ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ
azadi ka amrit mahotsav

ನೌಕರರ ರಾಜ್ಯ ವಿಮಾ ನಿಗಮದ (ಇಎಸ್ಐಸಿ) 195ನೇ ಸಭೆಯ ಅಧ್ಯಕ್ಷತೆ ವಹಿಸಿದ ಡಾ.ಮನ್ಸುಖ್ ಮಾಂಡವಿಯಾ


2023-24ನೇ ಸಾಲಿನ ಆರ್ಥಿಕ ವರ್ಷಕ್ಕೆ ʻಇಎಸ್ಐʼ ನಿಗಮದ ಲೆಕ್ಕಪರಿಶೋಧಿತ ವಾರ್ಷಿಕ ಲೆಕ್ಕಪತ್ರಗಳು ಮತ್ತು ವಾರ್ಷಿಕ ವರದಿಯನ್ನು ಅನುಮೋದಿಸಿದ ನಿಗಮ

ʻಇಎಸ್ಐʼ ನಿಗಮದ 2024-25ರ ಪರಿಷ್ಕೃತ ಅಂದಾಜು, 2025-2026ರ ಬಜೆಟ್ ಅಂದಾಜುಗಳು ಮತ್ತು ಇಎಸ್ಐ ನಿಗಮದ 2025-2026ನೇ ಸಾಲಿನ ಕಾರ್ಯಕ್ಷಮತೆ ಬಜೆಟ್ ಅನ್ನು ನಿಗಮವು ಅನುಮೋದಿಸಿದೆ

Posted On: 19 DEC 2024 3:07PM by PIB Bengaluru

ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಹಾಗೂ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವರಾದ ಡಾ. ಮನ್ಸುಖ್ ಮಾಂಡವೀಯ ಅವರು ಇಂದು ನವದೆಹಲಿಯ ʻಶ್ರಮಶಕ್ತಿ ಭವನʼದಲ್ಲಿ ʻಇಎಸ್ಐ ನಿಗಮʼದ 195ನೇ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಹಾಗೂ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಹಾಯಕ ಸಚಿವರಾದ ಸುಶ್ರೀ ಶೋಭಾ ಕರಂದ್ಲಾಜೆ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

ಇಎಸ್ಐ ನಿಗಮದ 2023-24ನೇ ಸಾಲಿನ ವಾರ್ಷಿಕ ಲೆಕ್ಕಪತ್ರ ಮತ್ತು ವಾರ್ಷಿಕ ವರದಿ.

ನಿಗಮದ 2023-24ನೇ ಸಾಲಿನ ವಾರ್ಷಿಕ ಲೆಕ್ಕಪತ್ರಗಳು, ಸಿಎಜಿ ವರದಿ ಹಾಗೂ ಇಎಸ್ಐ ನಿಗಮದ 2023-24ನೇ ಸಾಲಿನ ವಾರ್ಷಿಕ ವರದಿ ಮತ್ತು ಅದರ ವಿಶ್ಲೇಷಣೆಯನ್ನು ನಿಗಮವು ಅನುಮೋದಿಸಿ ಅಂಗೀಕರಿಸಿತು.

ಇಎಸ್ಐ ನಿಗಮದ 2024-25ರ ಪರಿಷ್ಕೃತ ಅಂದಾಜು, 2025-2026ರ ಬಜೆಟ್ ಅಂದಾಜುಗಳು ಮತ್ತು 2025-2026ರ ಕಾರ್ಯಕ್ಷಮತೆ ಆಯವ್ಯಯ.

ಇಎಸ್ಐ ನಿಗಮವು 2024-25ನೇ ಸಾಲಿನ ಆರ್ಥಿಕ ವರ್ಷದ ಪರಿಷ್ಕೃತ ಅಂದಾಜು, 2025-2026ನೇ ಸಾಲಿನ ಹಣಕಾಸು ವರ್ಷದ ಬಜೆಟ್ ಅಂದಾಜುಗಳು ಮತ್ತು 2025-2026ನೇ ಸಾಲಿನ ಕಾರ್ಯಕ್ಷಮತೆ ಆಯವ್ಯಯವನ್ನು ಅನುಮೋದಿಸಿದೆ. ಈ ಹಣಕಾಸು ಯೋಜನೆಗಳು ನಿಗಮದ ಯೋಜಿತ ವೆಚ್ಚ, ನಿಧಿಗಳ ಹಂಚಿಕೆ ಮತ್ತು ಮುಂಬರುವ ಅವಧಿಗಳಿಗೆ ಕಾರ್ಯಕ್ಷಮತೆಯ ಗುರಿಗಳನ್ನು ವಿವರಿಸುತ್ತವೆ. ಸೂಕ್ತವಾದ ಸಂಪನ್ಮೂಲ ನಿರ್ವಹಣೆ ಮತ್ತು ನಿಗಮದ ಗುರಿಗಳು ಹಾಗೂ ಕಾರ್ಯಾಚರಣೆಯ ಅಗತ್ಯಗಳಿಗೆ ಅನುಗುಣವಾಗಿ ನಿಗಮವು ನವೀಕರಿಸಿದ ಹಣಕಾಸು ಯೋಜನೆಗಳು ಮತ್ತು ಬಜೆಟ್ ಹಂಚಿಕೆಗಳನ್ನು ಪರಿಶೀಲಿಸಿದೆ ಮತ್ತು ಸಮ್ಮತಿಸಿದೆ ಎಂದು ಈ ಅನುಮೋದನೆಯು ಸೂಚಿಸುತ್ತದೆ.

ಇಎಸ್ಐ ನಿಗಮದ 195ನೇ ಸಭೆಯಲ್ಲಿ ಸಂಸತ್ ಸದಸ್ಯರಾದ (ರಾಜ್ಯಸಭಾ) ಶ್ರೀಮತಿ ಡೋಲಾ ಸೇನ್, ಸಂಸತ್ ಸದಸ್ಯರಾದ (ಲೋಕಸಭೆ) ಶ್ರೀ ಎನ್.ಕೆ.ಪ್ರೇಮಚಂದ್ರನ್, ಕಾರ್ಯದರ್ಶಿ (ಎಲ್ & ಇ) ಶ್ರೀಮತಿ ಸುಮಿತಾ ದಾವ್ರಾ ಮತ್ತು ಇಎಸ್ಐಸಿ ಮಹಾನಿರ್ದೇಶಕ ಶ್ರೀ ಅಶೋಕ್ ಕುಮಾರ್ ಸಿಂಗ್ ಭಾಗವಹಿಸಿದ್ದರು. ರಾಜ್ಯ ಸರ್ಕಾರಗಳ ಪ್ರಧಾನ ಕಾರ್ಯದರ್ಶಿಗಳು / ಕಾರ್ಯದರ್ಶಿಗಳು, ಉದ್ಯೋಗದಾತರ ಪ್ರತಿನಿಧಿಗಳು, ಉದ್ಯೋಗಿಗಳು ಮತ್ತು ವೈದ್ಯಕೀಯ ಕ್ಷೇತ್ರದ ತಜ್ಞರು ಹೈಬ್ರಿಡ್ ಮಾದರಿಯಲ್ಲಿ ಸಭೆಯಲ್ಲಿ ಭಾಗವಹಿಸಿದ್ದರು.

 

*****

 

 


(Release ID: 2086120) Visitor Counter : 60