ಹಣಕಾಸು ಸಚಿವಾಲಯ
azadi ka amrit mahotsav

ಸಾರ್ವಜನಿಕ ವಲಯದ ಬ್ಯಾಂಕ್‌ಗಳ(ಪಿಎಸ್‌ಬಿ) ಒಟ್ಟು ʻಅನುತ್ಪಾದಕ ಆಸ್ತಿʼ (ಜಿಎನ್‌ಪಿಎ) ಮಾರ್ಚ್ 2018ರಲ್ಲಿ ಇದ್ದ ಗರಿಷ್ಠ ಶೇ.14.58 ಮಟ್ಟದಿಂದ ಸೆಪ್ಟೆಂಬರ್ -2024ರ ವೇಳೆಗೆ ಶೇ. 3.12% ಮಟ್ಟಕ್ಕೆಇಳಿದಿದೆ


ಸಾರ್ವಜನಿಕ ವಲಯದ ಬ್ಯಾಂಕುಗಳು 2023-24ರಲ್ಲಿ 1.41 ಲಕ್ಷ ಕೋಟಿ ರೂ.ಗಳ ಒಟ್ಟು ನಿವ್ವಳ ಲಾಭವನ್ನು ದಾಖಲಿಸಿವೆ

ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಸುಧಾರಿತ ಮಾನವ ಸಂಪನ್ಮೂಲ ನೀತಿಗಳು ಮತ್ತು ಕಲ್ಯಾಣ ಕ್ರಮಗಳನ್ನು ಅನುಷ್ಠಾನಗೊಳಿಸಲಾಗಿದೆ

ಒಟ್ಟು 1,60,501 ಬ್ಯಾಂಕ್ ಶಾಖೆಗಳಲ್ಲಿ, 1,00,686 ಬ್ಯಾಂಕ್ ಶಾಖೆಗಳು ಗ್ರಾಮೀಣ ಮತ್ತು ಅರೆ-ನಗರ (ಆರ್‌ಯುಎಸ್‌ಯು) ಪ್ರದೇಶಗಳಲ್ಲಿವೆ

Posted On: 12 DEC 2024 3:30PM by PIB Bengaluru

ಸರ್ಕಾರವು ಬ್ಯಾಂಕಿಂಗ್ ಪರಿಸರ ವ್ಯವಸ್ಥೆಯನ್ನು ಸಕ್ರಿಯವಾಗಿ ಬೆಂಬಲಿಸುತ್ತಿದ್ದು ಸ್ಥಿರತೆ, ಪಾರದರ್ಶಕತೆ ಮತ್ತು ಬೆಳವಣಿಗೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ವ್ಯವಹಾರ ಮತ್ತು ಉದ್ಯೋಗಿಗಳ ಕಲ್ಯಾಣ ಎರಡರ ಬಗ್ಗೆಯೂ ಕಾಳಜಿ ವಹಿಸಿದೆ. ಕಳೆದ ದಶಕದಲ್ಲಿ, ಸರ್ಕಾರವು ದಿಕ್ಕಿನಲ್ಲಿ ಅನೇಕ ನಾಗರಿಕ ಮತ್ತು ಸಿಬ್ಬಂದಿ ಕೇಂದ್ರಿತ ಸುಧಾರಣಾ ಉಪಕ್ರಮಗಳನ್ನು ಕೈಗೊಂಡಿದೆ. ಬ್ಯಾಂಕಿಂಗ್ ಕ್ಷೇತ್ರದ ಸುಧಾರಣೆಗಳ ಸಂಕ್ಷಿಪ್ತ ಚಿತ್ರಣ ಈ ಕೆಳಗಿನಂತಿದೆ:

ಬ್ಯಾಂಕಿಂಗ್ ವಲಯದಲ್ಲಿ ಸುಧಾರಣೆಗಳು ಮತ್ತು ಸಾರ್ವಜನಿಕ ವಲಯದ ಬ್ಯಾಂಕುಗಳ (ಪಿಎಸ್‌ಬಿ) ಕಾರ್ಯಕ್ಷಮತೆ:

ಬ್ಯಾಂಕಿಂಗ್ ವ್ಯವಸ್ಥೆಯಲ್ಲಿನ ಒತ್ತಡದ ಸಮಸ್ಯೆಯನ್ನು ಗುರುತಿಸಲು ಮತ್ತು ಪರಿಹರಿಸಲು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) 2015ರಲ್ಲಿ ʻಆಸ್ತಿ ಗುಣಮಟ್ಟ ಪರಿಶೀಲನೆʼ (ಎಕ್ಯೂಆರ್) ಅನ್ನು ಪ್ರಾರಂಭಿಸಿತು. ಇದರ ಅಡಿಯಲ್ಲಿ, ಬ್ಯಾಂಕುಗಳು ಪಾರದರ್ಶಕ ಮಾನ್ಯತೆ ಹಾಗೂ ಪುನರ್ರಚನೆಗೊಂಡ ಸಾಲಗಳ ವಿಶೇಷ ಪರಿಗಣನೆಯನ್ನು ಹಿಂಪಡೆದ ನಂತರ ಸಂಕಷ್ಟಕ್ಕೆ ಸಿಲುಕಿದ ಖಾತೆಗಳನ್ನು ʻಅನುತ್ಪಾದಕ ಆಸ್ತಿಗಳುʼ (ಎನ್‌ಪಿಎ) ಎಂದು ಮರು ವರ್ಗೀಕರಿಸಲಾಗಿದೆ. ಈ ಹಿಂದೆ ವಿಶೇಷ ಪರಿಗಣನೆಯ ಪರಿಣಾಮವಾಗಿ ಇಂತಹ ಖಾತೆಗಳಿಂದ ನಷ್ಟದ ನಿರೀಕ್ಷೆ ಇರಲಿಲ್ಲ. ಆದರೆ, ʼಎಕ್ಯೂಆರ್‌ʼ ಬಳಿಕ ಇಂತಹ ಖಾತೆಗಳಿಂದ ನಷ್ಟವನ್ನು ನಿರೀಕ್ಷಿಸಲಾಗಿದ್ದಲ್ಲದೆ, 2018ರಲ್ಲಿ ಇಂತಹ ʻಎನ್‌ಪಿಎʼಗಳು ಉತ್ತುಂಗಕ್ಕೇರಿದವು. ಹೆಚ್ಚಿನ ʻಎನ್‌ಪಿಎʼ ಮತ್ತು ಅಗತ್ಯ ನಿಬಂಧನೆಗಳು ಬ್ಯಾಂಕುಗಳ ಹಣಕಾಸು ಮಾನದಂಡಗಳ ಮೇಲೆ ಆಳವಾದ ಪರಿಣಾಮ ಬೀರಿದವು. ಜೊತೆಗೆ, ಆರ್ಥಿಕತೆಯ ಉತ್ಪಾದಕ ಕ್ಷೇತ್ರಗಳಿಗೆ ಸಾಲ ನೀಡುವ ಸಾಮರ್ಥ್ಯವನ್ನು ಅಡ್ಡಿಪಡಿಸಿದವು.

ಸಾರ್ವಜನಿಕ ರಂಗದ ಬ್ಯಾಂಕ್‌ಗಳು ಎದುರಿಸುತ್ತಿರುವ ಸವಾಲುಗಳನ್ನು ಪರಿಹರಿಸಲು 2015ರಿಂದ ಹಣಕಾಸು ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆಗಳ ʻ4ಆರ್ʼ ಕಾರ್ಯತಂತ್ರವನ್ನು ಸರ್ಕಾರ ಜಾರಿಗೆ ತಂದಿದೆ. ಈ ʻ4ಆರ್‌ʼಗಳಲ್ಲಿ ʻಎನ್‌ಪಿಎʼಗಳನ್ನು ಪಾರದರ್ಶಕವಾಗಿ ಗುರುತಿಸುವುದು(ರೆಕಗ್ನೈಸಿಂಗ್‌), ಪರಿಹಾರ ಮತ್ತು ಚೇತರಿಕೆ(ರೆಸಲ್ಯೂಷನ್‌ ಆಂಡ್‌ ರಿಕವರಿ), ʻಪಿಎನ್‌ಪಿಎʼಗಳ ಮರು ಬಂಡವಾಳೀಕರಣ (ರೀಕ್ಯಾಪಿಟಲೈಸೇಷನ್‌) ಮತ್ತು ಸರ್ಕಾರದ ವ್ಯಾಪಕ ನೀತಿ ಸುಧಾರಣೆಗಳ (ರಿಫಾರ್ಮ್‌) ಸೇರಿವೆ. ʻ4ಆರ್‌ʼ ಪರಿಣಾಮವಾಗಿ, ಸಾರ್ವಜನಿಕ ರಂಗದ ಬ್ಯಾಂಕ್‌ಗಳು ಸೇರಿದಂತೆ ಬ್ಯಾಂಕಿಂಗ್ ಕ್ಷೇತ್ರದ ಆರ್ಥಿಕ ಆರೋಗ್ಯ ಮತ್ತು ದೃಢತೆ ಗಮನಾರ್ಹವಾಗಿ ಸುಧಾರಿಸಿದೆ. ಈ ಗಮನಾರ್ಹ ಸುಧಾರಣೆಗಳು ಮೂಲಕ ಗುರುತಿಸಬಹುದು:-

  1. ಆಸ್ತಿ ಗುಣಮಟ್ಟದಲ್ಲಿ ಸುಧಾರಣೆ
  • ಸಾರ್ವನಿಕ ವಲಯದ ಬ್ಯಾಂಕ್‌ಗಳ ಒಟ್ಟು   ʻಎನ್‌ಪಿಎʼ ಅನುಪಾತವು ಮಾರ್ಚ್-15 ರಲ್ಲಿ ಶೇ. 4.97 ರಿಂದ ಸೆಪ್ಟೆಂಬರ್ -24 ರಲ್ಲಿ ಶೇ. 3.12ಕ್ಕೆ ಇಳಿದಿದೆ ಮತ್ತು ಇದು ಮಾರ್ಚ್ -18ರಲ್ಲಿ ಶೇ. 14.58ರ ಗರಿಷ್ಠ ಮಟ್ಟದಲ್ಲಿತ್ತು.
  1. ಬಂಡವಾಳದ ಸಮರ್ಪಕತೆಯಲ್ಲಿ ಸುಧಾರಣೆ
  • ಸಾರ್ವನಿಕ ವಲಯದ ಬ್ಯಾಂಕ್‌ಗಳ ʻಸಿಆರ್‌ಆರ್ʼ 393 ʻಬಿಪಿಎಸ್ʼಯಷ್ಟು ಸುಧಾರಿಸಿದ್ದು ಮಾರ್ಚ್ -15 ರಲ್ಲಿದ್ದ ಶೇ. 11.45ರ ಮಟ್ಟದಿಂದ ಸೆಪ್ಟೆಂಬರ್ -24ರ ವೇಳೆಗೆ ಶೇ. 15.43 ಮಟ್ಟಕ್ಕೆ ತಲುಪಿದೆ.
  1. 2023-24ರ ಹಣಕಾಸು ವರ್ಷದಲ್ಲಿ, ʻಪಿಎಸ್‌ಬಿʼಗಳು 1.41 ಲಕ್ಷ ಕೋಟಿ ರೂ.ಗಳ ಅತ್ಯಧಿಕ ಒಟ್ಟು ನಿವ್ವಳ ಲಾಭವನ್ನು ದಾಖಲಿಸಿವೆ ಮತ್ತು 2024-25ರ ಮೊದಲಾರ್ಧದಲ್ಲಿ 0.86 ಲಕ್ಷ ಕೋಟಿ ರೂ. ನಿವ್ವಳ ಲಾಭ ದಾಖಲಿಸಿವೆ.  2022-23ರ ಹಣಕಾಸು ವರ್ಷದಲ್ಲಿ ಈ ಪ್ರಮಾಣ 1.05 ಲಕ್ಷ ಕೋಟಿ ರೂ. ಇತ್ತು.
  2. ಕಳೆದ 3 ವರ್ಷಗಳಲ್ಲಿ, ʻಪಿಎಸ್‌ಬಿʼಗಳು 61,964 ಕೋಟಿ ರೂ.ಗಳ ಒಟ್ಟು ಲಾಭಾಂಶವನ್ನು ಪಾವತಿಸಿವೆ.

ಆರ್ಥಿಕ ಸೇರ್ಪಡೆಯನ್ನು ಹೆಚ್ಚಿಸಲು ಸಾರ್ವಜನಿಕ ವಲಯದ ಬ್ಯಾಂಕ್‌ಗಳು ದೇಶದ ಮೂಲೆ ಮೂಲೆಗೂ ತಮ್ಮ ವ್ಯಾಪ್ತಿಯನ್ನು ವಿಸ್ತರಿಸುತ್ತಲೇ ಇವೆ. ಅವುಗಳ ಬಂಡವಾಳ ನೆಲೆ ಬಲಗೊಂಡಿದೆ ಮತ್ತು ಅವುಗಳ ಆಸ್ತಿ ಗುಣಮಟ್ಟ ಸುಧಾರಿಸಿದೆ. ಈಗ ಅವುಗಳು ಪ್ರತಿಫಲಕ್ಕಾಗಿ ಸರ್ಕಾರವನ್ನು ಅವಲಂಬಿಸುವ ಬದಲು ಮಾರುಕಟ್ಟೆಗೆ ಹೋಗಿ ಬಂಡವಾಳವನ್ನು ಪಡೆಯಲು ಸಾಧ್ಯವಾಗುತ್ತಿದೆ.

  • ದೇಶದಲ್ಲಿ ಆರ್ಥಿಕ ಸೇರ್ಪಡೆಯನ್ನು ಹೆಚ್ಚಿಸಲು, ವಿವಿಧ ಪ್ರಮುಖ ಹಣಕಾಸು ಸೇರ್ಪಡೆ ಯೋಜನೆಗಳ (ಪಿಎಂ ಮುದ್ರಾ, ಸ್ಟ್ಯಾಂಡ್ ಅಪ್ ಇಂಡಿಯಾ, ಪಿಎಂ-ಸ್ವನಿಧಿ, ಪಿಎಂ ವಿಶ್ವಕರ್ಮ) ಅಡಿಯಲ್ಲಿ 54 ಕೋಟಿ ʻಜನ್ ಧನ್ʼ ಖಾತೆಗಳು ಮತ್ತು 52 ಕೋಟಿಗೂ ಹೆಚ್ಚು ಅಡಮಾನ ರಹಿತ ಸಾಲಗಳನ್ನು ಮಂಜೂರು ಮಾಡಲಾಗಿದೆ. ʻಮುದ್ರಾʼ ಯೋಜನೆಯಡಿ ಶೇ.68ರಷ್ಟು ಮಹಿಳೆಯರು ಹಾಗೂ ಪಿಎಂ-ಸ್ವನಿಧಿ ಯೋಜನೆಯಡಿ ಶೇ.44ರಷ್ಟು ಫಲಾನುಭವಿಗಳು ಮಹಿಳೆಯರೇ ಆಗಿದ್ದಾರೆ.
  • ಬ್ಯಾಂಕ್ ಶಾಖೆಗಳ ಸಂಖ್ಯೆ ಮಾರ್ಚ್-14 ರಲ್ಲಿ 1,17,990 ರಿಂದ ಸೆಪ್ಟೆಂಬರ್ -24 ರಲ್ಲಿ 1,60,501ಕ್ಕೆ ಏರಿದೆ; 1,60,501 ಶಾಖೆಗಳ ಪೈಕಿ 1,00,686 ಶಾಖೆಗಳು ಗ್ರಾಮೀಣ ಮತ್ತು ಅರೆ-ನಗರ (ಆರ್‌ಯುಎಸ್‌ಯು) ಪ್ರದೇಶಗಳಲ್ಲಿವೆ.
  • ʻಕೆಸಿಸಿʼ ಯೋಜನೆಯು ರೈತರಿಗೆ ಅಲ್ಪಾವಧಿ ಬೆಳೆ ಸಾಲವನ್ನು ಒದಗಿಸುವ ಗುರಿಯನ್ನು ಹೊಂದಿದೆ. ಸೆಪ್ಟೆಂಬರ್ 2024ರ ವೇಳೆಗೆ ಒಟ್ಟು ಸಕ್ರಿಯ ʻಕೆಸಿಸಿʼ ಖಾತೆಗಳ ಸಂಖ್ಯೆ 7.71 ಕೋಟಿಯಾಗಿದ್ದು, ಒಟ್ಟು 9.88 ಲಕ್ಷ ಕೋಟಿ ರೂ. ಬಾಕಿ ಹೊಂದಿವೆ.
  • ಭಾರತ ಸರ್ಕಾರ (ಜಿಒಐ) ವಿವಿಧ ಉಪಕ್ರಮಗಳ ಮೂಲಕ ಕೈಗೆಟುಕುವ ದರದಲ್ಲಿ ಸಾಲ ಒದಗಿಸುವ ಮೂಲಕ ʻಎಂಎಸ್ಎಂಇʼ ವಲಯಕ್ಕೆ ನಿರಂತರವಾಗಿ ಬೆಂಬಲ ನೀಡಿದೆ. ʻಎಂಎಸ್ಎಂಇʼ ಸಾಲಗಳು ಪ್ರಮಾಣ ಕಳೆದ 3 ವರ್ಷಗಳಲ್ಲಿ ಶೇ. 15 ʻಸಿಎಜಿಆರ್ʼ (ಸಮಗ್ರ ವಾರ್ಷಿಕ ಪ್ರಗತಿ ದರ) ದಾಖಲಿಸಿವೆ. 31.03.2024ರ ವೇಳೆಗೆ ಒಟ್ಟು ʻಎಂಎಸ್ಎಂಇʼ ಸಾಲಗಳು 28.04 ಲಕ್ಷ ಕೋಟಿ ರೂ.ಗಳಾಗಿದ್ದು, ವಾರ್ಷಿಕ 17.2% ಬೆಳವಣಿಗೆ ದಾಖಲಾಗಿದೆ.
  • 2004-2014ರ ಅವಧಿಯಲ್ಲಿ ಶೆಡ್ಯೂಲ್ಡ್ ವಾಣಿಜ್ಯ ಬ್ಯಾಂಕುಗಳ ಒಟ್ಟು ಸಾಲಗಳು 8.5 ಲಕ್ಷ ಕೋಟಿ ರೂ.ಗಳಿಂದ 61 ಲಕ್ಷ ಕೋಟಿ ರೂ.ಗಳಿಗೆ ತಲುಪಿತ್ತು. ಇದು ಮಾರ್ಚ್-2024ರಲ್ಲಿ 175 ಲಕ್ಷ ಕೋಟಿ ರೂ.ಗೆ ಗಮನಾರ್ಹ ಏರಿಕೆ ಕಂಡಿದೆ.

ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಮಾನವ ಸಂಪನ್ಮೂಲ ನೀತಿಗಳು ಮತ್ತು ಕಲ್ಯಾಣ ಕ್ರಮಗಳು

ʻಪಿಎಸ್‌ಬಿʼಗಳಲ್ಲಿ ವರ್ಗಾವಣೆಗಳು:

ಹೆಚ್ಚಿನ ಪಾರದರ್ಶಕತೆ ಉತ್ತೇಜಿಸುವ ಮತ್ತು ಏಕರೂಪದ ವರ್ಗಾವಣೆ ನೀತಿ  ರೂಪಿಸುವುದನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ, ಸಮಗ್ರ ಮಾರ್ಗಸೂಚಿಯನ್ನು ಹೊರಡಿಸಲಾಗಿದೆ, ಇದನ್ನು ʻಪಿಎಸ್‌ಬಿʼಗಳು ತಮ್ಮ ವರ್ಗಾವಣೆ ನೀತಿಗಳಲ್ಲಿ ಅಳವಡಿಸಿಕೊಳ್ಳಬೇಕು.

ಮಹಿಳಾ ಉದ್ಯೋಗಿಗಳಿಗೆ ಸಂಬಂಧಿಸಿದಂತೆ, ʻಪಿಎಸ್‌ಬಿʼಗಳಿಗೆ ಕೆಳಗಿನಂತೆ ಸಲಹೆ ನೀಡಲಾಗಿದೆ:

  1. ಮಹಿಳಾ ಉದ್ಯೋಗಿಗಳನ್ನು ಹತ್ತಿರದ ಸ್ಥಳಗಳು / ಕೇಂದ್ರಗಳು / ಪ್ರದೇಶಗಳಿಗೆ ನಿಯೋಜಿಸಬೇಕು
  1. ತಡೆರಹಿತ ಗ್ರಾಹಕ ಸೇವೆಯನ್ನು ಖಚಿತಪಡಿಸಿಕೊಳ್ಳಲು ʻಸ್ಕೇಲ್-IIIʼ ವರೆಗಿನ ಅಧಿಕಾರಿಗಳಿಗೆ ಆಯಾ ಭಾಷಾವಾರು ಪ್ರದೇಶದಲ್ಲಿ ಸ್ಥಳಾವಕಾಶ ಕಲ್ಪಿಸಬೇಕು
  1. ವರ್ಗಾವಣೆಗೆ ಲಭ್ಯವಿರುವ ಕಾರಣಗಳ ಜೊತೆಗೆ, ಮದುವೆ / ಸಂಗಾತಿ / ವೈದ್ಯಕೀಯ / ಹೆರಿಗೆ / ಮಕ್ಕಳ ಆರೈಕೆ / ದೂರದ ಪೋಸ್ಟಿಂಗ್‌ಗಳ ಆಧಾರಗಳನ್ನು ಸಹ ಸೂಕ್ತವಾಗಿ ಸೇರಿಸಬೇಕು
  1. ವರ್ಗಾವಣೆ / ಬಡ್ತಿಗಳ ಸಂದರ್ಭದಲ್ಲಿ ಸ್ಥಳದ ಆದ್ಯತೆಗಳನ್ನು ನೀಡುವ ನಿಬಂಧನೆಯೊಂದಿಗೆ ಆನ್‌ಲೈನ್ ವೇದಿಕೆಯನ್ನು ಅಭಿವೃದ್ಧಿಪಡಿಸುವ ಮೂಲಕ ವರ್ಗಾವಣೆಗಳನ್ನು ಸ್ವಯಂಚಾಲಿತಗೊಳಿಸಬೇಕು.

ʻಪಿಎಸ್‌ಬಿʼ ನೌಕರರ ಕಲ್ಯಾಣ ಕ್ರಮಗಳು:

  1. 12 ನೇ ದ್ವಿಪಕ್ಷೀಯ ಒಪ್ಪಂದ(ಬಿಪಿಎಸ್‌):

12ನೇ ʻಬಿಪಿಎಸ್ʼ ಅನುಷ್ಠಾನದ ಮೂಲಕ, ಬ್ಯಾಂಕ್ ನೌಕರರು ವೇತನ ಮತ್ತು ಭತ್ಯೆಯಲ್ಲಿ 17% ಹೆಚ್ಚಳವನ್ನು (12,449 ಕೋಟಿ ರೂ.) ಪಡೆದಿದ್ದಾರೆ, ಇದರಲ್ಲಿ 3% (1,795 ಕೋಟಿ ರೂ.) ಹೊರೆ ಸೇರಿದೆ.

ಪ್ರಮುಖ ಮುಖ್ಯಾಂಶಗಳು:

  1. ತಿಳಿವಳಿಕೆ ಒಪ್ಪಂದ ಮತ್ತು ವೆಚ್ಚ ಪತ್ರಗಳ ಪ್ರಕಾರ ಎಲ್ಲಾ ಕೇಡರ್‌ಗಳಿಗೆ ಹೊಸ ವೇತನ ಶ್ರೇಣಿಗಳು.
  1. ಅಸ್ತಿತ್ವದಲ್ಲಿರುವ ಮೂಲ ವರ್ಷವನ್ನು ಅಂದರೆ 1960 ಅನ್ನು ಬದಲಾಯಿಸುವ ಮೂಲಕ ಡಿಎ / ಡಿಆರ್ (ಕೈಗಾರಿಕಾ ಕಾರ್ಮಿಕರಿಗೆ ಎಐಸಿಪಿಐ) ಅನ್ನು ರೂಪಿಸಲು ಮೂಲ ವರ್ಷವನ್ನು 2016 ಕ್ಕೆ ಬದಲಾವಣೆ ಮತ್ತು ಸೇವೆಯಲ್ಲಿರುವ ಸಿಬ್ಬಂದಿ ಮತ್ತು ಪಿಂಚಣಿದಾರರು / ಕುಟುಂಬ ಪಿಂಚಣಿದಾರರಿಗೆ ಡಿಎ / ಡಿಆರ್ ದರಗಳನ್ನು ಲೆಕ್ಕಹಾಕುವ ಪರಿಷ್ಕೃತ ಸೂತ್ರ.
  1. ಹೆಚ್ಚಿನ ನಿಯೋಗದ ಮೂಲಕ ಉತ್ತಮ ಗ್ರಾಹಕ ಅನುಭವಕ್ಕಾಗಿ ಪ್ರಶಸ್ತಿ ಪಡೆದ ಸಿಬ್ಬಂದಿಯನ್ನು 'ಗ್ರಾಹಕ ಸೇವಾ ಸಹಾಯಕರು' ಎಂದು ಮರುನಾಮಕರಣ ಮಾಡುವುದು ಮತ್ತು ವರ್ಧಿತ ವಿಶೇಷ ವೇತನದೊಂದಿಗೆ ವಿಸ್ತೃತ ಪಾತ್ರ.
  1. ರಸ್ತೆ ಪ್ರಯಾಣದ ವೆಚ್ಚಗಳ ಮರುಪಾವತಿಗಾಗಿ ಪರಿಷ್ಕೃತ ವಸತಿ ದರಗಳು / ವಸತಿ ವೆಚ್ಚಗಳು, ಡೆಪ್ಯುಟೇಶನ್ ಭತ್ಯೆ ಮತ್ತು ಪರಿಷ್ಕೃತ ದರಗಳು.
  1. ಋತುಚಕ್ರದ ಸಮಯದಲ್ಲಿ ರಜೆ, ಬಂಜೆತನ ಚಿಕಿತ್ಸೆ, ಎರಡನೇ ಮಗುವಿನ ದತ್ತು ಮತ್ತು ನಿಸ್ತೇಜ ಜನನದ ಘಟನೆಗಳು ಸೇರಿದಂತೆ ಮಹಿಳಾ ಉದ್ಯೋಗಿಗಳಿಗೆ ವಿಶೇಷ ರಜೆ ನೀತಿಗಳು.
  2. ಪಿಂಚಣಿದಾರರಿಗೆ ಮಾಸಿಕ ಎಕ್ಸ್-ಗ್ರೇಷಿಯಾ ಮೊತ್ತ:

ಪ್ರಸ್ತುತ ದ್ವಿಪಕ್ಷೀಯ ಅವಧಿಗೆ ಪಿಂಚಣಿದಾರರು ಮತ್ತು ಕುಟುಂಬ ಪಿಂಚಣಿದಾರರಿಗೆ ಮಾಸಿಕ ಎಕ್ಸ್-ಗ್ರೇಷಿಯಾ ಮೊತ್ತವನ್ನು ಪರಿಚಯಿಸಲಾಗಿದೆ.

  1. 1986ಕ್ಕಿಂತ ಮುಂಚಿನ ನಿವೃತ್ತರಿಗೆ ಎಕ್ಸ್-ಗ್ರೇಷಿಯಾ:

1986ಕ್ಕಿಂತ ಮುಂಚಿನ ನಿವೃತ್ತರು ಮತ್ತು ಅವರ ಕುಟುಂಬಗಳಿಗೆ ನೀಡಲಾಗುವ ಪರಿಹಾರವನ್ನು ಕ್ರಮವಾಗಿ 4,946 ಮತ್ತು 2,478 ರೂ.ಗಳಿಂದ 10,000 ರೂ.ಗಳಿಗೆ ಹೆಚ್ಚಿಸಲಾಗಿದೆ. ಇದರಿಂದ 105 ನಿವೃತ್ತರು ಮತ್ತು 1382 ಸಂಗಾತಿಗಳಿಗೆ ಅನುಕೂಲವಾಗಲಿದೆ. ಒಟ್ಟು ಹೆಚ್ಚುವರಿ ವೆಚ್ಚ ವಾರ್ಷಿಕ 4.73 ಕೋಟಿ ರೂ. ಇದನ್ನು ಫೆಬ್ರವರಿ 2023 ರಿಂದ ಜಾರಿಗೆ ತರಲಾಗಿದೆ.

  1. ಡಿಎ ತಟಸ್ಥೀಕರಣ:

2002ಕ್ಕಿಂತ ಮೊದಲು ನಿವೃತ್ತರಾದವರಿಗೆ 100% ಡಿಎ ತಟಸ್ಥೀಕರಣವನ್ನು ನೀಡಲಾಗಿದೆ. ಇದರಿಂದ 1,81,805 ಫಲಾನುಭವಿಗಳು ಪ್ರಯೋಜನ ಪಡೆಯಲಿದ್ದು, ವಾರ್ಷಿಕ ಒಟ್ಟು 631 ಕೋಟಿ ರೂ. ವೆಚ್ಚದಲ್ಲಿ ಇದನ್ನು ಅಕ್ಟೋಬರ್ 2023 ರಿಂದ ಜಾರಿಗೆ ತರಲಾಗಿದೆ.

  1. ಬ್ಯಾಂಕ್ ಠೇವಣಿದಾರರಿಗೆ ಪಿಂಚಣಿ ಆಯ್ಕೆ:

ಪಿಂಚಣಿ ಯೋಜನೆಗೆ ಸೇರಲು ಅರ್ಹರಾದ ರಾಜೀನಾಮೆ ನೀಡುವ ಬ್ಯಾಂಕ್ ಸಿಬ್ಬಂದಿಗೆ ಪಿಂಚಣಿಯನ್ನು ಆಯ್ಕೆ ಮಾಡುವ ಆಯ್ಕೆಯನ್ನು ಒದಗಿಸಲಾಗಿದೆ. ಈ ಕ್ರಮವು ಸರಿಸುಮಾರು 3198 ಬ್ಯಾಂಕ್ ನಿವೃತ್ತರು ಮತ್ತು ಕುಟುಂಬಗಳಿಗೆ ಪ್ರಯೋಜನವನ್ನು ನೀಡುತ್ತದೆ. ಇದಕ್ಕಾಗಿ ಒಟ್ಟು ಹೆಚ್ಚುವರಿ ವೆಚ್ಚ ವಾರ್ಷಿಕ 135 ಕೋಟಿ ರೂ.ಗಳು.

  1. ಸಿಬ್ಬಂದಿ ಕಲ್ಯಾಣ ನಿಧಿ (ಎಸ್ಡಬ್ಲ್ಯೂಎಫ್):

ʻಸಿಬ್ಬಂದಿ ಕಲ್ಯಾಣ ನಿಧಿʼ(ಎಸ್‌ಡಬ್ಲ್ಯೂಎಫ್) ಎಂಬುದು ʻಪಿಎಸ್‌ಬಿʼಗಳಿಗೆ ಕೆಲಸ ಮಾಡುವ ಮತ್ತು ನಿವೃತ್ತ ಅಧಿಕಾರಿಗಳ ಕಲ್ಯಾಣ ಸಂಬಂಧಿತ ಚಟುವಟಿಕೆಗಳಿಗೆ (ಆರೋಗ್ಯ ಸಂಬಂಧಿತ ವೆಚ್ಚಗಳು, ಕ್ಯಾಂಟೀನ್ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಬ್ಸಿಡಿಗಳು, ಶಿಕ್ಷಣ ಸಂಬಂಧಿತ ಆರ್ಥಿಕ ನೆರವು ಇತ್ಯಾದಿ) ನಿಗದಿಪಡಿಸಿದ ನಿಧಿಯಾಗಿದ್ದು, ವಾರ್ಷಿಕ ವೆಚ್ಚದ ಗರಿಷ್ಠ ಮಿತಿಯನ್ನು ಹೆಚ್ಚಿಸುವ ಮೂಲಕ ಉತ್ತೇಜನ ನೀಡಲಾಗಿದೆ. 2024ರ ವೇಳೆಗೆ ʻಪಿಎಸ್‌ಬಿʼಗಳಲ್ಲಿನ ಉದ್ಯೋಗಿಗಳು ಮತ್ತು ನಿವೃತ್ತರ ಸಂಖ್ಯೆ ಮತ್ತು ʻಪಿಎಸ್‌ಬಿʼಗಳ ವ್ಯವಹಾರ ಮಿಶ್ರಣದಲ್ಲಿನ ಬದಲಾವಣೆಯನ್ನು ಗಣನೆಗೆ ತೆಗೆದುಕೊಂಡು, 2012ರಲ್ಲಿ ಕೊನೆಯ ಬಾರಿಗೆ ಪರಿಷ್ಕರಣೆಗೊಂಡಿದ್ದ ಮಿತಿಯನ್ನು ಮತ್ತೊಮ್ಮೆ ಸಂಪೂರ್ಣವಾಗಿ ಪರಿಷ್ಕರಿಸಲಾಯಿತು. ಪರಿಷ್ಕರಣೆಯ ನಂತರ, ಎಲ್ಲಾ 12 ʻಪಿಎಸ್‌ಬಿʼಗಳಿಗೆ
ʻಎಸ್‌ಡಬ್ಲ್ಯೂಎಫ್‌ʼ ಸಂಯೋಜಿತ ಗರಿಷ್ಠ ವಾರ್ಷಿಕ ವೆಚ್ಚದ ಮಿತಿಯನ್ನು 540 ಕೋಟಿಯಿಂದ 845 ಕೋಟಿಗೆ ಹೆಚ್ಚಿಸಲಾಗಿದೆ. ಈ ಹೆಚ್ಚಳವು ಎಲ್ಲಾ 12 ʻಪಿಎಸ್‌ಬಿʼಗಳ ನಿವೃತ್ತ ನೌಕರರು ಸೇರಿದಂತೆ 15 ಲಕ್ಷ ಸಿಬ್ಬಂದಿಗೆ ಪ್ರಯೋಜನವನ್ನು ನೀಡುತ್ತದೆ.

 

*****

 

 


(Release ID: 2084117) Visitor Counter : 13