ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
azadi ka amrit mahotsav

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು 2024ರ ಡಿಸೆಂಬರ್ 26 ರಂದು 'ವೀರ್ ಬಾಲ ದಿವಸ್' ಮತ್ತು 'ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ' ಆಚರಿಸಲು ಮತ್ತು ಸ್ಮರಿಸಲು ನಿರ್ಧರಿಸಿದೆ


ಏಳು ವಿಭಾಗಗಳಲ್ಲಿ ಅಸಾಧಾರಣ ಸಾಧನೆ ಮಾಡಿದ 14 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ 17 ಮಕ್ಕಳಿಗೆ ಭಾರತದ ರಾಷ್ಟ್ರಪತಿ ಅವರು 'ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ' ಪ್ರದಾನ ಮಾಡಲಿದ್ದಾರೆ

'ವೀರ್ ಬಾಲ್ ದಿವಸ್ ' ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಪ್ರಧಾನಮಂತ್ರಿ

'ಸುಪೋಶಿತ್ ಪಂಚಾಯತ್ ' ಯೋಜನೆಯನ್ನು ಉದ್ಘಾಟಿಸಲಿರುವ ಪ್ರಧಾನಮಂತ್ರಿ

ಉದ್ಘಾಟನಾ ಭಾಷಣ ಮಾಡಲಿರುವ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು

ಪಿ ಎಂ ಆರ್ ಬಿ ಪಿ ಪ್ರಶಸ್ತಿ ಪುರಸ್ಕೃತರು ಮತ್ತು ಗಣ್ಯರೊಂದಿಗೆ ಸುಮಾರು 3500 ಮಕ್ಕಳು ಭಾಗವಹಿಸಲಿದ್ದಾರೆ; ಭಾರತದ ಪರಂಪರೆಯನ್ನು ಪ್ರದರ್ಶಿಸುವ ಮಕ್ಕಳಿಂದ ಸಾಂಸ್ಕೃತಿಕ ಪ್ರದರ್ಶನಗಳು

MyGov/MY ಭಾರತ್ ಪೋರ್ಟಲ್ ಗಳಲ್ಲಿ ಆನ್ ಲೈನ್ ಚಟುವಟಿಕೆಗಳು ಸೇರಿದಂತೆ ದೇಶಾದ್ಯಂತ ಶಾಲೆಗಳು, ಮಕ್ಕಳ ಆರೈಕೆ ಸಂಸ್ಥೆಗಳು, ಅಂಗನವಾಡಿ ಕೇಂದ್ರಗಳಲ್ಲಿ ವಿವಿಧ ಚಟುವಟಿಕೆಗಳು ನಡೆಯಲಿವೆ

Posted On: 24 DEC 2024 2:04PM by PIB Bengaluru

ಮಹಿಳಾ ಮತ್ತು ಮಕ್ಕಳ ಸಚಿವಾಲಯವು 2024ರ ಡಿಸೆಂಬರ್ 26 ರಂದು ವೀರ್ ಬಾಲ್ ದಿವಸ್ ಮತ್ತು ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರವನ್ನು ಆಚರಿಸಲಿದೆ ಮತ್ತು ಸ್ಮರಿಸಲಿದೆ.

Image

ಕಲೆ ಮತ್ತು ಸಂಸ್ಕೃತಿ, ಶೌರ್ಯ, ನಾವೀನ್ಯತೆ, ವಿಜ್ಞಾನ ಮತ್ತು ತಂತ್ರಜ್ಞಾನ, ಸಮಾಜ ಸೇವೆ, ಕ್ರೀಡೆ ಮತ್ತು ಪರಿಸರ ಎಂಬ ಏಳು ವಿಭಾಗಗಳಲ್ಲಿ ಅಸಾಧಾರಣ ಸಾಧನೆ ಮಾಡಿದ ಮಕ್ಕಳಿಗೆ ಭಾರತ ಸರ್ಕಾರವು ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ (ಪಿಎಂಆರ್ ಬಿಪಿ) ನೀಡುತ್ತದೆ. 14 ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಂದ 17 ಮಕ್ಕಳನ್ನು (7 ಬಾಲಕರು ಮತ್ತು 10 ಬಾಲಕಿಯರು) ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ವರ್ಷ, ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಈ ದಿನದಂದು (ಡಿಸೆಂಬರ್ 26, 2024) ಈ ಮಕ್ಕಳಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ. ಪ್ರತಿ ಪ್ರಶಸ್ತಿ ವಿಜೇತರಿಗೆ ಪದಕ, ಪ್ರಮಾಣಪತ್ರ ಮತ್ತು ಪ್ರಶಂಸಾ ಕಿರುಪುಸ್ತಕವನ್ನು ನೀಡಲಾಗುವುದು.

Image

ವೀರ್ ಬಾಲ್ ದಿವಸ್ ನ ರಾಷ್ಟ್ರೀಯ ಕಾರ್ಯಕ್ರಮವು ಅದೇ ದಿನ (ಡಿಸೆಂಬರ್ 26, 2024) ನವದೆಹಲಿಯ ಭಾರತ್ ಮಂಟಪದಲ್ಲಿ ನಡೆಯಲಿದೆ. ಈ ದಿನವು ಯುವ ಮನಸ್ಸುಗಳನ್ನು ಪೋಷಿಸುವುದು, ಸೃಜನಶೀಲತೆಯನ್ನು ಬೆಳೆಸುವುದು ಮತ್ತು ವಿಕಸಿತ ಭಾರತದ ದೃಷ್ಟಿಕೋನಕ್ಕೆ ಸ್ಪೂರ್ತಿದಾಯಕ ಕೊಡುಗೆಗಳನ್ನು ನೀಡುವತ್ತ ಗಮನ ಹರಿಸುತ್ತದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದು, ಸುಪೋಶಿತ್ ಪಂಚಾಯತ್ ಯೋಜನೆಯನ್ನು ಉದ್ಘಾಟಿಸಲಿದ್ದಾರೆ ಮತ್ತು ಮಾರ್ಚ್ ಪಾಸ್ಟ್ ಗೆ ಚಾಲನೆ ನೀಡಲಿದ್ದಾರೆ, ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶ್ರೀಮತಿ ಅನ್ನಪೂರ್ಣ ದೇವಿ ಅವರು ಉದ್ಘಾಟನಾ ಭಾಷಣ ಮಾಡಲಿದ್ದಾರೆ. ಪಿ ಎಂ ಆರ್ ಬಿ ಪಿ ಪ್ರಶಸ್ತಿ ಪುರಸ್ಕೃತರು ಮತ್ತು ಗಣ್ಯರು ಸೇರಿದಂತೆ ಸುಮಾರು 3,500 ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

 

ಈ ಕಾರ್ಯಕ್ರಮದಲ್ಲಿ ಭಾರತದ ಪರಂಪರೆಯನ್ನು ಪ್ರದರ್ಶಿಸುವ ಸಾಂಸ್ಕೃತಿಕ ಪ್ರದರ್ಶನಗಳು ಮತ್ತು ವೈವಿಧ್ಯಮಯ ಸಂಸ್ಕೃತಿಗಳನ್ನು ಪ್ರತಿನಿಧಿಸುವ ಮಕ್ಕಳಿಂದ ಮಾರ್ಚ್ ಪಾಸ್ಟ್ ಇರುತ್ತದೆ. ಇದಲ್ಲದೆ, ಮೈಗೌ / ಮೈಭಾರತ್ ಪೋರ್ಟಲ್ ಗಳಲ್ಲಿ ಆನ್ ಲೈನ್ ಚಟುವಟಿಕೆಗಳು ಸೇರಿದಂತೆ ದೇಶಾದ್ಯಂತದ ಶಾಲೆಗಳು, ಮಕ್ಕಳ ಆರೈಕೆ ಸಂಸ್ಥೆಗಳು, ಅಂಗನವಾಡಿ ಕೇಂದ್ರಗಳಲ್ಲಿ ಕಥೆ ಹೇಳುವುದು, ಸೃಜನಶೀಲ ಬರವಣಿಗೆ, ಪೋಸ್ಟರ್ ತಯಾರಿಕೆ, ಪ್ರಬಂಧ ಬರೆಯುವುದು, ಕವನ ಮತ್ತು ರಸಪ್ರಶ್ನೆಗಳಂತಹ ಚಟುವಟಿಕೆಗಳು ನಡೆಯಲಿವೆ.

 

*****


(Release ID: 2087810) Visitor Counter : 15