ವಾರ್ತಾ ಮತ್ತು ಪ್ರಸಾರ ಸಚಿವಾಲಯ
ತಂತ್ರಜ್ಞಾನದ ಏಕೀಕರಣ ಮತ್ತು ಸೃಜನಾತ್ಮಕ ಸೃಷ್ಟಿಕರ್ತರ ಪ್ರಬಲ ಪರಿಸರ ವ್ಯವಸ್ಥೆಯ ಅಭಿವೃದ್ಧಿಯೊಂದಿಗೆ ಭಾರತದ ಸೃಜನಶೀಲ ವಲಯವು ಅಭಿವೃದ್ಧಿ ಹೊಂದುತ್ತಲೇ ಇರುತ್ತದೆ: ಐ ಎಫ್ ಎಫ್ ಐ ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್ ಅವರ ವಿಡಿಯೋ ಸಂದೇಶ
ಪ್ರತಿಯೊಬ್ಬ ಭಾರತೀಯ ಸೃಜನಶೀಲರು ಜಾಗತಿಕ ಕಥೆಗಾರರಾಗುವುದನ್ನು ಖಚಿತಪಡಿಸಿಕೊಳ್ಳೋಣ ಮತ್ತು ಭವಿಷ್ಯದ ಕಥೆಗಳಿಗಾಗಿ ಜಗತ್ತು ಭಾರತದತ್ತ ನೋಡುತ್ತದೆ: ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
'ವಿಕೇಂದ್ರೀಕೃತ ಸೃಜನಶೀಲ ಕ್ರಾಂತಿ' - ಗುವಾಹಟಿ, ಕೊಚ್ಚಿ ಮತ್ತು ಇಂದೋರ್ ನಂತಹ ನಗರಗಳು ಸೃಜನಶೀಲ ಸೃಷ್ಟಿಯ ಕೇಂದ್ರಗಳಾಗಿ ಹೊರಹೊಮ್ಮುತ್ತಿವೆ: ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
"ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು (ಐ.ಎಫ್.ಎಫ್.ಐ) ಭಾರತೀಯ ಚಲನಚಿತ್ರೋದ್ಯಮದ ಅಭಿವೃದ್ಧಿಯಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಭಾರತವು ಕಂಟೆಂಟ್ ಸೃಷ್ಟಿಕರ್ತರ ಆರ್ಥಿಕತೆಯನ್ನು ಅಭಿವೃದ್ಧಿಪಡಿಸುವತ್ತ ಗಮನ ಹರಿಸಿದೆ, ಇದು ರೋಮಾಂಚಕ ಮತ್ತು ವೇಗವಾಗಿ ಬೆಳೆಯುತ್ತಿದೆ "ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಇಂದು ಗೋವಾದಲ್ಲಿ ನಡೆದ 55ನೇ ಐಎಫ್ಎಫ್ಐ ಉದ್ಘಾಟನಾ ಸಮಾರಂಭದಲ್ಲಿ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.
ಸಚಿವರು ಕ್ರಿಯಾತ್ಮಕ ಶಕ್ತಿಯಾಗಿ ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡುತ್ತಿರುವ ಮತ್ತು ದೇಶದ ಸಮೃದ್ಧ ಸಾಂಸ್ಕೃತಿಕ ಪರಂಪರೆಯನ್ನು ಪ್ರದರ್ಶಿಸುವ ಭಾರತದ ಸೃಜನಶೀಲ ಕ್ಷೇತ್ರವನ್ನು ಸಹ ಹೈಲೈಟ್ ಮಾಡಿದರು. "ಜನರು ಭಾರತದ ವೈವಿಧ್ಯಮಯ ಸಂಸ್ಕೃತಿಗಳು, ಪಾಕಪದ್ಧತಿಗಳು, ಸಮೃದ್ಧ ಪರಂಪರೆ ಮತ್ತು ಭಾರತೀಯ ಸಾಹಿತ್ಯ ಮತ್ತು ಭಾಷೆಗಳ ರತ್ನಗಳನ್ನು ಆಸಕ್ತಿದಾಯಕ ಮತ್ತು ಸೃಜನಾತ್ಮಕ ರೀತಿಯಲ್ಲಿ ಪ್ರದರ್ಶಿಸುವ ನವೀನ ವಿಷಯವನ್ನು ಕಂಡುಹಿಡಿಯುತ್ತಿದ್ದಾರೆ. ಏಕೆಂದರೆ ದೇಶವು ಸೃಜನಾತ್ಮಕತೆಯನ್ನು ಸಬಲೀಕರಣಗೊಳಿಸುವುದನ್ನು, ನವೀನತೆಯನ್ನು ಪ್ರೋತ್ಸಾಹಿಸುವುದನ್ನು ಮತ್ತು ವಿಶ್ವ ವೇದಿಕೆಯಲ್ಲಿ ಸಾಂಸ್ಕೃತಿಕ ರಾಜತಂತ್ರವನ್ನು ಚಾಲನೆ ಮಾಡುವುದನ್ನು ಮುಂದುವರೆಸಿದೆ" ಎಂದು ಅವರು ಹೇಳಿದರು.
ಕೇಂದ್ರ ಸಚಿವರು ಸೃಜನಶೀಲರು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಭಾರತದ ಅನನ್ಯ ಗುರುತನ್ನು ಪ್ರತಿಬಿಂಬಿಸುವ ಹಾಗೂ ಜಾಗತಿಕ ಪ್ರೇಕ್ಷಕರಿಗೆ ಸ್ಪಂದಿಸುವ ಕಥೆಗಳನ್ನು ರಚಿಸುವಂತೆ ಕರೆ ನೀಡಿದರು. "ತಂತ್ರಜ್ಞಾನದ ಸಂಯೋಜನೆ ಮತ್ತು ಸದೃಢ ಸೃಜನಶೀಲರ ಪರಿಸರ ವ್ಯವಸ್ಥೆಯ ಅಭಿವೃದ್ಧಿಯೊಂದಿಗೆ, ಭಾರತದ ಸೃಜನಶೀಲ ಕ್ಷೇತ್ರವು ಬೆಳೆಯುತ್ತಲೇ ಇರುತ್ತದೆ ಎಂಬ ನಂಬಿಕೆ ನಮಗಿದೆ" ಎಂದು ಅವರು ಹೇಳಿದರು.
ಸಚಿವರು ಎಲ್ಲಾ ಚಲನಚಿತ್ರ ಪ್ರೇಮಿಗಳು, ಚಲನಚಿತ್ರ ನಿರ್ಮಾಪಕರು ಮತ್ತು ಐ. ಎಫ್. ಎಫ್. ಐ ಪ್ರತಿನಿಧಿಗಳಿಗೆ ಆತ್ಮೀಯ ಆಹ್ವಾನ ಸಲ್ಲಿಸಿ, ಈ ಹಬ್ಬವು ಸೃಜನಾತ್ಮಕ ಮನಸ್ಸುಗಳಿಗಾಗಿ ಹೊಸ ಸಹಭಾಗಿತ್ವ ಮತ್ತು ಸಹಯೋಗಗಳನ್ನು ಬೆಳೆಸಲಿ ಎಂಬ ಭರವಸೆ ವ್ಯಕ್ತಪಡಿಸಿದರು. "ಯುವ ಸೃಜನಶೀಲರು ಇಲ್ಲಿ ಮಾರ್ಗದರ್ಶನ ಮತ್ತು ಸಲಹೆ ಸಿಗುತ್ತದೆ ಎಂಬ ನಿರೀಕ್ಷೆಯೂ ನಮಗಿದೆ. ಈ ಕಾರ್ಯಕ್ರಮದಲ್ಲಿ ಹಂಚಿಕೊಳ್ಳಲಾಗುವ ಕಲ್ಪನೆಗಳು ಮುಂಬರುವ ವರ್ಷಗಳಲ್ಲಿ ಉದ್ಯಮದ ದಿಕ್ಕನ್ನು ರೂಪಿಸಲು ಸಹಾಯ ಮಾಡುತ್ತವೆ" ಎಂದು ಅವರು ಹೇಳಿದರು.
ಭಾರತದ ಕ್ರಿಯೇಟಿವ್ ವಲಯದ ಆರ್ಥಿಕತೆ: ಜಾಗತಿಕ ಮಹಾಶಕ್ತಿ
ಇಂದು ಪ್ರಕಟವಾದ ಲೇಖನವೊಂದರಲ್ಲಿ, ಶ್ರೀ ವೈಷ್ಣವ್ ಅವರು ಭಾರತದ ಸೃಜನಶೀಲ ವಲಯದ ಆರ್ಥಿಕತೆಯ ಬೆಳವಣಿಗೆಯ ಪಥವನ್ನು ವಿವರಿಸಿದರು. "ಭಾರತದ ಸೃಜನಶೀಲ ವಲಯದ ಆರ್ಥಿಕತೆಯು ವೇಗವಾಗಿ ವಿಸ್ತರಿಸುತ್ತಿದೆ, ಈಗ ಅದರ ಮೌಲ್ಯ $30 ಬಿಲಿಯನ್ ಆಗಿದೆ, ಇದು ಭಾರತದ ಜಿಡಿಪಿಗೆ ಸುಮಾರು 2.5% ರಷ್ಟು ಕೊಡುಗೆ ನೀಡುತ್ತದೆ ಮತ್ತು 8% ರಷ್ಟು ಉದ್ಯೋಗಿಗಳಿಗೆ ಜೀವನೋಪಾಯವನ್ನು ಒದಗಿಸುತ್ತದೆ". "ಇನ್ಫ್ಲುಯೆನ್ಸರ್ ಮಾರ್ಕೆಟಿಂಗ್ ವಲಯವೊಂದರ ಮೌಲ್ಯವು 3,375 ಕೋಟಿ ರೂಪಾಯಿಗಳಾಗಿದ್ದು, 200,000 ಕ್ಕೂ ಹೆಚ್ಚು ಪೂರ್ಣಕಾಲಿಕ ಕಂಟೆಂಟ್ ಕ್ರಿಯೇಟರ್ ಭಾರತದ ಜಾಗತಿಕ ಉಪಸ್ಥಿತಿಗೆ ಕೊಡುಗೆ ನೀಡಿದ್ದಾರೆ" ಎಂದು ಅವರು ಬರೆದಿದ್ದಾರೆ". ಗುವಾಹಟಿ, ಕೊಚ್ಚಿ ಮತ್ತು ಇಂದೋರ್ ನಂತರ ನಗರಗಳು ಸೃಜನಶೀಲ ಕೇಂದ್ರಗಳಾಗಿ ಹೊರಹೊಮ್ಮುತ್ತಿದ್ದು, ದೇಶಾದ್ಯಂತ ವಿಕೇಂದ್ರೀಕೃತ ಸೃಜನಶೀಲ ಕ್ರಾಂತಿಗೆ ಉತ್ತೇಜನ ನೀಡುತ್ತಿವೆ ಎಂದು ಸಚಿವರು ಗಮನಸೆಳೆದರು.
ಭಾರತದ ಸೃಜನಶೀಲ ಕೈಗಾರಿಕೆಗಳ ವ್ಯಾಪಕ ಪ್ರಭಾವವನ್ನು ಒತ್ತಿ ಹೇಳಿದ ಸಚಿವರು, ಅವು ಜಿಡಿಪಿ ಬೆಳವಣಿಗೆಯನ್ನು ಮೀರಿ ವಿಸ್ತರಿಸುತ್ತವೆ, ಬಾಲಿವುಡ್, ಪ್ರಾದೇಶಿಕ ಸಿನೆಮಾ ಮತ್ತು ಇತರ ಸಾಂಸ್ಕೃತಿಕ ಉತ್ಪನ್ನಗಳ ಮೂಲಕ ದೇಶದ ಜಾಗತಿಕ ಸಾಫ್ಟ್ ಪವರ್ ರೂಪಿಸಲು ಸಹಾಯ ಮಾಡುತ್ತವೆ ಎಂದು ಹೇಳಿದರು.
ಸರ್ಕಾರದ ಪರಿವರ್ತಕ ಮಧ್ಯಸ್ಥಿಕೆಗಳ ಬಗ್ಗೆ ಪುನರುಚ್ಚರಿಸಿದ ಸಚಿವರು, ವಿಶ್ವ ಆಡಿಯೋ ವಿಶುವಲ್ ಮತ್ತು ಎಂಟರ್ಟೈನ್ಮೆಂಟ್ ಶೃಂಗಸಭೆ (WAVES) ದೇಶವನ್ನು ಕಂಟೆಂಟ್ ಕ್ರಿಯೇಷನ್ ಮತ್ತು ನವೀನತೆಯಲ್ಲಿ ಜಾಗತಿಕ ಶಕ್ತಿಶಾಲಿಯಾಗಿ ಸ್ಥಾನೀಕರಿಸುವ ಗುರಿಯನ್ನು ಹೊಂದಿರುವ ಐತಿಹಾಸಿಕ ಕ್ರಮವಾಗಿದೆ ಎಂದು ಹೇಳಿದರು. ಭವಿಷ್ಯವು ನಿರಂತರವಾಗಿ ಆವಿಷ್ಕಾರ ಮಾಡುವ, ಸಾಮೂಹಿಕ ಪ್ರಯತ್ನಗಳನ್ನು ಬೆಂಬಲಿಸುವ ಮತ್ತು ಹೊಸತನವನ್ನು ಅಳವಡಿಸಿಕೊಳ್ಳುವವರಿಗೆ ಸೇರಿದ್ದು’ ಎಂದು ಅವರು ಬರೆದಿದ್ದಾರೆ. ಆರ್ಥಿಕ ಅಭಿವೃದ್ಧಿ, ಸಾಂಸ್ಕೃತಿಕ ರಾಜತಾಂತ್ರಿಕತೆ ಮತ್ತು ಜಾಗತಿಕ ನಾಯಕತ್ವಕ್ಕೆ ಪ್ರೇರಕ ಶಕ್ತಿಯಾಗಿ ಭಾರತದ ಸೃಜನಶೀಲ ವಲಯದ ಆರ್ಥಿಕತೆಯನ್ನು ನಿರ್ಮಿಸೋಣ. ನಾವು ಒಟ್ಟಾಗಿ ಕೆಲಸ ಮಾಡೋಣ ಮತ್ತು ಪ್ರತಿಯೊಬ್ಬ ಕಂಟೆಂಟ್ ಕ್ರಿಯೇಟರ್ ವಿಶ್ವ ದರ್ಜೆಯ ಕಥೆಗಾರನಾಗಿ ಹೊರಹೊಮ್ಮುವುದನ್ನು ಖಚಿತಪಡಿಸಿಕೊಳ್ಳೋಣ ಮತ್ತು ಇಡೀ ಜಗತ್ತು ಭವಿಷ್ಯವನ್ನು ರೂಪಿಸುವ ಕಥೆಗಳ ನಾಡು ಎಂದು ಭಾರತವನ್ನು ಬಹಳ ಭರವಸೆಯಿಂದ ನೋಡುತ್ತದೆ ಎಂದು ವೈಷ್ಣವ್ ತಮ್ಮ ಲೇಖನದಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಎಂಟು ದಿನಗಳ ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ IFFI ಯ ಪ್ರಾರಂಭವನ್ನು ಗುರುತಿಸಲು ಬರೆದ ಲೇಖನದಲ್ಲಿ, ವೈಷ್ಣವ್ ಜಾಗತಿಕ ಕಿಯೇಟಿವ್ ಎಕನಾಮಿಯನ್ನು ಮುನ್ನಡೆಸುವಲ್ಲಿ ಭಾರತದ ಕಂಟೆಂಟ್ ಕ್ರಿಯೇಟರ್ ಪಾತ್ರವನ್ನು ಎತ್ತಿ ತೋರಿಸಿದ್ದಾರೆ. ಭಾರತದ ಕಂಟೆಂಟ್ ಕ್ರಿಯೇಟರ್ ಗಳು ಜಾಗತಿಕ ಸೃಜನಶೀಲ ಆರ್ಥಿಕತೆಯನ್ನು ಮುನ್ನಡೆಸಲು ಸಜ್ಜಾಗಿದ್ದಾರೆ ಎಂದು ಅವರು ಹೇಳಿದರು.
55ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ (IFFI) ಇಂದು, ನವೆಂಬರ್ 20, 2024 ರಂದು IFFI ಯ ಶಾಶ್ವತ ಸ್ಥಳವಾದ ಗೋವಾದಲ್ಲಿ ಅದ್ದೂರಿ ಪ್ರಾರಂಭ ಸಮಾರಂಭದೊಂದಿಗೆ ಆರಂಭವಾಯಿತು. ಒಂಬತ್ತು ದಿನಗಳ ಉತ್ಸವವು ನವೆಂಬರ್ 28, 2024 ರವರೆಗೆ ನಡೆಯಲಿದೆ, ಚಲನಚಿತ್ರ ನಿರ್ಮಾಪಕರು ಮತ್ತು ಸೃಜನಶೀಲ ಕಲಾವಿದರಿಗೆ ಚಿತ್ರಪ್ರದರ್ಶನದ ಸಂತೋಷವನ್ನು ಹಂಚಿಕೊಳ್ಳಲು ಮತ್ತು ಆಚರಿಸಲು ವೇದಿಕೆಯನ್ನು ಒದಗಿಸುತ್ತದೆ.
*****
(Release ID: 2075375)
Visitor Counter : 4