ಸಹಕಾರ ಸಚಿವಾಲಯ
azadi ka amrit mahotsav

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್‌ ಶಾ ಅವರು ಜನವರಿ 24ರಂದು ಮುಂಬೈನಲ್ಲಿ ರಾಷ್ಟ್ರೀಯ ನಗರ ಸಹಕಾರಿ ಹಣಕಾಸು ಮತ್ತು ಅಭಿವೃದ್ಧಿ ನಿಗಮದ (ಎನ್‌ಯುಸಿಎಫ್‌ಡಿಸಿ) ಕಾರ್ಪೊರೇಟ್‌ ಕಚೇರಿಯನ್ನು ಉದ್ಘಾಟಿಸಲಿದ್ದಾರೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಸೆಹ್ಕರ್‌ ಸೇ ಸಮೃದ್ಧಿ ದೃಷ್ಟಿಕೋನವನ್ನು ಮತ್ತಷ್ಟು ಬಲಪಡಿಸಲು ಸಹಕಾರಿ ಕ್ಷೇತ್ರದಲ್ಲಿ ಹಲವಾರು ಮಹತ್ವದ ಉಪಕ್ರಮಗಳನ್ನು ಸಹ ಪ್ರಾರಂಭಿಸಲಾಗುವುದು

ಶ್ರೀ ಅಮಿತ್‌ ಶಾ ಅವರು 2025ರ ಅಂತಾರಾಷ್ಟ್ರೀಯ ಸಹಕಾರಿ ವರ್ಷದ ಚಟುವಟಿಕೆಗಳ ವಾರ್ಷಿಕ ಪಟ್ಟಿಯನ್ನು ಅನಾವರಣಗೊಳಿಸಲಿದ್ದಾರೆ, ದೇಶಾದ್ಯಂತ ಹೊಸದಾಗಿ ರೂಪುಗೊಂಡ 10,000 ವಿವಿಧೋದ್ದೇಶ ಸಹಕಾರ ಸಂಘಗಳಿಗೆ ತರಬೇತಿ ಕಾರ್ಯಕ್ರಮಗಳನ್ನು ಉದ್ಘಾಟಿಸಲಿದ್ದಾರೆ ಮತ್ತು ಪ್ರಾಥಮಿಕ ಸಹಕಾರಿ ಸಂಘಗಳಿಗೆ ಶ್ರೇಯಾಂಕ ಚೌಕಟ್ಟನ್ನು ಪರಿಚಯಿಸಲಿದ್ದಾರೆ

ನಗರ ಸಹಕಾರಿ ಬ್ಯಾಂಕುಗಳು ತಮ್ಮ ಕಾರ್ಯಾಚರಣೆಗಳಲ್ಲಿಎದುರಿಸುತ್ತಿರುವ ಸವಾಲುಗಳನ್ನು ಎದುರಿಸಲು ಎನ್‌ಯುಸಿಎಫ್‌ಡಿಸಿ ಎಂಬ ರಕ್ಷಣಾ ಸಂಸ್ಥೆಯನ್ನು ಸ್ಥಾಪಿಸಲಾಗಿದೆ, ಈ ಉಪಕ್ರಮವು ಸುಮಾರು 1,500 ನಗರ ಸಹಕಾರಿ ಬ್ಯಾಂಕುಗಳಿಗೆ ಅಗತ್ಯ ಐಟಿ ಮೂಲಸೌಕರ್ಯ ಮತ್ತು ಕಾರ್ಯಾಚರಣೆ ಬೆಂಬಲದೊಂದಿಗೆ ಸಹಾಯ ಮಾಡುತ್ತದೆ

ಪ್ರಾಥಮಿಕ ಸಹಕಾರಿ ಸಂಘಗಳ ಶ್ರೇಯಾಂಕ ಚೌಕಟ್ಟು ಸೊಸೈಟಿಗಳಲ್ಲಿ ಪಾರದರ್ಶಕತೆ, ದಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, ಜೊತೆಗೆ ಅವುಗಳ ವಿಶ್ವಾಸಾರ್ಹತೆ ಮತ್ತು ಸ್ಪರ್ಧಾತ್ಮಕ ಸಾಮರ್ಥ್ಯ‌ವನ್ನು ಸುಧಾರಿಸುತ್ತದೆ

Posted On: 22 JAN 2025 4:13PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್‌ ಶಾ ಅವರು ಜನವರಿ 24ರಂದು ಮುಂಬೈನಲ್ಲಿರಾಷ್ಟ್ರೀಯ ನಗರ ಸಹಕಾರಿ ಹಣಕಾಸು ಮತ್ತು ಅಭಿವೃದ್ಧಿ ನಿಗಮದ (ಎನ್‌ಯುಸಿಎಫ್‌ಡಿಸಿ) ಕಾರ್ಪೊರೇಟ್‌ ಕಚೇರಿಯನ್ನು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಸೆಹ್ಕರ್‌ ಸೇ ಸಮೃದ್ಧಿ ದೃಷ್ಟಿಕೋನವನ್ನು ಮತ್ತಷ್ಟು ಬಲಪಡಿಸಲು ಸಹಕಾರಿ ಕ್ಷೇತ್ರದಲ್ಲಿ ಹಲವಾರು ಪ್ರಮುಖ ಉಪಕ್ರಮಗಳನ್ನು ಪ್ರಾರಂಭಿಸಲಾಗುವುದು. ಶ್ರೀ ಅಮಿತ್‌ ಶಾ ಅವರು ಅಂತಾರಾಷ್ಟ್ರೀಯ ಸಹಕಾರ ವರ್ಷ 2025ರ ಚಟುವಟಿಕೆಗಳ ವಾರ್ಷಿಕ ಕ್ಯಾಲೆಂಡರ್‌ಅನ್ನು ಬಿಡುಗಡೆ ಮಾಡಲಿದ್ದಾರೆ, ದೇಶಾದ್ಯಂತ ಹೊಸದಾಗಿ ರೂಪುಗೊಂಡ 10,000 ವಿವಿಧೋದ್ದೇಶ ಸಹಕಾರ ಸಂಘಗಳಿಗೆ ತರಬೇತಿ ಕಾರ್ಯಕ್ರಮಗಳನ್ನು ಉದ್ಘಾಟಿಸಲಿದ್ದಾರೆ ಮತ್ತು ಪ್ರಾಥಮಿಕ ಸಹಕಾರಿ ಸಂಘಗಳಿಗೆ ಶ್ರೇಯಾಂಕ ಚೌಕಟ್ಟನ್ನು ಪರಿಚಯಿಸಲಿದ್ದಾರೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಮತ್ತು ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್‌ ಶಾ ಅವರ ದೂರದೃಷ್ಟಿ ಮತ್ತು ಅವಿರತ ಪ್ರಯತ್ನಗಳ ಫಲವಾಗಿ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ನಗರ ಸಹಕಾರಿ ಬ್ಯಾಂಕುಗಳು ತಮ್ಮ ವ್ಯವಹಾರದಲ್ಲಿ ಎದುರಿಸುತ್ತಿರುವ ತೊಂದರೆಗಳನ್ನು ಪರಿಹರಿಸಲು ರಾಷ್ಟ್ರೀಯ ನಗರ ಸಹಕಾರಿ ಹಣಕಾಸು ಮತ್ತು ಅಭಿವೃದ್ಧಿ ನಿಗಮ (ಎನ್‌ಯುಸಿಎಫ್‌ಡಿಸಿ) ಎಂಬ ರಕ್ಷಣಾ ಸಂಸ್ಥೆಯನ್ನು (ಯುಒ) ಸ್ಥಾಪಿಸಲು ಸರ್ಕಾರ ಅನುಮೋದನೆ ನೀಡಿದೆ. ಇದು ಸುಮಾರು 1,500 ನಗರ ಸಹಕಾರಿ ಬ್ಯಾಂಕುಗಳಿಗೆ (ಯುಸಿಬಿ) ಅಗತ್ಯ ಐಟಿ ಮೂಲಸೌಕರ್ಯ ಮತ್ತು ಕಾರ್ಯಾಚರಣೆಗಳೊಂದಿಗೆ ಸಹಾಯ ಮಾಡುತ್ತದೆ. ಆರ್‌ಬಿಐ ಅನುಮೋದನೆಯ ಪ್ರಕಾರ, 300 ಕೋಟಿ ರೂ.ಗಳ ಪಾವತಿಸಿದ ಬಂಡವಾಳವನ್ನು ಸ್ವೀಕರಿಸಿದ ನಂತರ, ಕಾರ್ಯಗಳು ಮತ್ತು ಚಟುವಟಿಕೆಗಳನ್ನು ಆರ್‌ಬಿಐ ನಿರ್ಧರಿಸಬೇಕಾದ ಸ್ವಯಂ-ನಿಯಂತ್ರಕ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ. ನೋಂದಣಿಯ ದಿನಾಂಕದಿಂದ ಒಂದು ವರ್ಷದ ನಂತರ ಅಂದರೆ 2025 ರ ಫೆಬ್ರವರಿ 8ರ ಒಳಗೆ ಪಾವತಿಸಿದ ಬಂಡವಾಳವನ್ನು ಪಡೆಯುವಂತೆ ಆರ್‌ಬಿಐ ಸಂಸ್ಥೆಗೆ ನಿರ್ದೇಶನ ನೀಡಿತು.

ಅಂತಾರಾಷ್ಟ್ರೀಯ ಸಹಕಾರಿ ವರ್ಷ 2025ರ ವಾರ್ಷಿಕ ಚಟುವಟಿಕೆಗಳ ಪಟ್ಟಿಯನ್ನು ಬಿಡುಗಡೆ ಮಾಡುವುದರಿಂದ ಸಹಕಾರಿ ಚಳವಳಿಗೆ ಹೊಸ ಆಯಾಮವನ್ನು ನೀಡುತ್ತದೆ. ಈ ಚಟುವಟಿಕೆಗಳ ಮೂಲಕ, ದೇಶಾದ್ಯಂತ ಸಹಕಾರಿ ಸಂಸ್ಥೆಗಳ ಭಾಗವಹಿಸುವಿಕೆಯನ್ನು ಹೆಚ್ಚಿಸಲಾಗುವುದು ಮತ್ತು ಜಾಗತಿಕ ಮಟ್ಟದಲ್ಲಿಸಹಕಾರಿ ಸಂಸ್ಥೆಗಳನ್ನು ಬಲಪಡಿಸಲಾಗುವುದು.

ಸಹಕಾರಿ ವರ್ಷದ ಚಟುವಟಿಕೆಗಳು ಜಾಗತಿಕ ಮಟ್ಟದಲ್ಲಿ ಸಹಕಾರದ ಮಹತ್ವವನ್ನು ಅರಿತುಕೊಳ್ಳಲು ಸಹಾಯ ಮಾಡುತ್ತದೆ. ಇದು ವಿವಿಧ ದೇಶಗಳ ನಡುವೆ ಅನುಭವ ಮತ್ತು ಉತ್ತಮ ಅಭ್ಯಾಸಗಳ ವಿನಿಮಯಕ್ಕೆ ಕಾರಣವಾಗುತ್ತದೆ, ಇದು ಭಾರತದಲ್ಲಿ ಸಹಕಾರಿ ಸಂಸ್ಥೆಗಳನ್ನು ಮತ್ತಷ್ಟು ಬಲಪಡಿಸುತ್ತದೆ. ಸಹಕಾರಿ ಸಂಸ್ಥೆಗಳ ಮೂಲಕ ಗ್ರಾಮೀಣಾಭಿವೃದ್ಧಿ, ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಬೆಳವಣಿಗೆಯ ಗುರಿಗಳನ್ನು ಸಾಧಿಸಲು ಇದು ವೇಗವರ್ಧಕವಾಗಲಿದೆ. ಅದೇ ಸಮಯದಲ್ಲಿ, ಇದು ಸ್ಥಳೀಯ ಸಮುದಾಯಗಳನ್ನು ಸಬಲೀಕರಣಗೊಳಿಸಲು ಮತ್ತು ಅವರ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಸಹಾಯ ಮಾಡುತ್ತದೆ.

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್‌ ಶಾ ಅವರು ಹೊಸದಾಗಿ ರೂಪುಗೊಂಡ 10,000 ವಿವಿಧೋದ್ದೇಶ ಸಹಕಾರ ಸಂಘಗಳ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ, ಇದು ಈ ಸಂಘಗಳಿಗೆ ಅಗತ್ಯ ಸಾಮರ್ಥ್ಯ‌ಗಳೊಂದಿಗೆ ಸಬಲೀಕರಣಗೊಳಿಸುವ ಮೂಲಕ ಅವುಗಳ ದಕ್ಷ ತೆಯನ್ನು ಹೆಚ್ಚಿಸುತ್ತದೆ. ಇದರ ಅಡಿಯಲ್ಲಿ, ಆಧುನಿಕ ನಿರ್ವಹಣೆ, ಹಣಕಾಸು ಯೋಜನೆ, ಡಿಜಿಟಲೀಕರಣ ಮತ್ತು ಉತ್ತಮ ಆಡಳಿತದ ಬಗ್ಗೆ ಸಹಕಾರಿ ಸಂಸ್ಥೆಗಳಿಗೆ ವಿಶೇಷ ತರಬೇತಿ ನೀಡಲಾಗುವುದು. 11,352 ವಿವಿಧೋದ್ದೇಶ ಸಹಕಾರ ಸಂಘಗಳಿಗೆ (ಎಂಪಿಎಸಿಎಸ್‌) ಒಟ್ಟು 1,135 ತರಬೇತಿ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಪ್ರತಿ ಕಾರ್ಯಕ್ರಮದಲ್ಲಿ50 ಭಾಗವಹಿಸುವವರಿಗೆ ತರಬೇತಿ ನೀಡುವ ಗುರಿ ಹೊಂದಿದ್ದು, ಒಟ್ಟು 56,760 ಜನರಿಗೆ ತರಬೇತಿ ನೀಡುವ ಗುರಿ ಹೊಂದಲಾಗಿದೆ. ತರಬೇತಿಯು 33 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಿದ್ದು, 43 ಮಾಸ್ಟರ್‌ ತರಬೇತುದಾರರು ಸಾಹಯ ಮಾಡಲಿದ್ದಾರೆ.

ಶ್ರೀ ಅಮಿತ್‌ ಶಾ ಅವರು ಪ್ರಾಥಮಿಕ ಸಹಕಾರಿಗಳ ಶ್ರೇಯಾಂಕ ಚೌಕಟ್ಟನ್ನು ಉದ್ಘಾಟಿಸಲಿದ್ದಾರೆ, ಇದು ಸಹಕಾರಿ ಸಂಸ್ಥೆಗಳ ಕಾರ್ಯಕ್ಷ ಮತೆಯ ಮೌಲ್ಯಮಾಪನಕ್ಕೆ ಮೀಸಲಾದ ವ್ಯವಸ್ಥೆಯನ್ನು ಒದಗಿಸುತ್ತದೆ. ಈ ಶ್ರೇಯಾಂಕ ಚೌಕಟ್ಟು ಸಮಿತಿಗಳಿಗೆ ಪಾರದರ್ಶಕತೆ, ದಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, ಆ ಮೂಲಕ ಅವುಗಳ ವಿಶ್ವಾಸಾರ್ಹತೆ ಮತ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುತ್ತದೆ. ಈ ಶ್ರೇಯಾಂಕ ಚೌಕಟ್ಟು ಪ್ರಾಥಮಿಕ ಸಹಕಾರಿ ಸಂಸ್ಥೆಗಳನ್ನು ಸಮರ್ಥ ಮತ್ತು ಪಾರದರ್ಶಕವಾಗಿಸುವ ನಿಟ್ಟಿನಲ್ಲಿಅಂತರ ಗುರುತಿಸುವಿಕೆ, ಮೌಲ್ಯಮಾಪನ, ನಿರ್ಧಾರ ತೆಗೆದುಕೊಳ್ಳುವ ವ್ಯವಸ್ಥೆಗೆ ವೇದಿಕೆಯನ್ನು ಒದಗಿಸುತ್ತದೆ. ಇದೇ ಸಂದರ್ಭದಲ್ಲಿ ಶ್ರೀ ಅಮಿತ್‌ ಶಾ ಅವರು ಸಹಕಾರ ಸಚಿವಾಲಯ ಮತ್ತು ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿಪ್ರಮುಖ ಕ್ಷೇತ್ರಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಮತ್ತು ಕಾರ್ಯನಿರ್ವಹಿಸುತ್ತಿರುವ ಸಹಕಾರಿ ಸಂಸ್ಥೆಗಳನ್ನು ಸನ್ಮಾನಿಸಲಿದ್ದಾರೆ.

 

*****


(Release ID: 2095509) Visitor Counter : 32