ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿ ಅವರು ಜನವರಿ 13, 2025 ರಂದು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲಿದ್ದಾರೆ ಮತ್ತು ಸೋನಾಮಾರ್ಗ್ ಸುರಂಗ ಯೋಜನೆಯನ್ನು ಉದ್ಘಾಟಿಸಲಿದ್ದಾರೆ
ಸೋನಮಾರ್ಗ್ ಸುರಂಗವು ಶ್ರೀನಗರ ಮತ್ತು ಸೋನಾಮಾರ್ಗ್ ನಡುವೆ ಲೇಹ್ ಗೆ ಹೋಗುವ ಮಾರ್ಗದಲ್ಲಿ ಎಲ್ಲಾ ಹವಾಮಾನ ಕಾಲಾವಧಿಯಲ್ಲಿ ಸಂಪರ್ಕ ಒದಗಿಸುತ್ತದೆ
ಯೋಜನೆಯು ಆಯಕಟ್ಟಿನ ನಿರ್ಣಾಯಕ ಲಡಾಖ್ ಪ್ರದೇಶಕ್ಕೆ ಸುರಕ್ಷಿತ ಮತ್ತು ಅಡೆತಡೆಯಿಲ್ಲದ ಪ್ರವೇಶವನ್ನು ಖಚಿತಪಡಿಸುತ್ತದೆ
ಯೋಜನೆಯು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ನಾದ್ಯಂತ ರಕ್ಷಣಾ ಲಾಜಿಸ್ಟಿಕ್ಸ್ ಅನ್ನು ಉತ್ತೇಜಿಸುತ್ತದೆ, ಆರ್ಥಿಕ ಬೆಳವಣಿಗೆ ಮತ್ತು ಸಾಮಾಜಿಕ-ಸಾಂಸ್ಕೃತಿಕ ಏಕೀಕರಣವನ್ನು ಹೆಚ್ಚಿಸುತ್ತದೆ
ಸೋನಾಮಾರ್ಗ್ ಅನ್ನು ವರ್ಷಪೂರ್ತಿ ತಾಣವಾಗಿ ಪರಿವರ್ತಿಸುವ ಮೂಲಕ ಪ್ರವಾಸೋದ್ಯಮವು ಪ್ರಮುಖ ಉತ್ತೇಜನವನ್ನು ಪಡೆಯುತ್ತದೆ
Posted On:
11 JAN 2025 5:41PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜನವರಿ 13, 2025 ರಂದು ಜಮ್ಮು ಮತ್ತು ಕಾಶ್ಮೀರದ ಸೋನಾಮಾರ್ಗ್‌ಗೆ ಭೇಟಿ ನೀಡಲಿದ್ದಾರೆ. ಬೆಳಿಗ್ಗೆ 11:45ರ ಸುಮಾರಿಗೆ, ಅವರು ಸೋನಾಮಾರ್ಗ್ ಸುರಂಗಕ್ಕೆ ಭೇಟಿ ನೀಡಲಿದ್ದು, ಆನಂತರ ಅದರ ಉದ್ಘಾಟನೆ ಕಾರ್ಯ ನಡೆಯಲಿದೆ. ಇದೇ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಲಿದ್ದಾರೆ.
ಸುಮಾರು 12 ಕಿ.ಮೀ ಉದ್ದದ ಸೋನಾಮಾರ್ಗ್ ಸುರಂಗ ಯೋಜನೆಯನ್ನು 2,700 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದು ಸೋನಾಮಾರ್ಗ್ ಮುಖ್ಯ ಸುರಂಗ, ಜೊತೆಗೆ ಎಗ್ರೆಸ್ ಟನಲ್ ಮತ್ತು ಅಪ್ರೋಚ್ ರಸ್ತೆಗಳನ್ನು ಕೂಡ ಒಳಗೊಂಡಿದೆ. ಸಮುದ್ರ ಮಟ್ಟದಿಂದ 8,650 ಅಡಿ ಎತ್ತರದಲ್ಲಿ ನೆಲೆಗೊಂಡಿರುವ ಈ ಸುರಂಗ ಮಾರ್ಗ ಶ್ರೀನಗರ ಮತ್ತು ಸೋನಾಮಾರ್ಗ್ ನಡುವೆ ಲೇಹ್ ಗೆ ಹೋಗುವ ಮಾರ್ಗದಲ್ಲಿ ಎಲ್ಲಾ ಹವಾಮಾನ ಸಂಪರ್ಕವನ್ನು ವರ್ಷ ಪೂರ್ತಿ ಒದಗಿಸುತ್ತದೆ. ಭೂಕುಸಿತ ಮತ್ತು ಹಿಮಪಾತದ ಮಾರ್ಗಗಳನ್ನು ಬೈಪಾಸ್ ಮಾಡುತ್ತದೆ ಮತ್ತು ಆಯಕಟ್ಟಿನ ನಿರ್ಣಾಯಕ ಲಡಾಖ್ ಪ್ರದೇಶಕ್ಕೆ ಸುರಕ್ಷಿತ ಮತ್ತು ಅಡೆತಡೆಯಿಲ್ಲದ ಪ್ರವೇಶವನ್ನು ಖಚಿತಪಡಿಸುತ್ತದೆ. ಇದು ಸೋನಾಮಾರ್ಗ್ ಅನ್ನು ವರ್ಷಪೂರ್ತಿ ತಾಣವಾಗಿ ಪರಿವರ್ತಿಸುವ ಮೂಲಕ ಪ್ರವಾಸೋದ್ಯಮವನ್ನು ಕೂಡ ಉತ್ತೇಜಿಸುತ್ತದೆ. ಚಳಿಗಾಲದ ಪ್ರವಾಸೋದ್ಯಮ, ಸಾಹಸ ಕ್ರೀಡೆಗಳು ಮತ್ತು ಸ್ಥಳೀಯ ಜೀವನೋಪಾಯವನ್ನು ಸಹ ಉತ್ತೇಜಿಸುತ್ತದೆ.
ಜೊಜಿಲಾ ಸುರಂಗದೊಂದಿಗೆ, 2028ರ ವೇಳೆಗೆ ಪೂರ್ಣಗೊಳ್ಳಲು ಹೊಂದಿಸಲಾಗಿದೆ, ಇದು ಮಾರ್ಗದ ಉದ್ದವನ್ನು 49 ಕಿಮೀ ನಿಂದ 43 ಕಿಮೀಗೆ ಕಡಿಮೆ ಮಾಡುತ್ತದೆ ಮತ್ತು ವಾಹನದ ವೇಗವನ್ನು ಗಂಟೆಗೆ 30 ಕಿಮೀ ನಿಂದ ಗಂಟೆಗೆ 70 ಕಿಮೀ ವರೆಗೆ ಹೆಚ್ಚಿಸುತ್ತದೆ. ಶ್ರೀನಗರ ಕಣಿವೆ ಮತ್ತು ಲಡಾಖ್ ನಡುವೆ ತಡೆರಹಿತ ರಾಷ್ಟ್ರೀಯ ಹೆದ್ದಾರಿ-1 ಸಂಪರ್ಕವನ್ನು ಖಚಿತಪಡಿಸುತ್ತದೆ. ಈ ವರ್ಧಿತ ಸಂಪರ್ಕವು ರಕ್ಷಣಾ ಸಾರಿಗೆ ವ್ಯವಸ್ಥೆ (ಲಾಜಿಸ್ಟಿಕ್ಸ್ ) ಯನ್ನು ಉತ್ತೇಜಿಸುತ್ತದೆ. ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ನಾದ್ಯಂತ ಆರ್ಥಿಕ ಬೆಳವಣಿಗೆ ಮತ್ತು ಸಾಮಾಜಿಕ-ಸಾಂಸ್ಕೃತಿಕ ಏಕೀಕರಣವನ್ನು ಕೂಡ ಹೆಚ್ಚಿಸುತ್ತದೆ.
ಈ ನೂತನ ಸುರಂಗ ಮಾರ್ಗ ನಿರ್ಮಾಣ ಕಾರ್ಯದಲ್ಲಿ, ಇಂಜಿನಿಯರಿಂಗ್ ಸಾಧನೆಗೆ ತಮ್ಮ ಕೊಡುಗೆ ನೀಡಿದವರನ್ನು ಅಂಗೀಕರಿಸುವ ಮೂಲಕ ಅತ್ಯಂತ ಕಠಿಣ ಪರಿಸ್ಥಿತಿಗಳಲ್ಲಿ ನಿಖರವಾಗಿ ಕೆಲಸ ಮಾಡಿದ ಸುರಂಗ ನಿರ್ಮಾಣ ಕಾರ್ಮಿಕರನ್ನು ಪ್ರಧಾನಮಂತ್ರಿಯವರು ಈ ಸಂದರ್ಭದಲ್ಲಿ ಭೇಟಿ ಮಾಡಲಿದ್ದಾರೆ.
*****
(Release ID: 2092348)
Visitor Counter : 15
Read this release in:
English
,
Urdu
,
Marathi
,
Hindi
,
Manipuri
,
Bengali
,
Punjabi
,
Gujarati
,
Tamil
,
Telugu
,
Malayalam