ವಾರ್ತಾ ಮತ್ತು ಪ್ರಸಾರ ಸಚಿವಾಲಯ
iffi banner
0 5

"ನನ್ನ ಚಿತ್ರದ ಮೂಲಕ ನನ್ನ ರಾಷ್ಟ್ರದ ದೃಢೀಕರಣ (ಅಧಿಕೃತತೆ)ದ ನಷ್ಟವನ್ನು ಚಿತ್ರಿಸಲು ನಾನು ಬಯಸುತ್ತೇನೆ:" ರಾಸ್ಟಿಸ್ಲಾವ್ ಬೊರೊಸ್, 'ದಿ ಸ್ಲಗಾರ್ಡ್ ಕ್ಲಾನ್' ನ ನಿರ್ದೇಶಕ


" ಪರಿಕಲ್ಪನೆಗಳು ಮತ್ತು ಸ್ಥಾಪನೆಗೆ ಅನುಗುಣವಾಗಿಲ್ಲದ ಚಲನಚಿತ್ರಗಳು ನಿಧಿ ಕ್ರೋಡೀಕರಿಸುವುದು ಕಷ್ಟ:" ಬೆಲ್ಕಿಸ್ ಬೇರಾಕ್

"ಸ್ವತಂತ್ರ ಮತ್ತು ತಟಸ್ಥ ಸಿನಿಮಾಕ್ಕೆ ಹಣ ಸಿಗುವುದಿಲ್ಲ:" ಫೇಜ್ ಅಜೀಜ್ಖಾನಿ

ಬೆಳೆಯುತ್ತಿರುವ ಬಂಡವಾಳಶಾಹಿತ್ವ ಮತ್ತು ಗ್ರಾಹಕೀಕರಣದಿಂದಾಗಿ ಯುವ ರಾಷ್ಟ್ರವಾದ ಸ್ಲೋವಾಕಿಯಾ ತನ್ನ ಅಧಿಕೃತತೆಯನ್ನು ಕಳೆದುಕೊಳ್ಳುತ್ತಿದೆ ಎಂದು ಭಾರತದ 55ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಗುತ್ತಿರುವ 'ದಿ ಸ್ಲಗಾರ್ಡ್ ಕ್ಲಾನ್' ಚಿತ್ರದ ನಿರ್ದೇಶಕ ರಾಸ್ಟಿಸ್ಲಾವ್ ಬೊರೊಸ್ ಹೇಳಿದರು.

ಮಾಧ್ಯಮಗಳೊಂದಿಗೆ ಸಂವಾದ ನಡೆಸಿದ ಅವರು, “ನಾನು ನನ್ನ ರಾಷ್ಟ್ರದ ಆತ್ಮವನ್ನು ತೋರಿಸಲು ಬಯಸುತ್ತೇನೆ. ಇದು ಅತ್ಯಂತ ಯುವ ರಾಜ್ಯವಾಗಿದೆ. ಅದಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು ಬಹಳ ಹಿಂದೆಯೇ. ಚಿತ್ರದ ಮೂಲಕ ಯಾವುದಾದರೊಂದು ಸತ್ಯಾಸತ್ಯತೆಯನ್ನು ತೋರಿಸಬೇಕೆಂದುಕೊಂಡಿದ್ದೇನೆ. ಆದ್ದರಿಂದ, ನಾನು ವಾಸ್ತವ ತೋರಿಸದಿರಲು ನಿರ್ಧರಿಸಿದೆ, ಆದರೆ ರೂಪಕ ಅಥವಾ ಸಾಂಕೇತಿಕತೆಯನ್ನು ಪ್ರಸ್ತುತಪಡಿಸಲು ಬಯಸುತ್ತೇನೆ. ಇದು ನನ್ನ ದೇಶಕ್ಕಾಗಿ ನಾನು ಹೊಂದಿರುವ ಕನಸು. ದೇಶದ ಯುವಕರು ಗ್ರಾಹಕೀಕರಣದ ಆಧಾರದ ಮೇಲೆ ಎಲ್ಲಾ ಆಕಾಂಕ್ಷೆಗಳನ್ನು ಹೊಂದಿದ್ದಾರೆ.

ಬೆಲ್ಕಿಸ್ ಬೇರಾಕ್ ಅವರು ತಮ್ಮ 'ಗುಲಿಜಾರ್' ಚಿತ್ರದ ಬಗ್ಗೆ ಮಾತನಾಡಿ, ಚಲನಚಿತ್ರ ಮಾಡುವಾಗ ಹಣಕ್ಕಾಗಿ ಎದುರಿಸಿದ ಹೋರಾಟಗಳನ್ನು ವಿವರಿಸಿದರು. “ಹೆಚ್ಚಾಗಿ ಪೂರ್ವಾಗ್ರಹವೇ ಚಿತ್ರಕ್ಕೆ ಹಣ ಪಡೆಯುವ ಮೇಲೆ ಪರಿಣಾಮ ಬೀರುತ್ತದೆ. ಅತಿಯಾದ ಆತ್ಮವಿಶ್ವಾಸ(ಮ್ಯಾನ್ಸ್ ಪ್ಲೇನಿಂಗ್) ಉದ್ಯಮದಿಂದ ಬರುತ್ತದೆಯೇ ಹೊರತು ಸಾಂಸ್ಕೃತಿಕ ಸಂಸ್ಥೆಗಳಿಂದಲ್ಲ”. "ನೀವು ಸಮಾಜದ ಯಾವುದೇ ವರ್ಗವನ್ನು ವಿರೋಧಿಸುವ ವಿಚಾರಗಳನ್ನು ಹಾಕುತ್ತಿದ್ದರೆ ಅದಕ್ಕೆ ಸವಾಲುಗಳು ಎದುರಾಗುತ್ತವೆ" ಎಂದು ಅವರು ಹೇಳಿದರು.

ಮಣಿಜೆಹ್ ಹೆಕ್ಮತ್ ಮತ್ತು ಫೇಜ್ ಅಜೀಜ್ಖಾನಿ ನಿರ್ದೇಶಿಸಿದ 'ಭಯ ಮತ್ತು ನಡುಕ(ಫಿಯರ್ ಅಂಡ್ ಟ್ರೆಂಬ್ಲಿಂಗ್)' ಚಲನಚಿತ್ರ ಮಹಿಳೆಯ ಕಥೆ ಹೇಳುತ್ತದೆ. ಅಚಲ ನಂಬಿಕೆಯು ಅವಳನ್ನು ಪ್ರತ್ಯೇಕತೆಗೆ ಕರೆದೊಯ್ಯುತ್ತದೆ, ಕುಟುಂಬ ಮತ್ತು ಸಾಮಾಜಿಕ ಸಂಪರ್ಕಗಳಿಂದ ಅವಳನ್ನು ಕತ್ತರಿಸುತ್ತದೆ. ಈ ವಿಪರೀತವಾದ ಮನೋನಿರ್ಧಾರವು  ಅವಳ ಆಳವಾದ ಒಂಟಿತನಕ್ಕೆ ಮೂಲ ಕಾರಣವಾಗಿದೆ. ಚಿತ್ರದ ಹೆಸರೇ ಈ ಚಿತ್ರ ನಿರ್ಮಿಸಿದ ಅನುಭವವನ್ನು ಸೂಚಿಸುತ್ತದೆ ಎಂದು ಫೇಜ್ ಅಜೀಜ್ಖಾನಿ ವ್ಯಕ್ತಪಡಿಸಿದರು.

ಚಲನಚಿತ್ರಕ್ಕಾಗಿ ನಿಧಿ ಸೃಜತೆಯ ಕುರಿತು ಮಾತನಾಡಿದ ಅವರು, ಅಜೀಜ್ಖಾನಿ ಅವರು ಸ್ಥಾಪನೆ ಬೆಂಬಲಿಸುವ ಸಿನೆಮಾಕ್ಕೆ ಹಣ ಪಡೆಯುತ್ತಾರೆ, ಆದರೆ ಸ್ವತಂತ್ರ ಮತ್ತು ತಟಸ್ಥ ಸಿನೆಮಾ ಹಣವನ್ನು ಪಡೆಯುವುದಿಲ್ಲ. ಆಗ ಸ್ನೇಹಿತರು, ಕುಟುಂಬ ಮತ್ತು ಸ್ವಂತ ಸಂಪನ್ಮೂಲಗಳನ್ನು ಅವಲಂಬಿಸಬೇಕಾಗುತ್ತದೆ ಎಂದು ಹೇಳಿದರು.

'ದಿ ಸ್ಲಗಾರ್ಡ್ ಕ್ಲಾನ್,' 'ಗುಲಿಜರ್' ಮತ್ತು 'ಫಿಯರ್ & ಟ್ರೆಂಬ್ಲಿಂಗ್' ಹೆಸರಿನ 3 ಚಲನಚಿತ್ರಗಳ ನಿರ್ದೇಶಕರು ಗೋವಾದಲ್ಲಿ ನಡೆಯುತ್ತಿರುವ 55ನೇ ಐಎಫ್‌ಎಫ್‌ಐ ಚಲನಚಿತ್ರೋತ್ಸವ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಪತ್ರಿಕಾಗೋಷ್ಠಿಯನ್ನು ಶ್ರೀಯಾಂಕಾ ಚಟರ್ಜಿ ನಿರ್ವಹಿಸಿದರು

ಪತ್ರಿಕಾಗೋಷ್ಠಿಯನ್ನು ಇಲ್ಲಿ ವೀಕ್ಷಿಸಬಹುದು:

 

*****

iffi reel

(Release ID: 2076575) Visitor Counter : 7