ಉಪರಾಷ್ಟ್ರಪತಿಗಳ ಕಾರ್ಯಾಲಯ
ಡಿಸೆಂಬರ್ 25 ಮತ್ತು 26 ,2024 ರಂದು ಮೇದಕ್ ಮತ್ತು ಹೈದರಾಬಾದ್ (ತೆಲಂಗಾಣ) ನಗರಗಳಿಗೆ ಭೇಟಿ ನೀಡಲಿರುವ ಉಪರಾಷ್ಟ್ರಪತಿ
ಮೇದಕ್ ನ ತುಣಿಕಿಯಲ್ಲಿರುವ ಐಸಿಎಆರ್- ಕೃಷಿ ವಿಜ್ಞಾನ ಕೇಂದ್ರದಲ್ಲಿ ಡಿಸೆಂಬರ್ 25 ರಂದು ನಡೆಯಲಿರುವ ನೈಸರ್ಗಿಕ ಮತ್ತು ಸಾವಯವ ರೈತರ ಶೃಂಗಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವ ಉಪರಾಷ್ಟ್ರಪತಿ
Posted On:
24 DEC 2024 1:47PM by PIB Bengaluru
ಭಾರತದ ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಅವರು ಡಿಸೆಂಬರ್ 25 ಮತ್ತು 26, 2024 ರಂದು ಮೇದಕ್ ಮತ್ತು ಹೈದರಾಬಾದ್ (ತೆಲಂಗಾಣ) ನಗರಗಳ ಪ್ರವಾಸ ಕೈಗೊಳ್ಳಲಿದ್ದಾರೆ.
ಭೇಟಿಯ ಸಮಯದಲ್ಲಿ ಭಾರತದ ಉಪರಾಷ್ಟ್ರಪತಿಯವರು, ತೆಲಂಗಾಣದ ಮೇದಕ್ ಜಿಲ್ಲೆಯ ತುಣಿಕಿಯಲ್ಲಿರುವ ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್) - ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆಯಲಿರುವ ನೈಸರ್ಗಿಕ ಮತ್ತು ಸಾವಯವ ರೈತರ ಶೃಂಗಸಭೆಯಲ್ಲಿ ಮುಖ್ಯ ಅತಿಥಿಯಾಗಿ ಹಾಗೂ ಸಮಾರಂಭದ ಅಧ್ಯಕ್ಷತೆ ವಹಿಸಿ ಭಾಗವಹಿಸಲಿದ್ದಾರೆ.
*****
(Release ID: 2087802)
Visitor Counter : 7