ವಾರ್ತಾ ಮತ್ತು ಪ್ರಸಾರ ಸಚಿವಾಲಯ
iffi banner

'ಹನು-ಮಾನ್ ': ಭಾರತೀಯ ಪನಾರೋಮ ವೇದಿಕೆಯಲ್ಲಿ ಉದಯಿಸಿದ ಪೌರಾಣಿಕ ಸೂಪರ್ ಹೀರೋ


ಅರ್ಥಪೂರ್ಣ ನಿರೂಪಣೆಗಳನ್ನು ನೀಡುವುದು ಕೇವಲ ಗುರಿಯಲ್ಲ, ಜವಾಬ್ದಾರಿ: ತೇಜಾ ಸಜ್ಜಾ

ಪ್ರೇಕ್ಷಕರ ಪ್ರೀತಿ ಮತ್ತು ಕಥೆ ಹೇಳುವ ಉತ್ಸಾಹದಿಂದಾಗಿ ನಮ್ಮ ಸಿನೆಮಾ ಅಭಿವೃದ್ಧಿ ಹೊಂದುತ್ತಿದೆ: ತೇಜಾ ಸಜ್ಜಾ

ಹನುಮಾನ್ ತರಹದ ವ್ಯಕ್ತಿತ್ವಗಳು ಈಗಾಗಲೇ ಜಾಗತಿಕವಾಗಿ ಪ್ರಸಿದ್ಧವಾಗಿವೆ; ಈಗ ಭಾರತವು ನಿರೂಪಣೆಯನ್ನು ಮುನ್ನಡೆಸುವ ಸಮಯ ಬಂದಿದೆ: ತೇಜಾ ಸಜ್ಜಾ

ಹನು-ಮಾನ್ ಕೇವಲ ಒಂದು ಚಲನಚಿತ್ರವಲ್ಲ; ಇದು ನಮ್ಮ ಸಾಂಸ್ಕೃತಿಕ ಬೇರುಗಳು ಮತ್ತು ಸಂಪ್ರದಾಯಗಳಿಗೆ ಗೌರವವಾಗಿದೆ: ತೇಜಾ ಸಜ್ಜಾ

ಗೋವಾದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (ಐಎಫ್ಎಫ್ಐ) ಭಾರತೀಯ ಪನೋರಮಾ ವಿಭಾಗವು ಪ್ರಶಾಂತ್ ವರ್ಮಾ ನಿರ್ದೇಶನದ ಆಕರ್ಷಕ ಸಿನಿಮೀಯ ಸಾಹಸವಾದ ಹನು-ಮ್ಯಾನ್ ಪ್ರದರ್ಶನಕ್ಕೆ ಸಾಕ್ಷಿಯಾಯಿತು. ಅಂಜನಾದ್ರಿ ಎಂಬ ಕಾಲ್ಪನಿಕ ಹಳ್ಳಿಯಲ್ಲಿ ಚಿತ್ರೀಕರಿಸಲಾದ ಚಿತ್ರವು ಹನುಮಂತು ಎಂಬ ಸಣ್ಣ ಕಳ್ಳನ ಪ್ರಯಾಣವನ್ನು ನಿರೂಪಿಸುತ್ತದೆ, ಅವನು ಹನುಮಂತನ ರಕ್ತದ ಪಳೆಯುಳಿಕೆ ಹನಿಯಿಂದ ದೈವಿಕ ಶಕ್ತಿಯನ್ನು ಪಡೆಯುತ್ತಾನೆ. ಈ ರೂಪಾಂತರವು ಸ್ವಯಂ-ಘೋಷಿತ ಸೂಪರ್ ಹೀರೋನೊಂದಿಗೆ ಮಹಾಕಾವ್ಯ/ಪೌರಾಣಿಕ ಕಥಾನಕದ ನಡುವೆ ಸಂಘರ್ಷಕ್ಕೆ ವೇದಿಕೆಯನ್ನು ರೂಪಿಸುತ್ತದೆ, ಪುರಾಣ, ಧೈರ್ಯ ಮತ್ತು ಮಾನವ ಸ್ಥಿತಿಸ್ಥಾಪಕತ್ವವನ್ನು/ಪುನಶ್ಚೇತನವನ್ನು ಅದು ಬೆಸೆಯುತ್ತದೆ.

ಹನುಮಂತ ಪಾತ್ರವನ್ನು ನಿರ್ವಹಿಸಿದ ನಟ ತೇಜಾ ಸಜ್ಜ, ಭಾರತೀಯ ಪುರಾಣಗಳಲ್ಲಿ ಬೇರೂರಿರುವ ನಿರೂಪಣೆಯನ್ನು ಮುಂದಕ್ಕೆ ಕೊಂಡೊಯ್ಯುವ ಜವಾಬ್ದಾರಿಯನ್ನು ಪ್ರತಿಬಿಂಬಿಸಿದರು. ನಿರ್ಮಾಣದ ಬಗ್ಗೆ ಮಾತನಾಡಿದ ಅವರು, ದೊಡ್ಡ ಪ್ರಮಾಣದ ಭಾರತೀಯ ಸಿನೆಮಾಕ್ಕೆ ಹೋಲಿಸಬಹುದಾದ ದೃಶ್ಯಗಳನ್ನು ರಚಿಸಲು ತಂಡವು ಬಜೆಟ್ ನಿರ್ಬಂಧಗಳನ್ನು ಹೇಗೆ ನಿವಾರಿಸಿತು ಎಂಬುದನ್ನು ಒತ್ತಿ ಹೇಳಿದರು. ಅಂಜನಾದ್ರಿಯ ಸುಂದರವಾದ ಮತ್ತು ಕಾಲ್ಪನಿಕ ಗ್ರಾಮವನ್ನು ಹೈದರಾಬಾದಿನ ಸೆಟ್ ನಲ್ಲಿ ಸಂಪೂರ್ಣವಾಗಿ ಮರುಸೃಷ್ಟಿಸಲಾಯಿತು, ಇದು ಚಲನಚಿತ್ರ ನಿರ್ಮಾಪಕರ ಜಾಣ್ಮೆಯನ್ನು ಪ್ರದರ್ಶಿಸುತ್ತದೆ ಎಂದರು.

ಚಿತ್ರದ ಹಿಂದಿನ ಸೃಜನಶೀಲ ದೃಷ್ಟಿಕೋನದ ಬಗ್ಗೆಯೂ ಸಜ್ಜಾ ಬೆಳಕು ಚೆಲ್ಲಿದರು, ನಿರ್ದೇಶಕ ಪ್ರಶಾಂತ್ ವರ್ಮಾ ಅವರು ಮೂರು ವರ್ಷಗಳ ನಿರ್ಮಾಣದ ಪ್ರಯಾಣದುದ್ದಕ್ಕೂ ತೋರಿದ  ನಿರಂತರತೆ ಮತ್ತು ಉತ್ಸಾಹವನ್ನು ಶ್ಲಾಘಿಸಿದರು. ಈ ಚಿತ್ರವು ಭಾರತದ ಪೌರಾಣಿಕ ಬೇರುಗಳನ್ನು ಮರಳಿ ತರುವುದಲ್ಲದೆ, ಭಾರತೀಯ ಸಿನೆಮಾವನ್ನು ಜಾಗತಿಕ ವೇದಿಕೆಯಲ್ಲಿ ಹೇಗೆ ಇರಿಸುತ್ತದೆ ಎಂಬುದರ ಬಗ್ಗೆಯೂ  ಅವರು ಬೆಳಕು ಚೆಲ್ಲಿದರು.

ಭಾರತೀಯ ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿರುವ ಪಾತ್ರವನ್ನು ಚಿತ್ರಿಸುವಲ್ಲಿ ತೊಡಗಿಕೊಂಡಿರುವುದಕ್ಕೆ ಸಜ್ಜಾ ಹೆಮ್ಮೆ ವ್ಯಕ್ತಪಡಿಸಿದರು, ಇದೇ ರೀತಿಯ ಪೌರಾಣಿಕ ವ್ಯಕ್ತಿಗಳೊಂದಿಗೆ ಪರಿಚಯ ಹೊಂದಿರುವ  ಅಂತರರಾಷ್ಟ್ರೀಯ ಪ್ರೇಕ್ಷಕರೂ ಹೇಗೆ ಸ್ಪಂದಿಸುತ್ತಾರೆ ಎಂಬುದನ್ನೂ ಅವರು ವಿವರಿಸಿದರು. ಹನು-ಮ್ಯಾನ್ ಅನ್ನು ದೊಡ್ಡ ಫ್ರ್ಯಾಂಚೈಸ್ ಆಗಿ ವಿಸ್ತರಿಸುವ ಯೋಜನೆಗಳನ್ನು ಸಹ ಬಹಿರಂಗಪಡಿಸಲಾಯಿತು, ತೇಜಾ ಇನ್ನೂ ಭವ್ಯವಾದ ನಿರೂಪಣೆಯ ಭರವಸೆ ನೀಡುವ ಮುಂದುವರಿದ ಭಾಗದ ಕೆಲಸವನ್ನು ದೃಢಪಡಿಸಿದರು. ಅವರು ಚಿತ್ರದಲ್ಲಿ ಅದ್ಭುತವಾಗಿ ಬರೆದ ಮಹಿಳಾ ಪಾತ್ರಗಳ ಮಹತ್ವವನ್ನು ಒತ್ತಿಹೇಳಿದರು, ಕಥೆಯನ್ನು ಮುಂದಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರವನ್ನು ಉಲ್ಲೇಖಿಸಿದರು.

ಭಾರತೀಯ ಸಿನೆಮಾದ ಭವಿಷ್ಯದ ಬಗ್ಗೆ ನಟ ತಮ್ಮ ಆಶಾವಾದವನ್ನು ಹಂಚಿಕೊಂಡರು, ಅದರ ಬೆಳವಣಿಗೆಗೆ ಕಥೆ ಹೇಳುವ ಕುರಿತಾದ ಪ್ರೇಕ್ಷಕರ ಅಚಲ ಪ್ರೀತಿ ಕಾರಣ ಎಂದು ಹೇಳಿದರು. ಅಭಿವೃದ್ಧಿ ಹೊಂದುತ್ತಿರುವ ತೆಲುಗು ಚಲನಚಿತ್ರೋದ್ಯಮವು ನವೀನ ನಿರೂಪಣೆಗಳು ಮತ್ತು ಮನವೊಲಿಸುವ  ಅಭಿನಯಗಳೊಂದಿಗೆ ಅಡೆತಡೆಗಳನ್ನು ಮುರಿಯುತ್ತಲೇ ಇದೆ, ಈ ಪ್ರವೃತ್ತಿಯು ಹೆಚ್ಚಿನ ಅಂತರರಾಷ್ಟ್ರೀಯ ಮನ್ನಣೆಯನ್ನು ಪಡೆಯಲು ಪ್ರೇರೇಪಿಸುತ್ತದೆ ಎಂದು ತಾವು  ಭಾವಿಸುವುದಾಗಿ ಅವರು ಹೇಳಿದರು.

ಹನು-ಮ್ಯಾನ್ ಸಾಂಸ್ಕೃತಿಕ ಪರಂಪರೆ ಮತ್ತು ಆಧುನಿಕ ಕಥೆ ಹೇಳುವಿಕೆಯ ಶಕ್ತಿಯುತ ಮಿಶ್ರಣವನ್ನು ಪ್ರತಿನಿಧಿಸುತ್ತದೆ, ಇದು ಭಾರತ ಮತ್ತು ವಿದೇಶಗಳಲ್ಲಿ ಪ್ರೇಕ್ಷಕರನ್ನು ಆಕರ್ಷಿಸುವ ಗುರಿಯನ್ನು ಹೊಂದಿದೆ. ಭಾರತೀಯ ಪನೋರಮಾ ವಿಭಾಗದಲ್ಲಿ ಇದರ ಸೇರ್ಪಡೆಯು ಚಿತ್ರದ ಕಲಾತ್ಮಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಪುನರುಚ್ಚರಿಸುತ್ತದೆ.

ಪತ್ರಿಕಾಗೋಷ್ಠಿಯನ್ನು ಮಹೇಶ್ ಚೋಪಾಡೆ ನಿರ್ವಹಿಸಿದರು.

ಸಂಪೂರ್ಣ ಪತ್ರಿಕಾಗೋಷ್ಠಿಯನ್ನು ಇಲ್ಲಿ ವೀಕ್ಷಿಸಿ:

 

*****

iffi reel

(Release ID: 2076620) Visitor Counter : 36