ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ದೇಶಾದ್ಯಂತ ಇರುವ ನಮ್ಮ ದಿವ್ಯಾಂಗ ಸಹೋದರ ಸಹೋದರಿಯರ ಘನತೆ ಮತ್ತು ಆತ್ಮಗೌರವಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ: ಪ್ರಧಾನಮಂತ್ರಿ

प्रविष्टि तिथि: 03 DEC 2024 7:09PM by PIB Bengaluru

ಅಂತಾರಾಷ್ಟ್ರೀಯ ದಿವ್ಯಾಂಗರ ದಿನಾಚರಣೆಯ ಸಂದರ್ಭದಲ್ಲಿ ತಾವು ಬರೆದ ಪೋಸ್ಟ್ ಅನ್ನು ಹಂಚಿಕೊಂಡ ಪ್ರಧಾನಮಂತ್ರಿ.

ಅಂತಾರಾಷ್ಟ್ರೀಯ ದಿವ್ಯಾಂಗರ ದಿನದ ಸಂದರ್ಭದಲ್ಲಿ ತಾವು ಬರೆದ ಪೋಸ್ಟ್ ಅನ್ನು ಹಂಚಿಕೊಂಡ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ದೇಶಾದ್ಯಂತ ಇರುವ ನಮ್ಮ ದಿವ್ಯಾಂಗ ಸಹೋದರ ಸಹೋದರಿಯರ ಘನತೆ ಮತ್ತು ಆತ್ಮಗೌರವಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಪುನರುಚ್ಚರಿಸಿದರು.

X ನ ಪೋಸ್ಟ್ ನಲ್ಲಿ, ಅವರು ಹೀಗೆ ಬರೆದಿದ್ದಾರೆ:

"ದೇಶಾದ್ಯಂತ ಇರುವ ನಮ್ಮ ದಿವ್ಯಾಂಗ ಸಹೋದರ ಸಹೋದರಿಯರ ಗೌರವ ಮತ್ತು ಸ್ವಾಭಿಮಾನಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ. ಕಳೆದ 10 ವರ್ಷಗಳಲ್ಲಿ ನಾವು ಅವರಿಗಾಗಿ ತೆಗೆದುಕೊಂಡ ನೀತಿಗಳು ಮತ್ತು ನಿರ್ಧಾರಗಳು ಇದಕ್ಕೆ ನೇರ ಪುರಾವೆಯಾಗಿದೆ. ಇಂದು ಅಂತಾರಾಷ್ಟ್ರೀಯ ದಿವ್ಯಾಂಗರ ದಿನದಂದು ಅವರಿಗೆ ಸಮರ್ಪಿತವಾದ ಕೆಲವು ಪದಗಳು."

"ನಮ್ಮ ದಿವ್ಯಾಂಗ ಸಹೋದರಿಯರು ಮತ್ತು ಸಹೋದರರನ್ನು ಸಬಲೀಕರಣಗೊಳಿಸಲು ಒಂದು ದಶಕದಿಂದ ಕೆಲಸ ಮಾಡುತ್ತಿದ್ದೇವೆ! ನಾವು #9YearsOfSugamyaBharat ಆಚರಿಸುತ್ತಿರುವ ದಿನದಂದು ಕೆಲವು ಆಲೋಚನೆಗಳನ್ನು ಬರೆದಿದ್ದೇನೆ" ಎಂದು ಹಂಚಿಕೊಂಡಿದ್ದಾರೆ.

 

 

*****


(रिलीज़ आईडी: 2080561) आगंतुक पटल : 47
इस विज्ञप्ति को इन भाषाओं में पढ़ें: Telugu , English , Urdu , Marathi , हिन्दी , Bengali , Manipuri , Assamese , Punjabi , Gujarati , Odia , Tamil , Malayalam