ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಪ್ರಗತಿ: ಅಭಿವೃದ್ಧಿ ಮತ್ತು ಹೊಣೆಗಾರಿಕೆಯ ಚಾಲನಾಶಕ್ತಿ


ಭಾರತದ ಪ್ರಮುಖ ಯೋಜನೆಗಳನ್ನು ವೇಗಗೊಳಿಸುವಲ್ಲಿ “ಪ್ರಗತಿ”ಯ ಪಾತ್ರವನ್ನು ಆಕ್ಸ್‌ಫರ್ಡ್ ಅಧ್ಯಯನ ಎತ್ತಿ ತೋರಿಸಿದೆ

Posted On: 03 DEC 2024 6:23PM by PIB Bengaluru

ಪರಿಚಯ

ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ಸೈದ್ ಬ್ಯುಸಿನೆಸ್ ಸ್ಕೂಲ್‌ “ಗ್ರಿಡ್‌ಲಾಕ್‌ನಿಂದ ಬೆಳವಣಿಗೆಯ ತನಕ: ಭಾರತದ ನಾಯಕತ್ವವು “ಪ್ರಗತಿ” ಪರಿಸರ ವ್ಯವಸ್ಥೆಯನ್ನು ಬಲಿಷ್ಠ ಪ್ರಗತಿಗೆ ಹೇಗೆ ಸಕ್ರಿಯಗೊಳಿಸುತ್ತಿದೆ'” ಎಂಬ ಶೀರ್ಷಿಕೆಯಡಿ ಬೃಹತ್ ಬದಲಾವಣೆಗೆ ಕಾರಣವಾಗುವ ಒಂದು ಅದ್ಭುತ ಅಧ್ಯಯನ ನಡೆಸಿದೆ. ಈ ಅಧ್ಯಯನಕ್ಕೆ ಗೇಟ್ಸ್ ಫೌಂಡೇಶನ್‌ ಬೆಂಬಲ ನೀಡಿದ್ದು, ಭಾರತದ ಮೂಲಸೌಕರ್ಯ ಅಭಿವೃದ್ಧಿಯಲ್ಲಿ “ಪ್ರಗತಿ” ವೇದಿಕೆಯು ಹೇಗೆ ಸಕ್ರಿಯವಾದ ಆಡಳಿತ ಮತ್ತು ಸಮಯೋಚಿತ ಅನುಷ್ಠಾನಕ್ಕೆ ನೆರವಾಗುತ್ತಿದೆ ಎಂಬುದರ ಮೇಲೆ ಬೆಳಕು ಚೆಲ್ಲಿದೆ. ಭಾರತದ ಡಿಜಿಟಲ್ ಆಡಳಿತದ ಭೂದೃಶ್ಯದಲ್ಲಿ ಪರಿವರ್ತನೀಯ ಬದಲಾವಣೆಗೆ ಇದು ಕಾರಣವಾಗಿದೆ. ಈ ನವೀನ ವೇದಿಕೆಯು 2015 ಮಾರ್ಚ್ ನಲ್ಲಿ ಪ್ರಾರಂಭವಾದಾಗಿನಿಂದ 205 ಶತಕೋಟಿ ಡಾಲರ್ ಮೌಲ್ಯದ 340 ನಿರ್ಣಾಯಕ ಯೋಜನೆಗಳನ್ನು ವೇಗಗೊಳಿಸಲು ಸಹಾಯ ಮಾಡಿದೆ ಎಂದು ಅಧ್ಯಯನ ಬಹಿರಂಗಪಡಿಸಿದೆ. ಇದು ದೇಶಾದ್ಯಂತ ಮೂಲಸೌಕರ್ಯ ಮತ್ತು ಸಾಮಾಜಿಕ ಅಭಿವೃದ್ಧಿ ಉಪಕ್ರಮಗಳ ತ್ವರಿತ ನಿರ್ವಹಣೆ ಮತ್ತು ಅನುಷ್ಠಾನಕ್ಕೆ  ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಅಧ್ಯಯನ ಒತ್ತಿಹೇಳಿದೆ.

ಪ್ರಗತಿಯ ನವೀನ ಕಾರ್ಯವಿಧಾನವು ತಂತ್ರಜ್ಞಾನ-ಚಾಲಿತ ಸಹಭಾಗಿತ್ವದ ಮೂಲಕ ಆಡಳಿತದಲ್ಲಿನ ಅಂತರ(ಕಂದಕ)ವನ್ನು ಹೇಗೆ ನಿವಾರಿಸಿದೆ ಎಂಬುದರ ಮೇಲೆ ಅಧ್ಯಯನ ಬೆಳಕು ಚೆಲ್ಲಿದೆ. ಡಿಜಿಟಲ್ ಡೇಟಾ ನಿರ್ವಹಣೆ, ವೀಡಿಯೊ ಕಾನ್ಫರೆನ್ಸಿಂಗ್ ಮತ್ತು ಜಿಯೋ-ಸ್ಪೇಶಿಯಲ್ ಮ್ಯಾಪಿಂಗ್ ಸಂಯೋಜಿಸುವ ಮೂಲಕ, ಇದು ಪ್ರಧಾನ ಮಂತ್ರಿಗಳ ಕಚೇರಿ, ಕೇಂದ್ರ ಸಚಿವಾಲಯಗಳು ಮತ್ತು ರಾಜ್ಯ ಸರ್ಕಾರಗಳ ನಡುವೆ ತಡೆರಹಿತ ಸಹಭಾಗಿತ್ವವನ್ನು ಶಕ್ತಗೊಳಿಸುತ್ತದೆ. ಈ ನೇರ ತೊಡಗಿಸಿಕೊಳ್ಳುವಿಕೆಯು ನೈಜ ಸಮಯದಲ್ಲಿ ಸಮಸ್ಯೆಗಳನ್ನು ಪರಿಹರಿಸುವುದನ್ನು ಖಚಿತಪಡಿಸುತ್ತದೆ, ಪ್ರಧಾನ ಮಂತ್ರಿ ಅವರು ವೈಯಕ್ತಿಕವಾಗಿ ಪ್ರಗತಿಯನ್ನು ಪರಿಶೀಲಿಸುತ್ತಾರೆ ಮತ್ತು ಅಡೆತಡೆಗಳನ್ನು ತೊಡೆದುಹಾಕುತ್ತಾರೆ. ಇಂತಹ ಸಮಗ್ರ ಕಾರ್ಯವಿಧಾನವು ಹೊಣೆಗಾರಿಕೆ ಮತ್ತು ದಕ್ಷತೆಯ ಸಂಸ್ಕೃತಿಯನ್ನು ಸೃಷ್ಟಿಸಿದೆ, ಪ್ರಗತಿಯನ್ನು ಸಹಕಾರಿ ಒಕ್ಕೂಟ ವ್ಯವಸ್ಥೆ ಮತ್ತು ನವೀನ ಆಡಳಿತದ ಮಾದರಿಯನ್ನಾಗಿ ಮಾಡಿದೆ.

ಪ್ರಮುಖ ಪಾಲುದಾರರನ್ನು ಸಂಯೋಜಿಸಲು ಮತ್ತು ನೆಲ-ಮಟ್ಟದ ನೈಜತೆಗಳ ನವೀಕೃತ ದೃಶ್ಯಗಳನ್ನು ಒದಗಿಸುವಂತೆ ಪ್ರಗತಿ ವೇದಿಕೆಯನ್ನು ವಿನ್ಯಾಸಗೊಳಿಸಲಾಗಿದೆ. ಪ್ರಗತಿಯು ಹಿಂದೆಂದೂ ಕಾಣದ ದಕ್ಷತೆಯೊಂದಿಗೆ ಸಮಸ್ಯೆಗಳ ಮೇಲ್ವಿಚಾರಣೆ ಮಾಡಲು, ಪರಿಶೀಲಿಸಲು ಮತ್ತು ಪರಿಹರಿಸಲು ಪ್ರಧಾನ ಮಂತ್ರಿಗೆ ಅಧಿಕಾರ ನೀಡುತ್ತದೆ. ಆಡಳಿತವನ್ನು ಸುವ್ಯವಸ್ಥಿತಗೊಳಿಸುವ ಈ ವೇದಿಕೆಯ ಕಾರ್ಯವಿಧಾನವು ನಿರ್ಧಾರ ತೆಗೆದುಕೊಳ್ಳುವಿಕೆಯನ್ನು ಕ್ರಾಂತಿಕಾರಿಗೊಳಿಸಿದೆ. ಎಲ್ಲಕ್ಕಿಂತ ವಿಶೇಷವಾಗಿ, ಇ-ಆಡಳಿತ ಮತ್ತು ಉತ್ತಮ ಆಡಳಿತಕ್ಕೆ ಭಾರತದ ಬದ್ಧತೆಯನ್ನು ಬಲಪಡಿಸಿದೆ ಎಂಬುದನ್ನು ಅಧ್ಯಯನದಲ್ಲಿ ಹೈಲೈಟ್ ಮಾಡಲಾಗಿದೆ.

ಪ್ರಗತಿಯ ಪ್ರಮುಖ ಲಕ್ಷಣಗಳು

  • ಭಾರತದ ಸರ್ಕಾರವೇ ಪ್ರಮುಖ ಯೋಜನೆಗಳು ಮತ್ತು ಕಾರ್ಯಕ್ರಮಗಳ ಮೇಲ್ವಿಚಾರಣೆ ನಡೆಸುತ್ತದೆ ಮತ್ತು ಪರಿಶೀಲನೆ ನಡೆಸುತ್ತದೆ
  • ರಾಜ್ಯ ಸರ್ಕಾರಗಳು ಎತ್ತುವ ಸಮಸ್ಯೆಗಳು ಅಥವಾ ವಿವಾದಗಳನ್ನು ಪರಿಹರಿಸುತ್ತದೆ, ಕಳವಳಗಳನ್ನು ಪರಿಹರಿಸಲಾಗಿದೆ ಎಂದು ಖಾತ್ರಿರಡಿಸುತ್ತದೆ
  • ಯೋಜನೆಗಳ ಅನುಷ್ಠಾನದಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಹೆಚ್ಚಿಸುತ್ತದೆ
  • ನಿರ್ಧಾರಗಳ ಮೇಲ್ವಿಚಾರಣೆ ಮತ್ತು ನಿರಂತರ ಪರಿಶೀಲನೆಗೆ ಸೂಕ್ತ ವ್ಯವಸ್ಥೆ (ಬಿಲ್ಟ್ ಇನ್ ಫೀಚರ್) ನಿರ್ಮಿಸುತ್ತದೆ.
  • ನೈಜ ಸಮಯದ ಸಹಭಾಗಿತ್ವ ಮತ್ತು ವಿವಿಧ ಪಾಲುದಾರರೊಂದಿಗೆ ವಿನಿಮಯಕ್ಕೆ ಅನುವು ಮಾಡಿಕೊಡುತ್ತದೆ,
  • ಯೋಜನೆಗಳ ಅನುಷ್ಠಾನ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಯೋಜನೆಗಳನ್ನು ಸಕಾಲದಲ್ಲಿ ಪೂರ್ಣಗೊಳಿಸಲು ಪ್ರಧಾನ ಮಂತ್ರಿಗಳ ಕಾರ್ಯಾಲಯಕ್ಕೆ ಅನುವು ಮಾಡಿಕೊಡುತ್ತದೆ.
  • ಸರ್ಕಾರದ ವಿವಿಧ ಸಂಸ್ಥೆಗಳಿಂದ ಎದುರಾಗುವ ನಾನಾ ಅಡತೆಡಗಳನ್ನು ನಿವಾರಿಸಿ, ಸಕಾಲದಲ್ಲಿ ಯೋಜನೆಗಳ ಅನುಷ್ಠಾನಕ್ಕೆ ಅನುವು ಮಾಡಿಕೊಡುತ್ತದೆ.
  • ಪ್ರಧಾನ ಮಂತ್ರಿಗಳ ಕಾರ್ಯಾಲಯ, ಭಾರತ ಸರ್ಕಾರದ ಕಾರ್ಯದರ್ಶಿಗಳು ಮತ್ತು ರಾಜ್ಯ ಸರ್ಕಾರಗಳ ಕಾರ್ಯದರ್ಶಿಗಳ ನಡುವೆ ಸಮನ್ವಯ ಸಾಧಿಸಲು 3ನೇ ಹಂತದ ಮಾಹಿತಿ ತಂತ್ರಜ್ಞಾನ ಆಧರಿತ ವ್ಯವಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತದೆ.

 ಕೇಸ್ ಸ್ಟಡಿ ಸಂಶೋಧನೆಗಳು 

2015ರಲ್ಲಿ ಪ್ರಾರಂಭವಾದಾಗಿನಿಂದ, ಪ್ರಗತಿಯು ಭಾರತದ ಮೂಲಸೌಕರ್ಯ ಮತ್ತು ಸಾಮಾಜಿಕ ಕ್ಷೇತ್ರದ ಅಭಿವೃದ್ಧಿಯನ್ನು ಪರಿವರ್ತಿಸುವ ವೇಗವರ್ಧಕ ವೇದಿಕೆಯಾಗಿದೆ. ಸಕ್ರಿಯ ನಾಯಕತ್ವ, ಕಾರ್ಯತಂತ್ರದ ಯೋಜನೆಯ ಆಯ್ಕೆ ಮತ್ತು ಸದೃಢವಾದ ಡಿಜಿಟಲ್ ಆಡಳಿತದ ಮಾರ್ಗಸೂಚಿ ಮೂಲಕ, ವೇದಿಕೆಯು ವಿವಿಧ ಹೆಚ್ಚಿನ ಆದ್ಯತೆಯ ಯೋಜನೆಗಳಲ್ಲಿ ಸಂಕೀರ್ಣ ಸವಾಲುಗಳನ್ನು ಪರಿಹರಿಸಿದೆ. ಪ್ರಗತಿಯು ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಪ್ರಗತಿಯನ್ನು ಹೇಗೆ ವೇಗಗೊಳಿಸಿದೆ, ಅಡೆತಡೆಗಳನ್ನು ಹೇಗೆ ಪರಿಹರಿಸಿದೆ, ರಾಜ್ಯಗಳಾದ್ಯಂತ ಸಹಭಾಗಿತ್ವವನ್ನು ಹೇಗೆ ಉತ್ತೇಜಿಸಿದೆ ಮತ್ತು ಪ್ರಮುಖ ಸಾಮಾಜಿಕ ಉಪಕ್ರಮಗಳನ್ನು ಹೇಗೆ ಬೆಂಬಲಿಸಿದೆ, ರಾಷ್ಟ್ರದ ಅಭಿವೃದ್ಧಿ ಪಥದಲ್ಲಿ ಗಮನಾರ್ಹ ಸುಧಾರಣೆಗಳನ್ನು ಹೇಗೆ ನಡೆಸುತ್ತಿದೆ ಎಂಬುದನ್ನು ಅಧ್ಯಯನವು ಪರಿಶೋಧಿಸಿದೆ.

ಅಧ್ಯಯನ ವರದಿಯ ಪ್ರಮುಖಾಂಶಗಳು:

 ಮೂಲಸೌಕರ್ಯ ಅಭಿವೃದ್ಧಿಯನ್ನು ವೇಗಗೊಳಿಸುತ್ತಿದೆ 

2015ರಲ್ಲಿ ಪ್ರಾರಂಭವಾದಾಗಿನಿಂದ, ಪ್ರಗತಿಯು ಭಾರತದ ಮೂಲಸೌಕರ್ಯ ವಲಯವನ್ನು ಪರಿವರ್ತಿಸುವ ಪ್ರಬಲ ಸಾಧನವಾಗಿ ಹೊರಹೊಮ್ಮಿದೆ. 2023 ಜೂನ್ ಹೊತ್ತಿಗೆ, ವೇದಿಕೆಯು 17.05 ಲಕ್ಷ ಕೋಟಿ ರೂ.(205 ಶತಕೋಟಿ ಡಾಲರ್) ಮೌಲ್ಯದ 340 ಯೋಜನೆಗಳನ್ನು ಪರಿಶೀಲಿಸಿದೆ, ಅವುಗಳ ಅನುಷ್ಠಾನವನ್ನು ಗಮನಾರ್ಹವಾಗಿ ವೇಗಗೊಳಿಸಿದೆ. ಇದು 50,000 ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಮತ್ತು ದೇಶದ ವಿಮಾನ ನಿಲ್ದಾಣಗಳ ಸಂಖ್ಯೆಯನ್ನು 2 ಪಟ್ಟು ಹೆಚ್ಚಿಸುವುದನ್ನು ಒಳಗೊಂಡಿದೆ, ಇದು ಒಂದು ದಶಕದ ಸರಿಸಾಟಿಯಿಲ್ಲದ ಪ್ರಗತಿಯನ್ನು ಪ್ರತಿಬಿಂಬಿಸುತ್ತಿದೆ.

ಈ 340 ಯೋಜನೆಗಳ ಆಯ್ಕೆಯು ಅತ್ಯಂತ ಆಯಕಟ್ಟಿನದ್ದಾಗಿತ್ತು, ವಿಶಿಷ್ಟ ಮತ್ತು ಸಂಕೀರ್ಣ ಸವಾಲುಗಳನ್ನು ಪ್ರಸ್ತುತಪಡಿಸಿದ ರಾಷ್ಟ್ರೀಯ ಪ್ರಾಮುಖ್ಯತೆಯ ಉಪಕ್ರಮಗಳ ಮೇಲೆ ಗಮನ ಕೇಂದ್ರೀಕರಿಸಿದೆ. ಪ್ರಗತಿಯು ಈ 'ಸಂಕೀರ್ಣ' ಯೋಜನೆಗಳನ್ನು ಪರಿಹರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ, ಇದನ್ನು ಕಾರ್ಯಗತಗೊಳಿಸುವ ವಿಷಯದಲ್ಲಿ ಅತ್ಯಂತ ಸವಾಲಿನವೆಂದು ಪರಿಗಣಿಸಲಾಗಿದೆ.

ಪ್ರಗತಿಯ ವ್ಯಾಪ್ತಿಯು ವೈವಿಧ್ಯಮಯ ಮೂಲಸೌಕರ್ಯ ಪ್ರಕಾರಗಳನ್ನು ಒಳಗೊಂಡಿದ್ದರೂ, ಗಮನಾರ್ಹ ಭಾಗವು ಆರ್ಥಿಕ ಬೆಳವಣಿಗೆಯ ಅಡಿಪಾಯವಾದ ರಸ್ತೆಗಳು, ರೈಲ್ವೆಗಳು ಮತ್ತು ವಿದ್ಯುತ್ ಸ್ಥಾವರಗಳ ಮೇಲೆ ಅದರ ಗಮನ ಕೇಂದ್ರೀಕೃತವಾಗಿದೆ - ಈ ಉದ್ದೇಶಿತ ಮಧ್ಯಸ್ಥಿಕೆಯು ಅಡೆತಡೆಗಳನ್ನು ಪರಿಹರಿಸುತ್ತದೆ ಮತ್ತು ಆರ್ಥಿಕ ಆದಾಯವನ್ನು ಗರಿಷ್ಠಗೊಳಿಸುತ್ತದೆ. ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಫೈನಾನ್ಸ್ ಅಂಡ್ ಪಾಲಿಸಿಯ ಅಧ್ಯಯನಗಳ ಪ್ರಕಾರ, ಮೂಲಸೌಕರ್ಯ ವಲಯದಲ್ಲಿ ಹೂಡಿಕೆ ಮಾಡಿದ ಪ್ರತಿ ರೂಪಾಯಿಗೆ 2.5-3.5 ರೂ. ವರೆಗೆ ಜಿಡಿಪಿ ಲಾಭ ತಂದುಕೊಡುತ್ತದೆ ಎಂಬುದನ್ನು ಸೂಚಿಸುತ್ತವೆ.

 

ಉನ್ನತ ಮಟ್ಟದಿಂದ ನಾಯಕತ್ವ

340 ನಿರ್ಣಾಯಕ ಮೂಲಸೌಕರ್ಯ ಯೋಜನೆಗಳ ಆವೇಗ ಖಾತರಿಪಡಿಸುವ ಮೂಲಕ ಪ್ರಧಾನ ಮಂತ್ರಿ ಅವರ ಸಕ್ರಿಯ ಪಾಲ್ಗೊಳ್ಳುವಿಕೆಯು ಪ್ರಗತಿಯ ಯಶಸ್ಸಿಗೆ ಚಾಲನೆ ನೀಡಿದೆ. ಪ್ರಗತಿಯನ್ನು ನೇರವಾಗಿ ಪರಿಶೀಲಿಸುವ ಮೂಲಕ, ಕಾಲಮಿತಿ(ಗಡುವು) ನಿಗದಿಪಡಿಸುವ ಮೂಲಕ ಮತ್ತು ಅಧಿಕಾರಶಾಹಿ ಅಡೆತಡೆಗಳನ್ನು ಮುರಿಯುವ ಮೂಲಕ, ಅವರ ನಾಯಕತ್ವವು ಹಲವಾರು ಸ್ಥಗಿತಗೊಂಡ ಉಪಕ್ರಮಗಳನ್ನು ಪುನರುಜ್ಜೀವನಗೊಳಿಸಿದೆ ಮತ್ತು ಹೊಣೆಗಾರಿಕೆಯ ಸಂಸ್ಕೃತಿಯನ್ನು ಸೃಷ್ಟಿಸಿದೆ. ಉದಾಹರಣೆಗೆ, ಜಾರ್ಖಂಡ್‌ನ ಪಕ್ರಿ-ಬರ್ವಾಡಿಹ್ ಕಲ್ಲಿದ್ದಲು ಗಣಿ 2006ರಿಂದಲೂ ವಿಳಂಬವಾಯಿತು. 2016ರಲ್ಲಿ ಪ್ರಧಾನ ಮಂತ್ರಿ ಮೋದಿ ಅವರ ಮಧ್ಯಸ್ಥಿಕೆ ನಂತರ ತ್ವರಿತ ಪ್ರಗತಿ ಕಂಡಿತು, ಇದು 2019ರಲ್ಲಿ ಪೂರ್ಣಗೊಳ್ಳಲು ಕಾರಣವಾಯಿತು.

ಸ್ವಯಂಕೃತವಾಗಿ ನಡೆಸುವ ಈ ಪ್ರಾಯೋಗಿಕ(ಹ್ಯಾಂಡ್-ಆನ್) ವಿಧಾನವು ಅಸಮರ್ಥತೆಗಳನ್ನು ನಿವಾರಿಸಲು ಸರಳೀಕೃತ ಪ್ರಕ್ರಿಯೆಗಳನ್ನು ಒಳಗೊಂಡಿದೆ. 2017ರಲ್ಲಿ ಯೋಜನಾ ಅನುಮೋದನೆಗಳಲ್ಲಿನ ವಿಳಂಬ ಪರಿಹರಿಸಲು ರೈಲ್ವೆ ಸಚಿವಾಲಯಕ್ಕೆ ಪ್ರಧಾನ ಮಂತ್ರಿ ನಿರ್ದೇಶನ ನೀಡಿದರು, ಇದರ ಪರಿಣಾಮವಾಗಿ 2020ರಲ್ಲಿ ಎಲೆಕ್ಟ್ರಾನಿಕ್ ಡ್ರಾಯಿಂಗ್ ಅನುಮೋದನೆ ವ್ಯವಸ್ಥೆ ರೂಪಿಸಲಾಯಿತು. ಈ ಹೊಸತನವು ಅನುಮೋದನೆಯ ಸಮಯವನ್ನು ತೀವ್ರವಾಗಿ ಕಡಿಮೆಗೊಳಿಸಿತು ಮತ್ತು ಸಚಿವಾಲಯಗಳಾದ್ಯಂತ ದಕ್ಷತೆ ಹೆಚ್ಚಿಸಿತು.

ಪ್ರಗತಿಯ ಪ್ರಭಾವಕ್ಕೆ ಸಹಭಾಗಿತ್ವ ಪ್ರಮುಖವಾಗಿದೆ. 3 ರಾಜ್ಯಗಳಲ್ಲಿ ಭೂಮಿ ಸ್ವಾಧೀನ ಸಮಸ್ಯೆಗಳನ್ನು ಎದುರಿಸುತ್ತಿರುವ ಎನ್ನೂರ್-ತಿರುವಳ್ಳೂರು-ಬೆಂಗಳೂರು ಗ್ಯಾಸ್ ಪೈಪ್‌ಲೈನ್‌ಗಾಗಿ, ವಿವಾದಗಳನ್ನು ಪರಿಹರಿಸಲು ಒಂದೇ ಅನುಷ್ಠಾನ ಸಂಸ್ಥೆಯನ್ನು ರೂಪಿಸುವಂತೆ ಪ್ರಧಾನ ಮಂತ್ರಿ ಒತ್ತಾಯಿಸಿದರು. ಈ ನಿರ್ಣಾಯಕ ಕ್ರಮವು ಯೋಜನೆಯು 2024 ಜನವರಿಯಲ್ಲಿ ಪೂರ್ಣಗೊಳ್ಳುವುದನ್ನು ಖಾತ್ರಿಪಡಿಸಿತು, ಸಮನ್ವಯ ಮತ್ತು ಸಮಯೋಚಿತ ಕಾರ್ಯಾಚರಣೆಯ ವೇಗಿಯಾಗಿ ಪ್ರಗತಿಯ ಪಾತ್ರವನ್ನು ಇದು ಉದಾಹರಿಸುತ್ತದೆ.

 

ಹೊಣೆಗಾರಿಕೆ ಹೆಚ್ಚಿಸುವ ಮತ್ತು ಅಡೆತಡೆಗಳನ್ನು ಪರಿಹರಿಸುವ ಚಾಲನಾಶಕ್ತಿ

ಪ್ರಗತಿಯು ಅಧಿಕಾರಿಗಳಲ್ಲಿ ತುರ್ತು ಪ್ರಜ್ಞೆಯನ್ನು ಹುಟ್ಟುಹಾಕುತ್ತದೆ, ಯೋಜನೆಗಳನ್ನು ಪರಿಶೀಲಿಸುವ ಮುನ್ನವೇ ಪೂರ್ವಭಾವಿಯಾಗಿ ಸಮಸ್ಯೆ ಪರಿಹರಿಸಲು ಪ್ರೇರೇಪಿಸುತ್ತದೆ. ಪ್ರಧಾನ ಮಂತ್ರಿ ಅವರ ಮಾಸಿಕ ಪರಾಮರ್ಶೆಯಲ್ಲಿ ಸೇರ್ಪಡೆಗೊಳ್ಳುವ ಸಾಧ್ಯತೆಯ ವಿಳಂಬಗಳನ್ನು ಪರಿಹರಿಸಲು ಪಾಲುದಾರರನ್ನು ಇದು ಪ್ರೇರೇಪಿಸುತ್ತದೆ. ಉದಾಹರಣೆಗೆ, ಪ್ರಗತಿ ಪರಿಶೀಲನೆಗೆ ಕಾರಣವಾದ 5 ತಿಂಗಳುಗಳಲ್ಲಿ, ರಾಷ್ಟ್ರೀಯ ಬ್ರಾಡ್‌ಬ್ಯಾಂಡ್ ಮಿಷನ್ ತನ್ನ ಬಾಕಿ ಉಳಿದಿರುವ ಕಾನೂನು ಹಕ್ಕಿನ ಅನುಮತಿಗಳಲ್ಲಿ ಅರ್ಧದಷ್ಟು ವಿವಿಧ ಅಧಿಕಾರಿಗಳಿಂದ ಪಡೆದುಕೊಂಡಿತು, ಸಾರ್ವತ್ರಿಕ ಇಂಟರ್ನೆಟ್ ಪ್ರವೇಶ ಗುರಿಯನ್ನು ತ್ವರಿತಗೊಳಿಸಿತು.

ವೇದಿಕೆಯು ಪಾಲುದಾರರ ನಡುವೆ ಸಹಭಾಗಿತ್ವ ಬಳೆಸುತ್ತದೆ, ಆಗಾಗ್ಗೆ ದೀರ್ಘಕಾಲದ ವಿವಾದಗಳನ್ನು ನಿವಾರಿಸುತ್ತದೆ. ಎನ್ಎಚ್ 48ರ ದಹಿಸರ್-ಸೂರತ್ ವಿಭಾಗದ ಹೆದ್ದಾರಿ ವಿಸ್ತರಣೆಯು ಪರಿಸರ ಅನುಮೋದನೆಗಳಿಂದಾಗಿ ಸ್ಥಗಿತಗೊಂಡಿತ್ತು. 2017ರಲ್ಲಿ ಪ್ರಗತಿಯಲ್ಲಿ ಅದರ ಸೇರ್ಪಡೆಯ ನಂತರ ಅನುಮೋದನೆ ಪಡೆಯಿತು. ರಾಷ್ಟ್ರೀಯ ವನ್ಯಜೀವಿ ಮಂಡಳಿಯು ಮಹಾರಾಷ್ಟ್ರದ ರಾಜ್ಯ ಮಂಡಳಿಗೆ ನಿರ್ಧಾರ ಕೈಗೊಳ್ಳಲು ನಿಯೋಜಿಸಿತು, ಇದು ಯೋಜನೆಯನ್ನು ರಕ್ಷಿಸುವ ಕ್ರಮಗಳನ್ನು ಖಚಿತಪಡಿಸುತ್ತದೆ. ವನ್ಯಜೀವಿಗಳ ವರ್ಷಗಳ ಸುದೀರ್ಘ ಬಿಕ್ಕಟ್ಟನ್ನು ಪರಿಹರಿಸಿತು.

ಪ್ರಗತಿಯು ಪಾಲುದಾರರಲ್ಲಿ ಬೇರೂರಿರುವ ಸಮಸ್ಯೆಗಳನ್ನು ಪರಿಹರಿಸುವ ಅಧಿಕಾರ ನೀಡುತ್ತದೆ. ಹರಿದಾಸ್‌ಪುರ-ಪರದೀಪ್ ರೈಲು ಸಂಪರ್ಕದ ಸಂದರ್ಭದಲ್ಲಿ, ಪ್ರಗತಿಯು ತನ್ನ ಹಣಕಾಸು ಕ್ರೋಡೀಕರಣದಲ್ಲಿ ವಿವಾದಾತ್ಮಕ ಹೂಡಿಕೆದಾರರನ್ನು ದುರ್ಬಲಗೊಳಿಸಲು, ಪ್ರಗತಿಯು ಶಿಪ್ಪಿಂಗ್ ಸಚಿವಾಲಯಕ್ಕೆ ಅಧಿಕಾರ ನೀಡಿತು. ಪ್ರಗತಿ ಪರಿಶೀಲನೆಯು ತ್ವರಿತ ಕ್ರಮವನ್ನು ಉತ್ತೇಜಿಸುತ್ತದೆ.

ಡಿಜಿಟಲ್ ಆಡಳಿತ ಪರಿಸರ ವ್ಯವಸ್ಥೆ

ಪ್ರಗತಿ, ಪಿಎಂ ಗತಿ ಶಕ್ತಿ, ಪರಿವೇಶ್ ಮತ್ತು ಪ್ರಾಜೆಕ್ಟ್ ಮಾನಿಟರಿಂಗ್ ಗ್ರೂಪ್ (ಪಿಎಂಜಿ) ಪೋರ್ಟಲ್‌ನಂತಹ ವೇದಿಕೆಗಳು ಆಡಳಿತ ಮತ್ತು ಮೂಲಸೌಕರ್ಯ ಅಭಿವೃದ್ಧಿಯನ್ನು ಹೇಗೆ ಕ್ರಾಂತಿಕಾರಿಗೊಳಿಸಿವೆ ಎಂಬುದನ್ನು ತೋರಿಸುವ ಭಾರತದ ಗಮನಾರ್ಹ ಡಿಜಿಟಲ್ ಪರಿವರ್ತನೆಯನ್ನು ಅಧ್ಯಯನವು ಎತ್ತಿ ತೋರಿಸಿದೆ. ಪ್ರಾಜೆಕ್ಟ್ ಮೇಲ್ವಿಚಾರಣೆ ಮತ್ತು ಕಾರ್ಯಗತಗೊಳಿಸುವಿಕೆಯನ್ನು ಸುವ್ಯವಸ್ಥಿತಗೊಳಿಸಲು ಪ್ರಗತಿಯು ವೀಡಿಯೊ ಕಾನ್ಫರೆನ್ಸಿಂಗ್, ಡ್ರೋನ್ ಫೀಡ್‌ಗಳು ಮತ್ತು ಕೇಂದ್ರೀಕೃತ ಡೇಟಾ ಸಿಸ್ಟಮ್‌ಗಳಂತಹ ಸಾಧನಗಳನ್ನು ಸಂಯೋಜಿಸುತ್ತದೆ. ಇದು ದಹಿಸರ್-ಸೂರತ್ ಹೆದ್ದಾರಿ ಯೋಜನೆಗೆ ಉದಾಹರಣೆಯಾಗಿದೆ, ಅಲ್ಲಿ ಜಿಪಿಎಸ್ ಟ್ರ್ಯಾಕಿಂಗ್ ವ್ಯವಸ್ಥೆಯು ಗರಿಷ್ಠ ಸಂಪನ್ಮೂಲ ಬಳಕೆ ಮತ್ತು ವಿಳಂಬಗಳನ್ನು ಕಡಿಮೆ ಮಾಡುತ್ತದೆ.

ಪರಿವೇಶ್ ಪರಿಸರ ಮತ್ತು ಅರಣ್ಯ ತೆರವು ಪ್ರಕ್ರಿಯೆಗಳನ್ನು ಗಣನೀಯವಾಗಿ ವೇಗಗೊಳಿಸಿದೆ, 600 ದಿನಗಳಿಂದ 70-75 ದಿನಗಳವರೆಗೆ ಸಮಯವನ್ನು ಕಡಿಮೆ ಮಾಡಿದೆ, ಅರಣ್ಯ ಅನುಮತಿಗಳಿಗೆ ಈಗ ಕೇಂದ್ರ ಅನುಮೋದನೆಗೆ ಕೇವಲ 20-29 ದಿನಗಳು ಬೇಕಾಗುತ್ತವೆ. ಅದರ ಯಾಂತ್ರೀಕೃತಗೊಂಡ ಮತ್ತು ಡಿಜಿಟೈಸ್ಡ್ ವರ್ಕ್‌ಫ್ಲೋಗಳು ಪಾರದರ್ಶಕತೆ, ದಕ್ಷತೆ ಮತ್ತು ಪರಿಸರದ ಅನುಸರಣೆಗೆ ಬದ್ಧತೆಯನ್ನು ಖಚಿತಪಡಿಸುತ್ತದೆ. ಪಿಎಂ ಗತಿ ಶಕ್ತಿಯು ಕೇಂದ್ರೀಕೃತ ಪೋರ್ಟಲ್ ಮತ್ತು ಜಿಯೋಸ್ಪೇಷಿಯಲ್ ಉಪಕರಣಗಳನ್ನು ಬಳಸಿಕೊಂಡು ಅಂತರ್-ಸಚಿವಾಲಯದ ಸಮನ್ವಯ ಹೆಚ್ಚಿಸುತ್ತದೆ, ಸುಸ್ಥಿರ ಯೋಜನೆಯನ್ನು ಸಕ್ರಿಯಗೊಳಿಸುತ್ತದೆ, ಪುಣೆ-ಬೆಂಗಳೂರು ಎಕ್ಸ್‌ಪ್ರೆಸ್‌ವೇಗೆ ಮಾರ್ಗ ಹೊಂದಾಣಿಕೆಗಳಿಂದ ಪ್ರದರ್ಶಿಸಲ್ಪಟ್ಟಂತೆ, ಇದು ಪರಿಸರದ ಪ್ರಭಾವ ಮತ್ತು ಕಡಿಮೆ ವೆಚ್ಚವನ್ನು ತಗ್ಗಿಸುತ್ತದೆ.

ಪಿಎಂಜಿ ಪೋರ್ಟಲ್ ವೇದಿಕೆಗಳಾದ್ಯಂತ ಡೇಟಾವನ್ನು ಕ್ರೋಡೀಕರಿಸುತ್ತದೆ, ಮೂಲಸೌಕರ್ಯ ಯೋಜನೆಯ ಟ್ರ್ಯಾಕಿಂಗ್‌ಗಾಗಿ ಏಕೀಕೃತ ವ್ಯವಸ್ಥೆ ರೂಪಿಸುತ್ತದೆ, ಮುನ್ಸೂಚನೆಯ ಮೇಲ್ವಿಚಾರಣೆಗಾಗಿ ಕೃತಕ ಬುದ್ದಿಮತ್ತೆ ತಂತ್ರಜ್ಞಾನವನ್ನು ಸಂಯೋಜಿಸುತ್ತದೆ. ಒಟ್ಟಾಗಿ, ಈ ವೇದಿಕೆಗಳು ಸಮಗ್ರ ಡಿಜಿಟಲ್ ಆಡಳಿತ ಪರಿಸರ ವ್ಯವಸ್ಥೆಯನ್ನು ರೂಪಿಸುತ್ತವೆ, ಅಭಿವೃದ್ಧಿಯನ್ನು ವೇಗಗೊಳಿಸುತ್ತವೆ, ಸಹಭಾಗಿತ್ವಗವನ್ನು ಉತ್ತೇಜಿಸುತ್ತವೆ. ಎಲ್ಲಕ್ಕಿಂತ ವಿಶೇಷವಾಗಿ, ಭಾರತದ ಮೂಲಸೌಕರ್ಯ ವಲಯದ ಆಧುನೀಕರಣಕ್ಕೆ ಚಾಲನೆ ನೀಡುತ್ತವೆ.

 

ಸಾಮಾಜಿಕ ಕ್ಷೇತ್ರದಲ್ಲಿ ಪ್ರಗತಿ

ಪ್ರಗತಿಯು ಸಾಮಾಜಿಕ ವಲಯದ ಯೋಜನೆಗಳನ್ನು ವೇಗಗೊಳಿಸಲು, ಲಕ್ಷಾಂತರ ಭಾರತೀಯರ ಜೀವನವನ್ನು ಗಣನೀಯವಾಗಿ ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಪ್ರಮುಖ ಕಾರ್ಯಕ್ರಮಗಳನ್ನು ಪ್ರಧಾನ ಮಂತ್ರಿ ಅವರ ವ್ಯಾಪ್ತಿಗೆ ತರುವ ಮೂಲಕ, ವೇದಿಕೆಯು ಸಮನ್ವಯ ಹೆಚ್ಚಿಸಿದೆ ಮತ್ತು ಸೇವಾ ವಿತರಣೆಯನ್ನು ವೇಗಗೊಳಿಸಿದೆ, ಜೀವನ ಮಟ್ಟ, ಸಂಪರ್ಕ ಮತ್ತು ಅಗತ್ಯ ಸೇವೆಗಳಲ್ಲಿ ಸುಧಾರಣೆಗಳನ್ನು ಹೆಚ್ಚಿಸಿದೆ.

2024ರ ವೇಳೆಗೆ ಪ್ರತಿ ಗ್ರಾಮೀಣ ಮನೆಗಳಿಗೆ ನಲ್ಲಿ ನೀರು ಸಂಪರ್ಕಗಳನ್ನು ಒದಗಿಸುವ ಗುರಿ ಹೊಂದಿರುವ ಜಲಜೀವನ್ ಮಿಷನ್ ಒಂದು ಪ್ರಮುಖ ಉದಾಹರಣೆಯಾಗಿದೆ. ಪ್ರಗತಿ ಪರಿಶೀಲನೆಗಳು ವೇಗವಾಗಿ ಪ್ರಗತಿಗೆ ಅನುಕೂಲ ಮಾಡಿಕೊಟ್ಟಿವೆ, 2019ರಲ್ಲಿ ಇದ್ದ 17%ನಿಂದ 2024ರಲ್ಲಿ 74%ಗೆ ಚಾಲನೆಯಲ್ಲಿರುವ ಗ್ರಾಮೀಣ ಕುಟುಂಬಗಳ ಶೇಕಡಾವಾರು ಪ್ರಮಾಣವನ್ನು ಹೆಚ್ಚಿಸಿದೆ. ಅಂತೆಯೇ, ಸ್ವಚ್ಛ ಭಾರತ್ ಮಿಷನ್ 100 ದಶಲಕ್ಷ ಶೌಚಾಲಯಗಳನ್ನು ಯಶಸ್ವಿಯಾಗಿ ನಿರ್ಮಿಸಿ, ಸುಧಾರಣೆಗೆ ಕೊಡುಗೆ ನೀಡಿದೆ. ಬಯಲು ಶೌಚ ಮತ್ತು ಅಂತರ್ಜಲ ಮಾಲಿನ್ಯ ತಡೆಗಟ್ಟುವ ಮೂಲಕ ನೈರ್ಮಲ್ಯ ಮತ್ತು ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ ತಂದಿದೆ. ಹೆಚ್ಚುವರಿಯಾಗಿ, ಸೌಭಾಗ್ಯ ಯೋಜನೆಯು ಗ್ರಾಮೀಣ ಮನೆಗಳಿಗೆ ಉಚಿತ ವಿದ್ಯುಚ್ಛಕ್ತಿ ಒದಗಿಸುತ್ತದೆ, ಪ್ರಗತಿಯ ಮೇಲ್ವಿಚಾರಣೆಯೊಂದಿಗೆ ಸಾರ್ವತ್ರಿಕ ವಿದ್ಯುದೀಕರಣದ ಕಡೆಗೆ ಗಮನಾರ್ಹ ದಾಪುಗಾಲುಗಳನ್ನು ಮಾಡಿದೆ.

ಈ ಉಪಕ್ರಮಗಳ ಹೊರತಾಗಿ, ಪ್ರಗತಿ ಸಭೆಗಳು ಸರ್ಕಾರಿ ಸೇವೆಗಳ ದಕ್ಷತೆಯ ಮೇಲೆ ಗಮನ ಕೇಂದ್ರೀಕರಿಸುತ್ತವೆ. ಉದಾಹರಣೆಗೆ, ಪಾಸ್‌ಪೋರ್ಟ್ ನೀಡಿಕೆಯಲ್ಲಿನ ವಿಳಂಬದ ಬಗ್ಗೆ ಪುನರಾವರ್ತಿತ ಕುಂದುಕೊರತೆಗಳ ನಂತರ, ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪ್ರಗತಿಯ ಪರಿಶೀಲನೆಯ ಅಡಿ, ಪ್ರಕ್ರಿಯೆಯ ಸಮಯವನ್ನು 16 ದಿನಗಳಿಂದ 7 ದಿನಗಳವರೆಗೆ ಕಡಿಮೆ ಮಾಡುವ ಸುಧಾರಣೆಗಳನ್ನು ಜಾರಿಗೆ ತಂದಿತು. ಇಂತಹ ಉನ್ನತ ಮಟ್ಟದ ಮೇಲ್ವಿಚಾರಣೆಯು ಸರ್ಕಾರಿ ಸೇವೆಗಳಲ್ಲಿ ವ್ಯವಸ್ಥಿತ ಸುಧಾರಣೆಗಳಿಗೆ ಕಾರಣವಾಗಿದೆ, ಒಟ್ಟಾರೆಯಾಗಿ ಸ್ಪಂದಿಸುವಿಕೆ ಮತ್ತು ಪರಿಣಾಮಕಾರಿತ್ವವನ್ನು ಹೆಚ್ಚಿಸುತ್ತದೆ.

 

ರಾಜ್ಯಗಳಾದ್ಯಂತ ಸಹಭಾಗಿತ್ವ

2015ರಲ್ಲಿ ಪ್ರಾರಂಭವಾದಾಗಿನಿಂದ, ಪ್ರಗತಿಯು ರಾಜ್ಯಗಳಾದ್ಯಂತ ಸಹಭಾಗಿತ್ವ  ಬೆಳೆಸಿದೆ, "ಟೀಮ್ ಇಂಡಿಯಾ" ಪರಿಕಲ್ಪನೆಯನ್ನು ಸಾಕಾರಗೊಳಿಸಿದೆ - ಇದು ರಾಜಕೀಯ ವಿಭಜನೆಗಳನ್ನು ಮೀರಿದ ರಾಷ್ಟ್ರೀಯ ಅಭಿವೃದ್ಧಿಗೆ ಏಕೀಕೃತ ಕಾರ್ಯವಿಧಾನವಾಗಿದೆ. ಈ ವೇದಿಕೆಯ ವೀಡಿಯೊ ಕಾನ್ಫರೆನ್ಸಿಂಗ್ ವೈಶಿಷ್ಟ್ಯವು ಕೇಂದ್ರ-ರಾಜ್ಯಗಳ ಸಂವಹನ ಸಂಪರ್ಕಗಳನ್ನು ಕ್ರಾಂತಿಕಾರಿಗೊಳಿಸಿದೆ. ರಾಜಕೀಯ ಭಿನ್ನಾಭಿಪ್ರಾಯಗಳಿಗೆ ಮುಂಚಿತವಾಗಿ ಅಭಿವೃದ್ಧಿ ಗುರಿಗಳನ್ನು ಒದಗಿಸುತ್ತದೆ. ಪ್ರಧಾನ ಮಂತ್ರಿ, ಕೇಂದ್ರ ಸಚಿವಾಲಯದ ಕಾರ್ಯದರ್ಶಿಗಳು ಮತ್ತು ರಾಜ್ಯ ಮುಖ್ಯ ಕಾರ್ಯದರ್ಶಿಗಳನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸುವ ಪ್ರಗತಿಯು ನೇರ ಸಂವಹನವನ್ನು ಸುಗಮಗೊಳಿಸುತ್ತದೆ. ಸಾಂಪ್ರದಾಯಿಕ ಅಧಿಕಾರಶಾಹಿ ಅಡೆತಡೆಗಳನ್ನು ಒಡೆಯುವ ಸಂದರ್ಭದಲ್ಲಿ ಅಂತರ-ರಾಜ್ಯ ಮತ್ತು ಕೇಂದ್ರ-ರಾಜ್ಯ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು ಅನುವು ಮಾಡಿಕೊಡುತ್ತದೆ.

ಪ್ರಗತಿಯು ಕೇಂದ್ರ ಸಚಿವಾಲಯಗಳನ್ನು ಒಗ್ಗೂಡಿಸುತ್ತದೆ, ಆಡಳಿತಕ್ಕೆ ಒಗ್ಗೂಡಿಸುವ ಕಾರ್ಯವಿಧಾನವನ್ನು ರೂಪಿಸುತ್ತದೆ. ಇಲಾಖೆಗಳಾದ್ಯಂತ ಪಾರದರ್ಶಕತೆಯನ್ನು ಸಕ್ರಿಯಗೊಳಿಸುವ ಮೂಲಕ ಎಲ್ಲಾ ಸಂಬಂಧಿತ ಪಾಲುದಾರರಿಗೆ ನಿರ್ಧಾರಗಳು ಗೋಚರಿಸುವಂತೆ ಪ್ರಗತಿ ಖಚಿತಪಡಿಸುತ್ತದೆ. ಈ ಹಂಚಿಕೆಯ ಗೋಚರತೆ ಮತ್ತು ಡೇಟಾ-ಹಂಚಿಕೆಯು ವಿಳಂಬವನ್ನು ಕಡಿಮೆ ಮಾಡುತ್ತದೆ ಮತ್ತು ಯೋಜನೆಗಳು ಅಧಿಕಾರಶಾಹಿ ಅಡಚಣೆಗಳಲ್ಲಿ ಸಿಲುಕಿಕೊಳ್ಳುವುದನ್ನು ತಡೆಯುತ್ತದೆ. ಅಭಿವೃದ್ಧಿಯು ಸುಗಮವಾಗಿ ಮತ್ತು ಪರಿಣಾಮಕಾರಿಯಾಗಿ ಮುಂದುವರಿಯುತ್ತದೆ ಎಂಬುದನ್ನು ಖಚಿತಪಡಿಸುತ್ತದೆ.

ಜಾಗತಿಕ ನಾಯಕರಿಗೆ ಡಿಜಿಟಲ್ ಆಡಳಿತದ ಪಾಠಗಳು

ಪ್ರಗತಿಯು ಜಾಗತಿಕ ನಾಯಕರಿಗೆ ತಮ್ಮ ದೇಶಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಯನ್ನು ಪರಿವರ್ತಿಸಲು ಅಮೂಲ್ಯವಾದ ಪಾಠಗಳನ್ನು ನೀಡುತ್ತದೆ. ನಿಯಮಿತ ಹೊಣೆಗಾರಿಕೆಯ ವಿಮರ್ಶೆಗಳನ್ನು ಅಳವಡಿಸಿಕೊಳ್ಳುವ ಮೂಲಕ, ಎಲ್ಲರನ್ನೂ ಒಳಗೊಂಡ ಸಹಭಾಗಿತ್ವದ ಮಾರ್ಗಸೂಚಿಗಳನ್ನು ಪೋಷಿಸುವ ಮೂಲಕ ಮತ್ತು ನಿರ್ಧಾರ ಕೈಗೊಳ್ಳುವಲ್ಲಿ ವಿಶಾಲವಾದ ಭಾಗವಹಿಸುವಿಕೆಯನ್ನು ಖಾತ್ರಿಪಡಿಸಿಕೊಳ್ಳುವ ಮೂಲಕ, ರಾಷ್ಟ್ರಗಳು ದಕ್ಷತೆಯನ್ನು ಹೆಚ್ಚಿಸಬಹುದು ಮತ್ತು ತಮ್ಮ ಅಭಿವೃದ್ಧಿ ಗುರಿಗಳಲ್ಲಿ ಹೆಚ್ಚಿನ ಯಶಸ್ಸನ್ನು ಸಾಧಿಸಬಹುದು. ಪ್ರಗತಿಯು ತನ್ನ ಡಿಜಿಟಲ್ ವೇದಿಕೆಯೊಂದಿಗೆ ಮಾಡುವಂತೆ ಉತ್ತಮ ಸಮನ್ವಯಕ್ಕಾಗಿ ತಂತ್ರಜ್ಞಾನವನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲು, ಪ್ರಕ್ರಿಯೆಗಳನ್ನು ಸುಗಮಗೊಳಿಸಲು ಮತ್ತು ಯೋಜನೆಯ ವಿತರಣೆಯನ್ನು ಸುಧಾರಿಸಲು ದೇಶಗಳನ್ನು ಸಕ್ರಿಯಗೊಳಿಸುತ್ತದೆ.

ಮೂಲಸೌಕರ್ಯವನ್ನು ಆರ್ಥಿಕ ಬೆಳವಣಿಗೆಯ ಪ್ರಮುಖ ಚಾಲನಾಶಕ್ತಿಯನ್ನಾಗಿ ಮಾಡಲು ಬಯಸುವ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಈ ಪಾಠಗಳು ವಿಶೇಷವಾಗಿ ಪ್ರಸ್ತುತವಾಗಿವೆ. ಅಂತಹ ವ್ಯವಸ್ಥೆಗಳಿಗೆ ಪರಿವರ್ತನೆಯು ಆರಂಭಿಕ ಹೂಡಿಕೆಗಳು ಮತ್ತು ಸಾಂಸ್ಕೃತಿಕ ಬದಲಾವಣೆಗಳ ಅಗತ್ಯವಿದ್ದರೂ, ಹೆಚ್ಚು ವಿಶ್ವಾಸಾರ್ಹ ಮೂಲಸೌಕರ್ಯ ಮತ್ತು ಹೆಚ್ಚಿದ ಸಾರ್ವಜನಿಕ ನಂಬಿಕೆಯ ದೀರ್ಘಾವಧಿಯ ಪ್ರಯೋಜನಗಳನ್ನು ಒದಗಿಸುತ್ತದೆ. ಪ್ರಗತಿಯ ಉದಾಹರಣೆಯನ್ನು ಅನುಸರಿಸುವ ಮೂಲಕ, ದೇಶಗಳು ಬಲವಾದ, ಹೆಚ್ಚು ಸಮರ್ಥನೀಯ ಅಭಿವೃದ್ಧಿ ಅಡಿಪಾಯವನ್ನು ನಿರ್ಮಿಸಬಹುದು.

 

ಅಂತಿಮ ತೀರ್ಮಾನ

ಅಂತಿಮವಾಗಿ, ಗೇಟ್ಸ್ ಫೌಂಡೇಶನ್‌ನಿಂದ ಬೆಂಬಲಿತವಾದ ಆಕ್ಸ್‌ಫರ್ಡ್‌ನ ಸೈದ್ ಬ್ಯುಸಿನೆಸ್ ಸ್ಕೂಲ್‌ನ ಕೇಸ್ ಸ್ಟಡಿ(ಸಂಶೋಧನಾ ಅಧ್ಯಯನ ವರದಿ), ಪ್ರಗತಿಯನ್ನು ಡಿಜಿಟಲ್ ಆಡಳಿತಕ್ಕೆ ಪರಿವರ್ತನೀಯ ಮಾದರಿ ವೇದಿಕೆಯಾಗಿ ಎತ್ತಿ ತೋರಿಸಿದೆ. ಮೂಲಸೌಕರ್ಯ ಮತ್ತು ಸಾಮಾಜಿಕ ಅಭಿವೃದ್ಧಿ ಯೋಜನೆಗಳನ್ನು ವೇಗಗೊಳಿಸುವಲ್ಲಿ ಅದರ ಪರಿಣಾಮಕಾರಿತ್ವವನ್ನು ಪ್ರದರ್ಶಿಸುತ್ತದೆ. ತಂತ್ರಜ್ಞಾನವನ್ನು ಸಂಯೋಜಿಸುವ ಮೂಲಕ, ಸಹಭಾಗಿತ್ವವನ್ನು ಬೆಳೆಸುವ ಮತ್ತು ಹೊಣೆಗಾರಿಕೆಯನ್ನು ಖಾತ್ರಿಪಡಿಸುವ ಮೂಲಕ, ಅಧಿಕಾರಶಾಹಿ ಅಡೆತಡೆಗಳನ್ನು ನಿವಾರಿಸುವಲ್ಲಿ ಮತ್ತು ರಾಷ್ಟ್ರೀಯ ಅಭಿವೃದ್ಧಿಗೆ ಚಾಲನೆ ನೀಡುವಲ್ಲಿ ಪ್ರಗತಿಯು ಪ್ರಮುಖ ಪಾತ್ರ ವಹಿಸಿದೆ. ಈ ಕೇಸ್ ಸ್ಟಡಿಯಿಂದ ಪಡೆದ ಒಳನೋಟಗಳು ಜಾಗತಿಕ ನಾಯಕರಿಗೆ, ವಿಶೇಷವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ, ಹೆಚ್ಚು ಪರಿಣಾಮಕಾರಿ ಆಡಳಿತ ಮತ್ತು ಸುಸ್ಥಿರ ಬೆಳವಣಿಗೆಗಾಗಿ ಡಿಜಿಟಲ್ ಉಪಕರಣಗಳನ್ನು ಹೇಗೆ ಹತೋಟಿಗೆ ತರುವುದು ಎಂಬುದರ ಕುರಿತು ಅಮೂಲ್ಯವಾದ ಒಳನೋಟ (ಪಾಠ)ಗಳನ್ನು ಒದಗಿಸುತ್ತವೆ. ಪ್ರಗತಿಯ ಯಶಸ್ಸು ಆಡಳಿತಕ್ಕೆ ಏಕೀಕೃತ ಕಾರ್ಯವಿಧಾನದ ಶಕ್ತಿಯನ್ನು ಉದಾಹರಿಸುತ್ತದೆ, ಇತರ ದೇಶಗಳು ತಮ್ಮ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಅಗತ್ಯವಾದ ನೀಲನಕ್ಷೆಯನ್ನು ನೀಡುತ್ತದೆ.

 

ಉಲ್ಲೇಖಗಳು:

 

*****


(Release ID: 2080569) Visitor Counter : 61