ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ
azadi ka amrit mahotsav

ಸದಸ್ಯರಿಗೆ ಸೇವೆಗಳ ಪೂರೈಕೆಗಳನ್ನು ಹೆಚ್ಚಿಸಲು ಮತ್ತು ಜೀವನದ ಸುಲಭತೆಯ ವ್ಯವಸ್ಥೆಗಳನ್ನು ಖಚಿತಪಡಿಸಿಕೊಳ್ಳಲು ನೌಕರರ ಭವಿಷ್ಯ ನಿಧಿ ಸಂಸ್ಥೆಯು ಭವಿಷ್ಯ ನಿಧಿ ವರ್ಗಾವಣೆ ಪ್ರಕ್ರಿಯೆಯನ್ನು ಸರಳಗೊಳಿಸಿದೆ

Posted On: 19 JAN 2025 11:37AM by PIB Bengaluru

ತನ್ನ ಸದಸ್ಯರಿಗೆ ಸುಲಭವಾದ ರೀತಿಯಲ್ಲಿ ಕೆಲಸವನ್ನು ಖಚಿತಪಡಿಸಿಕೊಳ್ಳಲು, ಉದ್ಯೋಗ ಬದಲಾವಣೆಯ ಸಮಯದಲ್ಲಿ ಭವಿಷ್ಯ ನಿಧಿ ಖಾತೆಯ ವರ್ಗಾವಣೆ ಪ್ರಕ್ರಿಯೆಯನ್ನು ನೌಕರರ ಭವಿಷ್ಯ ನಿಧಿ ಸಂಸ್ಥೆಯು ಸರಳಗೊಳಿಸಿದೆ, ಇದರಲ್ಲಿ ಹೆಚ್ಚಿನ ಸಂದರ್ಭಗಳಲ್ಲಿ ಹಿಂದಿನ ಅಥವಾ ಪ್ರಸ್ತುತ ಉದ್ಯೋಗದಾತರ ಮೂಲಕ ಆನ್‌ಲೈನ್ ವರ್ಗಾವಣೆ ಕ್ಲೈಮ್‌ಗಳನ್ನು ಮಾಡುವ ಅಗತ್ಯವನ್ನು ತೆಗೆದುಹಾಕಲಾಗಿದೆ. ಪರಿಷ್ಕೃತ ನೂತನ ಪ್ರಕ್ರಿಯೆಯ ಅಳವಡಿಸಿವಿಕೆಯೊಂದಿಗೆ, ಭವಿಷ್ಯದಲ್ಲಿ 1.30 ಕೋಟಿ ಒಟ್ಟು ವರ್ಗಾವಣೆ ಕ್ಲೈಮ್‌ ಗಳಲ್ಲಿ 1.20 ಕೋಟಿಗೂ ಹೆಚ್ಚು ಅಂದರೆ ಒಟ್ಟು ಕ್ಲೈಮ್‌ ಗಳಲ್ಲಿನ  94% ರಷ್ಟನ್ನು ಉದ್ಯೋಗದಾತರ ಹಸ್ತಕ್ಷೇಪದ ಅಗತ್ಯವಿಲ್ಲದೆ ನೇರವಾಗಿ ನೌಕರರ ಭವಿಷ್ಯ ನಿಧಿ ಸಂಸ್ಥೆ ಗೆ ರವಾನಿಸಲಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.

ಪ್ರಸ್ತುತ, ನೂತನ ಸರಳ ವ್ಯವಸ್ಥೆಯ ಸಲುವಾಗಿ, ಕೆಲವು ಸಂದರ್ಭಗಳಲ್ಲಿ ಸದಸ್ಯರು ಉದ್ಯೋಗವನ್ನು ತೊರೆದು ಮತ್ತೊಂದು ಸಂಸ್ಥೆಗೆ ಸೇರಿದಾಗ ವರ್ಗಾವಣೆ ಕ್ಲೈಮ್‌ ಗಳಿಗೆ ಉದ್ಯೋಗದಾತರಿಂದ ಯಾವುದೇ ಅನುಮೋದನೆ ಅಗತ್ಯವಿಲ್ಲ. ಏಪ್ರಿಲ್ 1, 2024 ರಿಂದ ಇಲ್ಲಿಯವರೆಗೆ, ಸುಮಾರು 1.30 ಕೋಟಿ ವರ್ಗಾವಣೆ ಕ್ಲೈಮ್‌ ಗಳನ್ನು ನೌಕರರ ಭವಿಷ್ಯ ನಿಧಿ ಸಂಸ್ಥೆ ಆನ್‌ಲೈನ್ ಮೋಡ್‌ನಲ್ಲಿ ಸ್ವೀಕರಿಸಿದೆ. ಅದರಲ್ಲಿ ಸುಮಾರು, 45 ಲಕ್ಷ ಕ್ಲೈಮ್‌ ಗಳು ಸ್ವಯಂ-ರಚಿತ ವರ್ಗಾವಣೆ ಕ್ಲೈಮ್‌ ಗಳಾಗಿವೆ, ಇದು ಒಟ್ಟು ವರ್ಗಾವಣೆ ಕ್ಲೈಮ್‌ ಗಳ ಸಂಖ್ಯೆಯಲ್ಲಿ 34.5% ರಷ್ಟಾಗಿದೆ.

ಈ ಸರಳೀಕೃತ ಪ್ರಕ್ರಿಯೆಯು ಸದಸ್ಯರು ಸಲ್ಲಿಸುವ ಕ್ಲೈಮ್‌ ಗಳ ಒಟ್ಟಾರೆ (ಟರ್ನ್‌ಅರೌಂಡ್) ಸಮಯವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ಇದು ಸದಸ್ಯರ ಕುಂದುಕೊರತೆಗಳನ್ನು (ಪ್ರಸ್ತುತ ಒಟ್ಟು ಕುಂದುಕೊರತೆಗಳಲ್ಲಿ 17% ರಷ್ಟು ಕೇವಲ ವರ್ಗಾವಣೆ ಸಂಬಂಧಿತ ಸಮಸ್ಯೆಗಳಿಗೆ ಸಂಬಂಧಿಸಿದೆ) ಮತ್ತು ಅನುಗುಣವಾದ ವಿಫಲತೆಗಳನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ಅಂತಹ ಪ್ರಕರಣಗಳನ್ನು ಅನುಮೋದಿಸುವ ದೊಡ್ಡ ಕೆಲಸದ ಹೊರೆ ಹೊಂದಿರುವ ದೊಡ್ಡ ಉದ್ಯೋಗದಾತರು ವ್ಯವಹಾರ ಮಾಡುವ ವ್ಯವಸ್ಥೆಯ ಸುಲಭತೆಯಲ್ಲಿ ಗಮನಾರ್ಹ ಸುಧಾರಣೆಯನ್ನು ಹೊಂದಿರುತ್ತಾರೆ.

ಈ ಪರಿಷ್ಕೃತ ಕಾರ್ಯವಿಧಾನವನ್ನು ಜಾರಿಗೆ ತಂದ ನಂತರ, ವರ್ಗಾವಣೆ ಕ್ಲೈಮ್‌ ಗಳನ್ನು ನೌಕರರ ಭವಿಷ್ಯ ನಿಧಿ ಸಂಸ್ಥೆ ನೇರವಾಗಿ ಪ್ರಕ್ರಿಯೆಗೊಳಿಸುತ್ತದೆ, ಸದಸ್ಯರಿಗೆ ಸೇವೆಯನ್ನು ವೇಗಗೊಳಿಸುತ್ತದೆ. ಈ ಸುಧಾರಣೆಗಳು ಪ್ರಕ್ರಿಯೆಗಳನ್ನು ಸುಗಮಗೊಳಿಸುವುದಲ್ಲದೆ, ನೌಕರರ ಭವಿಷ್ಯ ನಿಧಿ ಸಂಸ್ಥೆ ಸೇವೆಗಳಲ್ಲಿ ಹೆಚ್ಚಿನ ನಂಬಿಕೆ ಮತ್ತು ವಿಶ್ವಾಸವನ್ನು ಬೆಳೆಸಲು ಸಹಾಯ ಮಾಡುತ್ತದೆ

ಈ ನೂತನ  ಉಪಕ್ರಮಗಳು,  ಪ್ರಕ್ರಿಯೆಗಳನ್ನು ಸರಳೀಕರಿಸುವ ಮತ್ತು ಸದಸ್ಯರಿಗೆ ಜೀವನ ವ್ಯವಸ್ಥೆ ಸುಲಭಗೊಳಿಸುವ,  ನೌಕರರ ಭವಿಷ್ಯ ನಿಧಿ ಸಂಸ್ಥೆಯ ದಕ್ಷತೆಯನ್ನು ಸುಧಾರಿಸುವ ಕೇಂದ್ರ ಸರ್ಕಾರದ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ. ತಂತ್ರಜ್ಞಾನವನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಮತ್ತು ಸದಸ್ಯ ಸ್ನೇಹಿ ನೀತಿಗಳನ್ನು ಪರಿಚಯಿಸುವ ಮೂಲಕ, ನೌಕರರ ಭವಿಷ್ಯ ನಿಧಿ ಸಂಸ್ಥೆ ತನ್ನ ಸದಸ್ಯರಿಗೆ ತಡೆರಹಿತ ಮತ್ತು ಸುರಕ್ಷಿತ ಸೇವೆಗಳನ್ನು ನೀಡುವ ಗುರಿಯನ್ನು ಹೊಂದಿದೆ.

 

*****
 


(Release ID: 2094272) Visitor Counter : 27