ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಹರಿಯಾಣದಲ್ಲಿ ಮೂರು ಹೊಸ ಕ್ರಿಮಿನಲ್ ಕಾನೂನುಗಳ ಅನುಷ್ಠಾನದ ಕುರಿತು ಹೊಸದಿಲ್ಲಿಯಲ್ಲಿ ಹರಿಯಾಣ ಮುಖ್ಯಮಂತ್ರಿ ಶ್ರೀ ನಯಾಬ್ ಸಿಂಗ್ ಸೈನಿ ಉಪಸ್ಥಿತಿಯಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ


2025ರ ಮಾರ್ಚ್ 31 ರೊಳಗೆ ಹರಿಯಾಣವು ಹೊಸ ಕ್ರಿಮಿನಲ್ ಕಾನೂನುಗಳನ್ನು 100% ಜಾರಿಗೆ ತರಬೇಕು

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ಮೂರು ಹೊಸ ಕ್ರಿಮಿನಲ್ ಕಾನೂನುಗಳು ನಾಗರಿಕ ಹಕ್ಕುಗಳ ರಕ್ಷಕ ಮತ್ತು 'ಸುಲಭ ನ್ಯಾಯ'ದ ಆಧಾರವಾಗುತ್ತಿವೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು

ಹರಿಯಾಣದಲ್ಲಿ ಪೊಲೀಸ್, ಕಾರಾಗೃಹಗಳು, ನ್ಯಾಯಾಲಯಗಳು, ಪ್ರಾಸಿಕ್ಯೂಷನ್ ಮತ್ತು ವಿಧಿವಿಜ್ಞಾನಕ್ಕೆ ಸಂಬಂಧಿಸಿದ ವಿವಿಧ ಹೊಸ ನಿಬಂಧನೆಗಳ ಅನುಷ್ಠಾನ ಮತ್ತು ಪ್ರಸ್ತುತ ಸ್ಥಿತಿಯನ್ನು ಸಭೆಯಲ್ಲಿ ಪರಿಶೀಲಿಸಲಾಯಿತು

ತಂತ್ರಜ್ಞಾನದ ಬಳಕೆಗೆ ಒತ್ತು ನೀಡಿದ ಗೃಹ ಸಚಿವರು, ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಒಂದಕ್ಕಿಂತ ಹೆಚ್ಚು ವಿಧಿವಿಜ್ಞಾನ ಮೊಬೈಲ್ ವ್ಯಾನ್ ಲಭ್ಯವಿರಬೇಕು ಎಂದು ಹೇಳಿದರು

ಶೂನ್ಯ ಎಫ್ಐಆರ್ಗಳ ಮೇಲ್ವಿಚಾರಣೆಯ ಜವಾಬ್ದಾರಿಯು ಡಿವೈ. ಎಸ್.ಪಿಯವರದ್ದು ಆಗಿರಬೇಕು ಮತ್ತು ರಾಜ್ಯಗಳಿಗೆ ಅನುಗುಣವಾಗಿ ಇತರ ಭಾಷೆಗಳಲ್ಲಿ ಅದರ ಅನುವಾದವನ್ನು ಖಚಿತಪಡಿಸಿಕೊಳ್ಳಬೇಕು

ಸಕಾಲಿಕ ನ್ಯಾಯ ಒದಗಿಸುವುದು ಅವರ ಆದ್ಯತೆ ಎಂದು ರಾಜ್ಯದ ಡಿಜಿಪಿ ಎಲ್ಲಾ ಪೊಲೀಸ್ ಸಿಬ್ಬಂದಿಗೆ ಅರಿವು ಮೂಡಿಸಬೇಕು

ಎಲ್ಲಾ ಎಸ್ಪಿಗಳು ನಿಗದಿತ ಅವಧಿಯೊಳಗೆ ತನಿಖೆಯನ್ನು ಪೂರ್ಣಗೊಳಿಸುವುದನ್ನು ಡಿಜಿಪಿ ಖಚಿತಪಡಿಸಿಕೊಳ್ಳಬೇಕೆಂದು ಸಲಹೆ ಮಾಡಿದ ಕೇಂದ್ರ ಗೃಹ ಸಚಿವರು

ಹರಿಯಾಣದ ಮುಖ್ಯಮಂತ್ರಿ ಪ್ರತಿ 15 ದಿನಗಳಿಗೊಮ್ಮೆ ಮೂರು ಹೊಸ ಕಾನೂನುಗಳ ಅನುಷ್ಠಾನದ ಪ್ರಗತಿಯನ್ನು ಪರಿಶೀಲಿಸಬೇಕು, ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿ ವಾರಕ್ಕೊಮ್ಮೆ ಪರಿಶೀಲನೆ ನಡೆಸಬೇಕು

Posted On: 10 DEC 2024 7:44PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವರೂ ಆಗಿರುವ  ಶ್ರೀ ಅಮಿತ್ ಶಾ ಅವರು ಇಂದು ಹೊಸದಿಲ್ಲಿಯಲ್ಲಿ ಹರಿಯಾಣ ಮುಖ್ಯಮಂತ್ರಿ ಶ್ರೀ ನಯಾಬ್ ಸಿಂಗ್ ಸೈನಿ ಅವರ ಉಪಸ್ಥಿತಿಯಲ್ಲಿ ಮೂರು ಹೊಸ ಕ್ರಿಮಿನಲ್ ಕಾನೂನುಗಳ ಅನುಷ್ಠಾನದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಹರಿಯಾಣದಲ್ಲಿ ಪೊಲೀಸ್, ಕಾರಾಗೃಹಗಳು, ನ್ಯಾಯಾಲಯಗಳು, ಪ್ರಾಸಿಕ್ಯೂಷನ್ ಮತ್ತು ವಿಧಿವಿಜ್ಞಾನಕ್ಕೆ ಸಂಬಂಧಿಸಿದ ವಿವಿಧ ಹೊಸ ನಿಬಂಧನೆಗಳ ಅನುಷ್ಠಾನ ಮತ್ತು ಪ್ರಸ್ತುತ ಸ್ಥಿತಿಯನ್ನು ಸಭೆ ಪರಿಶೀಲಿಸಿತು. ಕೇಂದ್ರ ಗೃಹ ಕಾರ್ಯದರ್ಶಿ, ಹರಿಯಾಣ ಮುಖ್ಯಮಂತ್ರಿಗಳ ಮುಖ್ಯ ಪ್ರಧಾನ ಕಾರ್ಯದರ್ಶಿ, ರಾಜ್ಯದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ), ಬ್ಯೂರೋ ಆಫ್ ಪೊಲೀಸ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ (ಬಿಪಿಆರ್ &ಡಿ) ಮಹಾನಿರ್ದೇಶಕರು, ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ (ಎನ್ಸಿಆರ್ಬಿ) ಮಹಾನಿರ್ದೇಶಕರು ಮತ್ತು ಗೃಹ ಸಚಿವಾಲಯ ಹಾಗು ರಾಜ್ಯ ಸರ್ಕಾರದ ಹಲವಾರು ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಸಭೆಯಲ್ಲಿ ನಡೆದ ಚರ್ಚೆಯ ವೇಳೆ ಮಾತನಾಡಿದ ಕೇಂದ್ರ ಗೃಹ ಸಚಿವರು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ಮೂರು ಹೊಸ ಕ್ರಿಮಿನಲ್ ಕಾನೂನುಗಳು ನಾಗರಿಕ ಹಕ್ಕುಗಳ ರಕ್ಷಕ ಮತ್ತು 'ನ್ಯಾಯದ ಸುಲಭ ಲಭ್ಯತೆ'ಯ ಆಧಾರವಾಗುತ್ತಿವೆ ಎಂದು ಹೇಳಿದರು. 2025ರ ಮಾರ್ಚ್ 31ರೊಳಗೆ ರಾಜ್ಯದಲ್ಲಿ ಹೊಸ ಕ್ರಿಮಿನಲ್ ಕಾನೂನುಗಳ 100 ಪ್ರತಿಶತ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಗೃಹ ಸಚಿವರು ಹರಿಯಾಣಕ್ಕೆ ಸೂಚಿಸಿದರು.

ತಂತ್ರಜ್ಞಾನದ ಬಳಕೆಗೆ ಒತ್ತು ನೀಡಿದ ಶ್ರೀ ಅಮಿತ್ ಶಾ, ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಒಂದಕ್ಕಿಂತ ಹೆಚ್ಚು ವಿಧಿವಿಜ್ಞಾನ ಮೊಬೈಲ್ ವ್ಯಾನ್ ಗಳು ಲಭ್ಯವಿರಬೇಕು ಎಂದು ಹೇಳಿದರು. ಶೂನ್ಯ ಎಫ್ಐಆರ್ಗಳ ಮೇಲ್ವಿಚಾರಣೆಯ ಜವಾಬ್ದಾರಿ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿವೈಎಸ್ಪಿ) ಶ್ರೇಣಿಯ ಅಧಿಕಾರಿಯದ್ದಾಗಿರಬೇಕು ಮತ್ತು ರಾಜ್ಯಗಳಿಗೆ ಅನುಗುಣವಾಗಿ ಅವುಗಳನ್ನು ಇತರ ಭಾಷೆಗಳಿಗೆ ಅನುವಾದಿಸುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದೂ ಅವರು ಒತ್ತಿ ಹೇಳಿದರು. ಸಮಯೋಚಿತ ನ್ಯಾಯ ಒದಗಿಸುವುದು ತಮ್ಮ ಆದ್ಯತೆಯಾಗಿದೆ ಎಂಬುದರ ಬಗ್ಗೆ ರಾಜ್ಯದ ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ) ಎಲ್ಲಾ ಪೊಲೀಸ್ ಸಿಬ್ಬಂದಿಯಲ್ಲಿ ಸೂಕ್ಷ್ಮತೆಯನ್ನು, ಸಂವೇದನಾಶೀಲತೆಯನ್ನು ಮೂಡಿಸಬೇಕು ಎಂದು ಗೃಹ ಸಚಿವರು ಹೇಳಿದರು.

ಹರಿಯಾಣದ ಪೊಲೀಸ್ ಮಹಾನಿರ್ದೇಶಕರಿಗೆ ಎಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ನಿಗದಿತ ಸಮಯದೊಳಗೆ ಪ್ರಕರಣಗಳ ತನಿಖೆ ನಡೆಸುವುದನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಗೃಹ ಸಚಿವರು  ಮತ್ತು ಸಹಕಾರ ಸಚಿವರೂ ಆಗಿರುವ ಶ್ರೀ ಅಮಿತ್ ಶಾ ಸೂಚಿಸಿದರು. ಹರಿಯಾಣದ ಮುಖ್ಯಮಂತ್ರಿ ಪ್ರತಿ 15 ದಿನಗಳಿಗೊಮ್ಮೆ ಮೂರು ಹೊಸ ಕಾನೂನುಗಳ ಅನುಷ್ಠಾನದ ಪ್ರಗತಿಯನ್ನು ಪರಿಶೀಲಿಸಬೇಕು ಮತ್ತು ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರು ವಾರಕ್ಕೊಮ್ಮೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಅಧಿಕಾರಿಗಳೊಂದಿಗೆ ಪರಿಶೀಲಿಸಬೇಕು ಎಂದು ಅವರು ಹೇಳಿದರು.

 

*****

 

 

 

 

 


(Release ID: 2083238) Visitor Counter : 16