ಪ್ರಧಾನ ಮಂತ್ರಿಯವರ ಕಛೇರಿ
ವಿಜಯ ದಿವಸದಂದು ವೀರ ಯೋಧರಿಗೆ ಪ್ರಧಾನಮಂತ್ರಿ ಗೌರವ ನಮನ
प्रविष्टि तिथि:
16 DEC 2024 9:03AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಜಯ ದಿವಸದ ಸಂದರ್ಭದಲ್ಲಿ ವೀರ ಯೋಧರಿಗೆ ಗೌರವ ನಮನ ಸಲ್ಲಿಸಿದ್ದಾರೆ.
ಅವರು ಎಕ್ಸ್ ಪೋಸ್ಟ್ ನಲ್ಲಿ ಹೀಗೆ ಬರೆದಿದ್ದಾರೆ:
"1971ರಲ್ಲಿ ಭಾರತದ ಐತಿಹಾಸಿಕ ವಿಜಯಕ್ಕೆ ಕಾರಣರಾದ ಧೀರ ಯೋಧರ ಶೌರ್ಯ ಮತ್ತು ತ್ಯಾಗವನ್ನು ನಾವು ಇಂದು, ವಿಜಯ್ ದಿವಸದಂದು ಗೌರವಿಸುತ್ತೇವೆ. ಅವರ ನಿಸ್ವಾರ್ಥ ಸಮರ್ಪಣೆ ಮತ್ತು ಅಚಲವಾದ ಸಂಕಲ್ಪ ನಮ್ಮ ರಾಷ್ಟ್ರವನ್ನು ರಕ್ಷಿಸಿದೆ ಮತ್ತು ನಮಗೆ ಕೀರ್ತಿ ತಂದಿದೆ. ಅವರ ಅಪ್ರತಿಮ ಶೌರ್ಯ ಮತ್ತು ಅಚಲ ಮನೋಭಾವಕ್ಕೆ ಇಂದು ಗೌರವ ಸೂಚಕ ದಿನವಾಗಿದೆ. ಅವರ ತ್ಯಾಗ ಮುಂದಿನ ಪೀಳಿಗೆಗೆ ಸದಾ ಸ್ಫೂರ್ತಿ ನೀಡುತ್ತಿರುತ್ತದೆ ಮತ್ತು ನಮ್ಮ ರಾಷ್ಟ್ರದ ಇತಿಹಾಸದಲ್ಲಿ ಆಳವಾಗಿ ಬೇರೂರಲಿದೆ."
*****
(रिलीज़ आईडी: 2084751)
आगंतुक पटल : 58
इस विज्ञप्ति को इन भाषाओं में पढ़ें:
Malayalam
,
English
,
Urdu
,
हिन्दी
,
Marathi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu