಗುತ್ತದೆ. ಇತ್ತೀಚಿನ ತಿಂಗಳುಗಳಲ್ಲಿ, ಲೇಖಕಿ, ಸೃಜನಶೀಲ ನಿರ್ದೇಶಕಿ ಮತ್ತು ಡ್ಯಾನ್ಸಿಂಗ್ ಆಟಮ್ಸ್ ನ  ಸ್ಥಾಪಕಿ ಸರಸ್ವತಿ ಬುಯ್ಯಾಲಾ ಅವರು ಐಐಟಿ ಹೈದರಾಬಾದ್, ಜೆಎನ್ಎಎಫ್ಎಯು ಹೈದರಾಬಾದ್, ಐಐಟಿ ಮುಂಬೈ, ಐಐಎಂಸಿ ದಿಲ್ಲಿ, ಜಾಮಿಯಾ ಮಿಲಿಯಾ ಇಸ್ಲಾಮಿಯಾ ದಿಲ್ಲಿ ಮತ್ತು ಎನ್ಎಫ್ಡಿಸಿ ಮುಂಬೈನಂತಹ ಪ್ರಮುಖ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ಮತ್ತು ವೃತ್ತಿಪರರಿಗೆ ಕಥೆ ಹೇಳುವ ಅಧಿವೇಶನಗಳನ್ನು ನಡೆಸಿದರು. ಈ ಸೆಷನ್ ಗಳು ಸೃಜನಶೀಲ ಮಂಡನೆ, ವೈಯಕ್ತಿಕ ಅಭಿವೃದ್ಧಿ, ಪರಿಣಾಮಕಾರಿ ನೆಟ್ವರ್ಕಿಂಗ್ ಮತ್ತು ವಿಕಸನಗೊಳ್ಳುತ್ತಿರುವ ಸೃಜನಶೀಲ ಆರ್ಥಿಕತೆಯನ್ನು ಅರ್ಥಮಾಡಿಕೊಳ್ಳುವಂತಹ ಅಗತ್ಯ ಕೌಶಲ್ಯಗಳನ್ನು ಒಳಗೊಂಡಿವೆ.

ಹೈಬ್ರಿಡ್ ಈವೆಂಟ್ ಗಳು ಸಂವಾದಾತ್ಮಕ ಕಾರ್ಯಾಗಾರಗಳನ್ನು ಒಳಗೊಂಡಿದ್ದವು, ಅಲ್ಲಿ ಭಾಗವಹಿಸುವವರು ಜಾಗತಿಕ ಅನಿಮೇಷನ್ ಭೂದೃಶ್ಯವನ್ನು ಹೇಗೆ ನಿಭಾಯಿಸುವುದು, ತಮ್ಮ ಆಲೋಚನೆಗಳನ್ನು ಆತ್ಮವಿಶ್ವಾಸದಿಂದ ಹೇಗೆ ವ್ಯಕ್ತಪಡಿಸುವುದು ಮತ್ತು ಟ್ರಾನ್ಸ್ ಮೀಡಿಯಾ ಕಥೆ ಹೇಳುವಿಕೆಯನ್ನು ಅನ್ವೇಷಿಸುವುದು - ಕಥೆಗಳನ್ನು ಆಟಿಕೆಗಳು, ಆಟಗಳು, ಕಾಮಿಕ್ ಪುಸ್ತಕಗಳು ಮತ್ತು ಅದಕ್ಕಿಂತ ಹೆಚ್ಚಿನ ರೀತಿಗಳಲ್ಲಿ  ಪರಿವರ್ತಿಸುವುದು ಹೇಗೆ ಎಂಬುದನ್ನು ಕಲಿತರು. ಈ ಉಪಕ್ರಮಗಳು ಬಹು ಮನರಂಜನಾ ಸ್ವರೂಪಗಳಲ್ಲಿ ಅಭಿವೃದ್ಧಿ ಹೊಂದಬಲ್ಲ ಸುವ್ಯವಸ್ಥಿತ ಸೃಷ್ಟಿಕರ್ತರನ್ನು ಪೋಷಿಸುವ ಎಎಫ್ ಸಿಯ ಬದ್ಧತೆಯನ್ನು ಒತ್ತಿಹೇಳುತ್ತವೆ.

  1. ಜಾಗತಿಕ ಹಾಜರಾತಿ ಮತ್ತು ಸಾಟಿಯಿಲ್ಲದ ನೆಟ್ವರ್ಕಿಂಗ್ ಅವಕಾಶಗಳು: ದೇಶೀಯವಾಗಿ ಮತ್ತು ಅಂತರರಾಷ್ಟ್ರೀಯವಾಗಿ ಪ್ರತಿಷ್ಠಿತ ಕಾರ್ಯಕ್ರಮಗಳಲ್ಲಿ ಎಎಫ್ಸಿಯ ಸಕ್ರಿಯ ಭಾಗವಹಿಸುವಿಕೆಯು ತನ್ನ ಉದ್ದೇಶ ಮತ್ತು ಧ್ಯೇಯವನ್ನು ಮತ್ತಷ್ಟು ಹೆಚ್ಚಿಸಿದೆ ಹಾಗು ಭಾಗವಹಿಸುವವರಿಗೆ ಅಮೂಲ್ಯವಾದ ನೆಟ್ವರ್ಕಿಂಗ್ ಅವಕಾಶಗಳನ್ನು ಒದಗಿಸಿದೆ. . ಭಾರತದಲ್ಲಿ ಎಎಫ್ಸಿಯು  ದಿಲ್ಲಿಯ ಮೇಳ ಮೇಳ, ಕಾಮಿಕ್ ಕಾನ್ ಹೈದರಾಬಾದ್, ವಿಎಫ್ಎಕ್ಸ್ ಶೃಂಗಸಭೆ, ಐಜಿಡಿಸಿ, ಸಿನಿಮ್ಯಾಟಿಕಾ, ಮುಂಬೈನ ಎಜಿಐಎಫ್ ಮತ್ತು ಐಎಫ್ಎಫ್ಐ ಗೋವಾದಲ್ಲಿ ತನ್ನ ಅಸ್ತಿತ್ವವನ್ನು ಹೆಚ್ಚು ಹೆಚ್ಚು ತೋರಿಸಿಕೊಂಡಿತು.

 

ಜಾಗತಿಕ ವೇದಿಕೆಯಲ್ಲಿ, ಎಎಫ್ಸಿ ಸ್ಪೇನ್ ನಲ್ಲಿ ನಡೆದ ರೈಟರ್ಸ್ ರಿಟ್ರೀಟ್ ಮತ್ತು ಪ್ರೊಡ್ಯೂಸರ್ಸ್ ವರ್ಕ್ ಶಾಪ್, ಪಸಡೆನಾದಲ್ಲಿ ಲೈಟ್ ಬಾಕ್ಸ್ ಎಕ್ಸ್ ಪೋ, ಲಾಸ್ ಏಂಜಲೀಸ್ ನಲ್ಲಿ ನಡೆದ ಅನಿಮೇಷನ್ ವರ್ಲ್ಡ್ ಶೃಂಗಸಭೆ, ಸಿಯಾಟಲ್ ನಲ್ಲಿ ನಡೆದ ಅನ್ರಿಯಲ್ ಫೆಸ್ಟ್ 2024, ಡೆನ್ವರ್ ನಲ್ಲಿ ಸಿಗ್ಗ್ರಾಫ್ 2024, ಕೆನಡಾದಲ್ಲಿ ನಡೆದ ಒಟ್ಟಾವಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ 2024 ಮತ್ತು ಕೇನ್ಸ್ ನಲ್ಲಿ ಎಂಐಪಿಕಾಮ್ ಹಾಗು  ಎಂಐಪಿಯಲ್ಲಿ ತನ್ನ ಚಿಂತನಾಕ್ರಮವನ್ನು/ದೃಷ್ಟಿಕೋನವನ್ನು ಪ್ರದರ್ಶಿಸಿತು. ಮಾಹಿತಿ ಮತ್ತು ಪ್ರಸಾರ ಸಚಿವಾಲಯ (ಎಂಐಬಿ) ನೇತೃತ್ವದಲ್ಲಿ ಲಾಸ್ ಏಂಜಲೀಸ್ ಮತ್ತು ಸ್ಯಾನ್ ಫ್ರಾನ್ಸಿಸ್ಕೋ ದಲ್ಲಿ ನಡೆದ   ಕಾರ್ಯಕ್ರಮಗಳು ಮತ್ತು ರೋಡ್ ಶೋಗಳು ಎಎಫ್ ಸಿಯನ್ನು ಜಾಗತಿಕ ಮಾಧ್ಯಮ ಪರಿಸರ ವ್ಯವಸ್ಥೆಯಲ್ಲಿ ಪ್ರಮುಖ ಉಪಕ್ರಮವಾಗಿ ಸ್ಥಾಪನೆ ಮಾಡಿವೆ.

ವೇವ್ಸ್ ಶೃಂಗಸಭೆ 2025 ಕ್ಕಾಗಿ ಉನ್ನತ ಶ್ರೇಷ್ಠ ಸೃಷ್ಟಿಕರ್ತರ ಆಯ್ಕೆ

ಸ್ಪರ್ಧೆಯು 2ನೇ ಸುತ್ತಿಗೆ ಮುಂದುವರಿಯುತ್ತಿದ್ದಂತೆ, ಎಎಫ್ಸಿ ಹೆಮ್ಮೆಯಿಂದ 75 ಕ್ಕೂ ಹೆಚ್ಚು ಶಾರ್ಟ್ಲಿಸ್ಟ್ ಮಾಡಿದ ಅಭ್ಯರ್ಥಿಗಳ ಆಯ್ಕೆಯನ್ನು ಘೋಷಿಸುತ್ತದೆ. ಈ ಉನ್ನತ ಕಥೆಗಾರರನ್ನು ಮತ್ತಷ್ಟು ಶಾರ್ಟ್ಲಿಸ್ಟ್ ಮಾಡಲಾಗುತ್ತದೆ ಮತ್ತು ಭೌತಿಕ ವೇವ್ಸ್  ಶೃಂಗಸಭೆ 2025 ಕ್ಕೆ ಹಾಜರಾಗಲು ಎಂಐಬಿ ಆಹ್ವಾನಿಸುತ್ತದೆ.

ಎಲ್ಲಾ ಆಯ್ದ ಸೃಷ್ಟಿಕರ್ತರು ವಿಶ್ವದ ಕೆಲವು ಪ್ರಸಿದ್ಧ ಉದ್ಯಮ ವ್ಯಕ್ತಿಗಳನ್ನು ಒಳಗೊಂಡಿರುವ ಮಾಸ್ಟರ್ ಕ್ಲಾಸ್ ಗಳ ವಿಶೇಷ ಸರಣಿಗೆ ಪ್ರವೇಶವನ್ನು ಪಡೆಯುತ್ತಾರೆ, ಅವರೆಂದರೆ :

- ಪೀಟರ್ ರಾಮ್ಸೆ, ಆಸ್ಕರ್ ಪ್ರಶಸ್ತಿ ವಿಜೇತ ನಿರ್ದೇಶಕ
- ಗುನೀತ್ ಮೊಂಗಾ, ಆಸ್ಕರ್ ಪ್ರಶಸ್ತಿ ವಿಜೇತ ನಿರ್ಮಾಪಕ
- ಶೋಬು ಯರ್ಲಗಡ್ಡ, ಬಾಹುಬಲಿ ಚಲನಚಿತ್ರಗಳ ದೂರದೃಷ್ಟಿಯ ನಿರ್ಮಾಪಕ
- ಅರ್ನೌ ಓಲೆ ಲೋಪೆಜ್, ಸ್ಕೈಡಾನ್ಸ್ ಅನಿಮೇಷನ್ ಸ್ಟುಡಿಯೋಸ್ನ ಕ್ಯಾರೆಕ್ಟರ್ ಅನಿಮೇಷನ್ ನಿರ್ದೇಶಕ
- ಕ್ರಿಸ್ ಪಿಯರ್ನ್, ಮೆಚ್ಚುಗೆ ಪಡೆದ ಅನಿಮೇಟೆಡ್ ಚಲನಚಿತ್ರಗಳ ನಿರ್ದೇಶಕ
• ಅನು ಸಿಂಗ್ ಚೌಧರಿ, ಪ್ರಸಿದ್ಧ ಬರಹಗಾರ ಮತ್ತು ಇನ್ನೂ ಅನೇಕರು.

ಹಂತವು ಬಹು ನಿರೀಕ್ಷಿತ ವೇವ್ಸ್ ಶೃಂಗಸಭೆ 2025 ರಲ್ಲಿ ಭಾಗವಹಿಸುವವರನ್ನು ತಮ್ಮ ಯೋಜನೆಗಳನ್ನು ಪರಿಷ್ಕರಿಸಲು ಮತ್ತು ಯೋಜನೆಯನ್ನು ಗುಂಪಿನೆದುರು ಸಾದರಪಡಿಸಲು (ಪಿಚ್ ಮಾಡಲು)  ಅಮೂಲ್ಯವಾದ ಒಳನೋಟಗಳು ಮತ್ತು ಸಾಧನಗಳೊಂದಿಗೆ ಸಜ್ಜುಗೊಳಿಸುವ ಗುರಿಯನ್ನು ಹೊಂದಿದೆ.

ಐಡಿಯಾದಿಂದ ಇಂಪ್ಯಾಕ್ಟ್ ವರೆಗೆ - ಅಂತರವನ್ನು ಕಡಿಮೆ ಮಾಡುವುದು

ಸ್ಪರ್ಧೆಯ ವಿಜೇತರು ತಮ್ಮ ಸೃಜನಶೀಲ ಪರಿಕಲ್ಪನೆಗಳನ್ನು ಭಾರತ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಉನ್ನತ ನಿರ್ಮಾಪಕರು ಮತ್ತು ಪ್ರಮುಖ ಒಟಿಟಿ ಪ್ಲಾಟ್ಫಾರ್ಮ್ಗಳಿಗೆ ಪ್ರಸ್ತುತಪಡಿಸಲಿದ್ದಾರೆ. ಎಂಐಬಿ ತಂಡವು ಐಡಿಯಾದಿಂದ ಇಂಪ್ಯಾಕ್ಟ್ ಮತ್ತು ಐಡಿಯಾದಿಂದ ಹೂಡಿಕೆಗೆ ಇರುವ ಅಂತರವನ್ನು ಆಕ್ರಮಣಕಾರಿಯಾದ ರೀತಿಯಲ್ಲಿ ಕಡಿಮೆ ಮಾಡುವುದರೊಂದಿಗೆ, ಎಎಫ್ಸಿಯು ಜಾಗತಿಕ ಮನರಂಜನಾ ದೈತ್ಯರೊಂದಿಗೆ ಸಹಯೋಗ ಮಾಡಲು ಸೃಷ್ಟಿಕರ್ತರಿಗೆ ಸಾಟಿಯಿಲ್ಲದ ಅವಕಾಶಗಳನ್ನು ಸೃಷ್ಟಿಸುತ್ತಿದೆ.

ಮಹಿಳೆಯರ ಸಬಲೀಕರಣ ಮತ್ತು ವೈವಿಧ್ಯತೆಯನ್ನು ಉತ್ತೇಜಿಸುವುದು

ಸರಸ್ವತಿ ಬುಯ್ಯಾಲ ನೇತೃತ್ವದ ಡ್ಯಾನ್ಸಿಂಗ್ ಆಟಮ್ಸ್, ಅನಿಮೇಷನ್ ಮತ್ತು ಎವಿಜಿಸಿ ಕ್ಷೇತ್ರಗಳಲ್ಲಿ ವೈವಿಧ್ಯತೆಯನ್ನು ಉತ್ತೇಜಿಸುವಲ್ಲಿ ಮತ್ತು ಮಹಿಳೆಯರನ್ನು ಸಬಲೀಕರಣಗೊಳಿಸುವಲ್ಲಿ ಮುಂಚೂಣಿಯಲ್ಲಿದೆ. ಗುರಿ ಕೇಂದ್ರಿತ  ಉಪಕ್ರಮಗಳ ಮೂಲಕ, ಸ್ಟುಡಿಯೋ ಮಹಿಳಾ ಸೃಷ್ಟಿಕರ್ತರನ್ನು ಬೆಂಬಲಿಸಿದೆ, ಅವರ ಪ್ರತಿಭೆಯನ್ನು ಪ್ರದರ್ಶಿಸಲು ಮತ್ತು ಉದ್ಯಮಕ್ಕೆ ಅರ್ಥಪೂರ್ಣವಾಗಿ ಕೊಡುಗೆ ನೀಡಲು ವೇದಿಕೆಗಳನ್ನು ಒದಗಿಸಿದೆ. ವೇವ್ಸ್ ಎಎಫ್ ಸಿ ಸ್ಪರ್ಧೆಯು ಹೆಮ್ಮೆಯಿಂದ ಭಾಗವಹಿಸುವ ಹಲವಾರು ಪ್ರತಿಭಾವಂತ ಮಹಿಳೆಯರನ್ನು  ಒಳಗೊಂಡಿದೆ, ಅವರ ಸೃಜನಶೀಲ ಕೃತಿಗಳು ಕಥೆ ಹೇಳುವ ಮಾನದಂಡಗಳನ್ನು ಮರುರೂಪಿಸುತ್ತಿವೆ.

 

*****


(Release ID: 2101259) Visitor Counter : 22