ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಭಾರತದ ಮನರಂಜನಾ ಮತ್ತು ಕ್ರಿಯಾಶೀಲ ಉದ್ಯಮದ ಕ್ರಿಯೆಗೆ, ಜಾಗತಿಕ ವೇದಿಕೆಯಲ್ಲಿ ಭಾರತದ ಸೃಜನಶೀಲ ಶಕ್ತಿಯ ಪ್ರದರ್ಶನಕ್ಕೆ ವೇವ್ಸ್‌ಗೆ ಸೇರಲು ಭಾರತದ ಪ್ರಧಾನಮಂತ್ರಿ ಕರೆ


5 ಟ್ರಿಲಿಯನ್ ಡಾಲರ್ ಆರ್ಥಿಕತೆಯತ್ತ ಭಾರತದ ಪಯಣವನ್ನು ಉತ್ತೇಜಿಸುವ ಯುವ ಅದ್ಭುತ ಮತ್ತು ಕ್ರಿಯಾಶೀಲ ಸೃಷ್ಟಿಕರ್ತರ ಕೊಡುಗೆಗಳು: ಶ್ರೀ ನರೇಂದ್ರ ಮೋದಿ

ಭಾರತೀಯ ಚಿತ್ರರಂಗದ ಹಿಂದಿನ ದಿಗ್ಗಜರ ಜನ್ಮ ಶತಮಾನೋತ್ಸವ ಆಚರಣೆ ಭಾಗವಾಗಿ ಅವರ ಪರಂಪರೆಯ ಆಚರಣೆಗೆ ಗೌರವ ನಮನ ಸಲ್ಲಿಸಿದ ಪ್ರಧಾನಮಂತ್ರಿ

Posted On: 29 DEC 2024 1:44PM by PIB Bengaluru

ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ 117ನೇ ಮನ್ ಕಿ ಬಾತ್ ಆವೃತ್ತಿಯಲ್ಲಿ ಭಾರತದ ಸೃಜನಶೀಲ ಮತ್ತು ಮನರಂಜನಾ ವಲಯದ ಪ್ರಮುಖ ಮೈಲಿಗಲ್ಲಿನ ಕುರಿತು ರೋಚಕ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು, ಭಾರತವು ಮುಂದಿನ ವರ್ಷ ಮೊದಲ ಬಾರಿಗೆ 2025ರ ಫೆಬ್ರವರಿ 5-9 ರವರೆಗೆ ವಿಶ್ವ ಆಡಿಯೋ ವಿಷುಯಲ್ ಮನರಂಜನಾ ಶೃಂಗಸಭೆಯನ್ನು (ವೇವ್ಸ್) ಅನ್ನು ಆಯೋಜಿಸಲಿದೆ ಎಂದು ಘೋಷಿಸಿದರು.

ವೇವ್ಸ್ ಶೃಂಗಸಭೆ: ಭಾರತದ ಕ್ರಿಯಾ ಪ್ರತಿಭಾವಂತರಿಗೆ ಒಂದು ಜಾಗತಿಕ ವೇದಿಕೆ

ವಿಶ್ವದ ಆರ್ಥಿಕ ದೈತ್ಯ ಸಂಸ್ಥೆಗಳು ಸೇರುವ ದಾವೋಸ್‌ನಂತಹ ಜಾಗತಿಕ ಶೃಂಗಸಭೆಗಳಿಗೆ ವೇವ್ಸ್ ಶೃಂಗಸಭೆಯನ್ನು ಹೋಲಿಸಿದ ಪ್ರಧಾನಿಮಂತ್ರಿ ಅವರು  "ಭಾರತದ ಸೃಜನಶೀಲ ಪ್ರತಿಭೆಯನ್ನು ಜಗತ್ತಿಗೆ ಪ್ರದರ್ಶಿಸಲು ಇದು ಉತ್ತಮ ಅವಕಾಶವಿದೆ. ಮಾಧ್ಯಮ ಮತ್ತು ಮನರಂಜನಾ ಉದ್ಯಮದ ದೈತ್ಯ ಸಂಸ್ಥೆಗಳು ಮತ್ತು ಸೃಜನಶೀಲರು. ಪ್ರಪಂಚದಾದ್ಯಂತದ ಮನಸ್ಸುಗಳು ಭಾರತದಲ್ಲಿ ಒಗೂಡಲಿವೆ. ಭಾರತವನ್ನು ಜಾಗತಿಕ ಕಂಟೆಂಟ್ ಕ್ರಿಯೇಷನ್  (ವಿಷಯ ಸೃಷ್ಟಿ) ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಈ ಶೃಂಗಸಭೆಯು ಒಂದು ಪ್ರಮುಖ ಹೆಜ್ಜೆಯಾಗಿದೆ.

ಭಾರತದ ಸೃಜನಶೀಲ ಸಮುದಾಯದ ಕ್ರಿಯಾತ್ಮಕ ಮನೋಭಾವವನ್ನು ಪ್ರತಿಬಿಂಬಿಸುವ ವೇವ್ಸ್‌ ರೂಪಿಸುವಲ್ಲಿ ಯುವ ಸೃಷ್ಟಿಕರ್ತರ ಪ್ರಮುಖ ಪಾತ್ರವನ್ನು ಅವರು ಒತ್ತಿ ಹೇಳಿದರು. ಭಾರತವು $ 5 ಟ್ರಿಲಿಯನ್ ಡಾಲರ್‌ ಆರ್ಥಿಕತೆಯತ್ತ ಮುನ್ನಡೆಯುತ್ತಿರುವ ಪ್ರಮುಖ ಚಾಲಕಶಕ್ತಿಯಾಗುತ್ತಿರುವ ಹೊತ್ತಿನಲ್ಲಿ ದೇಶದ ಯುವಕರ ಉತ್ಸಾಹ ಮತ್ತು ಅಭಿವೃದ್ಧಿ ಹೊಂದುತ್ತಿರುವ ಕ್ರಿಯೇಟರ್ಎಕಾನಮಿ (ಸೃಷ್ಟಿಕರ್ತ ಆರ್ಥಿಕತೆಗೆ) ಅವರ ಕೊಡುಗೆಯ ಬಗ್ಗೆ ಅವರು ಹೆಮ್ಮೆ ವ್ಯಕ್ತಪಡಿಸಿದರು.  

"ನೀವು ಯುವ ಸೃಷ್ಟಿಕರ್ತರಾಗಿರಲಿ ಅಥವಾ ಈಗಾಗಲೇ ಹೆಸರು ಮಾಡಿರುವ ಕಲಾವಿದರಾಗಿರಲಿ, ಬಾಲಿವುಡ್ ಅಥವಾ ಪ್ರಾದೇಶಿಕ ಸಿನಿಮಾಕ್ಕೆ ಸಂಬಂಧಿಸಿದವರು, ಟಿವಿ ಉದ್ಯಮದ ವೃತ್ತಿಪರರು, ಅನಿಮೇಷನ್, ಗೇಮಿಂಗ್ ಅಥವಾ ಮನರಂಜನಾ ತಂತ್ರಜ್ಞಾನದಲ್ಲಿ ಪರಿಣಿತರು ಯಾರೇ ಆದರೂ ಅವರು ನಮ್ಮ ವೇವ್ಸ್ ಶೃಂಗಸಭೆಯ ಭಾಗವಾಗಲು ಪ್ರೋತ್ಸಾಹಿಸುತ್ತೇನೆ ಎಂದರು. ಮನರಂಜನೆ ಮತ್ತು ಸೃಜನಶೀಲ ಉದ್ಯಮಗಳಲ್ಲಿನ ಎಲ್ಲಾ ಪಾಲುದಾರರನ್ನು ವೇವ್ಸ್ ನಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಭಾರತದ ಪ್ರಧಾನಮಂತ್ರಿ ಅವರು ಕರೆ ನೀಡಿದರು.

ವೇವ್ಸ್ ಶೃಂಗಸಭೆಯು ಭಾರತದ ಸೃಜನಶೀಲ ಪ್ರತಿಭೆಗಳಿಗೆ ಜಾಗತಿಕ ವೇದಿಕೆಯಾಗಿ ಕಾರ್ಯನಿರ್ವಹಿಸಲು ಸಿದ್ಧವಾಗಿದೆ, ಸಹಯೋಗಗಳನ್ನು ಉತ್ತೇಜಿಸುತ್ತದೆ ಮತ್ತು ವಿಶ್ವದರ್ಜೆಯ ಕಂಟೆಂಟ್ ಕ್ರಿಯೇಷನ್ ಕೇಂದ್ರವಾಗಿ ದೇಶದ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ. ಇದು ಅನಿಮೇಷನ್, ಗೇಮಿಂಗ್, ಮನರಂಜನಾ ತಂತ್ರಜ್ಞಾನ ಮತ್ತು ಪ್ರಾದೇಶಿಕ ಮತ್ತು ಮುಖ್ಯವಾಹಿನಿಯ ಸಿನಿಮಾಗಳಲ್ಲಿ ಭಾರತ ಸಾಧಿಸಿರುವ ಪ್ರಗತಿಯನ್ನು ಎತ್ತಿ ತೋರಿಸುತ್ತದೆ. ಪ್ರಧಾನಮಂತ್ರಿ ಅವರ ಈ ಕರೆಯು, ಭಾರತದ ಸೃಜನಶೀಲ ಆರ್ಥಿಕತೆಯನ್ನು ಪೋಷಿಸಲು ಮತ್ತು ಮಾಧ್ಯಮ ಮತ್ತು ಮನರಂಜನೆಯಲ್ಲಿ ಜಾಗತಿಕ ನಾಯಕನಾಗಿ ತನ್ನ ಸ್ಥಾನವನ್ನು ಗಟ್ಟಿಗೊಳಿಸುವ ಸರ್ಕಾರದ ಬದ್ಧತೆಯನ್ನು ಬಲವಾಗಿ ಪ್ರತಿಪಾದಿಸುತ್ತದೆ.

ಜನ್ಮ ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಚಿತ್ರರಂಗದ ದಂತಕಥೆಗಳಿಗೆ ಗೌರವ

ಪ್ರಧಾನಮಂತ್ರಿ ಅವರು 2024ರಲ್ಲಿ ಭಾರತೀಯ ಚಿತ್ರರಂಗದ ಹಲವಾರು ಅಪ್ರತಿಮ ವ್ಯಕ್ತಿಗಳ 100ನೇ ಜನ್ಮ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿರುವ ದಂತಕಥೆಗಳಿಗೆ ಹೃತ್ಪೂರ್ವಕ ಗೌರವ ನಮನ ಸಲ್ಲಿಸಿದರು. ಅವರು ರಾಜ್ ಕಪೂರ್ ಅವರ ಕಾಲಾತೀತ ಚಲನಚಿತ್ರಗಳ ಮೂಲಕ ಭಾರತದ ಬೌದ್ಧಿಕ ಶಕ್ತಿಯನ್ನು ಪ್ರದರ್ಶಿಸುವಲ್ಲಿ ರಾಜ್ ಕಪೂರ್ ಅವರ ಪಾತ್ರವನ್ನು ನೆನಪಿಸಿಕೊಂಡ ಅವರು, ಮೊಹಮ್ಮದ್ ರಫಿ ಅವರ ಮೋಡಿ ಮಾಡುವ ಧ್ವನಿ ಎಲ್ಲಾ ತಲೆಮಾರುಗಳೊಂದಿಗೆ ಅನುರಣಿಸುತ್ತಲೇ ಇದೆ ಮತ್ತು ತೆಲುಗು ಚಿತ್ರರಂಗವನ್ನು ಅತಿ ಎತ್ತರಕ್ಕೆ ಕೊಂಡೊಯ್ಯುವಲ್ಲಿ ಅಕ್ಕಿನೇನಿ ನಾಗೇಶ್ವರ ರಾವ್ ಅವರ ಕೊಡುಗೆಗಳು ಭಾರತೀಯ ಸಂಪ್ರದಾಯಗಳನ್ನು ಪ್ರತಿಬಿಂಬಿಸುತ್ತದೆ ಎಂದರು.  ಏಕತೆ ಮತ್ತು ಜಾಗೃತಿಗೆ ಪ್ರೇರಣೆ ನೀಡಿದ ತಪನ್ ಸಿನ್ಹಾ ಅವರ ಸಾಮಾಜಿಕ ಪ್ರಜ್ಞೆಯ ಚಲನಚಿತ್ರಗಳನ್ನು ಅವರು ಗೌರವಿಸಿದರು. ಈ ದಂತಕಥೆಗಳು ಭಾರತೀಯ ಚಿತ್ರರಂಗದ ಸುವರ್ಣ ಯುಗವನ್ನು ಹೇಗೆ ರೂಪಿಸಿದವು, ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಹೇಗೆ ಬಲಪಡಿಸಿದವು ಎಂಬುದನ್ನು ಶ್ರೀ  ನರೇಂದ್ರ ಮೋದಿ ಒತ್ತಿ ಹೇಳಿದರು.

55ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆಫ್ ಇಂಡಿಯಾ (ಐಎಫ್ ಎಫ್ ಐ)ದಲ್ಲಿ ರಾಜ್ ಕಪೂರ್, ತಪನ್ ಸಿನ್ಹಾ, ಅಕ್ಕಿನೇನಿ ನಾಗೇಶ್ವರ ರಾವ್ (ಎಎನ್ ಆರ್), ಮತ್ತು ಮೊಹಮ್ಮದ್ ರಫಿ ಅವರ ಅಸಾಧಾರಣ ವ್ಯಕ್ತಿತ್ವಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು, ಅವರ ಚಿತ್ರಗಳ ಪ್ರದರ್ಶನಗಳು ಮತ್ತು ಸಂವಾದಾತ್ಮಕ ಸರಣಿ, ಅವರು ಸಿನಿಮಾ ಜಗತ್ತಿಗೆ ನೀಡಿರುವ ಕೊಡುಗೆಗಳನ್ನು ಹತ್ತಿರದಿಂದ ನೋಡುವ  ಮೂಲಕ ಗೌರವ ಸಲ್ಲಿಸಲಾಯಿತು ಎಂಬುದನ್ನು ಇಲ್ಲಿ ಉಲ್ಲೇಖಿಸಬೇಕು.

 

*****


(Release ID: 2088766) Visitor Counter : 21