ಉಪರಾಷ್ಟ್ರಪತಿಗಳ ಕಾರ್ಯಾಲಯ
ಮಾಜಿ ಪ್ರಧಾನಮಂತ್ರಿ ಡಾ. ಮನಮೋಹನ್ ಸಿಂಗ್ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ ಉಪರಾಷ್ಟ್ರಪತಿ
ಡಾ. ಮನಮೋಹನ್ ಸಿಂಗ್ ಅವರು ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರು ಮತ್ತು 1991ರಲ್ಲಿ ಭಾರತದ ಆರ್ಥಿಕ ಉದಾರೀಕರಣದ ವಾಸ್ತುಶಿಲ್ಪಿ, ಅವರು ನಿರ್ಣಾಯಕ ಪರಿವರ್ತನೆಯ ಮೂಲಕ ನಮ್ಮ ರಾಷ್ಟ್ರವನ್ನು ಧೈರ್ಯದಿಂದ ಮುನ್ನಡೆಸಿದರು : ಎಂದು ಉಪರಾಷ್ಟ್ರಪತಿಯವರು ಅಭಿಪ್ರಾಯ ವ್ಯಕ್ತಪಡಿಸಿದರು
ಡಾ. ಮನಮೋಹನ್ ಸಿಂಗ್ ಅವರೊಂದಿಗೆ ಅರ್ಥಪೂರ್ಣ, ದೀರ್ಘ ಒಳನೋಟವುಳ್ಳ ಸಂವಾದದಲ್ಲಿ ತೊಡಗಿಸಿಕೊಳ್ಳುವ ಸುಯೋಗವನ್ನು ಹೊಂದಿದ್ದಾಗಿ ಉಪರಾಷ್ಟ್ರಪತಿಯವರು ತಮ್ಮ ಅನುಭವಗಳನ್ನು ತಿಳಿಸಿದ್ದಾರೆ
ಡಾ. ಮನಮೋಹನ್ ಸಿಂಗ್ ಅವರ ನಿಧನದಲ್ಲಿ, ಭಾರತವು ಅತ್ಯುನ್ನತ ಬುದ್ಧಿಶಕ್ತಿಯ ಉದಾತ್ತ ನಾಯಕನನ್ನು ಮತ್ತು ಒಬ್ಬ ರಾಜನೀತಿಜ್ಞ ಹಾಗೂ ಸರ್ವಶ್ರೇಷ್ಠತೆಯ ವ್ಯಕ್ತಿಯನ್ನು ಕಳೆದುಕೊಂಡಿದೆ - ಎಂದು ಉಪರಾಷ್ಟ್ರಪತಿಯವರು ಹೇಳಿದ್ದಾರೆ
Posted On:
26 DEC 2024 11:30PM by PIB Bengaluru
ಭಾರತದ ಮಾಜಿ ಪ್ರಧಾನಮಂತ್ರಿ ಮತ್ತು ಖ್ಯಾತ ಅರ್ಥಶಾಸ್ತ್ರಜ್ಞ ಡಾ. ಮನಮೋಹನ್ ಸಿಂಗ್ ಅವರ ನಿಧನಕ್ಕೆ ಭಾರತದ ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಅವರು ಇಂದು ಸಂತಾಪ ಸೂಚಿಸಿದ್ದಾರೆ.
ಭಾರತದ ಉಪರಾಷ್ಟ್ರಪತಿಯವರು ತಮ್ಮ ಎಕ್ಸ್ ಖಾತೆಯಲ್ಲಿ ತಿಳಿಸಿರುವ ಸಂದೇಶದಲ್ಲಿ ಹೀಗೆ ಹೇಳಿದ್ದಾರೆ:
"ಮಾಜಿ ಪ್ರಧಾನಮಂತ್ರಿ ಮತ್ತು ಭಾರತದ ಆರ್ಥಿಕ ಚೌಕಟ್ಟನ್ನು ಪರಿವರ್ತಿಸಿದ ಖ್ಯಾತ ಅರ್ಥಶಾಸ್ತ್ರಜ್ಞ ಹಾಗೂ ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರು ಮತ್ತು 1991ರಲ್ಲಿ ಭಾರತದ ಆರ್ಥಿಕ ಉದಾರೀಕರಣದ ವಾಸ್ತುಶಿಲ್ಪಿ ಡಾ. ಮನಮೋಹನ್ ಸಿಂಗ್ ಜಿ ಅವರ ನಿಧನದ ಬಗ್ಗೆ ತಿಳಿದು ತುಂಬಾ ನೋವಾಗಿದೆ. ತಮ್ಮ ನಿರ್ಣಾಯಕ ಪರಿವರ್ತನೆಯ ಮೂಲಕ ಧೈರ್ಯದಿಂದ ರಾಷ್ಟ್ರವನ್ನು ಮುನ್ನಡೆಸಿದರು, ದೇಶದ ಬೆಳವಣಿಗೆ, ಅಭಿವೃದ್ಧಿ ಮತ್ತು ಸಮೃದ್ಧಿಗಳಿಗೆ ಹೊಸ ಅವಕಾಶಗಳ ಮಾರ್ಗಗಳನ್ನು ತೆರೆದರು.
ಭಾರತದ ಉಪರಾಷ್ಟ್ರಪತಿಯಾಗಿ, ಡಾ. ಸಿಂಗ್ ಅವರೊಂದಿಗೆ ಅವರ ನಿವಾಸದಲ್ಲಿ ಅರ್ಥಪೂರ್ಣ, ಆಳವಾದ ಒಳನೋಟವುಳ್ಳ ಸಂವಾದದಲ್ಲಿ ತೊಡಗಿಸಿಕೊಳ್ಳುವ ಸೌಭಾಗ್ಯ ನನಗೆ ಸಿಕ್ಕಿತು. ಆರ್ಥಿಕತೆಯ ಬಗ್ಗೆ ಅವರ ಆಳವಾದ ತಿಳುವಳಿಕೆ, ಸೌಮ್ಯ ನಡವಳಿಕೆ ಮತ್ತು ಭಾರತದ ಪ್ರಗತಿಗೆ ಅಚಲವಾದ ಬದ್ಧತೆ ನನ್ನ ನೆನಪಿನಲ್ಲಿ ಶಾಶ್ವತವಾಗಿ ಉಳಿಯುತ್ತದೆ.
ಡಾ. ಸಿಂಗ್ ಅವರ ನಿಧನದಲ್ಲಿ, ಭಾರತವು ಅತ್ಯುನ್ನತ ಬುದ್ಧಿವಂತಿಕೆಯ ನಾಯಕನನ್ನು ಮತ್ತು ಒಬ್ಬ ರಾಜನೀತಿಜ್ಞನನ್ನು ಕಳೆದುಕೊಂಡಿದೆ. ಅವರ ಉದಾತ್ತ ವ್ಯಕ್ತಿತ್ವದ ಪರಂಪರೆಯು ಭಾರತದ ಬೆಳವಣಿಗೆಯ ಪಥವನ್ನು ಶಾಶ್ವತವಾಗಿ ಮಾರ್ಗದರ್ಶಿಸುತ್ತದೆ. ಈ ಕಷ್ಟದ ಸಮಯದಲ್ಲಿ ಅವರ ಕುಟುಂಬ ಮತ್ತು ಅಸಂಖ್ಯಾತ ಅಭಿಮಾನಿಗಳಿಗೆ ನನ್ನ ಹೃತ್ಪೂರ್ವಕ ಸಂತಾಪಗಳು.
*****
(Release ID: 2088366)
Visitor Counter : 7