ಪ್ರಧಾನ ಮಂತ್ರಿಯವರ ಕಛೇರಿ
ಗುಜರಾತ್ ನ ಖ್ಯಾತ ಗಾಯಕ ಪುರುಷೋತ್ತಮ್ ಉಪಾಧ್ಯಾಯ ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ
Posted On:
11 DEC 2024 9:20PM by PIB Bengaluru
ಗುಜರಾತಿನ ದಿಗ್ಗಜ ಗಾಯಕ ಪುರುಷೋತ್ತಮ ಉಪಾಧ್ಯಾಯ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸಂತಾಪ ಸೂಚಿಸಿದ್ದಾರೆ.
ಶ್ರೀ ಮೋದಿ ಅವರು ಎಕ್ಸ್ ಪೋಸ್ಟ್ ನಲ್ಲಿ ಹೀಗೆ ಬರೆದಿದ್ದಾರೆ:
“ಸುಗಮ ಸಂಗೀತದ ಮೂಲಕ ಜಗತ್ತಿನಾದ್ಯಂತ ಗುಜರಾತಿ ಭಾಷೆಯ ಜೀವಂತಿಕೆಯನ್ನು ಪ್ರಸ್ತುತಪಡಿಸಿದ ಖ್ಯಾತ ಗಾಯಕ ಪುರುಷೋತ್ತಮ್ ಉಪಾಧ್ಯಾಯ ಅವರ ನಿಧನದ ಸುದ್ದಿ ತಿಳಿದು ತೀವ್ರ ಆಘಾತವಾಗಿದೆ. ಇದು ಕಲಾ ಲೋಕಕ್ಕೆ ತುಂಬಲಾರದ ನಷ್ಟ. ಅವರ ಸುಮಧುರ ಧ್ವನಿಯಲ್ಲಿ ಸ್ವರ್ಣಕನ್ ಸಂಗೀತ ಸಂಯೋಜನೆಗಳು ನಮ್ಮ ಹೃದಯಾಂತರಾಳದಲ್ಲಿ ಸದಾ ಇರಲಿವೆ.
ಮೃತರ ಆತ್ಮಕ್ಕೆ ಸದ್ಗತಿ, ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಕುಟುಂಬಕ್ಕೆ ಸಾಂತ್ವನಗಳು.
ಓಂ ಶಾಂತಿ.”
*****
(Release ID: 2084153)
Visitor Counter : 16
Read this release in:
English
,
Urdu
,
Marathi
,
Hindi
,
Assamese
,
Manipuri
,
Bengali
,
Punjabi
,
Gujarati
,
Tamil
,
Telugu
,
Malayalam