ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿಯವರು ಡಿಸೆಂಬರ್ 26 ರಂದು ನವದೆಹಲಿಯಲ್ಲಿ ವೀರ ಬಾಲ ದಿವಸ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ
‘ಸುಪೋಷಿತ್ ಗ್ರಾಮ ಪಂಚಾಯತ್ ಅಭಿಯಾನ’ಕ್ಕೆ ಪ್ರಧಾನಮಂತ್ರಿ ಚಾಲನೆ
Posted On:
25 DEC 2024 1:58PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 26 ಡಿಸೆಂಬರ್ 2024 ರಂದು ನವದೆಹಲಿಯ ಭಾರತ್ ಮಂಟಪದಲ್ಲಿ ಮಧ್ಯಾಹ್ನ 12 ಗಂಟೆಗೆ ಭಾರತದ ಭವಿಷ್ಯದ ಅಡಿಪಾಯ ಎಂದು ಮಕ್ಕಳನ್ನು ಗೌರವಿಸುವ ರಾಷ್ಟ್ರವ್ಯಾಪಿ ಆಚರಣೆಯಾದ ವೀರ ಬಾಲ ದಿವಸ್‌ನಲ್ಲಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಪ್ರಧಾನಮಂತ್ರಿಯವರು ‘ಸುಪೋಷಿತ್ ಗ್ರಾಮ ಪಂಚಾಯತ್ ಅಭಿಯಾನ’ಕ್ಕೆ ಚಾಲನೆ ನೀಡಲಿದ್ದಾರೆ. ಪೌಷ್ಟಿಕಾಂಶ ಸಂಬಂಧಿತ ಸೇವೆಗಳ ಅನುಷ್ಠಾನವನ್ನು ಬಲಪಡಿಸುವ ಮೂಲಕ ಮತ್ತು ಸಕ್ರಿಯ ಸಮುದಾಯ ಭಾಗವಹಿಸುವಿಕೆಯನ್ನು ಖಾತ್ರಿಪಡಿಸುವ ಮೂಲಕ ಪೌಷ್ಟಿಕಾಂಶದ ಫಲಿತಾಂಶಗಳು ಮತ್ತು ಯೋಗಕ್ಷೇಮವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ.
ಯುವ ಮನಸ್ಸುಗಳನ್ನು ತೊಡಗಿಸಿಕೊಳ್ಳಲು, ದಿನದ ಮಹತ್ವದ ಬಗ್ಗೆ ಜಾಗೃತಿಯನ್ನು ಉತ್ತೇಜಿಸಲು ಮತ್ತು ರಾಷ್ಟ್ರಕ್ಕೆ ಧೈರ್ಯ ಮತ್ತು ಸಮರ್ಪಣೆಯ ಸಂಸ್ಕೃತಿಯನ್ನು ಬೆಳೆಸಲು ವಿವಿಧ ಉಪಕ್ರಮಗಳನ್ನು ರಾಷ್ಟ್ರದಾದ್ಯಂತ ನಡೆಸಲಾಗುವುದು. ಸಂವಾದಾತ್ಮಕ ರಸಪ್ರಶ್ನೆಗಳು ಸೇರಿದಂತೆ ಆನ್‌ಲೈನ್ ಸ್ಪರ್ಧೆಗಳ ಸರಣಿಯನ್ನು MyGov ಮತ್ತು MyBharat ಪೋರ್ಟಲ್‌ಗಳ ಮೂಲಕ ಆಯೋಜಿಸಲಾಗುತ್ತದೆ. ಶಾಲೆಗಳು, ಶಿಶುಪಾಲನಾ ಸಂಸ್ಥೆಗಳು ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಕಥೆ ಹೇಳುವುದು, ಸೃಜನಾತ್ಮಕ ಬರವಣಿಗೆ, ಪೋಸ್ಟರ್ ತಯಾರಿಕೆ ಮುಂತಾದ ಆಸಕ್ತಿಕರ ಚಟುವಟಿಕೆಗಳನ್ನು ಕೈಗೊಳ್ಳಲಾಗುವುದು.
ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ್ (PMRBP) ಪ್ರಶಸ್ತಿ ಪುರಸ್ಕೃತರು ಸಹ ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ.
*****
(Release ID: 2087946)
Visitor Counter : 16
Read this release in:
Assamese
,
English
,
Urdu
,
Marathi
,
Hindi
,
Manipuri
,
Punjabi
,
Gujarati
,
Tamil
,
Telugu
,
Malayalam