ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಸಂರಕ್ಷಿಸಿ ಪುನರ್ ರೂಪಿಸಲ್ಪಟ್ಟ ಪ್ರಾಚೀನ ಚಿತ್ರಗಳ ಪ್ರದರ್ಶನ: ಚಲನಚಿತ್ರ ಸಂರಕ್ಷಣೆಯಲ್ಲಿ ಎನ್ ಎಫ್ ಡಿ ಸಿ ಯ ಪ್ರಯತ್ನಕ್ಕೆ ಸಾಕ್ಷಿ
ಎನ್ ಡಿ ಎಫ್ ಸಿ – ಎನ್ ಎಫ್ ಎ ಐ ನಿಂದ ಮರುರೂಪಿಸಲ್ಪಟ್ಟ ಮೇರು ಚಿತ್ರಗಳ ಪ್ರದರ್ಶನದ ಮೂಲಕ ಸಿನಿಮಾ ದಿಗ್ಗಜರಿಗೆ ಐಎಫ್‌ಎಫ್‌ಐ 2024 ಗೌರವ
ಭಾರತದ ಸಿನಿಮಾ ಪರಂಪರೆಯ ಸಂರಕ್ಷಣೆ : ಎನ್ ಎಫ್ ಡಿ ಸಿ ಯ ರಾಷ್ಟ್ರೀಯ ಚಲನಚಿತ್ರ ಪರಂಪರಾ ಮಿಷನ್‌ನ ಪ್ರಯತ್ನಗಳಿಗೆ ಫಲ
ಗೋವಾದಲ್ಲಿ ನಡೆಯುತ್ತಿರುವ 55 ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐಎಫ್‌ಎಫ್‌ಐ) "ರಿಸ್ಟೋರ್ಡ್ ಕ್ಲಾಸಿಕ್ಸ್" ವಿಭಾಗದಲ್ಲಿ ಭಾರತದ ಶ್ರೀಮಂತ ಸಿನಿಮಾ ಪರಂಪರೆಯನ್ನು ಪ್ರದರ್ಶಿಸುತ್ತಿದೆ. ಇದು ಭಾರತದ ಅನನ್ಯ ಚಲನಚಿತ್ರ ಪರಂಪರೆಯನ್ನು ಸಂರಕ್ಷಿಸಲು ಮತ್ತು ಸಂಭ್ರಮಿಸಲು ರಾಷ್ಟ್ರೀಯ ಚಲನಚಿತ್ರ ಪರಂಪರೆ ಮಿಷನ್ (ಎನ್ ಎಫ್ ಎಚ್ ಎಂ) ಅಡಿಯಲ್ಲಿ ಎನ್ ಎಫ್ ಡಿ ಸಿ – ಭಾರತದ ರಾಷ್ಟ್ರೀಯ ಚಲನಚಿತ್ರ ಸಂಗ್ರಹಾಲಯ (ಎನ್ ಎಫ್ ಡಿ ಸಿ – ಎನ್ ಎಫ್ ಎ ಐ) ನ ದಣಿವರಿಯದ ಪ್ರಯತ್ನಗಳನ್ನು ಎತ್ತಿ ತೋರಿಸುತ್ತದೆ. ಈ ವರ್ಷದ ಚಲನಚಿತ್ರೋತ್ಸವದಲ್ಲಿ ಮರುಸ್ಥಾಪಿಸಲಾದ ಪ್ರಾಚೀನ ಚಲನಚಿತ್ರಗಳ ಮಾಂತ್ರಿಕತೆಯನ್ನು ಅನುಭವಿಸಲು ಮತ್ತು ಭಾರತೀಯ ಚಿತ್ರರಂಗದ ಅಚ್ಚಳಿಯದ ಪರಂಪರೆಯನ್ನು ಆಚರಿಸುವ ಅವಕಾಶವನ್ನು ಸಿನಿಪ್ರಿಯರು ಹೊಂದಿದ್ದಾರೆ.
ದೇಶದಾದ್ಯಂತದ ಆಯ್ದ ಮರುರೂಪಿಸಲ್ಪಟ್ಟ ಕೆಲವು ಮೇರುಚಿತ್ರಗಳನ್ನು ಈ ಕೆಳಗಿನಂತೆ ವಿವಿಧ ವಿಭಾಗಗಳ ಅಡಿಯಲ್ಲಿ ಪ್ರದರ್ಶಿಸಲಾಗುತ್ತಿದೆ:
ಸೈಲೆಂಟ್ ಸಿನಿಮಾ
• ಕಲಿಯ ಮರ್ದನ (1919) – ದಾದಾ ಸಾಹೇಬ್ ಫಾಲ್ಕೆ ಅವರ ನಿರ್ದೇಶನದ ಈ ಚಿತ್ರವನ್ನು ಹಾಳಾಗದೆ ಉಳಿದಿದ್ದ 35ಮಿಲಿಮೀಟರ್ ಡ್ಯೂಪ್ ನೆಗೆಟಿವ್ ಅನ್ನು ಬಳಸಿಕೊಂಡು 4ಕೆ ಯಲ್ಲಿ ಮರುರೂಪಿಸಲ್ಪಟ್ಟಿದೆ. ಸತ್ಯಕಿ ಬ್ಯಾನರ್ಜಿ ಮತ್ತು ತಂಡದಿಂದ ನೇರ ಸಂಗೀತದೊಂದಿಗೆ, ಈ ಚಿತ್ರ ಪ್ರದರ್ಶನವು ಕಥಾ ನಿರೂಪಣೆಯಲ್ಲಿ ಫಾಲ್ಕೆಯವರ ಸಿನಿಮಾ ಪ್ರತಿಭೆಯ ಹಾಗೂ ನವೀನ ವಿಶೇಷ ಪರಿಣಾಮಗಳ ಬಗ್ಗೆ ಬೆಳಕು ಚೆಲ್ಲುತ್ತದೆ.

ತೆಲುಗು ಚಿತ್ರ
• ದೇವದಾಸು (1953) ಬೆಂಗಾಲಿ ಹಳೆಯ ಚಿತ್ರ 'ದೇವ್ ದಾಸ್' ನ ಈ ರೂಪಾಂತರದಲ್ಲಿ ದುರಂತ ನಾಯಕನಾಗಿ ಅಕ್ಕಿನೇನಿ ನಾಗೇಶ್ವರ ರಾವ್ ಕಾಣಿಸಿಕೊಂಡಿದ್ದು, ಮ್ಯಾಟಿನಿ ಐಡಲ್ (ಮಧ್ಯಾಹ್ನದ ಚಿತ್ರ ಪ್ರದರ್ಶನದ ವ್ಯಕ್ತಿತ್ವ) ಎಎನ್ ಆರ್ ಅವರ ಶತಮಾನೋತ್ಸವದ ಆಚರಣೆಯಲ್ಲಿ ಪ್ರದರ್ಶಿತವಾಗಿದೆ. ಭಾರತೀಯ ಚಿತ್ರರಂಗದ ಮೇಲೆ ಅವರ ಅಚ್ಚಳಿಯದ ಪ್ರಭಾವಕ್ಕೆ ಗೌರವ ಸೂಚಕವಾಗಿ ಈ ಮರುರೂಪಿಸುವ ಪ್ರಕ್ರಿಯೆ ಕೈಗೊಳ್ಳಲಾಗಿತ್ತು.

ಹಿಂದಿ ಚಿತ್ರ
ಅವಾರಾ (1951) ಸಂಪತ್ತು, ಶಕ್ತಿ ಮತ್ತು ಅದೃಷ್ಟದ ವಿಷಯಾಧಾರಿತದ ರಾಜ್ ಕಪೂರ್ ನಿರ್ದೇಶನದ ಈ ಕಾಲಾತೀತ ಶ್ರೇಷ್ಠ ಚಿತ್ರವನ್ನು 35 ಎಂಎಂ ಡ್ಯೂಪ್ ನೆಗೆಟಿವ್‌ನಿಂದ ಮರುರೂಪಿಸಲಾಗಿದೆ. ಎನ್‌ಎಫ್‌ಡಿಸಿ – ಎನ್‌ಎಫ್‌ಎಐ ಗೆ ಕಪೂರ್ ಕುಟುಂಬವು ನೀಡಿದ ಚಲನಚಿತ್ರ ಸಾಮಗ್ರಿಗಳ ಅಮೂಲ್ಯ ಕೊಡುಗೆಯಿಂದ ಈ ಚಿತ್ರವನ್ನು ಮರುರೂಪಿಸಲು ಸಾಧ್ಯವಾಗಿದೆ.

• ಹಮ್ ದೋನೊ (1961) ಎರಡನೇ ವಿಶ್ವ ಮಹಾಯುದ್ಧದ ಹಿನ್ನೆಲೆಯಲ್ಲಿ ಈ ದೇವ್ ಆನಂದ್ ಅವರ ಹಳೆಯ ಚಿತ್ರ, ದ್ವಿಪಾತ್ರಾಭಿನಯ ಮತ್ತು ಜೈದೇವ್ ಅವರ ಸಾಂಪ್ರದಾಯಿಕ ಧ್ವನಿಯನ್ನು ಒಳಗೊಂಡಿದ್ದು, ಮೊಹಮ್ಮದ್ ರಫಿ ಅವರ ಜನ್ಮ ಶತಮಾನೋತ್ಸವದ ಗೌರವ ಸೂಚಕವಾಗಿದೆ.

ಸಾತ್ ಹಿಂದೂಸ್ತಾನಿ (1969) ಗೋವಾದಲ್ಲಿ ಪೋರ್ಚುಗೀಸರ ಆಳ್ವಿಕೆಯ ವಿರುದ್ಧ ಪ್ರತಿರೋಧದ ಚಿತ್ರಣವಿರುವ ಇದರಲ್ಲಿ ಯುವಕರಾಗಿದ್ದಾಗ ಅಮಿತಾಭ್ ಬಚ್ಚನ್ ನಟಿಸಿದ್ದು, ಈ ರೋಮಾಂಚನಕಾರಿ ಕಥೆಯು ಚಿತ್ರದ ನಿರಂತರ ಪರಂಪರೆಗೆ ಸಾಕ್ಷಿಯಾಗಿದೆ. 35ಎಂ ಎಂ ಕ್ಯಾಮರಾ ನೆಗೆಟಿವ್‌ನಿಂದ ಮರುರೂಪಿಸಲ್ಪಟ್ಟ ಈ ಚಿತ್ರ ಏಕತೆ ಮತ್ತು ದೇಶಭಕ್ತಿಯ ಮನೋಭಾವವನ್ನು ಸಂಭ್ರಮಿಸುತ್ತದೆ.

ಬೆಂಗಾಲಿ ಚಲನಚಿತ್ರ
ಹಾರ್ಮೋನಿಯಂ (1976) ದಂತಕಥೆ ತಪನ್ ಸಿನ್ಹಾ ನಿರ್ದೇಶನದ ಈ ಅತ್ಯಂತ ಹಳೆಯ ಚಿತ್ರವನ್ನು ಚಲನಚಿತ್ರ ನಿರ್ಮಾಪಕರ ಶತಮಾನೋತ್ಸವ ಆಚರಣೆಯ ಭಾಗವಾಗಿ ಪ್ರದರ್ಶಿಸಲಾಗುತ್ತದೆ. ಪಶ್ಚಿಮ ಬಂಗಾಳ ರಾಜ್ಯ ಚಲನಚಿತ್ರ ಸಂಗ್ರಹಾಲಯದಿಂದ ಸಂರಕ್ಷಿಸಲ್ಪಟ್ಟ 35 ಎಂಎಂ ಮೂಲ ಕ್ಯಾಮೆರಾ ನೆಗೆಟಿವ್‌ನಿಂದ ಮರುಸ್ಥಾಪಿಸಲ್ಪಟ್ಟಿದೆ, ಹಾರ್ಮೋನಿಯಂನ ದುರಂತ ಪಯಣದ ಈ ಕಟುವಾದ ಕಥೆಗೆ ಸ್ವತಃ ಸಿನ್ಹಾ ಅವರೇ ಸಂಗೀತ ಸಂಯೋಜನೆ ಮಾಡಿದ್ದಾರೆ.

ಸೀಮಾಬದ್ಧ (1971) ಸತ್ಯಜಿತ್ ರೇ ಅವರ ಮಾದರಿ ಕಲ್ಕತ್ತಾ ಟ್ರೈಲಾಜಿಯ ಒಂದು ಭಾಗ, ಸೀಮಾಬದ್ಧ ಚಿತ್ರವು ಮಹತ್ವಾಕಾಂಕ್ಷೆಯ ಮಾರಾಟ ವ್ಯವಸ್ಥಾಪಕರ ಜೀವನದಲ್ಲಿನ ಕಾರ್ಪೊರೇಟ್ ನಿರ್ದಯತೆಯನ್ನು ತೆರೆದಿಡುತ್ತದೆ. ಹಿಂದೆ ಲಭ್ಯವಿಲ್ಲದ ಒಂದು-ನಿಮಿಷದ ಪೀಟರ್ ಅಭಿಮಾನಿಯ ಜಾಹೀರಾತನ್ನು ಪ್ರದರ್ಶಿಸುವ ಬಣ್ಣದ ಅನುಕ್ರಮವನ್ನು ಒಳಗೊಂಡಿದೆ. ಈ ಚಿತ್ರದ ಮರುರೂಪಿಸುವಿಕೆಯು 2022 ರಲ್ಲಿ ಪ್ರತಿದ್ವಂದಿಯನ್ನು ಮರುರೂಪಿಸಿದ ಬಳಿಕ ಇಡೀ ಕೋಲ್ಕತ್ತಾದ ಟ್ರೈಲಾಜಿ (ಮೂರು ಕಥೆ)ಯನ್ನು ಪುನರುಜ್ಜೀವನಗೊಳಿಸುವ ಪ್ರಯತ್ನವನ್ನು ಮುಂದುವರೆಸಿದೆ.

ಸಂರಕ್ಷಣೆಯಲ್ಲಿ ಮೈಲಿಗಲ್ಲು
ಸುಧಾರಿತ 4ಕೆ ಸ್ಕ್ಯಾನಿಂಗ್, ವರ್ಣ ತಿದ್ದುಪಡಿ ಮತ್ತು ಧ್ವನಿ ಮರು ಸೃಷ್ಟಿ ತಂತ್ರಗಳನ್ನು ಬಳಸಿಕೊಂಡು 300ಕ್ಕೂ ಹೆಚ್ಚು ಬದ್ಧ ವೃತ್ತಿಪರರು ಈ ಚಿತ್ರರತ್ನಗಳ ಮರುಸ್ಥಾಪನೆಯ ಕಾರ್ಯವನ್ನು ಕೈಗೊಂಡಿದ್ದರು. ಕಾಣೆಯಾದ ಚೌಕಟ್ಟುಗಳು, ಗೀರುಗಳು ಮತ್ತು ಇತರ ಹಾನಿಗಳನ್ನು ಆಧುನಿಕ ಸಿನಿಮಾ ಮಾನದಂಡಗಳನ್ನು ಪೂರೈಸುವ ಜೊತೆಜೊತೆಗೆ ಚಲನಚಿತ್ರಗಳು ತಮ್ಮ ಮೂಲ ಸತ್ವವನ್ನು ಉಳಿಸಿಕೊಳ್ಳುವುದನ್ನು ಖಚಿತಪಡಿಸಿಕೊಂಡು ನಿಖರವಾಗಿ ಸರಿಪಡಿಸಲಾಗಿದೆ.
ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದಡಿಯಲ್ಲಿ ಎನ್ ಎಫ್ ಡಿ ಸಿ – ಎನ್ಎಫ್ಎಐ ನ ಈ ಅಭೂತಪೂರ್ವ ಪ್ರಯತ್ನಗಳು ಭಾರತದ ಚಲನಚಿತ್ರ ಪರಂಪರೆಯನ್ನು ಸಂರಕ್ಷಿಸುವಲ್ಲಿ ಪ್ರಮುಖ ಮೈಲಿಗಲ್ಲಾಗಿದೆ. ಭವಿಷ್ಯದ ಪೀಳಿಗೆಯು ಈ ಮೇರುಚಿತ್ರಗಳು ನೋಡುವಂತಾಗಲು ಉತ್ತಮ-ಸಂರಕ್ಷಿತ ಚಲನಚಿತ್ರ ಅಂಶಗಳ ಮೂಲವನ್ನು ಪತ್ತೆ ಮಾಡುವ ಮೂಲಕ, ಎನ್ ಎಫ್ ಡಿ ಸಿ - ಎನ್ಎಫ್ಎಐ ಅತ್ಯುನ್ನತ ಗುಣಮಟ್ಟದ ಮರುಸ್ಥಾಪನೆಯನ್ನು ಖಾತರಿಪಡಿಸಿ, ಅದಕ್ಕೆ ಜೀವ ತುಂಬುತ್ತಿದೆ.
55ನೇ IFFIನಲ್ಲಿ ಈ ಮರುರೂಪಿಸಲ್ಪಟ್ಟ ಹಳೆಯ ಉತ್ತಮ ಚಿತ್ರಗಳ ಪ್ರದರ್ಶನವು, ವಿಶ್ವಾದ್ಯಂತದ ಪ್ರೇಕ್ಷಕರಲ್ಲಿ ಸ್ಫೂರ್ತಿ ತುಂಬುವುದನ್ನು ಮುಂದುವರಿಸುತ್ತಾ ಅವರು ಶಿಕ್ಷಿತರಾಗುವಂತೆ ಮಾಡುವ ಅದರ ಪ್ರವರ್ತಕರು ಮತ್ತು ಕಥೆಗಾರರನ್ನು ಗೌರವಿಸುವ ಪ್ರಯತ್ನ ಕೂಡ ಆಗಿದೆ.
*****
(Release ID: 2078329)
Visitor Counter : 27