ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
azadi ka amrit mahotsav

ವಿಶೇಷಚೇತನರಿಗೆ ಪ್ರವೇಶಿಸಬಹುದಾದ ತಡೆ-ಮುಕ್ತ ವಾತಾವರಣವನ್ನು ಸೃಷ್ಟಿಸುವ ಗುರಿಯನ್ನು ಹೊಂದಿರುವ “ಆಕ್ಸೆಸಿಬಲ್ ಇಂಡಿಯಾ” ಅಭಿಯಾನವು ರಾಷ್ಟ್ರವ್ಯಾಪಿ ಕಾರ್ಯಕ್ರಮವಾಗಿದ್ದು, ಭಾರತದಲ್ಲಿ ಸೇರ್ಪಡೆ ಮತ್ತು ಪ್ರವೇಶಿಸುವಿಕೆಯ ನಿರೂಪಣೆಯನ್ನು ಮಾರ್ಪಡಿಸುತ್ತಿದೆ ಮತ್ತು ಸಾರ್ವತ್ರಿಕ ಪ್ರವೇಶದ ಮೂಲಕ ವಿಕಲಾಂಗ ವ್ಯಕ್ತಿಗಳನ್ನು ಸಬಲೀಕರಣಗೊಳಿಸುವಲ್ಲಿ ಭಾರಿ ದಾಪುಗಾಲನ್ನು ಹಾಕುತ್ತಿದೆ

Posted On: 02 DEC 2024 8:47PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ದೂರದೃಷ್ಟಿಯ ನಾಯಕತ್ವದಲ್ಲಿ, “ಆಕ್ಸೆಸಿಬಲ್ ಇಂಡಿಯಾ” ಅಭಿಯಾನವು (ಎಐಸಿ) ವಿಶೇಷಚೇತನರಿಗೆ (ಪಿಡಬ್ಲ್ಯೂ) ತಡೆ-ಮುಕ್ತ ವಾತಾವರಣವನ್ನು ಸೃಷ್ಟಿಸುವ ಗುರಿಯನ್ನು ಹೊಂದಿರುವ ಒಂದು ಅದ್ಭುತ ಉಪಕ್ರಮವಾಗಿ ಹೊರಹೊಮ್ಮಿದೆ. 3ನೇ ಡಿಸೆಂಬರ್ 2015 ರಂದು ಪ್ರಾರಂಭವಾದ ಈ ಪ್ರಮುಖ ರಾಷ್ಟ್ರವ್ಯಾಪಿ ಕಾರ್ಯಕ್ರಮವು, ಭಾರತದಲ್ಲಿನ ವಿಕಲಚೇತನರಿಗೆ ಸೇರ್ಪಡೆ ಮತ್ತು ಪ್ರವೇಶದ ನಿರೂಪಣೆಯನ್ನು ಸಂಪೂರ್ಣವಾಗಿ ಮಾರ್ಪಡಿಸಿದೆ, ವಿಕಲಾಂಗ ವ್ಯಕ್ತಿಗಳ ಹಕ್ಕುಗಳ ವಿಶ್ವಸಂಸ್ಥೆಯ ಸಮಾವೇಶದೊಂದಿಗೆ (ಯು.ಎನ್.ಸಿ.ಆರ್.ಪಿ.ಡಿ) ಪೂರಕವಾಗಿ ಹೊಂದಿಕೊಂಡಿದೆ.

ಸಾರ್ವತ್ರಿಕ ಪ್ರವೇಶವನ್ನು ಖಾತ್ರಿಪಡಿಸುವಲ್ಲಿ “ಆಕ್ಸೆಸಿಬಲ್ ಇಂಡಿಯಾ” ಅಭಿಯಾನವು (ಎಐಸಿ)  9 ವರ್ಷಗಳ ಗಮನಾರ್ಹ ಮೈಲುಗಲ್ಲನ್ನು ಆಚರಿಸುತ್ತಿರುವಾಗ, ಅದರ ಸಾಧನೆಗಳು ಮುಖ್ಯವಾಗಿ ಮೂರು ಪ್ರಮುಖ ಸ್ತಂಭಗಳಲ್ಲಿ ಈ ಕೆಳಗಿನಂತೆ ವಿವರಿಸಲಾಗಿದೆ:

1. ನಿರ್ಮಿತ ಪರಿಸರ:

  • 1671 ಸರ್ಕಾರಿ ಕಟ್ಟಡಗಳಿಗೆ ವಿಕಲಚೇತನರಿಗೆ ಪ್ರವೇಶಿಸುವಿಕೆ ಆಡಿಟ್ ಗಳನ್ನು ನಡೆಸಲಾಗಿದೆ.
  • 1314 ಸರ್ಕಾರಿ ಕಟ್ಟಡಗಳ ರಚನೆಗಳಿಗೆ ಮರುಹೊಂದಿಸುವಿಕೆ ಸೇರಿದಂತೆ 1748 ಸರ್ಕಾರಿ ಕಟ್ಟಡಗಳಲ್ಲಿ ವಿಕಲಚೇತನರಿಗೆ ಪ್ರವೇಶಿಸುವಿಕೆಯ ವೈಶಿಷ್ಟ್ಯಗಳನ್ನು ಪರಿಚಯಿಸಲಾಗಿದೆ.
  • 35 ಅಂತರಾಷ್ಟ್ರೀಯ ಮತ್ತು 55 ದೇಶೀಯ ವಿಮಾನ ನಿಲ್ದಾಣಗಳು, ಇಳಿಜಾರುಗಳು, ವಿಶೇಷಚೇತನರಿಗೆ ಪ್ರವೇಶಿಸಬಹುದಾದ ಶೌಚಾಲಯಗಳು ಮತ್ತು ಬ್ರೈಲ್ ವ್ಯವಸ್ಥೆಗಳೊಂದಿಗೆ ಸಜ್ಜುಗೊಂಡಿವೆ.


2. ಸಾರಿಗೆ:

  • 709 ರೈಲು ನಿಲ್ದಾಣಗಳನ್ನು ಸಂಪೂರ್ಣವಾಗಿ ವಿಶೇಷಚೇತನರಿಗೆ ಪ್ರವೇಶಿಸಬಹುದಾಗಿದೆ, ಇನ್ನೊಂದು 4068 ಭಾಗಶಃ ಪ್ರವೇಶಿಸಬಹುದಾಗಿದೆ.
  • 8,695 ಬಸ್ ಗಳು ಸಂಪೂರ್ಣವಾಗಿ ವಿಶೇಷಚೇತನರಿಗೆ ಪ್ರವೇಶಿಸಬಹುದು; ಪ್ರವೇಶಕ್ಕಾಗಿ 42,348 ಬಸ್ಗಳನ್ನು ಭಾಗಶಃ ಮಾರ್ಪಡಿಸಲಾಗಿದೆ.
  • 24 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿಶೇಷಚೇತನರಿಗೆ  ಪ್ರವೇಶಿಸಬಹುದಾದ ಬಸ್ ನಿಲ್ದಾಣಗಳು 3120 ಕ್ಕೆ ಹೆಚ್ಚಿದೆ.


3. ಮಾಹಿತಿ ಮತ್ತು ಸಂವಹನ:

  • ವಿಶೇಷಚೇತನರಿಗೆ  ಪ್ರವೇಶಕ್ಕಾಗಿ 95 ಕೇಂದ್ರ ಸರ್ಕಾರದ ವೆಬ್ಸೈಟ್ಗಳನ್ನು ಮರುವಿನ್ಯಾಸಗೊಳಿಸಲಾಗಿದೆ.
  • 676 ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ ವೆಬ್ಸೈಟ್ಗಳನ್ನು ವಿಕಲಚೇತನರಿಗೆ  ಪ್ರವೇಶಿಸಬಹುದಾಗಿದೆ.


ಗಮನಾರ್ಹ ಉಪಕ್ರಮಗಳು:

  • ಸುಗಮ್ಯ ಭಾರತ್ ಆ್ಯಪ್: ಕ್ರೌಡ್ ಸೋರ್ಸ್ ಪ್ರವೇಶದ ಸವಾಲುಗಳಿಗೆ ಮತ್ತು ತ್ವರಿತ ಪರಿಹಾರವನ್ನು ಖಚಿತಪಡಿಸಿಕೊಳ್ಳಲು ಬಳಕೆದಾರ ಸ್ನೇಹಿ ಮೊಬೈಲ್ ಪ್ಲಾಟ್ಫಾರ್ಮ್ ಸುಗಮ್ಯ ಭಾರತ್ ಆ್ಯಪ್ ಅನ್ನು ಪ್ರಾರಂಭಿಸಲಾಗಿದೆ.
  • ಭಾರತೀಯ ಸಂಕೇತ ಭಾಷಾ ಸಂಶೋಧನೆ ಮತ್ತು ತರಬೇತಿ ಕೇಂದ್ರ (ಐ.ಎಸ್.ಎಲ್.ಆರ್.ಟಿ.ಸಿ): ಸಂಕೇತ ಭಾಷೆಯ ತರಬೇತಿಯ ಮೂಲಕ 1,000 ಕ್ಕೂ ಹೆಚ್ಚು ವಿಶೇಷಚೇತನ ವ್ಯಕ್ತಿಗಳನ್ನು ಸಬಲೀಕರಣಗೊಳಿಸಲಾಗಿದೆ ಮತ್ತು ಪ್ರವೇಶಿಸಬಹುದಾದ ಟಿವಿ ವಿಷಯಕ್ಕಾಗಿ ಮಾನದಂಡಗಳನ್ನು ಅಭಿವೃದ್ಧಿಪಡಿಸಲಾಗಿದೆ.
  • ಪ್ರವೇಶಿಸಬಹುದಾದ ಚುನಾವಣೆಗಳು: ಭಾರತದ ಚುನಾವಣಾ ಆಯೋಗವು ತನ್ನ 10.5 ಲಕ್ಷ ಮತಗಟ್ಟೆಗಳಿಗೆ 100% ಪ್ರವೇಶವನ್ನು ಸಾಧಿಸಿದೆ.
  • ಕ್ರೀಡಾ ಶ್ರೇಷ್ಠತೆ: ಗ್ವಾಲಿಯರ್ನಲ್ಲಿರುವ ಅಂಗವೈಕಲ್ಯ ಕ್ರೀಡೆಗಳ ಕೇಂದ್ರವು ವಿಕಲಚೇತನ ಕ್ರೀಡಾಪಟುಗಳಿಗೆ ವಿಶ್ವ ದರ್ಜೆಯ ಸೌಲಭ್ಯಗಳನ್ನು ಒದಗಿಸುತ್ತದೆ.


ಸಚಿವಾಲಯಗಳಾದ್ಯಂತ ಬದಲಾವಣೆಯ ಪರಿಣಾಮ:

  • ಶಿಕ್ಷಣ: ಹೆಚ್ಚಿನ ಸರ್ಕಾರಿ ಶಾಲೆಗಳು ಈಗ ಇಳಿಜಾರು, ವಿಶೇಷಚೇತನರಿಗೆ  ಪ್ರವೇಶಿಸಬಹುದಾದ ಶೌಚಾಲಯಗಳು ಮತ್ತು ರೇಲಿಂಗ್ ಗಳನ್ನು ಹೊಂದಿವೆ.
  • ಹಣಕಾಸು ಸೇರ್ಪಡೆ: ಹಣಕಾಸು ಸಚಿವಾಲಯ ಮತ್ತು ಆರ್.ಬಿ.ಐ. ಹಣಕಾಸು ವ್ಯವಸ್ಥೆಗಳಿಗೆ ಡಿಜಿಟಲ್ ಪ್ರವೇಶವನ್ನು ಮುನ್ನಡೆಸುತ್ತಿವೆ.
  • ಸಾಂಸ್ಕೃತಿಕ ಪ್ರಾತಿನಿಧ್ಯ: ಭಾರತೀಯ ಚಲನಚಿತ್ರೋತ್ಸವಗಳು ಈಗ ವಿಕಲಚೇತನರಿಗೆ ಪ್ರವೇಶಿಸಬಹುದಾದ ಪ್ರದರ್ಶನಗಳು ಮತ್ತು ಭಾರತೀಯ ಸಂಕೇತ ಭಾಷೆಯ ವ್ಯಾಖ್ಯಾನಗಳನ್ನು ಒಳಗೊಂಡಿವೆ.


ಮುಂದಕ್ಕೆ ನೋಡುವ ತಂತ್ರಗಳು

  • “ಆಕ್ಸೆಸಿಬಲ್ ಇಂಡಿಯಾ” ಅಭಿಯಾನದ (ಎಐಸಿ)  ಮುಂದಿನ ಹಂತವು ಕೆಳಗಿನ ಈ ಗುರಿಯನ್ನು ಹೊಂದಿದೆ:
  • ಉಳಿದಿರುವ ಸಚಿವಾಲಯಗಳು ಮತ್ತು ಇಲಾಖೆಗಳಿಗೆ ವಲಯ-ನಿರ್ದಿಷ್ಟ ಪ್ರವೇಶದ ಮಾನದಂಡಗಳನ್ನು ರೂಪಿಸುವುದು.

  • 500 ಹೆಚ್ಚುವರಿ ಸರ್ಕಾರಿ ವೆಬ್ಸೈಟ್ಗಳನ್ನು ಸಂಪೂರ್ಣವಾಗಿ ಪ್ರವೇಶಿಸುವಂತೆ ಮಾಡುವುದು.
  • ಕೌನ್ಸಿಲ್ ಆಫ್ ಆರ್ಕಿಟೆಕ್ಚರ್ ನ ಸಹಯೋಗದೊಂದಿಗೆ ಪ್ರವೇಶ ಲೆಕ್ಕ ಪರಿಶೋಧಕರ ವರ್ಗಕ್ಕೆ ತರಬೇತಿ ನೀಡುವುದು.
  • ಐಐಟಿ ಖರಗ್ಪುರ ಮತ್ತು ಎಐಸಿಟಿಇ ಸಹಭಾಗಿತ್ವದಲ್ಲಿ ಬಿ.ಟೆಕ್,ಬಿ,ಪ್ಲ್ಯಾನ್ ಮತ್ತು ಬಿ.ಆರ್ಕ್ ವಿದ್ಯಾರ್ಥಿಗಳಿಗೆ ವಿಶೇಷ ಪ್ರವೇಶದ ಕೋರ್ಸ್ಗಳನ್ನು ಅಭಿವೃದ್ಧಿಪಡಿಸುವುದು.

ಸುಧಾರಿಸಿಕೊಳ್ಳುವ ಭವಿಷ್ಯವನ್ನು ನಿರ್ಮಿಸುವುದು:

ಆಕ್ಸೆಸಿಬಲ್ ಇಂಡಿಯಾ” ಅಭಿಯಾನದ (ಎಐಸಿ)  ಸಮಗ್ರ ವಿಧಾನ - ಮೂಲಸೌಕರ್ಯ, ತಂತ್ರಜ್ಞಾನ ಮತ್ತು ಸಾಮಾಜಿಕ ವರ್ತನೆಗಳನ್ನು ಸಮೂಲಾಗ್ರವಾಗಿ ಅಳವಡಿಸಿಕೊಳ್ಳುವುದು - 'ಪ್ರವೇಶಸಾಧ್ಯ ಭಾರತ, ವಿಕಸಿತ ಭಾರತ' ಗೆ ಸರ್ಕಾರದ ಬದ್ಧತೆಯನ್ನು ಒಳಗೊಂಡಿರುತ್ತದೆ. ಅಭಿಯಾನವು 'ತಡೆ-ಮುಕ್ತ ಪರಿಸರದ ಸೃಷ್ಟಿ', ಎಸ್.ಐ.ಪಿ.ಡಿ.ಎ ಅಡಿಯಲ್ಲಿ ಉಪ-ಯೋಜನೆಯಾಗಿ ಪರಿವರ್ತನೆಯಾಗುತ್ತಿದ್ದಂತೆ, ಇದು ಭಾರತದಾದ್ಯಂತ ದಿವ್ಯಾಂಗಜನರಿಗೆ ಸೇರ್ಪಡೆ, ಸ್ವಾತಂತ್ರ್ಯ ಮತ್ತು ಪಾಲು(ಇಕ್ವಿಟಿ) ಅನ್ನು ನೀಡುವ ನಿಟ್ಟಿನಲ್ಲಿ ಮುಂದುವರಿಸುತ್ತದೆ. ಈ ಪರಿವರ್ತನಾಶೀಲ ಪ್ರಯಾಣವು ಯಾರನ್ನೂ ಹಿಂದೆ ಬಿಡುವುದಿಲ್ಲ ಎಂಬ ಭಾರತದ ಈ ಸರ್ವರನ್ನೂ ಒಳಗೊಳ್ಳುವ ಪ್ರಕ್ರಿಯೆಯ ಪ್ರತಿಜ್ಞೆಗೆ ಈ ಯೋಜನೆಯು ಸಾಕ್ಷಿಯಾಗಿದೆ.

 

*****


(Release ID: 2080086) Visitor Counter : 23