ಪ್ರಧಾನ ಮಂತ್ರಿಯವರ ಕಛೇರಿ
ಭಾರತದ ನೆರವಿನೊಂದಿಗೆ ನಿರ್ಮಿಸಿದ ಜಾಫ್ನಾದ ಐತಿಹಾಸಿಕ ಸಾಂಸ್ಕೃತಿಕ ಕೇಂದ್ರಕ್ಕೆ ‘ತಿರುವಳ್ಳುವರ್ ಸಾಂಸ್ಕೃತಿಕ ಕೇಂದ್ರ’ ಎಂದು ಹೆಸರಿಸಿದ್ದನ್ನು ಸ್ವಾಗತಿಸಿದ ಪ್ರಧಾನಮಂತ್ರಿ ಮೋದಿ
ಪ್ರಕಟಣಾ ದಿನಾಂಕ:
18 JAN 2025 9:14PM by PIB Bengaluru
ಭಾರತದ ನೆರವಿನಿಂದ ನಿರ್ಮಿಸಲಾದ ಜಾಫ್ನಾದ ಐತಿಹಾಸಿಕ ಸಾಂಸ್ಕೃತಿಕ ಕೇಂದ್ರಕ್ಕೆ ‘ತಿರುವಳ್ಳುವರ್ ಸಾಂಸ್ಕೃತಿಕ ಕೇಂದ್ರ’ ಎಂದು ಹೆಸರಿಸಿರುವುದನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸ್ವಾಗತಿಸಿದ್ದಾರೆ.
ಶ್ರೀಲಂಕಾದಲ್ಲಿ ಭಾರತದ ರಾಯಭಾರ ಕಚೇರಿ ತನ್ನ ಎಕ್ಸ್ ಹ್ಯಾಂಡಲ್‌ನಲ್ಲಿ ಮಾಡಿದ ಪೋಸ್ಟ್ ಗೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ:
“ಭಾರತದ ನೆರವಿನೊಂದಿಗೆ ಜಾಫ್ನಾದಲ್ಲಿ ನಿರ್ಮಿಸಲಾದ ಐತಿಹಾಸಿಕ ಸಾಂಸ್ಕೃತಿಕ ಕೇಂದ್ರಕ್ಕೆ ‘ತಿರುವಳ್ಳುವರ್ ಸಾಂಸ್ಕೃತಿಕ ಕೇಂದ್ರ’ ಎಂದು ಹೆಸರು ಇಟ್ಟಿರುವುದನ್ನು ಸ್ವಾಗತಿಸುತ್ತೇವೆ. ಶ್ರೇಷ್ಠ ತಿರುವಳ್ಳುವರ್ ಅವರಿಗೆ ಗೌರವ ಸಲ್ಲಿಸುವುದರ ಜೊತೆಗೆ, ಇದು ಭಾರತ ಮತ್ತು ಶ್ರೀಲಂಕಾ ಜನರ ನಡುವಿನ ಆಳವಾದ ಸಾಂಸ್ಕೃತಿಕ, ಭಾಷಾ, ಐತಿಹಾಸಿಕ ಮತ್ತು ನಾಗರಿಕ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ” ಎಂದು ಬರೆದುಕೊಂಡಿದ್ದಾರೆ.
*****
(ಪ್ರಕಟಣೆ ಐ.ಡಿ.: 2094401)
ವಿಸಿಟರ್ ಕೌಂಟರ್ : 74
ಪ್ರಕಟಣೆಯನ್ನು ಇದರಲ್ಲಿ ಓದಿ:
Odia
,
Malayalam
,
English
,
Urdu
,
हिन्दी
,
Marathi
,
Bengali
,
Assamese
,
Manipuri
,
Punjabi
,
Gujarati
,
Tamil
,
Telugu