ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಗಣರಾಜ್ಯೋತ್ಸವ ದಿನ 2025ರ ಅಂಗವಾಗಿ 942 ಪೊಲೀಸ್, ಅಗ್ನಿ ಶಾಮಕ, ಗೃಹ ರಕ್ಷಕ ಮತ್ತು ನಾಗರಿಕ ರಕ್ಷಣಾ ಮತ್ತು ಕರಕ್ಷನಲ್ ಸೇವಾ ಸಿಬ್ಬಂದಿಗೆ ಶೌರ್ಯ ಮತ್ತು ಸೇವಾ ಪದಕಗಳು

Posted On: 25 JAN 2025 8:37AM by PIB Bengaluru

ಗಣರಾಜ್ಯೋತ್ಸವ ದಿನ 2025ರ ಅಂಗವಾಗಿ ಒಟ್ಟು 942 ಪೊಲೀಸ್ , ಅಗ್ನಿ ಶಾಮಕ, ಗೃಹ ರಕ್ಷಕ ಮತ್ತು ನಾಗರಿಕ ರಕ್ಷಣಾ (ಎಚ್ ಜಿ &ಸಿಡಿ) ಮತ್ತು ಕರಕ್ಷನಲ್ ಸೇವಾ ಸಿಬ್ಬಂದಿಗೆ ಶೌರ್ಯ ಮತ್ತು ಸೇವಾ ಪದಕಗಳನ್ನು ನೀಡಲಾಗುವುದು.

ಅದರ ವಿವರಗಳು ಈ ಕೆಳಗಿನಂತಿವೆ.: -

ಶೌರ್ಯ ಪದಕಗಳು

ಪದಕಗಳ ಹೆಸರು

ಪ್ರದಾನ ಮಾಡಲಿರುವ ಪದಕಗಳು

ಶೌರ್ಯ ಪದಕ (ಜಿಎಂ)

95*

 

* ಪೊಲೀಸ್ ಸೇವೆ-78 ಮತ್ತು ಆಗ್ನಿ ಶಾಮಕ ಸೇವೆ -17

ಜೀವ ಮತ್ತು ಆಸ್ತಿಯನ್ನು ಉಳಿಸುವಲ್ಲಿ ಅಥವಾ ಅಪರಾಧಗಳನ್ನು ನಿಯಂತ್ರಿಸುವಲ್ಲಿ ಅಥವಾ ಅಪರಾಧಿಗಳನ್ನು ಬಂಧಿಸುವಲ್ಲಿ ಕ್ರಮವಾಗಿ ಅಪರೂಪದ ಶೌರ್ಯ ಪ್ರದರ್ಶನ ಮತ್ತು  ಶೌರ್ಯ ತೋರುವ ಕೃತ್ಯಗಳು ಆಧಾರದ ಮೇಲೆ ಹಾಗೂ ಸಂಬಂಧಪಟ್ಟ ಅಧಿಕಾರಿಯ ಬಾಧ್ಯತೆಗಳು ಮತ್ತು ಕರ್ತವ್ಯಗಳನ್ನು ಪರಿಗಣಿಸಿ ಉಂಟಾಗುವ ಅಪಾಯವನ್ನು ಅಂದಾಜಿಸಿ ಶೌರ್ಯ ಪದಕಗಳನ್ನು (ಜಿಎಂ) ನೀಡಲಾಗುವುದು.

95 ಶೌರ್ಯ ಪ್ರಶಸ್ತಿಗಳಲ್ಲಿ ಹೆಚ್ಚಿನವು ಎಡಪಂಥೀಯ ಉಗ್ರರಿಂದ ಬಾಧಿತವಾದ ಪ್ರದೇಶಗಳಿಂದ 28 ಸಿಬ್ಬಂದಿ, ಜಮ್ಮು ಮತ್ತು ಕಾಶ್ಮೀರ ಪ್ರದೇಶದಿಂದ 28 ಸಿಬ್ಬಂದಿ, ಈಶಾನ್ಯ ರಾಜ್ಯಗಳಿಂದ 03 ಸಿಬ್ಬಂದಿ ಮತ್ತು ಇತರ ಪ್ರದೇಶಗಳಿಂದ 36 ಸಿಬ್ಬಂದಿಗೆ ಅವರ ಶೌರ್ಯ ಕಾರ್ಯಕ್ಕಾಗಿ ಪದಕ ನೀಡಲಾಗುತ್ತಿದೆ.

ಶೌರ್ಯ ಪದಕಗಳು (ಜಿಎಂ):- ಒಟ್ಟು 95 ಶೌರ್ಯ ಪದಕ(ಜಿಎಂ)ಗಳಲ್ಲಿ 78 ಪೊಲೀಸ್ ಸಿಬ್ಬಂದಿ ಮತ್ತು 17 ಅಗ್ನಿ ಶಾಮಕ ಸಿಬ್ಬಂದಿಗೆ ಕ್ರಮವಾಗಿ ಶೌರ್ಯ ಪದಕ ನೀಡಲಾಗುವುದು.

ಸೇವಾ ಪದಗಳು

ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ (ಪಿಎಸ್ ಎಂ) ಅನ್ನು ಸೇವೆಯಲ್ಲಿನ ವಿಶೇಷ ವಿಶಿಷ್ಟ ಸೇವೆಗಾಗಿ ನೀಡಲಾಗುತ್ತದೆ ಮತ್ತು ಪ್ರತಿಭಾನ್ವಿತ ಸೇವಾ ಪದಕ (ಎಂಎಸ್ ಎಂ) ಅನ್ನು ಸಂಪನ್ಮೂಲ ಮತ್ತು ಕರ್ತವ್ಯ ನಿಷ್ಠೆಯನ್ನು ಗುರುತಿಸಿ ಅಮೂಲ್ಯ ಸೇವೆಗಾಗಿ ನೀಡಲಾಗುವುದು.

ಒಟ್ಟು 101 ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ (ಪಿಎಸ್ ಎಂ) ಗಳಲ್ಲಿ, 85 ಪೊಲೀಸ್ ಸೇವೆಗೆ, 05 ಅಗ್ನಿಶಾಮಕ ಸೇವೆಗೆ,  07 ನಾಗರಿಕ ರಕ್ಷಣಾ ಮತ್ತು ಗೃಹ ರಕ್ಷಕ ಸೇವೆಗೆ ಮತ್ತು 04 ಕರಕ್ಷನಲ್ ಸೇವೆಗೆ ನೀಡಲಾಗಿದೆ.

746 ಶ್ರೇಷ್ಠ ಸೇವಾ ಪದಕಗಳಲ್ಲಿ (ಎಂಎಸ್ ಎಂ) 634 ಪೊಲೀಸ್ ಸೇವೆಗೆ, 37 ಅಗ್ನಿಶಾಮಕ ಸೇವೆಗೆ, 39 ನಾಗರಿಕ ರಕ್ಷಣಾ ಮತ್ತು ಗೃಹ ರಕ್ಷಕ ಸೇವೆಗೆ ಮತ್ತು 36 ಕರಕ್ಷನಲ್ ಸೇವೆಗೆ ನೀಡಲಾಗಿದೆ.

ರಾಜ್ಯವಾರು ಪ್ರದಾನ ಮಾಡಲಿರುವ ಪದಕಗಳ ವಿವರಗಳು

ಪದಕದ ಹೆಸರು

ಪೊಲೀಸ್ ಸೇವೆ

ಅಗ್ನಿ ಶಾಮಕ ಸೇವೆ

ನಾಗರಿಕ ರಕ್ಷಣೆ ಮತ್ತು ಗೃಹ ರಕ್ಷಕ ಸೇವೆ

ಕರಕ್ಷನಲ್ ಸೇವೆ

ಒಟ್ಟು

ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕಗಳು (ಪಿಎಸ್ ಎಂ)

(ಒಟ್ಟು ಪ್ರದಾನ ಮಾಡಲಿರುವ ಪದಕಗಳು :101)

 

 

85

05

07

04

101

ಶ್ರೇಷ್ಠ ಸೇವಾ ಪದಕ (ಎಂಎಸ್ ಎಂ)

(ಒಟ್ಟು ಪ್ರದಾನ ಮಾಡಲಿರುವ ಪದಕಗಳು :746)

 

 

634

37

39

36

746

ಪದಕಗಳಿಗೆ ಭಾಜನವಾಗಿರುವವರ ಪಟ್ಟಿ ಕೆಳಗಿನಂತಿದೆ :

ಕ್ರ. ಸಂ

ವಿಷಯ

 

ಪುರಸ್ಕೃತರ ಸಂಖ್ಯೆ

ಅಡಕ

 

1

ಶೌರ್ಯ ಪದಕ(ಜಿಎಂ)

95

ಪಟ್ಟಿ-I

 

2

ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕಗಳು (ಪಿಎಸ್ ಎಂ)

101

ಪಟ್ಟಿ-II

3

ಶ್ರೇಷ್ಠ ಸೇವಾ ಪದಕ (ಎಂಎಸ್ ಎಂ)

746

ಪಟ್ಟಿ -III

 

4

ರಾಜ್ಯಪಾಲರು/ ಪಡೆವಾರು ಪದಕ ಪಡೆದಿರುವವರ ಪಟ್ಟಿ

ಪಟ್ಟಿಯ ಪ್ರಕಾರ

ಪಟ್ಟಿ -IV

 

Click here to view List-I

Click here to view List-II

Click here to view List-III

Click here to view List-IV

 

Details are available atwww.mha.gov.inand https://awards.gov.in.

 

*****

 


(Release ID: 2096043) Visitor Counter : 34