ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸ್ಕ್ವಾಷ್ ನ ಪ್ರಸಿದ್ಧ ಆಟಗಾರರಾದ ಶ್ರೀ ರಾಜ್ ಮಂಚಂದಾ ಅವರ ನಿಧನಕ್ಕೆ ಪ್ರಧಾನಮಂತ್ರಿಯವರಿಂದ ಸಂತಾಪ ಸೂಚನೆ

ಪ್ರಕಟಣಾ ದಿನಾಂಕ: 04 DEC 2024 3:42PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಶ್ರೀ ರಾಜ್ ಮಂಚಂದಾ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಶ್ರೀ ಮಂಚಂದಾ ಅವರು ತಮ್ಮ ಸಮರ್ಪಣೆ ಮತ್ತು ಉತ್ಕೃಷ್ಟತೆಗೆ ಹೆಸರುವಾಸಿಯಾದ ಭಾರತೀಯ ಸ್ಕ್ವಾಷ್ ಆಟದ ನಿಜವಾದ ದಂತಕಥೆ ಎಂದು ಶ್ರೀ ಮೋದಿಯವರು ಶ್ಲಾಘಿಸಿದ್ದಾರೆ. ಶ್ರೀ ಮಂಚಂದಾ ಅವರು ಮಿಲಿಟರಿಯಲ್ಲಿ ರಾಷ್ಟ್ರಕ್ಕೆ ಸಲ್ಲಿಸಿದ ಸೇವೆಯನ್ನು ಪ್ರಧಾನಿಯವರು ಶ್ಲಾಘಿಸಿದ್ದಾರೆ.

ಎಕ್ಸ್ ನಲ್ಲಿ ಪ್ರಧಾನ ಮಂತ್ರಿಯವರ ಹ್ಯಾಂಡಲ್ ಹೀಗೆ ಬರೆದಿದೆ:

"ಸಮರ್ಪಣೆ ಮತ್ತು ಉತ್ಕೃಷ್ಟತೆಗೆ ಹೆಸರುವಾಸಿಯಾದ ಭಾರತೀಯ ಸ್ಕ್ವಾಷ್ ನ ಪ್ರಸಿದ್ಧ ಆಟಗಾರರಾದ ಶ್ರೀ ರಾಜ್ ಮಂಚಂದಾ ಜಿ ಅವರ ನಿಧನದಿಂದ ದುಃಖಿತನಾಗಿದ್ದೇನೆ. ಅವರು ಗೆದ್ದ ಪ್ರಶಸ್ತಿಗಳ ಜೊತೆಗೆ, ಕ್ರೀಡೆಯ ಬಗ್ಗೆ ಅವರ ಉತ್ಸಾಹ ಮತ್ತು ತಲೆಮಾರುಗಳನ್ನು ಪ್ರೇರೇಪಿಸುವ ಅವರ ಸಾಮರ್ಥ್ಯವು ಅವರನ್ನು ನಿಜವಾಗಿಯೂ ಮೆಚ್ಚುಗೆಗೆ ಪಾತ್ರವಾಗಿಸಿದೆ. ಸ್ಕ್ವಾಷ್ ಅಂಗಣದಾಚೆ ಕೂಡಾ ಅವರು ಮಿಲಿಟರಿಯಲ್ಲಿ ರಾಷ್ಟ್ರಕ್ಕೆ ಸೇವೆಸಲ್ಲಿಸಿದ್ದಾರೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು. ಓಂ ಶಾಂತಿ: ಪ್ರಧಾನಮಂತ್ರಿ @narendramodi."

 

 

*****


(ಪ್ರಕಟಣೆ ಐ.ಡಿ.: 2080970) ವಿಸಿಟರ್ ಕೌಂಟರ್ : 76