ಪಶು ಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಸಚಿವಾಲಯ
2024ರ ವರ್ಷಾಂತ್ಯದ ಪ್ರಗತಿ ಪರಿಶೀಲನೆ: ಮೀನುಗಾರಿಕೆ ಇಲಾಖೆ (ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯ)
"ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ (ಪಿಎಂಎಂಎಸ್ವೈ) ಅಡಿಯಲ್ಲಿ 2025 ರ ವೇಳೆಗೆ 1.12 ಮಿಲಿಯನ್ ಟನ್ ಸಮುದ್ರದ ಜೊಂಡಿನ ಉತ್ಪಾದನೆಯ ಮಹತ್ವಾಕಾಂಕ್ಷೆಯ ಗುರಿಯನ್ನು ನಿಗದಿಪಡಿಸಿದೆ"
"ಮೀನುಗಾರಿಕೆಯಲ್ಲಿ ಡಿಜಿಟಲ್ ಕ್ರಾಂತಿ: ಇ-ಮಾರುಕಟ್ಟೆ ವೇದಿಕೆಯೊಂದಿಗೆ ಮೀನುಗಾರರನ್ನು ಸಬಲೀಕರಣಗೊಳಿಸಲು ಒಎನ್ ಡಿಸಿಯೊಂದಿಗೆ ತಿಳುವಳಿಕಾ ಒಡಂಬಡಿಕೆಗೆ ಸಹಿ ಹಾಕಲಾಗಿದೆ"
"ಭಾರತದ ಮೀನುಗಾರಿಕೆ ಮೂಲಸೌಕರ್ಯವನ್ನು ಪರಿವರ್ತಿಸಲು 1,200 ಕೋಟಿ ರೂ.ಗಳ ಪಿಎಂಎಂಎಸ್ವೈ ಮತ್ತು ಎಫ್ಐಡಿಎಫ್ ಯೋಜನೆಗಳನ್ನು ಪ್ರಾರಂಭಿಸಲಾಗಿದೆ"
"ಸಮುದ್ರದಲ್ಲಿ ಸುರಕ್ಷತೆ: 1 ಲಕ್ಷ ಮೀನುಗಾರಿಕಾ ಹಡಗುಗಳಿಗೆ/ದೋಣಿಗಳಿಗೆ ಟ್ರಾನ್ಸ್ ಪಾಂಡರ್ ಗಳನ್ನು ಒದಗಿಸಲು 364 ಕೋಟಿ ರೂ.ಗಳ ಪಿಎಂಎಂಎಸ್ ವೈ ಉಪಕ್ರಮ"
"ಹವಾಮಾನ ಸ್ಥಿತಿಸ್ಥಾಪಕತ್ವದ ಕರಾವಳಿ ಮೀನುಗಾರರ ಗ್ರಾಮಗಳು: ಕರಾವಳಿ ಸಮುದಾಯಗಳನ್ನು ಬಲಪಡಿಸಲು 200 ಕೋಟಿ ರೂ.ಗಳ ಉಪಕ್ರಮ"
Posted On:
12 DEC 2024 6:01PM by PIB Bengaluru
ಪೀಠಿಕೆ
ಭಾರತೀಯ ಆರ್ಥಿಕತೆಯಲ್ಲಿ ಮೀನುಗಾರಿಕೆ ಕ್ಷೇತ್ರವು ಪ್ರಮುಖ ಪಾತ್ರ ವಹಿಸುತ್ತದೆ. ಇದು ರಾಷ್ಟ್ರೀಯ ಆದಾಯ, ರಫ್ತು, ಆಹಾರ ಮತ್ತು ಪೌಷ್ಟಿಕಾಂಶದ ಭದ್ರತೆ ಹಾಗೂ ಉದ್ಯೋಗ ಸೃಷ್ಟಿಗೆ ಕೊಡುಗೆ ನೀಡುತ್ತದೆ. ಮೀನುಗಾರಿಕಾ ಕ್ಷೇತ್ರವು 'ಸೂರ್ಯೋದಯ ವಲಯ' ಎಂದು ಗುರುತಿಸಲ್ಪಟ್ಟಿದೆ ಮತ್ತು ಭಾರತದಲ್ಲಿ ಸುಮಾರು 30 ಮಿಲಿಯನ್ ಜನರ ಜೀವನೋಪಾಯವನ್ನು ವಿಶೇಷವಾಗಿ ಅಂಚಿನಲ್ಲಿರುವ ಮತ್ತು ದುರ್ಬಲ ಸಮುದಾಯಗಳ ಜೀವನೋಪಾಯವನ್ನು ಉಳಿಸಿಕೊಳ್ಳುವಲ್ಲಿ ಪ್ರಮುಖವಾಗಿದೆ.
ಕಳೆದ 10 ವರ್ಷಗಳಲ್ಲಿ, ಭಾರತ ಸರ್ಕಾರವು (GoI-ಜಿ.ಒ.ಐ.) ಮೀನುಗಾರಿಕೆಯ ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ, ಈ ಉಪಕ್ರಮಗಳ ಪರಿಣಾಮವಾಗಿ ಒಟ್ಟು (ಒಳನಾಡು ಮತ್ತು ಸಮುದ್ರ) ಮೀನು ಉತ್ಪಾದನೆಯು ಹಣಕಾಸು ವರ್ಷ 2022- 23ರಲ್ಲಿ 175.45 ಲಕ್ಷ ಟನ್‌ಗಳಿಗೆ ಏರಿಕೆಯಾಗಿದೆ. ಹಣಕಾಸು ವರ್ಷ 2013-14 ರಲ್ಲಿ 95.79 ಲಕ್ಷ ಟನ್ ಮೀನು ಉತ್ಪಾದನೆಯಾಗಿತ್ತು. ಒಳನಾಡು ಮೀನುಗಾರಿಕೆ ಮತ್ತು ಜಲಕೃಷಿ ಉತ್ಪಾದನೆಯು 2013-14ರ ಆರ್ಥಿಕ ವರ್ಷದಲ್ಲಿ 61.36 ಲಕ್ಷ ಟನ್‌ಗಳಿಂದ 2022-23ರ ಆರ್ಥಿಕ ವರ್ಷದಲ್ಲಿ 131.13 ಲಕ್ಷ ಟನ್‌ಗಳಿಗೆ ಏರಿಕೆಯಾಗಿದ್ದು, 114% ಬೆಳವಣಿಗೆಯನ್ನು ದಾಖಲಿಸಿದೆ. ಅದೇ ರೀತಿ, 2023-24ರ ಆರ್ಥಿಕ ವರ್ಷದಲ್ಲಿ ಭಾರತೀಯ ಸಮುದ್ರಾಹಾರ ರಫ್ತು 60,523.89 ಕೋಟಿ ರೂ.ಗಳಷ್ಟಿದ್ದು, ಹಣಕಾಸು ವರ್ಷ 2013-14ರಲ್ಲಿ ಇದ್ದ 30,213 ಕೋಟಿ ರೂ.ಗಳಿಂದ ದುಪ್ಪಟ್ಟು ಆಗಿದೆ.
ವರ್ಷದಲ್ಲಿ ಇಲಾಖೆ ಕೈಗೊಂಡ ಪ್ರಮುಖ ಉಪಕ್ರಮಗಳು
ಕಡಲಕಳೆ ಮತ್ತು ಮುತ್ತು ಮತ್ತು ಅಲಂಕಾರಿಕ ಮೀನುಗಾರಿಕೆ
- 2024ರ ಜನವರಿ 27ರಂದು ಗುಜರಾತಿನ ಕಚ್‌ನಲ್ಲಿ ಕಡಲಕಳೆ ಕೃಷಿಯ ಉತ್ತೇಜನದ ಕುರಿತು ಮೊದಲ ರಾಷ್ಟ್ರೀಯ ಸಮ್ಮೇಳನವನ್ನು ನಡೆಸಲಾಯಿತು. ಕಡಲಕಳೆ ಕೃಷಿಯು ಕಡಲಕಳೆ ಉತ್ಪನ್ನಗಳ ಉದ್ಯೋಗ ಸೃಷ್ಟಿಗೆ ಪರ್ಯಾಯವಾಗಿದೆ ಏಕೆಂದರೆ ಇದು ಸಮುದ್ರ ಉತ್ಪಾದನೆಯನ್ನು ವೈವಿಧ್ಯಗೊಳಿಸುತ್ತದೆ ಮತ್ತು ಮೀನು ಕೃಷಿಕರ ಆದಾಯವನ್ನು ಹೆಚ್ಚಿಸುವ ಅವಕಾಶಗಳನ್ನು ಹೊಂದಿದೆ. ಕಡಲಕಳೆ ಕೃಷಿಯನ್ನು ಹೆಚ್ಚಿಸಲು ಕೋರಿ ಖಾರಿಯಲ್ಲಿ ಪೈಲಟ್ ಯೋಜನೆಯನ್ನು ಅಧಿಸೂಚಿಸಲಾಗಿದೆ.
- ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ (PMMSY); 2025 ರ ವೇಳೆಗೆ ದೇಶದ ಕಡಲಕಳೆ ಉತ್ಪಾದನೆಯನ್ನು 1.12 ಮಿಲಿಯನ್ ಟನ್‌ಗಳಿಗಿಂತಲೂ ಅಧಿಕ ಹೆಚ್ಚಿಸುವ ಗುರಿಯನ್ನು ಹೊಂದಿದೆ. ಭಾರತೀಯ ಕಡಲಕಳೆ ಉತ್ಪಾದನೆಯು ಹೆಚ್ಚಾಗಿ ಕಪ್ಪಾಫೈಕಸ್ ಅಲ್ವಾರೆಜಿಯ ಕೃಷಿ ಮತ್ತು ಇತರ ಕೆಲವು ಸ್ಥಳೀಯ ಪ್ರಭೇದಗಳ ಮೇಲೆ ಅವಲಂಬಿತವಾಗಿದೆ. ಕಪ್ಪಾಫೈಕಸ್ ಅಲ್ವಾರೆಜಿಯ ಮೇಲೆ ಅತಿಯಾದ ಅವಲಂಬನೆಯಿಂದಾಗಿ ವೇಗದ ಬೆಳವಣಿಗೆಯ ಶಕ್ತಿ ಕುಂಠಿತಗೊಳ್ಳುತ್ತಿದೆ ಮತ್ತು ವರ್ಷಗಳಲ್ಲಿ ರೋಗ-ಪೀಡಿತವಾಗುತ್ತಿದೆ. ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಸುಧಾರಿಸಲು ಕಡಲಕಳೆಗಳ ಹೊಸ ಪ್ರಭೇದಗಳು ಮತ್ತು ತಳಿಗಳನ್ನು ಆಮದು ಮಾಡಿಕೊಳ್ಳಲು ಇದು ಸೂಚಿಸುತ್ತದೆ. ಮೀನುಗಾರಿಕೆ ಇಲಾಖೆ, ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯ ಈ ಮೂಲಕ 2024ರ ಅಕ್ಟೋಬರ್ 31 ರಂದು ಮಾರ್ಗಸೂಚಿಗಳನ್ನು ಸೂಚಿಸಿದೆ, ಅವುಗಳನ್ನು ‘ಭಾರತಕ್ಕೆ ನೇರವಾಗಿ ಜೀವಂತ ಕಡಲಕಳೆಗಳನ್ನು ಆಮದು ಮಾಡಿಕೊಳ್ಳುವ ಮಾರ್ಗಸೂಚಿಗಳು’ ಎಂದು ಸಂಕಲಿಸಲಾಗಿದ್ದು ಆ ಮೂಲಕ ಕಡಲ ಕಳೆಯ ರಫ್ತು ಮತ್ತು ಆಮದನ್ನು ಬಲಪಡಿಸಲು ಉದ್ದೇಶಿಸಲಾಗಿದೆ.
- ಗುಚ್ಛ (ಕ್ಲಸ್ಟರ್) -ಆಧಾರಿತ ವಿಧಾನವು ಉತ್ಪಾದನೆಯಿಂದ ರಫ್ತುವರೆಗೆ ಸಂಪೂರ್ಣ ಮೌಲ್ಯ ಸರಪಳಿಯಾದ್ಯಂತ ಎಲ್ಲಾ ಗಾತ್ರಗಳ-ಸೂಕ್ಷ್ಮ, ಸಣ್ಣ, ಮಧ್ಯಮ ಮತ್ತು ದೊಡ್ಡ ಉದ್ಯಮಗಳನ್ನು ಒಂದುಗೂಡಿಸುವ ಮೂಲಕ ಸ್ಪರ್ಧಾತ್ಮಕತೆ ಮತ್ತು ದಕ್ಷತೆಯನ್ನು ಹೆಚ್ಚಿಸುತ್ತದೆ. ಈ ಸಹಯೋಗದ ಮಾದರಿಯು ಬಲವಾದ ಸಂಪರ್ಕಗಳ ಮೂಲಕ ಆರ್ಥಿಕ ಕಾರ್ಯಸಾಧ್ಯತೆಯನ್ನು ಸುಧಾರಿಸುತ್ತದೆ, ಮೌಲ್ಯ ಸರಪಳಿಯ ಅಂತರವನ್ನು ಪರಿಹರಿಸುತ್ತದೆ ಮತ್ತು ಹೊಸ ವ್ಯಾಪಾರ ಅವಕಾಶಗಳು ಹಾಗು ಜೀವನೋಪಾಯಗಳನ್ನು ಸೃಷ್ಟಿಸುತ್ತದೆ. ಮೀನುಗಾರಿಕೆ ಇಲಾಖೆಯು ಮೀನುಗಾರಿಕೆ ಕ್ಲಸ್ಟರ್ ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ ಉತ್ಪಾದನೆ ಮತ್ತು ಸಂಸ್ಕರಣಾ ಕ್ಲಸ್ಟರ್‌ಗಳ ಮೇಲೆ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನವನ್ನು (ಎಸ್‌ಒಪಿ) ಬಿಡುಗಡೆ ಮಾಡಿದೆ ಮತ್ತು ಲಕ್ಷದ್ವೀಪದಲ್ಲಿ ಕಡಲಕಳೆ ಕೃಷಿಗೆ ಮೀಸಲಾಗಿರುವ ಮೂರು ವಿಶೇಷ ಮೀನುಗಾರಿಕೆ ಉತ್ಪಾದನೆ ಮತ್ತು ಸಂಸ್ಕರಣಾ ಕ್ಲಸ್ಟರ್‌ಗಳನ್ನು ಸ್ಥಾಪಿಸುವುದಾಗಿ ಘೋಷಿಸಿದೆ. ಈ ಸಮೂಹಗಳು/ಗುಚ್ಛಗಳು ಈ ಸ್ಥಾಪಿತ ವಲಯಗಳಲ್ಲಿ ಸಂಗ್ರಹಣೆ, ಸಹಯೋಗ ಮತ್ತು ನಾವೀನ್ಯತೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿವೆ, ಉತ್ಪಾದನೆ ಮತ್ತು ಮಾರುಕಟ್ಟೆ ವ್ಯಾಪ್ತಿಯನ್ನು ಹೆಚ್ಚಿಸುತ್ತವೆ.
- ಕಡಲಕಳೆ ಕೃಷಿ ಮತ್ತು ಸಂಶೋಧನೆಯನ್ನು ಉತ್ತೇಜಿಸಲು ಕೇಂದ್ರೀಯ ಸಾಗರ ಮೀನುಗಾರಿಕಾ ಸಂಶೋಧನಾ ಸಂಸ್ಥೆಯ (ICAR-CMFRI) ಮಂಡಪಂ ಪ್ರಾದೇಶಿಕ ಕೇಂದ್ರವನ್ನು ಶ್ರೇಷ್ಠತೆಯ ಕೇಂದ್ರವಾಗಿ ಸ್ಥಾಪಿಸಲು ಮೀನುಗಾರಿಕಾ ಇಲಾಖೆಯು ಅಧಿಸೂಚನೆ ಹೊರಡಿಸಿದೆ. ಈ ಶ್ರೇಷ್ಠತಾ ಕೇಂದ್ರ (ಸೆಂಟರ್ ಆಫ್ ಎಕ್ಸಲೆನ್ಸ್)ವು ಕಡಲಕಳೆ ಕೃಷಿಯಲ್ಲಿ ನಾವೀನ್ಯತೆ ಮತ್ತು ಅಭಿವೃದ್ಧಿಗೆ ರಾಷ್ಟ್ರೀಯ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ, ಕೃಷಿ ತಂತ್ರಗಳನ್ನು ಸಂಸ್ಕರಿಸುವತ್ತ ಗಮನಹರಿಸುತ್ತದೆ, ಬೀಜ ಬ್ಯಾಂಕ್ ಅನ್ನು ಸ್ಥಾಪಿಸುತ್ತದೆ ಮತ್ತು ಸುಸ್ಥಿರ ಅಭ್ಯಾಸಗಳನ್ನು ಖಾತ್ರಿಪಡಿಸುತ್ತದೆ. ಇದು 20,000 ಕಡಲಕಳೆ ರೈತರಿಗೆ ಪ್ರಯೋಜನವನ್ನು ನೀಡುತ್ತದೆ, ಇಳುವರಿಯನ್ನು ಸುಧಾರಿಸುತ್ತದೆ ಮತ್ತು ಸರಿಸುಮಾರು 5,000 ಉದ್ಯೋಗಗಳನ್ನು ಸೃಷ್ಟಿಸುತ್ತದೆ, ಭಾರತದ ಜಾಗತಿಕ ಕಡಲಕಳೆ ಉದ್ಯಮದ ಉಪಸ್ಥಿತಿಯನ್ನು ಹೆಚ್ಚಿಸುತ್ತದೆ.
- ಮೀನುಗಾರಿಕೆ ಇಲಾಖೆಯು ಹಜಾರಿಬಾಗ್‌ನಲ್ಲಿ ಮುತ್ತು ಕೃಷಿಗೆ ಪ್ರಮಾಣಿತ ಕಾರ್ಯಾಚರಣಾ ವಿಧಾನವನ್ನು ಪ್ರಾರಂಭಿಸಿದೆ, ಲಕ್ಷದ್ವೀಪದಲ್ಲಿ ಕಡಲಕಳೆ ಸಮೂಹದೊಂದಿಗೆ ಮಧುರೈನಲ್ಲಿ ಅಲಂಕಾರಿಕ ಮೀನುಗಾರಿಕೆಯನ್ನು ಪ್ರಾರಂಭಿಸಿದೆ.
- ಮೀನುಗಾರಿಕೆ ಇಲಾಖೆಯು ಸಮುದ್ರ ಮತ್ತು ಒಳನಾಡಿನ ಜಾತಿಗಳ ಬೀಜಕ (ನ್ಯೂಕ್ಲಿಯಸ್) ಸಂತಾನೋತ್ಪತ್ತಿ ಕೇಂದ್ರಗಳನ್ನು ಅಧಿಸೂಚಿಸಿದ್ದು, ಆರ್ಥಿಕವಾಗಿ ಪ್ರಮುಖವಾದ ಜಾತಿಗಳ ಆನುವಂಶಿಕ ವರ್ಧನೆಯ ಮೂಲಕ ಬೀಜದ ಗುಣಮಟ್ಟವನ್ನು ಹೆಚ್ಚಿಸಲು ಸೂಚಿಸಿದೆ. ಮೀನುಗಾರಿಕೆ ಇಲಾಖೆಯು ಒಡಿಶಾದ ಭುವನೇಶ್ವರದಲ್ಲಿರುವ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಫ್ರೆಶ್‌ವಾಟರ್ ಅಕ್ವಾಕಲ್ಚರ್ (ICAR-CIFA)ನ್ನು ಸಿಹಿನೀರಿನ ಜಾತಿಗಳಿಗೆ ಎನ್.ಬಿ.ಸಿ.ಗಳನ್ನು ಸ್ಥಾಪಿಸಲು ನೋಡಲ್ ಇನ್‌ಸ್ಟಿಟ್ಯೂಟ್ ಮತ್ತು ತಮಿಳುನಾಡಿನ ಮಧುರೈಯಲ್ಲಿರುವ ಐ.ಸಿ.ಎ.ಆರ್.ನ -ಸೆಂಟ್ರಲ್ ಮೆರೈನ್ ಫಿಶರೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ (ICAR-CMFRI) ನ ಪ್ರಾದೇಶಿಕ ಕೇಂದ್ರವನ್ನು ಸಮುದ್ರ ಮೀನು ಪ್ರಭೇದಗಳ ಮೇಲೆ ಕೇಂದ್ರೀಕರಿಸಿದ ಎನ್.ಬಿ.ಸಿ.ಗಳಿಗಾಗಿ ನೋಡಲ್ ಸಂಸ್ಥೆಯಾಗಿ ವಿನ್ಯಾಸಗೊಳಿಸಿದೆ. ಚಾಲ್ತಿಯಲ್ಲಿರುವ ಯೋಜನೆಗಳಿಂದ ಧನಸಹಾಯ ಪಡೆದ ಎನ್‌ಬಿಸಿಗಳು ಬ್ರೂಡ್‌ಸ್ಟಾಕ್ ನಿರ್ವಹಣೆಯನ್ನು ವರ್ಧಿಸುತ್ತವೆ, ಉತ್ತಮ ಗುಣಮಟ್ಟದ ಬೀಜಗಳನ್ನು ಉತ್ಪಾದಿಸುತ್ತವೆ ಮತ್ತು ಪ್ರಸ್ತುತ ಋತುವಿನ ಪೂರೈಕೆಯೊಂದಿಗೆ 60 ಲಕ್ಷ ಜಯಂತಿ ರೋಹು, 20 ಲಕ್ಷ ಅಮೃತ್ ಕಾಟ್ಲಾ ಮತ್ತು 2 ಲಕ್ಷ ಜಿಐ-ಸ್ಕಾಂಪಿ ಸೇರಿದಂತೆ 100 ಉದ್ಯೋಗಗಳನ್ನು ಸೃಷ್ಟಿಸುತ್ತವೆ.
ಮೀನುಗಾರಿಕಾ ನವೋದ್ಯಮಗಳು (ಫಿಶರೀಸ್ ಸ್ಟಾರ್ಟ್ಅಪ್ಗಳು) ಮತ್ತು ಮೀನುಗಾರಿಕಾ ಕೃಷಿಕರ ಉತ್ಪನ್ನಗಳ ಸಂಘಟನೆಗಳಿಗೆ (ಫಿಶರೀಸ್ ಫಾರ್ಮರ್ ಪ್ರೊಡ್ಯೂಸರ್ ಆರ್ಗನೈಸೇಶನ್ -ಎಫ್ಎಫ್ಪಿಒ) ಬೆಂಬಲ
vii. ಕನಿಷ್ಠ 100 ಮೀನುಗಾರಿಕೆ ನವೋದ್ಯಮಗಳು (ಸ್ಟಾರ್ಟ್‌ಅಪ್‌ಗಳು) , ಸಹಕಾರಿ ಸಂಸ್ಥೆಗಳು, ಎಫ್‌ಪಿಒಗಳು ಮತ್ತು ಸ್ವಸಹಾಯ ಸಂಘಗಳನ್ನು ಉತ್ತೇಜಿಸಲು 3 ಇನ್‌ಕ್ಯುಬೇಶನ್ ಕೇಂದ್ರಗಳ ಸ್ಥಾಪನೆಗೆ ಇಲಾಖೆಯಿಂದ ಸೂಚನೆ ನೀಡಲಾಗಿದೆ. ಹೈದರಾಬಾದ್‌ನಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಗ್ರಿಕಲ್ಚರಲ್ ಎಕ್ಸ್‌ಟೆನ್ಶನ್ ಮ್ಯಾನೇಜ್‌ಮೆಂಟ್ (ಮ್ಯಾನೇಜ್), ಮುಂಬೈನ ಐಸಿಎಆರ್-ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಫಿಶರೀಸ್ ಎಜುಕೇಶನ್ (ಸಿಐಎಫ್‌ಇ) ಮತ್ತು ಕೊಚ್ಚಿಯ ಐಸಿಎಆರ್-ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಫಿಶರೀಸ್ ಟೆಕ್ನಾಲಜಿ (ಸಿಐಎಫ್‌ಟಿ) ನಂತಹ ಪ್ರಮುಖ ಸಂಸ್ಥೆಗಳಲ್ಲಿ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ.
viii. ಡಿಜಿಟಲ್ ಇಂಡಿಯಾ ಉಪಕ್ರಮದ ನೆರವೇರಿಕೆಗಾಗಿ ಮೀನುಗಾರಿಕೆ ಇಲಾಖೆಯು ಒ.ಎನ್.ಡಿ.ಸಿ ಯೊಂದಿಗೆ ಮೊದಲ ತಿಳುವಳಿಕಾ ಒಪ್ಪಂದಕ್ಕೆ ಸಹಿ ಹಾಕಿದೆ. ಇಂದಿನವರೆಗೆ ಒ.ಎನ್.ಡಿ.ಸಿ.ಯಲ್ಲಿ 6 ಎಫ್.ಎಫ್.ಪಿ.ಒ. ಗಳನ್ನು ನೊಂದಾಯಿಸಲಾಗಿದೆ. ಈ ಸಹಯೋಗದ ಉದ್ದೇಶವು ಡಿಜಿಟಲ್ ವೇದಿಕೆಯನ್ನು ಒದಗಿಸುವುದು ಮತ್ತು ಸಾಂಪ್ರದಾಯಿಕ ಮೀನುಗಾರರು, ಮೀನು ಕೃಷಿಕರ ಉತ್ಪಾದಕ ಸಂಸ್ಥೆ, ಮೀನುಗಾರಿಕಾ ವಲಯದ ಉದ್ಯಮಿಗಳು ಸೇರಿದಂತೆ ಎಲ್ಲಾ ಪಾಲುದಾರರನ್ನು ಇ-ಮಾರುಕಟ್ಟೆ ಸ್ಥಳದ ಮೂಲಕ ತಮ್ಮ ಉತ್ಪನ್ನಗಳನ್ನು ಖರೀದಿಸಲು ಮತ್ತು ಮಾರಾಟ ಮಾಡಲು ಅವರನ್ನು ಸಶಕ್ತರನ್ನಾಗಿಸುವುದು. ಇದಲ್ಲದೆ , " ಮೀನು ಹಿಡಿಯುವಿಕೆಯಿಂದ (ಕ್ಯಾಚ್‌ನಿಂದ) ವಾಣಿಜ್ಯಕ್ಕೆ, ಡಿಜಿಟಲ್ ರೂಪಾಂತರದ ಮೂಲಕ ಮಾರುಕಟ್ಟೆ ಪ್ರವೇಶವನ್ನು ಹೆಚ್ಚಿಸುವುದು" ಎಂಬ ಕಿರುಪುಸ್ತಕವನ್ನು ಬಿಡುಗಡೆ ಮಾಡಲಾಗಿದೆ.
ix. ಪಿ.ಎಂ.ಎಂ.ಎಸ್.ವೈ. ಮೀನುಗಾರಿಕೆ ಮತ್ತು ಮೀನುಗಾರಿಕೆ ಪದವೀಧರರು ಸೇರಿದಂತೆ ಉದ್ಯಮಿಗಳಿಗೆ ರೂ.1.3 ಕೋಟಿ ವರೆಗೆ ಸಹಾಯದೊಂದಿಗೆ ಉದ್ಯಮಶೀಲತೆ ಮಾದರಿಯನ್ನು ಬೆಂಬಲಿಸುತ್ತದೆ. ವಾಣಿಜ್ಯೋದ್ಯಮ ಮಾದರಿಯು ಸಮಗ್ರ ವ್ಯಾಪಾರ ಮಾದರಿಗಳು, ತಂತ್ರಜ್ಞಾನದ ಅಳವಡಿಕೆ/ಒಳಸೇರಿಸುವಿಕೆ ಯೋಜನೆಗಳು, ಕಿಶ್ ಕಿಯೋಸ್ಕ್‌ಗಳನ್ನು ಸ್ಥಾಪಿಸುವ ಮೂಲಕ ನೈರ್ಮಲ್ಯದ ಮೀನು ಮಾರಾಟಕ್ಕೆ ಉತ್ತೇಜನ, ಮನರಂಜನಾ ಮೀನುಗಾರಿಕೆ ಅಭಿವೃದ್ಧಿ, ಗುಂಪು ಚಟುವಟಿಕೆಗಳ ಉತ್ತೇಜನ ಇತ್ಯಾದಿಗಳನ್ನು ಬೆಂಬಲಿಸುತ್ತದೆ. ಇಲ್ಲಿಯವರೆಗೆ 39 ಯೋಜನೆಗಳನ್ನು ಮಂಜೂರು ಮಾಡಲಾಗಿದೆ.
ಉಪಕ್ರಮಗಳು ಮತ್ತು ಯೋಜನೆಗಳು
x. ಕರಾವಳಿ ಜಲಚರ ಸಾಕಣೆ ಪ್ರಾಧಿಕಾರ ಕಾಯ್ದೆ 2005 (ಭಾರತ ಸರ್ಕಾರದ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ಆಡಳಿತಾತ್ಮಕ ನಿಯಂತ್ರಣದಲ್ಲಿ) ಕ್ಕೆ 2023 ರಲ್ಲಿ ತಿದ್ದುಪಡಿ ಮಾಡಲಾಯಿತು, ಪಂಜರ ಕೃಷಿ, ಸಮುದ್ರದ ಜೊಂಡಿನ/ಕಳೆಗಳ ಕೃಷಿ ಮತ್ತು ಸಮುದ್ರ ಅಲಂಕಾರಿಕ ಮೀನು ಕೃಷಿಯಂತಹ ವೈವಿಧ್ಯಮಯ ಮತ್ತು ಪರಿಸರ ಸ್ನೇಹಿ ಅಭ್ಯಾಸಗಳನ್ನು ಅದರ ವ್ಯಾಪ್ತಿಗೆ ತರಲು, ಸಿಆರ್ ಝಡ್ ಅಧಿಸೂಚನೆಯಲ್ಲಿನ ಅಸ್ಪಷ್ಟತೆಯನ್ನು ತೆಗೆದುಹಾಕಲು, ಜೈಲು ನಿಬಂಧನೆಗಳನ್ನು ಬದಲಾಯಿಸಲು, ಸರಳೀಕೃತ ಮತ್ತು ಸುವ್ಯವಸ್ಥಿತ ಕಾರ್ಯವಿಧಾನಗಳ ಮೂಲಕ ವ್ಯವಹಾರವನ್ನು ಸುಲಭಗೊಳಿಸಲು ಅನುವು ಮಾಡಿಕೊಡಲು ಈ ಕ್ರಮ ಕೈಗೊಳ್ಳಲಾಯಿತು.
xi. ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪಿ.ಎಂ.ಎಂ.ಎಸ್.ವೈ ಮತ್ತು ಎಫ್.ಐ.ಡಿ.ಎಫ್. ಅಡಿಯಲ್ಲಿ 1200 ಕೋಟಿ ರೂ.ಗಳ ಮೀನುಗಾರಿಕಾ ಯೋಜನೆಗಳನ್ನು ಉದ್ಘಾಟಿಸಿದರು ಮತ್ತು ಶಂಕುಸ್ಥಾಪನೆ ನೆರವೇರಿಸಿದರು.
xii. ಮೀನುಗಾರಿಕೆ ಇಲಾಖೆ, ಎಂಒಎಫ್ಎಹೆಚ್ ಮತ್ತು ಡಿ, ಸಮುದ್ರದಲ್ಲಿದ್ದಾಗ ಮೀನುಗಾರರ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಪಿ.ಎಂ.ಎಂ.ಎಸ್.ವೈ. ಅಡಿಯಲ್ಲಿ 364 ಕೋಟಿ ರೂ.ಗಳ ವಿಶೇಷ ಘಟಕವನ್ನು ಹೊರತಂದಿದೆ, 1 ಲಕ್ಷ ಮೀನುಗಾರಿಕಾ ದೋಣಿಗಳಿಗೆ/ಹಡಗುಗಳಿಗೆ ದೇಶೀಯವಾಗಿ ಅಭಿವೃದ್ಧಿಪಡಿಸಿದ ಟ್ರಾನ್ಸ್ ಪಾಂಡರ್ ಗಳನ್ನು ಉಚಿತವಾಗಿ ಒದಗಿಸುವ ಮೂಲಕ ಯಾವುದೇ ತುರ್ತು ಮತ್ತು ಚಂಡಮಾರುತಗಳ ಸಮಯದಲ್ಲಿ ಎಚ್ಚರಿಕೆಗಳನ್ನು ಕಳುಹಿಸಲು ಮತ್ತು ಸಂಭಾವ್ಯ ಮೀನುಗಾರಿಕೆ ವಲಯಗಳ ಬಗ್ಗೆ ಮಾಹಿತಿ ನೀಡಲು ಮೀನುಗಾರರಿಗೆ ದ್ವಿಮುಖ ಸಂವಹನವನ್ನು ಇದು ಸಕ್ರಿಯಗೊಳಿಸುತ್ತದೆ.
xiii. 2024ರ ಸೆಪ್ಟೆಂಬರ್ 12 ರಂದು ಪಿ.ಎಂ.ಎಂ.ಎಸ್.ವೈ. ಯ 4 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ, ಮೀನುಗಾರಿಕೆ ಇಲಾಖೆಯು ಎನ್.ಎಫ್.ಡಿ.ಪಿ. (ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಕಾರ್ಯಕ್ರಮ) ಪೋರ್ಟಲ್ ಅನ್ನು ಪ್ರಾರಂಭಿಸಿತು, ಇದು ಮೀನುಗಾರಿಕೆಯಲ್ಲಿ ಭಾಗೀದಾರರ/ ಮಧ್ಯಸ್ಥಗಾರರ ನೋಂದಣಿ, ಮಾಹಿತಿ, ಸೇವೆಗಳು ಮತ್ತು ಮೀನುಗಾರಿಕೆಗೆ ಸಂಬಂಧಿಸಿದ ಬೆಂಬಲಕ್ಕಾಗಿರುವ ತಾಣವಾಗಿ ಕೆಲಸ ಮಾಡುತ್ತದೆ, ಹಾಗು ಪಿ.ಎಂ.-ಎಂ.ಕೆ.ಎಸ್.ಎಸ್.ವೈ. ಕಾರ್ಯಾಚರಣಾ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ (ಪಿ.ಎಂ.ಎಂ.ಎಸ್.ವೈ.) ಅಡಿಯಲ್ಲಿ ಉಪ ಯೋಜನೆಯಾದ ಪ್ರಧಾನ ಮಂತ್ರಿ ಮತ್ಸ್ಯ ಕಿಸಾನ್ ಸಮೃದ್ಧಿ ಸಹ್-ಯೋಜನಾ (ಪಿ.ಎಂ.-ಎಂ.ಕೆ.ಎಸ್.ಎಸ್.ವೈ.) ಅಡಿಯಲ್ಲಿ ಎನ್.ಎಫ್.ಡಿ.ಪಿ. ಯನ್ನು ರಚಿಸಲಾಗಿದೆ ಮತ್ತು ಮೀನು ಕಾರ್ಮಿಕರು ಹಾಗು ಮೀನುಗಾರಿಕೆಯಲ್ಲಿ ತೊಡಗಿರುವ ಉದ್ಯಮಗಳ ನೋಂದಣಿಯನ್ನು ಮಾಡುವ ಮೂಲಕ ವಿವಿಧ ಮಧ್ಯಸ್ಥಗಾರರಿಗೆ ಡಿಜಿಟಲ್ ಗುರುತನ್ನು ಒದಗಿಸುತ್ತದೆ. ದೇಶಾದ್ಯಂತ ಮೀನುಗಾರಿಕೆ ಮೌಲ್ಯ ಸರಪಳಿಯಲ್ಲಿ. ಎನ್.ಎಫ್.ಡಿ.ಪಿ. ಮೂಲಕ ಸಾಂಸ್ಥಿಕ ಕ್ರೆಡಿಟ್, ಕಾರ್ಯಕ್ಷಮತೆ ಅನುದಾನ, ಜಲಕೃಷಿ ವಿಮೆ ಮುಂತಾದ ವಿವಿಧ ಪ್ರಯೋಜನಗಳನ್ನು ಪಡೆಯಬಹುದು. ಎನ್.ಎಫ್.ಡಿ.ಪಿ. ಪೋರ್ಟಲ್‌ನಲ್ಲಿ ಇಲ್ಲಿಯವರೆಗೆ ಒಟ್ಟು 12,64,079 ನೋಂದಣಿಗಳನ್ನು ಮಾಡಲಾಗಿದೆ.
xiv. ಪಿಎಂಎಂಎಸ್‌ವೈ 4ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಇಲಾಖೆಯಿಂದ ‘ಸ್ಥಳೀಯ ತಳಿಗಳ ಪ್ರಚಾರ’ ಮತ್ತು ‘ರಾಜ್ಯ ಮೀನುಗಳ ಸಂರಕ್ಷಣೆ’ ಕುರಿತ ಕಿರುಪುಸ್ತಕವನ್ನು ಬಿಡುಗಡೆ ಮಾಡಲಾಯಿತು. 36 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಪೈಕಿ, 22 ರಾಜ್ಯಗಳು ತಮ್ಮ ರಾಜ್ಯದ ಮೀನುಗಳನ್ನು ಘೋಷಿಸಿವೆ ಅಥವಾ ದತ್ತು ಪಡೆದಿವೆ. 3 ರಾಜ್ಯಗಳು ರಾಜ್ಯದ ಜಲಚರ ಪ್ರಾಣಿಯನ್ನು ಘೋಷಿಸಿವೆ ಮತ್ತು ಲಕ್ಷದ್ವೀಪ್ ಹಾಗು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಯುಟಿಗಳು ತಮ್ಮ ರಾಜ್ಯ ಪ್ರಾಣಿಗಳನ್ನು ಘೋಷಿಸಿವೆ, ಹಾಗು ಅವು ಸಮುದ್ರ ಜಾತಿಗೆ ಸೇರಿದವುಗಳಾಗಿವೆ.
xv ಮೀನುಗಾರಿಕೆ ಇಲಾಖೆಯು ಇಂದು ಕಿಸಾನ್ ಕ್ರೆಡಿಟ್ ಕಾರ್ಡ್ ಮೀನುಗಾರಿಕೆ ಯೋಜನೆಯ ಏಕೀಕರಣವನ್ನು ಜನ ಸಮರ್ಥ ಪೋರ್ಟಲ್ ನಲ್ಲಿ ಯಶಸ್ವಿಯಾಗಿ ಉದ್ಘಾಟಿಸಿದೆ. ಇದು ಮೀನು ಕೃಷಿಕರಿಗೆ ಮತ್ತು ಮೀನುಗಾರಿಕಾ ವಲಯದ ಮಧ್ಯಸ್ಥಗಾರರಿಗೆ ಡಿಜಿಟಲ್ ವೇದಿಕೆಯನ್ನು ಒದಗಿಸುವ ನಿಟ್ಟಿನಲ್ಲಿ ಒಂದು ಚರಿತ್ರಾರ್ಹ ದಾಪುಗಾಲನ್ನು ಸೂಚಿಸುತ್ತದೆ.
xvi 2024ರ ಜುಲೈ 12,ರಂದು ಫಿಶರೀಸ್ ಸಮ್ಮರ್ ಮೀಟ್ 2024 ರ ಸಂದರ್ಭದಲ್ಲಿ, ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ (ಪಿ.ಎಂ.ಎಂ.ಎಸ್.ವೈ.) ಅಡಿಯಲ್ಲಿ ಒಟ್ಟು 321 ಪರಿಣಾಮಕಾರಿ ಯೋಜನೆಗಳನ್ನು ರೂ.114 ಕೋಟಿ ಯೋಜನಾ ಗಾತ್ರದೊಂದಿಗೆ ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಮತ್ತು ಪಂಚಾಯತ್ ರಾಜ್ ಸಚಿವರಾದ ಶ್ರೀ ರಾಜೀವ್ ರಂಜನ್ ಸಿಂಗ್ ಅಲಿಯಾಸ್ ಲಾಲನ್ ಸಿಂಗ್. ಅವರು ವರ್ಚುವಲ್ ಆಗಿ ಉದ್ಘಾಟಿಸಿದರು. ಇದು 19 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಿದೆ.
xvii. ಪ್ರತಿ ಪಂಚಾಯಿತಿಯಲ್ಲಿ 2 ಲಕ್ಷ ಪಿಎಸಿಎಸ್, ಹೈನುಗಾರಿಕೆ ಮತ್ತು ಮೀನುಗಾರಿಕೆ ಸಹಕಾರ ಸಂಘಗಳನ್ನು ಸ್ಥಾಪಿಸುವ ದೂರದೃಷ್ಟಿಯ ಚಿಂತನೆಯನ್ನು ಸಾಕಾರಗೊಳಿಸಲು ಮೀನುಗಾರಿಕೆ ಇಲಾಖೆಯು ಕೇಂದ್ರೀಯ ಮೀನುಗಾರಿಕೆ ಶಿಕ್ಷಣ ಸಂಸ್ಥೆ (ಐಸಿಎಆರ್-ಸಿಐಎಫ್ಇ) ಮತ್ತು ವೈಕುಂಠ ಮೆಹ್ತಾ ರಾಷ್ಟ್ರೀಯ ಸಹಕಾರಿ ಆಡಳಿತ ನಿರ್ವಹಣಾ ಸಂಸ್ಥೆ (ವಾಮ್ನಿಕಾಮ್) ಜೊತೆ ತಿಳುವಳಿಕಾ ಒಡಂಬಡಿಕೆಗೆ ಸಹಿ ಹಾಕಿದೆ. ಈ ತಿಳಿವಳಿಕೆ ಒಡಂಬಡಿಕೆಯು ಐಸಿಎಆರ್-ಸಿಐಎಫ್ಇ ಮತ್ತು ವಾಮ್ನಿಕಾಮ್ ನಡುವಿನ ಸಮನ್ವಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ, ಇದು ಮೀನುಗಾರಿಕೆಯಲ್ಲಿ ಹೆಚ್ಚಿನ ಸಹಕಾರಿ ನಿರ್ವಹಣಾ ಅಭ್ಯಾಸಗಳಿಗೆ ದಾರಿ ಮಾಡಿಕೊಡುತ್ತದೆ.
xviii. ಕರಾವಳಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತ 100 ಕರಾವಳಿ ಗ್ರಾಮಗಳನ್ನು ಹವಾಮಾನ ಸ್ಥಿತಿಸ್ಥಾಪಕ ಕರಾವಳಿ ಮೀನುಗಾರರ ಗ್ರಾಮಗಳಾಗಿ (ಸಿಆರ್ ಸಿಎಫ್ ವಿ) ಅಭಿವೃದ್ಧಿಪಡಿಸುವ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ. 200 ಕೋಟಿ ರೂ.ಗಳ ಹಂಚಿಕೆಯೊಂದಿಗೆ, ಈ ಉಪಕ್ರಮವು ಬದಲಾಗುತ್ತಿರುವ ಪರಿಸರ ಪರಿಸ್ಥಿತಿಗಳ ನಡುವೆ ಮೀನುಗಾರಿಕೆ ಸಮುದಾಯಗಳಿಗೆ ಆಹಾರ ಭದ್ರತೆ ಮತ್ತು ಸಾಮಾಜಿಕ-ಆರ್ಥಿಕ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಸುಸ್ಥಿರ ಮೀನುಗಾರಿಕೆ, ಮೂಲಸೌಕರ್ಯ ಸುಧಾರಣೆ ಮತ್ತು ಹವಾಮಾನ-ಸ್ಮಾರ್ಟ್ ಜೀವನೋಪಾಯಗಳ ಮೇಲೆ ಗಮನ ಕೇಂದ್ರೀಕರಿಸುತ್ತದೆ. ಹವಾಮಾನ ಸ್ಥಿತಿಸ್ಥಾಪಕ ಕರಾವಳಿ ಮೀನುಗಾರರ ಗ್ರಾಮ (ಸಿಸಿಸಿಆರ್ಸಿಎಫ್ವಿ) ಕೇಂದ್ರ ಸಮಿತಿಯು ನಡೆಸಿದ ವಿವರವಾದ ಸಮೀಕ್ಷೆಗಳು ಮತ್ತು ಅಂತರ ವಿಶ್ಲೇಷಣೆಗಳು ಅವಶ್ಯ ಆಯ್ಕೆ ಆಧಾರಿತ ಸೌಲಭ್ಯಗಳಾದ ಮೀನು ಒಣಗಿಸುವ ಯಾರ್ಡ್ಗಳು, ಸಂಸ್ಕರಣಾ ಕೇಂದ್ರಗಳು, ಮೀನು ಮಾರುಕಟ್ಟೆಗಳು ಮತ್ತು ತುರ್ತು ರಕ್ಷಣಾ ಸೌಲಭ್ಯಗಳಂತಹ ಸಾಮಾನ್ಯ ಸೌಲಭ್ಯಗಳು ಸೇರಿದಂತೆ ಇತರ ಸೌಲಭ್ಯಗಳನ್ನು ಒದಗಿಸಲು ಸಲಹೆ ನೀಡಿವೆ.. ಈ ಕಾರ್ಯಕ್ರಮವು ಸಮುದ್ರದ ಜೊಂಡಿನ ಕೃಷಿ ಫಾರ್ಮ್ ಗಳು, ಕೃತಕ ದಿಬ್ಬಗಳು ಮತ್ತು ಹಸಿರು ಇಂಧನದ ಉತ್ತೇಜನದಂತಹ ಉಪಕ್ರಮಗಳ ಮೂಲಕ ಹವಾಮಾನ-ಸ್ಥಿತಿಸ್ಥಾಪಕ/ಪುನಶ್ಚೇತನಯುಕ್ತ ಮೀನುಗಾರಿಕೆಯನ್ನು ಉತ್ತೇಜಿಸುತ್ತದೆ
xx. ಮೀನುಗಾರಿಕೆಯಲ್ಲಿ ತಂತ್ರಜ್ಞಾನವನ್ನು ಸಂಯೋಜಿಸುವ ಒಂದು ಹೆಜ್ಜೆಯಾಗಿ, ಮೀನು ಮತ್ತು ಮೀನು ಉತ್ಪನ್ನಗಳನ್ನು 100 ಕೆಜಿ ವರೆಗೆ ಪೇಲೋಡ್ ನೊಂದಿಗೆ 10 ಕಿ.ಮೀ ವ್ಯಾಪ್ತಿಯಲ್ಲಿ ಸಾಗಾಟ ಮಾಡಲು ಅನುಕೂಲವಾಗುವಂತೆ 1.16 ಕೋಟಿ ರೂ.ಗಳ ಪ್ರಾಯೋಗಿಕ ಅಧ್ಯಯನವನ್ನು ಕೈಗೊಳ್ಳಲಾಯಿತು. ಈ ಅಧ್ಯಯನವು ಒಳನಾಡಿನ ಮೀನುಗಾರಿಕೆಯನ್ನು ಮೇಲ್ವಿಚಾರಣೆ ಮಾಡುವಲ್ಲಿ ಮತ್ತು ನಿರ್ವಹಿಸುವಲ್ಲಿ, ದಕ್ಷತೆ ಮತ್ತು ಸುಸ್ಥಿರತೆಯನ್ನು ಸುಧಾರಿಸುವಲ್ಲಿ ಡ್ರೋನ್ಗಳ ಸಾಮರ್ಥ್ಯವನ್ನು ಅನ್ವೇಷಿಸುವ ಗುರಿಯನ್ನು ಹೊಂದಿದೆ.
xxi. ಸಮಗ್ರ ಜಲಚರ ಸಾಕಣೆ ಬೆಳವಣಿಗೆಯನ್ನು ಬೆಂಬಲಿಸಲು ಅಸ್ಸಾಂ, ಛತ್ತೀಸ್ ಗಢ, ಮಧ್ಯಪ್ರದೇಶ, ತ್ರಿಪುರಾ ಮತ್ತು ನಾಗಾಲ್ಯಾಂಡ್ ರಾಜ್ಯಗಳಲ್ಲಿ ಐದು ಸಮಗ್ರ ಅಕ್ವಾ ಪಾರ್ಕ್ ಗಳ ಅಭಿವೃದ್ಧಿ, ಮಾರುಕಟ್ಟೆ ಪ್ರವೇಶವನ್ನು ಹೆಚ್ಚಿಸಲು ಅರುಣಾಚಲ ಪ್ರದೇಶ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಎರಡು ವಿಶ್ವ ದರ್ಜೆಯ ಮೀನು ಮಾರುಕಟ್ಟೆಗಳನ್ನು ಸ್ಥಾಪಿಸುವುದು ಸೇರಿದಂತೆ 721.63 ಕೋಟಿ ರೂ.ಗಳ ವೆಚ್ಚದ ಆದ್ಯತೆಯ ಯೋಜನೆಗಳನ್ನು ಮೀನುಗಾರಿಕೆ ಇಲಾಖೆ ಘೋಷಿಸಿದೆ. ಕೊಯ್ಲಿನ ನಂತರದ ನಿರ್ವಹಣೆಯನ್ನು ಸುಧಾರಿಸಲು ಗುಜರಾತ್, ಪುದುಚೇರಿ ಮತ್ತು ದಮನ್ ಮತ್ತು ದಿಯು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿ ಮೂರು ಸ್ಮಾರ್ಟ್ ಮತ್ತು ಸಮಗ್ರ ಮೀನುಗಾರಿಕೆ ಬಂದರುಗಳ ಅಭಿವೃದ್ಧಿ ಹಾಗು ಉತ್ತರ ಪ್ರದೇಶ, ರಾಜಸ್ಥಾನ, ಅರುಣಾಚಲ ಪ್ರದೇಶ, ಮಣಿಪುರ, ಪಂಜಾಬ್ ರಾಜ್ಯಗಳಲ್ಲಿ 800 ಹೆಕ್ಟೇರ್ ಲವಣ (ಉಪ್ಪು ನೀರಿನ) ಪ್ರದೇಶ ಮತ್ತು ಸಮಗ್ರ ಮೀನು ಕೃಷಿಯನ್ನು ಉತ್ತೇಜಿಸುವುದು ಇದರಲ್ಲಿ ಸೇರಿದೆ.
xxiv. ಮೀನುಗಾರಿಕೆ ಮತ್ತು ಜಲಚರ ಸಾಕಣೆ ವಲಯವನ್ನು ತ್ವರಿತ ಬೆಳವಣಿಗೆ ಮತ್ತು ಆಧುನೀಕರಣದತ್ತ ಕೊಂಡೊಯ್ಯುವ ಕಾರ್ಯತಂತ್ರದ ಕ್ರಮದಲ್ಲಿ, ಭಾರತ ಸರ್ಕಾರವು ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ (ಪಿ.ಎಂ.ಎಂ.ಎಸ್.ವೈ.) ಅಡಿಯಲ್ಲಿ ಐದು ಸಮಗ್ರ ಅಕ್ವಾ ಪಾರ್ಕ್ ಗಳನ್ನು (ಐಎಪಿ) ಸ್ಥಾಪಿಸಲು ಅನುಮೋದನೆ ನೀಡಿದೆ. ಮೀನುಗಾರಿಕೆ ಮೌಲ್ಯ ಸರಪಳಿಯಲ್ಲಿ ಅಸ್ತಿತ್ವದಲ್ಲಿರುವ ಅಂತರಗಳನ್ನು ಪರಿಹರಿಸಲು ಸಮಗ್ರ ಮಧ್ಯಸ್ಥಿಕೆಗಳ ಅಗತ್ಯವನ್ನು ಗುರುತಿಸಿದ ಈ ಆಕ್ವಾ ಪಾರ್ಕ್ ಗಳು ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸುವ, ವ್ಯರ್ಥವಾಗುವುದನ್ನು/ಹಾಳಾಗುವುದನ್ನು ಕಡಿಮೆ ಮಾಡುವ ಮತ್ತು ಮೀನು ಕೃಷಿಕರು ಹಾಗು ಇತರ ಮಧ್ಯಸ್ಥಗಾರರ ಆದಾಯವನ್ನು ಸುಧಾರಿಸುವ ಸಮಗ್ರ ಪರಿಹಾರಗಳನ್ನು ನೀಡುವ ಮೂಲಕ ಈ ವಲಯದಲ್ಲಿ ಕ್ರಾಂತಿಯನ್ನುಂಟು ಮಾಡಲು ಸಜ್ಜಾಗಿವೆ. ಮೀನುಗಾರಿಕೆ ಮೌಲ್ಯ ಸರಪಳಿಯನ್ನು ಉತ್ತಮೀಕರಿಸಲು, ಉತ್ಪಾದನೆಯನ್ನು ಹೆಚ್ಚಿಸಲು, 1,400 ನೇರ ಮತ್ತು 2,400 ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಮತ್ತು ತ್ಯಾಜ್ಯವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿರುವ ಐದು ಸಮಗ್ರ ಅಕ್ವಾ ಪಾರ್ಕ್ ಗಳಲ್ಲಿ ಸರ್ಕಾರ 179.81 ಕೋಟಿ ರೂ.ಗಳನ್ನು ಹೂಡಿಕೆ ಮಾಡುತ್ತಿದೆ.
xxvi. ಮೀನುಗಾರಿಕೆ ಇಲಾಖೆಯು ಭುವನೇಶ್ವರದ ಐಸಿಎಆರ್-ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಫ್ರೆಶ್ ವಾಟರ್ ಅಕ್ವಾಕಲ್ಚರ್ ನಲ್ಲಿ (ಭುವನೇಶ್ವರದ ಸಿಹಿನೀರಿನ ಜಲಚರ ಸಾಕಣೆ ಸಂಸ್ಥೆಯಲ್ಲಿ -ಐಸಿಎಆರ್-ಸಿಐಎಫ್ಎ) "ರಂಗೀನ್ ಮಚ್ಲಿ" ಮೊಬೈಲ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿತು. ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ (ಪಿಎಂಎಂಎಸ್ವೈ) ಬೆಂಬಲದೊಂದಿಗೆ ಐಸಿಎಆರ್-ಸಿಐಎಫ್ಎ ಅಭಿವೃದ್ಧಿಪಡಿಸಿದ ಈ ಅಪ್ಲಿಕೇಶನ್ ಅನ್ನು ಅಲಂಕಾರಿಕ ಮೀನುಗಾರಿಕೆ ಕ್ಷೇತ್ರದ ಹೆಚ್ಚುತ್ತಿರುವ ಅಗತ್ಯಗಳನ್ನು ಪೂರೈಸಲು ವಿನ್ಯಾಸಗೊಳಿಸಲಾಗಿದೆ, ಹವ್ಯಾಸಿಗಳು, ಅಕ್ವೇರಿಯಂ ಅಂಗಡಿ ಮಾಲೀಕರು ಮತ್ತು ಮೀನು ಕೃಷಿಕರಿಗೆ ನಿರ್ಣಾಯಕ ಜ್ಞಾನ ಸಂಪನ್ಮೂಲಗಳನ್ನು ಇದು ಒದಗಿಸುತ್ತದೆ.
xxviii. ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ಮೀನುಗಾರಿಕೆ ಇಲಾಖೆ (ಎಂಒಎಫ್ಎಎಚ್ ಮತ್ತು ಡಿ) 2024 ರ ನವೆಂಬರ್ 21 ರಂದು ಹೊಸದಿಲ್ಲಿಯ ಸುಷ್ಮಾ ಸ್ವರಾಜ್ ಭವನದಲ್ಲಿ ಭಾರತದ ನೀಲಿ ರೂಪಾಂತರ: ಸಣ್ಣ ಪ್ರಮಾಣದ ಮತ್ತು ಸುಸ್ಥಿರ ಮೀನುಗಾರಿಕೆಯನ್ನು ಬಲಪಡಿಸುವುದು ಎಂಬ ಧ್ಯೇಯವಾಕ್ಯದೊಂದಿಗೆ ವಿಶ್ವ ಮೀನುಗಾರಿಕೆ ದಿನ 2024 ನ್ನು ಆಚರಿಸಿತು. ರೋಮ್ ನ ಇಟಲಿಯ ಭಾರತೀಯ ರಾಯಭಾರಿ ವಾಣಿ ರಾವ್, ಎಡಿಜಿ ಮತ್ತು ಮೀನುಗಾರಿಕಾ ವಿಭಾಗದ ನಿರ್ದೇಶಕ ಮ್ಯಾನುಯೆಲ್ ಬರಂಜ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ 54 ರಾಯಭಾರ ಕಚೇರಿ ಪ್ರತಿನಿಧಿಗಳು ಮತ್ತು ಹೈಕಮಿಷನ್ ಪ್ರತಿನಿಧಿಗಳು ಭಾಗವಹಿಸಿದ್ದರು. 2024 ರ ವಿಶ್ವ ಮೀನುಗಾರಿಕಾ ದಿನಾಚರಣೆಯ ಸಂದರ್ಭದಲ್ಲಿ ಮೀನುಗಾರಿಕೆ ಇಲಾಖೆ ಈ ಕೆಳಗಿನಂತೆ ಹೆಗ್ಗುರುತು ಉಪಕ್ರಮಗಳು ಮತ್ತು ಯೋಜನೆಗಳನ್ನು ಪ್ರಾರಂಭಿಸಿತು:
- ದತ್ತಾಂಶ ಚಾಲಿತ ನೀತಿ ನಿರೂಪಣೆಗಾಗಿ 5ನೇ ಸಾಗರ ಮೀನುಗಾರಿಕೆ ಗಣತಿಗೆ ಚಾಲನೆ,
- ಸುಸ್ಥಿರ ಶಾರ್ಕ್ ನಿರ್ವಹಣೆಗಾಗಿ ಶಾರ್ಕ್ ಗಳ ಕುರಿತ ರಾಷ್ಟ್ರೀಯ ಕ್ರಿಯಾ ಯೋಜನೆ ಮತ್ತು ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಮಾಲ್ಡೀವ್ಸ್ ಸಹಯೋಗದೊಂದಿಗೆ ಜಂಟಿಯಾಗಿ ಬಂಗಾಳಕೊಲ್ಲಿ ಪ್ರದೇಶದಲ್ಲಿ ಅಕ್ರಮ, ವರದಿಯಾಗದ ಮತ್ತು ಅನಿಯಂತ್ರಿತ ಮೀನುಗಾರಿಕೆಯನ್ನು ತಡೆಗಟ್ಟಲು ಐಯುಯು (ಅಕ್ರಮ, ವರದಿಯಾಗದ ಮತ್ತು ಅನಿಯಂತ್ರಿತ) ಮೀನುಗಾರಿಕೆ ಕುರಿತ ಪ್ರಾದೇಶಿಕ ಕ್ರಿಯಾ ಯೋಜನೆಗೆ ಭಾರತದ ಅನುಮೋದನೆ,
- ಸಮುದ್ರದ ಪ್ಲಾಸ್ಟಿಕ್ ಕಸದ ಸಮಸ್ಯೆಯನ್ನು ಎದುರಿಸಲು ಅಂತರರಾಷ್ಟ್ರೀಯ ಕಡಲ ಸಂಸ್ಥೆ-ಆಹಾರ ಮತ್ತು ಕೃಷಿ ಸಂಸ್ಥೆ (ಐಎಂಒ-ಎಫ್ಎಒ) ಗ್ಲೋಲಿಟರ್ ಪಾಲುದಾರಿಕೆ ಯೋಜನೆ, ಮತ್ತು ಇಂಧನ-ದಕ್ಷ, ಕಡಿಮೆ ವೆಚ್ಚದ ಸಮುದ್ರ ಮೀನುಗಾರಿಕೆ ಇಂಧನಗಳನ್ನು ಉತ್ತೇಜಿಸಲು ಮರುಹೊಂದಿಸಿದ ಎಲ್ಪಿಜಿ ಕಿಟ್ಗಳಿಗಾಗಿ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನಗಳು. (ಎಸ್ಒಪಿ).
- ಕರಾವಳಿ ಜಲಚರ ಸಾಕಣೆ ಕೇಂದ್ರಗಳ ಆನ್ ಲೈನ್ ನೋಂದಣಿಯನ್ನು ಸಕ್ರಿಯಗೊಳಿಸಲು ಕರಾವಳಿ ಜಲಚರ ಸಾಕಣೆ ಪ್ರಾಧಿಕಾರದಿಂದ ಹೊಸ ಏಕ ಗವಾಕ್ಷಿ ವ್ಯವಸ್ಥೆಯನ್ನು (ಎನ್ ಎಸ್ ಡಬ್ಲ್ಯೂಎಸ್) ಪ್ರಾರಂಭಿಸಲಾಯಿತು.
- ಈ ವಲಯದಲ್ಲಿ ಇಂಗಾಲ-ಸೀಕ್ವೆಸ್ಟರಿಂಗ್ ಅಭ್ಯಾಸಗಳನ್ನು ಬಳಸಿಕೊಳ್ಳುವ ಸ್ವಯಂಪ್ರೇರಿತ ಇಂಗಾಲದ ಮಾರುಕಟ್ಟೆ (ವಿಸಿಎಂ) ಗಾಗಿ ಚೌಕಟ್ಟನ್ನು ಕಾರ್ಯಗತಗೊಳಿಸಲು ಸಹಿ ಹಾಕಿದ ತಿಳಿವಳಿಕೆ ಒಡಂಬಡಿಕೆಯನ್ನು ವಿನಿಮಯ ಮಾಡಿಕೊಳ್ಳಲಾಯಿತು.
ಮೀನು ಮತ್ತು ಸಮುದ್ರಾಹಾರ ರಫ್ತನ್ನು ಬಲಪಡಿಸುವ ಉಪಕ್ರಮಗಳು
xxiv. ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಸೀಗಡಿ ಕೃಷಿ ಮತ್ತು ಮೌಲ್ಯ ಸರಪಳಿಯನ್ನು ಬಲಪಡಿಸುವತ್ತ ಗಮನ ಹರಿಸಿ ಮೀನುಗಾರಿಕೆ ರಫ್ತು ಉತ್ತೇಜನದ ಕುರಿತು ಮಧ್ಯಸ್ಥಗಾರರ/ಭಾಗೀದಾರರ ಸಮಾಲೋಚನೆಯನ್ನು ಮೀನುಗಾರಿಕೆ ಇಲಾಖೆ ಆಯೋಜಿಸಿತ್ತು. ಈ ಉಪಕ್ರಮವು ದೇಶವನ್ನು ಅಂತರರಾಷ್ಟ್ರೀಯ ಸಂಸ್ಕರಣಾ ಕೇಂದ್ರವಾಗಿ ಪರಿವರ್ತಿಸುವ ದೃಷ್ಟಿಕೋನವನ್ನು ಹೊಂದಿದೆ, ಮೀನುಗಾರಿಕೆ ಕ್ಷೇತ್ರವನ್ನು ಬಂಡವಾಳ ಮತ್ತು ಡಿಜಿಟಲೀಕರಣಗೊಳಿಸುತ್ತದೆ.
xxv. ಮೀನುಗಾರಿಕೆ ಇಲಾಖೆಯು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಟ್ಯೂನಾ ಕ್ಲಸ್ಟರ್ ಅಭಿವೃದ್ಧಿಗೆ ಅಧಿಸೂಚನೆ ಹೊರಡಿಸಿದೆ. ಗುಚ್ಛ (ಕ್ಲಸ್ಟರ್) ಆಧಾರಿತ ವಿಧಾನವು ಉತ್ಪಾದನೆಯಿಂದ ರಫ್ತುಗಳವರೆಗೆ ಇಡೀ ಮೌಲ್ಯ ಸರಪಳಿಯಾದ್ಯಂತ ಸೂಕ್ಷ್ಮ, ಸಣ್ಣ, ಮಧ್ಯಮ ಮತ್ತು ದೊಡ್ಡ ಗಾತ್ರದ ಭೌಗೋಳಿಕವಾಗಿ ಸಂಪರ್ಕಿತ ಉದ್ಯಮಗಳನ್ನು ಒಗ್ಗೂಡಿಸುವ ಮೂಲಕ ಸ್ಪರ್ಧಾತ್ಮಕತೆ ಮತ್ತು ದಕ್ಷತೆಯನ್ನು ಹೆಚ್ಚಿಸುತ್ತದೆ. ಟ್ಯೂನಾ ಕ್ಲಸ್ಟರ್ ನ ಅಭಿವೃದ್ಧಿಯು ಹೆಚ್ಚಿನ ಮೌಲ್ಯದ ಪ್ರಭೇದಗಳ ರಫ್ತನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.
xxvi. ಕೇಂದ್ರ ಮೀನುಗಾರಿಕೆ ಇಲಾಖೆ, ಎಂಒಎಫ್ಎಎಚ್ ಮತ್ತು ಡಿಯ ಗೌರವಾನ್ವಿತ ಸಚಿವರಾದ ಶ್ರೀ ರಾಜೀವ್ ರಂಜನ್ ಸಿಂಗ್ ಮತ್ತು ವಾಣಿಜ್ಯ ಹಾಗು ಕೈಗಾರಿಕಾ ಸಚಿವಾಲಯದ ವಾಣಿಜ್ಯ ಇಲಾಖೆಯ ಗೌರವಾನ್ವಿತ ಕೇಂದ್ರ ಸಚಿವ ಶ್ರೀ ಪಿಯೂಷ್ ಗೋಯಲ್ ಅವರು ಮೀನುಗಾರಿಕೆ ಇಲಾಖೆ ಮತ್ತು ಸಾಗರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (ಎಂಪಿಇಡಿಎ) ನಡುವಿನ ಸಮನ್ವಯವನ್ನು ಬಲಪಡಿಸುವ ಮಾರ್ಗಗಳ ಬಗ್ಗೆ ಚರ್ಚಿಸಲು ಮಧ್ಯಸ್ಥಗಾರರ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಅವುಗಳ ನಡುವಿನ ಹೆಚ್ಚಿನ ಸಂಯೋಜನೆ ಭಾರತದ ಮೀನುಗಾರ ಸಮುದಾಯಕ್ಕೆ ಗಮನಾರ್ಹವಾಗಿ ಪ್ರಯೋಜನವನ್ನು ನೀಡುತ್ತದೆ ಮತ್ತು ದೇಶದ ಸಾಗರ ರಫ್ತುಗಳನ್ನು ಮತ್ತಷ್ಟು ಹೆಚ್ಚಿಸುತ್ತದೆ.
ಯೋಜನೆಗಳು ಮತ್ತು ಕಾರ್ಯಕ್ರಮಗಳು
ಕಳೆದ ಹತ್ತು ವರ್ಷಗಳಲ್ಲಿ, ಭಾರತ ಸರ್ಕಾರವು ಮೀನು ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವುದು ಸೇರಿದಂತೆ ದೇಶದಲ್ಲಿ ಮೀನುಗಾರಿಕೆ ಮತ್ತು ಜಲಚರ ಸಾಕಣೆಯ ಅಭಿವೃದ್ಧಿಗೆ ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ. 2015-16ನೇ ಸಾಲಿನಲ್ಲಿ,
- ನೀಲಿ ಕ್ರಾಂತಿ ಯೋಜನೆ: ಮೀನುಗಾರಿಕೆಯ ಸಮಗ್ರ ಅಭಿವೃದ್ಧಿ ಮತ್ತು ನಿರ್ವಹಣೆಗಾಗಿ ಭಾರತ ಸರ್ಕಾರವು ಕೇಂದ್ರ ಪ್ರಾಯೋಜಿತ ನೀಲಿ ಕ್ರಾಂತಿ ಯೋಜನೆಯನ್ನು (ಸಿಎಸ್ಎಸ್-ಬಿಆರ್) ಪ್ರಾರಂಭಿಸಿತು. 2015-16 ರಿಂದ 2019-20 ರವರೆಗೆ 5 ವರ್ಷಗಳ ಕಾಲ ಬಹು ಆಯಾಮದ ಚಟುವಟಿಕೆಗಳೊಂದಿಗೆ ಜಾರಿಯಾದ ಬಿಆರ್ ಯೋಜನೆಯು ಮೀನುಗಾರಿಕೆ ಕ್ಷೇತ್ರಕ್ಕೆ ಸುಮಾರು 5000 ಕೋಟಿ ರೂ.ಬಂಡವಾಳವನ್ನು ಹೂಡಿಕೆ ಮಾಡಿದೆ.
- ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ (ಪಿಎಂಎಂಎಸ್ವೈ): ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ (ಪಿಎಂಎಂಎಸ್ವೈ) ಅನ್ನು 2020-21ನೇ ಸಾಲಿನಲ್ಲಿ ಎಲ್ಲಾ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿ ಹಣಕಾಸು ವರ್ಷ 2020-21 ರಿಂದ 2024-25 ರವರೆಗೆ 5 ವರ್ಷಗಳ ಅವಧಿಯಲ್ಲಿ ಅನುಷ್ಠಾನಕ್ಕಾಗಿ 20,050 ಕೋಟಿ ರೂ.ಗಳ ಅಂದಾಜು ಹೂಡಿಕೆಯೊಂದಿಗೆ ಪ್ರಾರಂಭಿಸಲಾಯಿತು. ಕಳೆದ ನಾಲ್ಕು ವರ್ಷಗಳಲ್ಲಿ ಮತ್ತು ಪ್ರಸಕ್ತ ಹಣಕಾಸು ವರ್ಷದಲ್ಲಿ ಪಿ.ಎಂ.ಎಂ.ಎಸ್.ವೈ. ಅಡಿಯಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಮತ್ತು ಇತರ ಅನುಷ್ಠಾನ ಸಂಸ್ಥೆಗಳಿಗೆ 8871.42 ಕೋಟಿ ರೂ.ಗಳ ಕೇಂದ್ರದ ಪಾಲು ಹೊಂದಿರುವ 20864.29 ಕೋಟಿ ರೂ.ಗಳ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಪಿ.ಎಂ.ಎಂ.ಎಸ್.ವೈ. ಅಡಿಯಲ್ಲಿ ಅನುಮೋದಿಸಲಾದ ಪ್ರಮುಖ ಯೋಜನೆಗಳಲ್ಲಿ ಮೀನುಗಾರಿಕೆ ಬಂದರುಗಳು, ಮೀನು ಇಳಿಸುವ ಕೇಂದ್ರಗಳು, ಜಲಾಶಯ ಪಂಜರ ಕೃಷಿ, ಉಪ್ಪು ಮತ್ತು ಸಿಹಿನೀರಿನ ಜಲಚರ ಸಾಕಣೆ, ಮೀನುಗಾರರ ಕಲ್ಯಾಣ, ಸುಗ್ಗಿಯ/ಕೊಯೊಲೋತ್ತರ ಮೂಲಸೌಕರ್ಯ ಸೌಲಭ್ಯಗಳು, ಸಮುದ್ರದ ಜೊಂಡು, ಅಲಂಕಾರಿಕ ಮತ್ತು ತಣ್ಣೀರು ಮೀನುಗಾರಿಕೆ ಇತ್ಯಾದಿಗಳು ಸೇರಿವೆ.
ಪಿ.ಎಂ.ಎಂ.ಎಸ್.ವೈ ಅಡಿಯಲ್ಲಿ ಭೌತಿಕ ಸಾಧನೆಗಳು (2020-21 ರಿಂದ ಇಲ್ಲಿಯವರೆಗೆ)
- ಒಳನಾಡಿನ ಮೀನುಗಾರಿಕೆ: 52,058 ಬೋನುಗಳು, ಒಳನಾಡಿನ ಜಲಚರ ಸಾಕಣೆಗಾಗಿ 23285.06 ಹೆಕ್ಟೇರ್ ಕೊಳ ಪ್ರದೇಶ, 12,081 ಮರುಪರಿಚಲನಾ ಜಲಚರ ಸಾಕಣೆ ವ್ಯವಸ್ಥೆಗಳು (ಆರ್ಎಎಸ್), 4,205 ಬಯೋಫ್ಲಾಕ್ ಘಟಕಗಳು, ಒಳನಾಡಿನ ಲವಣ-ಕ್ಷಾರೀಯ ಕೃಷಿಗಾಗಿ 3159.31 ಹೆಕ್ಟೇರ್ ಕೊಳ ಪ್ರದೇಶ, 890 ಮೀನು ಮತ್ತು 5 ಸ್ಕ್ಯಾಂಪಿ ಹ್ಯಾಚರಿಗಳು, ಜಲಾಶಯಗಳಲ್ಲಿ ಮತ್ತು ಇತರ ನೀರಿನಾಶ್ರಯಗಳಲ್ಲಿ 560.7 ಹೆಕ್ಟೇರ್ ಪೆನ್ ಗಳು (ವಿಸ್ತಾರವಾದ ಜಲರಾಶಿಯಲ್ಲಿ ಮೀನು ಅಥವಾ ಜಲಚರ ಸಾಕಣೆಗಾಗಿ ಆವರಣಗಳಿಂದ ಪ್ರತ್ಯೇಕಿಸಲ್ಪಟ್ಟ ಪ್ರದೇಶ) ಮತ್ತು 25 ಬ್ರೂಡ್ ಬ್ಯಾಂಕ್ ಗಳನ್ನು ಅನುಮೋದಿಸಲಾಗಿದೆ.
- ಸಾಗರ ಮೀನುಗಾರಿಕೆ: ಯಾಂತ್ರೀಕೃತ ಮೀನುಗಾರಿಕಾ ಹಡಗುಗಳಲ್ಲಿ 2,259 ಜೈವಿಕ ಶೌಚಾಲಯಗಳು, ಮೀನು ಸಾಕಾಣಿಕೆಗಾಗಿ 1,525 ತೆರೆದ ಸಮುದ್ರದ ಪಂಜರಗಳು, ಅಸ್ತಿತ್ವದಲ್ಲಿರುವ 1,338 ಮೀನುಗಾರಿಕಾ ಹಡಗುಗಳನ್ನು ಮೇಲ್ದರ್ಜೆಗೇರಿಸುವುದು, ಉಪ್ಪುನೀರಿನ ಜಲಚರ ಸಾಕಣೆಗಾಗಿ 1,580.86 ಹೆಕ್ಟೇರ್ ಕೊಳ ಪ್ರದೇಶ, 480 ಆಳ ಸಮುದ್ರ ಮೀನುಗಾರಿಕೆ ಹಡಗು, 17 ಉಪ್ಪುನೀರಿನ ಹ್ಯಾಚರಿಗಳು ಮತ್ತು 5 ಸಣ್ಣ ಸಮುದ್ರ ಫಿನ್ ಫಿಶ್ ಹ್ಯಾಚರಿಗಳಿಗೆ ಅನುಮೋದನೆ ನೀಡಲಾಗಿದೆ.
- ಮೀನುಗಾರರ ಕಲ್ಯಾಣ: ಮೀನುಗಾರರಿಗೆ 6,706 ಬದಲಿ ದೋಣಿಗಳು ಮತ್ತು ಬಲೆಗಳು, ಮೀನುಗಾರಿಕೆ ನಿಷೇಧ ಅವಧಿಯಲ್ಲಿ 5,94,538 ಮೀನುಗಾರರ ಕುಟುಂಬಗಳಿಗೆ ಜೀವನೋಪಾಯ ಮತ್ತು ಪೌಷ್ಠಿಕಾಂಶದ ಬೆಂಬಲ ಹಾಗು 102 ವಿಸ್ತರಣೆ ಮತ್ತು ಬೆಂಬಲ ಸೇವೆಗಳನ್ನು (ಮತ್ಸ್ಯ ಸೇವಾ ಕೇಂದ್ರಗಳು) ಅನುಮೋದಿಸಲಾಗಿದೆ.
- ಮೀನುಗಾರಿಕೆ ಮೂಲಸೌಕರ್ಯ: ಮೀನು ಸಾಗಣೆ ಸೌಲಭ್ಯಗಳಾದ ಮೋಟರ್ ಸೈಕಲ್ ಗಳು (10,924), ಐಸ್ ಬಾಕ್ಸ್ ಹೊಂದಿರುವ ಬೈಸಿಕಲ್ ಗಳು (9,412), ಆಟೋ ರಿಕ್ಷಾಗಳು (3,860), ಇನ್ಸುಲೇಟೆಡ್ ಟ್ರಕ್ ಗಳು (1,377), ಜೀವಂತ ಮೀನು ಮಾರಾಟ ಕೇಂದ್ರಗಳು (1,243), ಮೀನು ಆಹಾರ ಗಿರಣಿ / ಸ್ಥಾವರಗಳು (1091), ಐಸ್ ಪ್ಲಾಂಟ್ / ಕೋಲ್ಡ್ ಸ್ಟೋರೇಜ್ ಗಳು (634) ಮತ್ತು ಶೈತ್ಯೀಕರಿಸಿದ ವಾಹನಗಳು (373). ಸಹಿತ 27,189 ಮೀನು ಸಾಗಾಣಿಕಾ ಘಟಕಗಳನ್ನು ಮಂಜೂರು ಮಾಡಲಾಗಿದೆ. ಇದಲ್ಲದೆ ಚಿಲ್ಲರೆ ಮೀನು ಮಾರುಕಟ್ಟೆಗಳ ಘಟಕಗಳು (188) ಮತ್ತು ಅಲಂಕಾರಿಕ ಕಿಯೋಸ್ಕ್ಗಳು (6,896) ಹಾಗು 128 ಮೌಲ್ಯವರ್ಧಿತ ಉದ್ಯಮ ಘಟಕಗಳನ್ನು ಮಂಜೂರು ಮಾಡಲಾಗಿದೆ.
- ಜಲಚರ ಆರೋಗ್ಯ ನಿರ್ವಹಣೆ: 19 ರೋಗ ಪತ್ತೆ ಕೇಂದ್ರಗಳು ಮತ್ತು ಗುಣಮಟ್ಟ ಪರೀಕ್ಷಾ ಪ್ರಯೋಗಾಲಯಗಳು, 31 ಸಂಚಾರಿ ಕೇಂದ್ರಗಳು ಮತ್ತು ಪರೀಕ್ಷಾ ಪ್ರಯೋಗಾಲಯಗಳು ಮತ್ತು 6 ಜಲ ರೆಫರಲ್ ಪ್ರಯೋಗಾಲಯಗಳಿಗೆ ಅನುಮೋದನೆ ನೀಡಲಾಗಿದೆ.
- ಅಲಂಕಾರಿಕ ಮೀನುಗಾರಿಕೆ: 2,465 ಅಲಂಕಾರಿಕ ಮೀನು ಸಾಕಾಣಿಕೆ ಘಟಕಗಳು ಮತ್ತು 207 ಸಮಗ್ರ ಅಲಂಕಾರಿಕ ಮೀನು ಘಟಕಗಳಿಗೆ (ಸಂತಾನೋತ್ಪತ್ತಿ ಮತ್ತು ಸಾಕಾಣಿಕೆ) ಅನುಮೋದನೆ ನೀಡಲಾಗಿದೆ.
- ಸಮುದ್ರದ ಕಳೆ/ಜೊಂಡಿನ ಕೃಷಿ: 47,245 ತೆಪ್ಪಗಳು ಮತ್ತು 65,480 ಮೊನೊಲೈನ್ ಟ್ಯೂಬ್ ಗಳನ್ನು ಅನುಮೋದಿಸಲಾಗಿದೆ.
- • ಈಶಾನ್ಯ ಪ್ರದೇಶಗಳ ಅಭಿವೃದ್ಧಿ: ಒಟ್ಟು 1722.79 ಕೋಟಿ ರೂ.ಗಳ ಯೋಜನಾ ವೆಚ್ಚವನ್ನು ಅನುಮೋದಿಸಲಾಗಿದ್ದು, ಕೇಂದ್ರದ ಪಾಲು 980.40 ಕೋಟಿ ರೂ. ಇದರಲ್ಲಿ 7063.29 ಹೆಕ್ಟೇರ್ ಹೊಸ ಕೊಳಗಳ ನಿರ್ಮಾಣ, ಸಮಗ್ರ ಮೀನು ಕೃಷಿಗಾಗಿ 5063.11 ಹೆಕ್ಟೇರ್ ಪ್ರದೇಶ, 644 ಅಲಂಕಾರಿಕ ಮೀನುಗಾರಿಕೆ ಘಟಕಗಳು, 470 ಬಯೋಫ್ಲಾಕ್ ಘಟಕಗಳು (ಪೋಷಕಾಂಶಗಳನ್ನು ಮರುಬಳಕೆ ಮಾಡುವ ತಂತ್ರಜ್ಞಾನ) , 231 ಹ್ಯಾಚರಿಗಳು, 148 ಮರು-ಪರಿಚಲನಾ ಜಲಚರ ಸಾಕಣೆ ವ್ಯವಸ್ಥೆ (ಆರ್ಎಎಸ್) ಮತ್ತು 140 ಆಹಾರ ಗಿರಣಿಗಳಿಗೆ ಅನುಮೋದನೆ ನೀಡಲಾಗಿದೆ.
- • ಔಟ್ರೀಚ್ ಚಟುವಟಿಕೆಗಳು: ಡಿಒಎಫ್ ಎನ್ಎಫ್ಡಿಬಿ, ಡಬ್ಲ್ಯೂಎಫ್ಎಫ್ಡಿ, ಮೀನು ಉತ್ಸವಗಳು, ಮೇಳಗಳು, ಪ್ರದರ್ಶನಗಳು, ಸಮ್ಮೇಳನ ಇತ್ಯಾದಿಗಳಿಂದ 155 ಲಕ್ಷ ಚಟುವಟಿಕೆಗಳು, 12.63 ಲಕ್ಷ ತರಬೇತಿ ಮತ್ತು ಸಾಮರ್ಥ್ಯ ವರ್ಧನೆ ಕಾರ್ಯಕ್ರಮಗಳು, 10.88 ಲಕ್ಷ ಯಶೋಗಾಥೆಗಳ ಮಾಹಿತಿ, ಕರಪತ್ರಗಳು, , ಕಿರುಪುಸ್ತಕಗಳು ವಿತರಣೆ ಮತ್ತು ಔಟ್ರೀಚ್ ಅಭಿಯಾನಗಳು ಇತ್ಯಾದಿ.
- • ಇತರ ಪ್ರಮುಖ ಚಟುವಟಿಕೆಗಳು: 2,494 ಸಾಗರ ಮಿತ್ರರು ಮತ್ತು 102 ಮತ್ಸ್ಯ ಸೇವಾ ಕೇಂದ್ರಗಳಿಗೆ ಅನುಮೋದನೆ.
iii. ಪ್ರಧಾನ ಮಂತ್ರಿ ಮತ್ಸ್ಯ ಕಿಸಾನ್ ಸಮೃದ್ಧಿ ಸಹ-ಯೋಜನೆ (ಪಿಎಂಎಂಕೆಎಸ್ಎಸ್ವೈ): "ಪ್ರಧಾನ ಮಂತ್ರಿ ಮತ್ಸ್ಯ ಕಿಸಾನ್ ಸಮೃದ್ಧಿ ಸಹ-ಯೋಜನೆ (ಪಿಎಂ-ಎಂಕೆಎಸ್ಎಸ್ವೈ)ಯು, 2023-24 ರಿಂದ 2026-27 ರ ಹಣಕಾಸು ವರ್ಷದವರೆಗೆ ನಾಲ್ಕು ವರ್ಷಗಳ ಅವಧಿಗೆ ಚಾಲ್ತಿಯಲ್ಲಿರುವ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ (ಪಿಎಂಎಂಎಸ್ವೈ) ಅಡಿಯಲ್ಲಿ ಕಾರ್ಯಾಚರಿಸುವ ಉಪ ಯೋಜನೆಯಾಗಿದೆ. 2024ರ ಸೆಪ್ಟೆಂಬರ್ 11 ರಂದು ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ (ಪಿಎಂಎಂಎಸ್ವೈ)ಯ 4 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಈ ಉಪ ಯೋಜನೆಯನ್ನು ಅಂದಾಜು 6000 ಕೋಟಿ ರೂ.ಗಳ ಹೂಡಿಕೆಯೊಂದಿಗೆ ಆರಂಭಿಸಲಾಯಿತು. ಮೀನುಗಾರಿಕೆ ಕ್ಷೇತ್ರವನ್ನು ಸ್ಥಿತಿಸ್ಥಾಪಕವಾಗಿಸಲು ಮತ್ತು ಮೀನುಗಾರಿಕೆ ಮೌಲ್ಯ ಸರಪಳಿಯಲ್ಲಿ ದಕ್ಷತೆಯನ್ನು ಅಳವಡಿಸಿಕೊಳ್ಳುವುದನ್ನು ಪ್ರೋತ್ಸಾಹಿಸಲು ಇಲಾಖೆಯು ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ (ಪಿಎಂಎಂಎಸ್ವೈ) ಅಡಿಯಲ್ಲಿ "ಪ್ರಧಾನ ಮಂತ್ರಿ ಮತ್ಸ್ಯ ಕಿಸಾನ್ ಸಮೃದ್ಧಿ ಸಹ ಯೋಜನೆ (ಪಿಎಂಎಂಕೆಎಸ್ಎಸ್ವೈ)" ಎಂಬ ಕೇಂದ್ರ ವಲಯದ ಉಪ ಯೋಜನೆಯನ್ನು 6000 ಕೋಟಿ ರೂ.ಗಳ ಹೂಡಿಕೆಯೊಂದಿಗೆ ಜಾರಿಗೆ ತರುತ್ತಿದೆ. ಪಿ.ಎಂ.ಎಂ.ಕೆ.ಎಸ್.ಎಸ್.ವೈ. ಮೀನುಗಾರಿಕೆ ಕ್ಷೇತ್ರವನ್ನು ಔಪಚಾರಿಕಗೊಳಿಸುವುದು, ಜಲಚರ ಸಾಕಣೆ ವಿಮೆಯನ್ನು ಉತ್ತೇಜಿಸುವುದು, ಮೀನುಗಾರಿಕೆ ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳು ಮೌಲ್ಯ ಸರಪಳಿ ದಕ್ಷತೆ, ಸುರಕ್ಷಿತ ಮೀನು ಉತ್ಪಾದನೆಗಾಗಿ ಸುರಕ್ಷತೆ ಮತ್ತು ಗುಣಮಟ್ಟದ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವುದು ಇತ್ಯಾದಿಗಳ ಗುರಿಯನ್ನು ಹೊಂದಿದೆ.
ಉದ್ದೇಶಗಳು:
- ಸೇವಾ ವಿತರಣೆಗಾಗಿ ಕೆಲಸ ಆಧಾರಿತ ಡಿಜಿಟಲ್ ಗುರುತುಗಳನ್ನು ರಚಿಸುವುದು ಸೇರಿದಂತೆ ಅಸಂಘಟಿತ ಮೀನುಗಾರಿಕೆ ಕ್ಷೇತ್ರವನ್ನು ಕ್ರಮೇಣ ಔಪಚಾರಿಕೀಕರಣ ಮಾಡುವುದು.
- ತಮ್ಮ ಕಾರ್ಯಾಚರಣೆಗಳನ್ನು ವಿಸ್ತರಿಸಲು ದುಡಿಯುವ ಬಂಡವಾಳ ಸೇರಿದಂತೆ ಸಾಂಸ್ಥಿಕ ಹಣಕಾಸು ಲಭ್ಯತೆಯನ್ನು ಸುಗಮಗೊಳಿಸುವುದು.
- ಜಲಚರ ಸಾಕಣೆ ವಿಮೆಯನ್ನು ಖರೀದಿಸಲು ಒಂದು ಬಾರಿಯ ಪ್ರೋತ್ಸಾಹಧನ.
- ಮೌಲ್ಯ-ಸರಪಳಿ ದಕ್ಷತೆಯನ್ನು ಸುಧಾರಿಸಲು ಮತ್ತು ಉದ್ಯೋಗಗಳನ್ನು ಸೃಷ್ಟಿಸಲು ಮೀನುಗಾರಿಕೆ ಮತ್ತು ಜಲಚರ ಸಾಕಣೆಯ ಸೂಕ್ಷ್ಮ ಉದ್ಯಮಗಳನ್ನು ಪ್ರೋತ್ಸಾಹಿಸುವುದು
- ಸುರಕ್ಷಿತ ಮೀನು ಮತ್ತು ಮೀನುಗಾರಿಕೆ ಉತ್ಪನ್ನಗಳ ಪೂರೈಕೆ ಸರಪಳಿಗಳನ್ನು ಸ್ಥಾಪಿಸಲು ಮೀನುಗಾರಿಕೆ ವಲಯದಲ್ಲಿ ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಿಗೆ ಪ್ರೋತ್ಸಾಹ
- ಮೀನುಗಾರಿಕೆ ಮೌಲ್ಯ ಸರಪಳಿಗಳ ಏಕೀಕರಣ ಮತ್ತು ಬಲವರ್ಧನೆ.
Iv ಮೀನುಗಾರಿಕೆ ಮತ್ತು ಜಲಚರ ಸಾಕಣೆ ಮೂಲಸೌಕರ್ಯ ಅಭಿವೃದ್ಧಿ ನಿಧಿ (ಎಫ್ಐಡಿಎಫ್): ಮೀನುಗಾರಿಕೆ ಕ್ಷೇತ್ರಕ್ಕೆ ಮೂಲಸೌಕರ್ಯ ಅಗತ್ಯವನ್ನು ಪೂರೈಸುವ ಸಲುವಾಗಿ, ಮೀನುಗಾರಿಕೆ ಮತ್ತು ಜಲಚರ ಸಾಕಣೆ ಮೂಲಸೌಕರ್ಯ ಅಭಿವೃದ್ಧಿ ನಿಧಿ (ಎಫ್ಐಡಿಎಫ್) ಅನ್ನು 2018-19ನೇ ಸಾಲಿನಲ್ಲಿ ಒಟ್ಟು 7522.48 ಕೋಟಿ ರೂ.ಗಳ ನಿಧಿಯೊಂದಿಗೆ ಪ್ರಾರಂಭಿಸಲಾಯಿತು. ಈ ನಿಧಿಯು ಮೀನುಗಾರಿಕೆಗೆ ಸಂಬಂಧಿಸಿದ ಯೋಜನೆಗಳಿಗೆ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್), ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮ (ಎನ್ಸಿಡಿಸಿ) ಮತ್ತು ಶೆಡ್ಯೂಲ್ಡ್ ಬ್ಯಾಂಕುಗಳ ಮೂಲಕ ರಿಯಾಯಿತಿ ದರದಲ್ಲಿ ಸಾಲವನ್ನು ನೀಡುತ್ತದೆ.
• ಮೀನುಗಾರಿಕೆ ಬಂದರುಗಳು, ಮೀನು ಇಳಿಸುವ ಕೇಂದ್ರಗಳು ಮತ್ತು ಮೀನು ಸಂಸ್ಕರಣಾ ಘಟಕಗಳು ಸೇರಿದಂತೆ 5794.09 ಕೋಟಿ ರೂ.ಗಳ ವೆಚ್ಚದ ಒಟ್ಟು 132 ಪ್ರಸ್ತಾವನೆಗಳಿಗೆ ಎಫ್ಐಡಿಎಫ್ ಅಡಿಯಲ್ಲಿ ಅನುಮೋದನೆ ನೀಡಲಾಗಿದೆ. ಮಂಜೂರಾದ ಯೋಜನೆಗಳು ಮೀನುಗಾರಿಕೆ ಕ್ಷೇತ್ರದಲ್ಲಿ 5794 ಕೋಟಿ ರೂ.ಗಳ ಹೂಡಿಕೆಯನ್ನು ಕ್ರೋಢೀಕರಿಸಿದ್ದು, ಇದರಲ್ಲಿ 300 ಕೋಟಿ ರೂ.ಗಳನ್ನು ಖಾಸಗಿ ಉದ್ಯಮಗಳಿಂದ ಸಂಗ್ರಹಿಸಲಾಗಿದೆ.
- • ಮಂಜೂರಾದ ಯೋಜನೆಗಳಲ್ಲಿ 22 ಮೀನುಗಾರಿಕಾ ಬಂದರುಗಳು, 24 ಮೀನು ಇಳಿಸುವ ಕೇಂದ್ರಗಳು, 4 ಸಂಸ್ಕರಣಾ ಘಟಕಗಳು, ಮೀನುಗಾರಿಕೆ ಬಂದರುಗಳಲ್ಲಿ 6 ಹೆಚ್ಚುವರಿ ಸೌಲಭ್ಯಗಳು, 8 ಐಸ್ ಪ್ಲಾಂಟ್ ಗಳು / ಕೋಲ್ಡ್ ಸ್ಟೋರೇಜ್, 6 ತರಬೇತಿ ಕೇಂದ್ರಗಳು, 21 ಮೀನು ಬೀಜ ಫಾರ್ಮ್ ಗಳ ಆಧುನೀಕರಣ ಇತ್ಯಾದಿಗಳು ಸೇರಿವೆ.
- • ಎಫ್ಐಡಿಎಫ್ನ ಆರಂಭಿಕ ಹಂತದಲ್ಲಿ, ಪೂರ್ಣಗೊಂಡ ಯೋಜನೆಗಳು 8100 ಕ್ಕೂ ಹೆಚ್ಚು ಮೀನುಗಾರಿಕಾ ಹಡಗುಗಳಿಗೆ ಸುರಕ್ಷಿತ ಲ್ಯಾಂಡಿಂಗ್ ಮತ್ತು ತಂಗುವ (ಬರ್ತಿಂಗ್) ಸೌಲಭ್ಯಗಳನ್ನು ಸೃಷ್ಟಿಸಿವೆ, 1.09 ಲಕ್ಷ ಟನ್ ಮೀನು ಇಳಿಯುವಿಕೆಯನ್ನು ಹೆಚ್ಚಿಸಿವೆ, ಸುಮಾರು 3.3 ಲಕ್ಷ ಮೀನುಗಾರರು ಮತ್ತು ಇತರ ಮಧ್ಯಸ್ಥಗಾರರಿಗೆ ಪ್ರಯೋಜನವನ್ನು ನೀಡುತ್ತಿವೆ ಮತ್ತು 2.5 ಲಕ್ಷ ನೇರ ಮತ್ತು ಪರೋಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸಿವೆ.
- ಕಿಸಾನ್ ಕ್ರೆಡಿಟ್ ಕಾರ್ಡ್ (KCC): ಭಾರತ ಸರ್ಕಾರವು 2018-19ರ ಆರ್ಥಿಕ ವರ್ಷದಿಂದ ಜಾರಿಗೆ ಬರುವಂತೆ ಮೀನುಗಾರರು ಮತ್ತು ಮೀನು ಕೃಷಿಕರಿಗೆ ತಮ್ಮ ಕಾರ್ಯ ಬಂಡವಾಳದ ಅಗತ್ಯಗಳನ್ನು ಪೂರೈಸಲು ಸಹಾಯ ಮಾಡುವುದಕ್ಕಾಗಿ ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ) ಸೌಲಭ್ಯವನ್ನು ವಿಸ್ತರಿಸಿದೆ. ಮೀನುಗಾರರು ಮತ್ತು ಮೀನು ಕೃಷಿಕರಿಗೆ ಇಲ್ಲಿಯವರೆಗೆ 2,810 ಕೋಟಿ ರೂ.ಗಳ ಸಾಲದ ಮೊತ್ತದೊಂದಿಗೆ ಒಟ್ಟು 4.39 ಲಕ್ಷ ಕೆಸಿಸಿಗಳನ್ನು ಮಂಜೂರು ಮಾಡಲಾಗಿದೆ.
ಯೋಜನೆ/ಉಪಕ್ರಮದ ಪರಿಣಾಮ
- ಕಳೆದ 10 ವರ್ಷಗಳಲ್ಲಿ ಜಾರಿಗೆ ತರಲಾದ ಯೋಜನೆಗಳು ಮತ್ತು ಕಾರ್ಯಕ್ರಮಗಳು ಮೀನುಗಾರರ ಕಲ್ಯಾಣಕ್ಕೆ ವಿಶೇಷ ಗಮನ ಹರಿಸಿವೆ. ಮೀನುಗಾರಿಕೆ ನಿಷೇಧ ಅವಧಿಯಲ್ಲಿ ಸರಾಸರಿ 4.33 ಲಕ್ಷ ಮೀನುಗಾರರ ಕುಟುಂಬಗಳಿಗೆ ಜೀವನೋಪಾಯ ಮತ್ತು ಪೌಷ್ಠಿಕಾಂಶದ ಬೆಂಬಲವನ್ನು ಒದಗಿಸಲಾಗಿದೆ.
- ಇದಲ್ಲದೆ, 89.25 ಕೋಟಿ ರೂ.ಗಳ ಹೂಡಿಕೆಯೊಂದಿಗೆ 184.32 ಲಕ್ಷ ಮೀನುಗಾರರಿಗೆ ಗುಂಪು ಅಪಘಾತ ವಿಮಾ ರಕ್ಷಣೆಯನ್ನು ಒದಗಿಸಲಾಗಿದೆ.
iii. ನೀಲಿ ಕ್ರಾಂತಿಯ ಅಡಿಯಲ್ಲಿ 256.89 ಕೋಟಿ ರೂ.ಗಳ ವೆಚ್ಚದಲ್ಲಿ ಮೀನುಗಾರರಿಗಾಗಿ 18481 ವಸತಿ ಘಟಕಗಳಿಗೆ ಬೆಂಬಲ ನೀಡಲಾಗಿದೆ.
iv. ಭಾರತ ಸರ್ಕಾರದ ಮೀನುಗಾರಿಕೆ ಇಲಾಖೆಯು 2014-15 ರಿಂದ ಜಾರಿಗೆ ತಂದ ವಿವಿಧ ಯೋಜನೆಗಳು ಮತ್ತು ಕಾರ್ಯಕ್ರಮಗಳ ಅಡಿಯಲ್ಲಿ, 74.66 ಲಕ್ಷ ಉದ್ಯೋಗಾವಕಾಶಗಳು (ನೇರ ಮತ್ತು ಪರೋಕ್ಷ) ಸೃಷ್ಟಿಯಾಗಿವೆ.
(Release ID: 2085982)
Visitor Counter : 6