ನೌಕಾ ಸಚಿವಾಲಯ
azadi ka amrit mahotsav

ಮಾನವೀಯತೆಯ ಸಮೃದ್ಧ ಭವಿಷ್ಯದ ಪಾಲುದಾರಿಕೆಗಾಗಿ ಒಮ್ಮತವನ್ನು ನಿರ್ಮಿಸಲು 'ಸಾಗರಮಂಥನ್' ಯಶಸ್ಸಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರೆ 


ರಾಷ್ಟ್ರಗಳ ಬೆಳವಣಿಗೆಯ ಆಧಾರಸ್ತಂಭಗಳಾಗಿ ಸಮುದ್ರ ಸಂಪನ್ಮೂಲಗಳಿಗಾಗಿ ಮುಕ್ತ ಮತ್ತು ಸುರಕ್ಷಿತ ಕಡಲ ಜಾಲದ ದೃಷ್ಟಿ ಕುರಿತು ಪ್ರಧಾನಮಂತ್ರಿ ಮಾಹಿತಿ ಹಂಚಿಕೆ

ಸಾಗರಮಂಥನ್ ಭವಿಷ್ಯ ಮತ್ತು ಬೆಳವಣಿಗೆಯ ದೃಷ್ಟಿಯನ್ನು ವಿಸ್ತರಿಸಲು ವಿಚಾರಗಳ ವಿನಿಮಯ, ತಜ್ಞರ ಒಳನೋಟಗಳನ್ನು ಪ್ರೋತ್ಸಾಹಿಸುತ್ತದೆ: ಪ್ರಧಾನಮಂತ್ರಿ ನರೇಂದ್ರ ಮೋದಿ

ಸಾಗರಮಂಥನ್ ನಿಯಮಾಧಾರಿತ ವಿಶ್ವ ಕ್ರಮವನ್ನು ಇನ್ನಷ್ಟು ಬಲಪಡಿಸುತ್ತದೆ ಮತ್ತು ರಾಷ್ಟ್ರಗಳ ನಡುವೆ ಶಾಂತಿ, ವಿಶ್ವಾಸ ಮತ್ತು ಸ್ನೇಹವನ್ನು ಹೆಚ್ಚಿಸುತ್ತದೆ: ಪ್ರಧಾನಮಂತ್ರಿ ನರೇಂದ್ರ ಮೋದಿ

Posted On: 19 NOV 2024 12:50PM by PIB Bengaluru

ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ಸಾಗರಮಂಥನ್, ದಿ ಓಷಿಯನ್ ಡೈಲಾಗ್ - ಮೊದಲ ಕಡಲ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಸಂದೇಶವನ್ನು ಹಂಚಿಕೊಂಡರು. ಮಾನವೀಯತೆಯ ಸಮೃದ್ಧ ಭವಿಷ್ಯದ ಪಾಲುದಾರಿಕೆಗಾಗಿ ಒಮ್ಮತವನ್ನು ನಿರ್ಮಿಸಲು ಸಾಗರಮಂಥನದ ಯಶಸ್ಸಿಗೆ ಪ್ರಧಾನಿ ಮೋದಿ ಕರೆ ನೀಡಿದರು.

ನೈಜೀರಿಯಾದ ಕ್ಯಾಂಪ್ ಆಫೀಸ್‌ನಿಂದ ಪ್ರಧಾನ ಮಂತ್ರಿ ಮೋದಿಸಂದೇಶ ಹಂಚಿಕೊಂಡಿದ್ದಾರೆ, “ಮುಕ್ತ ಮತ್ತು ಸುರಕ್ಷಿತ ಕಡಲ ಜಾಲಕ್ಕಾಗಿ ನಮ್ಮ ದೃಷ್ಟಿ - ಅದು ಹಿಂದೂ ಮಹಾಸಾಗರ ಅಥವಾ ಇಂಡೋ ಪೆಸಿಫಿಕ್ ಪ್ರದೇಶವಾಗಿರಬಹುದು - ಪ್ರಪಂಚದಾದ್ಯಂತ ಅನುರಣನವನ್ನು ಕಂಡುಕೊಳ್ಳುತ್ತಿದೆ. 'ಇಂಡೋ ಪೆಸಿಫಿಕ್ ಓಶಿಯನ್ಸ್ ಇನಿಶಿಯೇಟಿವ್' ರಾಷ್ಟ್ರಗಳ ಬೆಳವಣಿಗೆಗೆ ಪ್ರಮುಖ ಆಧಾರಸ್ತಂಭವಾಗಿ ಸಮುದ್ರ ಸಂಪನ್ಮೂಲಗಳನ್ನು ಕಲ್ಪಿಸುತ್ತದೆ. ಸಾಗರಗಳ ಮೇಲಿನ ಈ ಸಂವಾದವು ನಿಯಮ-ಆಧಾರಿತ ವಿಶ್ವ ಕ್ರಮವನ್ನು ಇನ್ನಷ್ಟು ಬಲಪಡಿಸುತ್ತದೆ ಮತ್ತು ರಾಷ್ಟ್ರಗಳ ನಡುವೆ ಶಾಂತಿ, ವಿಶ್ವಾಸ ಮತ್ತು ಸ್ನೇಹವನ್ನು ಹೆಚ್ಚಿಸುತ್ತದೆ. 2047ರ ವೇಳೆಗೆ ವಿಕಸಿತ ಭಾರತ ನ ದೃಷ್ಟಿಯನ್ನು ಸಾಕಾರಗೊಳಿಸಲು ನಾವು ಶ್ರಮಿಸುತ್ತಿರುವಾಗ, ಸಾಗರಮಂಥನದಂತಹ ಸಂಭಾಷಣೆಗಳು ಒಮ್ಮತ, ಪಾಲುದಾರಿಕೆಗಳು ಮತ್ತು ಮುಖ್ಯವಾಗಿ, ಸಮೃದ್ಧ ಭವಿಷ್ಯವನ್ನು ನಿರ್ಮಿಸಲು ಅಮೂಲ್ಯವಾಗಿದೆ. ಎಲ್ಲಾ ಮಧ್ಯಸ್ಥಗಾರರ ಸಾಮೂಹಿಕ ಪ್ರಯತ್ನಗಳೊಂದಿಗೆ, ಈ ಚರ್ಚೆಗಳು ದೂರದ ಮತ್ತು ವ್ಯಾಪಕವಾಗಿ ಪ್ರತಿಧ್ವನಿಸುತ್ತವೆ, ಉಜ್ವಲವಾದ, ಹೆಚ್ಚು ಸಂಪರ್ಕಿತ ಭವಿಷ್ಯದ ಕಡೆಗೆ ದಾರಿ ಮಾಡಿಕೊಡುತ್ತವೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.

ಭಾರತದ ಶ್ರೀಮಂತ ಕಡಲ ಪರಂಪರೆ ಮತ್ತು ವಲಯವನ್ನು ನಿರ್ಮಿಸುವ ಹಂತಗಳ ಬಗ್ಗೆ ಗಮನಸೆಳೆದ ಪ್ರಧಾನಿ ಮೋದಿ, “ಭಾರತದ ಕಡಲ ಸಂಪ್ರದಾಯವು ಹಲವಾರು ಸಹಸ್ರಮಾನಗಳ ಹಿಂದಿನದು ಮತ್ತು ವಿಶ್ವದ ಅತ್ಯಂತ ಶ್ರೀಮಂತವಾಗಿದೆ. ಅಭಿವೃದ್ಧಿ ಹೊಂದುತ್ತಿರುವ ಬಂದರು ನಗರಗಳಾದ ಲೋಥಾಲ್ ಮತ್ತು ಧೋಲಾವೀರಾ, ಚೋಳ ಸಾಮ್ರಾಜ್ಯದ ನೌಕಾಪಡೆಗಳು, ಛತ್ರಪತಿ ಶಿವಾಜಿ ಮಹಾರಾಜರ ಸಾಹಸಗಳು ಉತ್ತಮ ಸ್ಫೂರ್ತಿಗಳಾಗಿವೆ. ಸಾಗರಗಳು, ರಾಷ್ಟ್ರಗಳು ಮತ್ತು ಸಮಾಜಗಳಿಗೆ ಹಂಚಿಕೆಯ ಪರಂಪರೆಯಾಗಿದೆ, ಹಾಗೆಯೇ ಅಂತಾರಾಷ್ಟ್ರೀಯ ವ್ಯಾಪಾರಕ್ಕೆ ಜೀವಸೆಲೆಯಾಗಿದೆ. ಇಂದು, ರಾಷ್ಟ್ರಗಳ ಭದ್ರತೆ ಮತ್ತು ಸಮೃದ್ಧಿಯು ಸಾಗರಗಳೊಂದಿಗೆ ನಿಕಟ ಸಂಪರ್ಕ ಹೊಂದಿವೆ. ಸಾಗರಗಳ ಸಾಮರ್ಥ್ಯವನ್ನು ಗುರುತಿಸಿ, ಭಾರತದ ಕಡಲ ಸಾಮರ್ಥ್ಯಗಳನ್ನು ಹೆಚ್ಚಿಸಲು ಹಲವಾರು ಪರಿವರ್ತಕ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಕಳೆದ ದಶಕದಲ್ಲಿ, 'ಸಮೃದ್ಧಿಯ ಬಂದರುಗಳು,' 'ಪ್ರಗತಿಗಾಗಿ ಬಂದರುಗಳು' ಮತ್ತು 'ಉತ್ಪಾದನೆಗಾಗಿ ಬಂದರುಗಳು' ಎಂಬ ದೃಷ್ಟಿಕೋನದಿಂದ ಮಾರ್ಗದರ್ಶಿಸಲ್ಪಟ್ಟ ನಾವು ನಮ್ಮ ಬಂದರುಗಳ ಸಾಮರ್ಥ್ಯವನ್ನು ದ್ವಿಗುಣಗೊಳಿಸಿದ್ದೇವೆ. ಬಂದರು ದಕ್ಷತೆಯನ್ನು ಹೆಚ್ಚಿಸುವ ಮೂಲಕ, ಟರ್ನ್‌ ಅರೌಂಡ್ ಸಮಯವನ್ನು ಕಡಿಮೆ ಮಾಡುವ ಮೂಲಕ ಮತ್ತು ಎಕ್ಸ್‌ಪ್ರೆಸ್‌ವೇಗಳ ಮೂಲಕ ಕೊನೆಯ ಮೈಲಿ ಸಂಪರ್ಕವನ್ನು ಬಲಪಡಿಸುವ ಮೂಲಕ, ಟರ್ನ್‌ಅರೌಂಡ್ ಸಮಯವನ್ನು ಕಡಿಮೆ ಮಾಡುವ ಮೂಲಕ ಮತ್ತು ಎಕ್ಸ್‌ಪ್ರೆಸ್‌ವೇಗಳು, ರೈಲ್ವೇಗಳು ಮತ್ತು ನದಿಯ ಜಾಲಗಳ ಮೂಲಕ ಕೊನೆಯ ಮೈಲಿ ಸಂಪರ್ಕವನ್ನು ಬಲಪಡಿಸುವ ಮೂಲಕ ನಾವು ಭಾರತದ ತೀರವನ್ನು ಪರಿವರ್ತಿಸಿದ್ದೇವೆ ಎಂದು ಹೇಳಿದ್ದಾರೆ.

ಕಡಲ ವಲಯದ ಪರಿವರ್ತನೆಗಾಗಿ ಪ್ರವರ್ತಕ ಪಾತ್ರವನ್ನು ಗುರುತಿಸಿದ ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವ ಶ್ರೀ ಸರ್ಬಾನಂದ ಸೋನೊವಾಲ್ ಅವರು ಸಾಗರಮಂಥನ್ - ದಿ ಓಶಿಯನ್ಸ್ ಡೈಲಾಗ್‌ನ ಮೊದಲ ಆವೃತ್ತಿಯ ಯಶಸ್ಸಿಗೆ ಉದಾರವಾದ ಮಾತುಗಳಿಗಾಗಿ ಪ್ರಧಾನ ಮಂತ್ರಿಯವರಿಗೆ ಧನ್ಯವಾದಗಳನ್ನು ಅರ್ಪಿಸಿದರು. ಪ್ರಧಾನಿ ಮೋದಿಯವರ ಸಂದೇಶದ ಕುರಿತು ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್ ಅವರು ಮಾತನಾಡಿ, “ಪ್ರಧಾನಿ ಶ್ರೀ ನರೇಂದ್ರ ಮೋದಿ ಜೀ ಅವರ ಕ್ರಿಯಾತ್ಮಕ ನಾಯಕತ್ವದಲ್ಲಿ, ಭಾರತವು ಸಮುದ್ರ ವಲಯದಲ್ಲಿ ಪರಿವರ್ತನೆಯ ಅನುಭವಕ್ಕೆ ಸಾಕ್ಷಿಯಾಗಿದೆ. ಪ್ರಧಾನಿ ಮೋದಿಯವರ ಸಂದೇಶವು ಈ ಚೊಚ್ಚಲ ಕಡಲ ಚಿಂತನೆಯ ನಾಯಕತ್ವ ವೇದಿಕೆ - ಸಾಗರಮಂಥನ್ - ಸಾಧಿಸುವ ಗುರಿಯನ್ನು ಹೊಂದಿದೆ ಎಂಬ ಸಾರವನ್ನು ಒಳಗೊಂಡಿದೆ. ಅವರ ಮಾತಿನಲ್ಲಿ ಹೇಳುವುದಾದರೆ, 'ಸಹಭಾಗಿತ್ವ ಮತ್ತು ಪ್ರಯತ್ನವು ಏಳಿಗೆಯನ್ನು ಖಚಿತಪಡಿಸಿಕೊಳ್ಳಲು ನಮಗೆ ಅಗತ್ಯವಿರುವ ಸಾಧನಗಳು ಮತ್ತು ನಿರ್ದೇಶನಗಳನ್ನು ಹೇಗೆ ನೀಡುತ್ತದೆ' ಎಂಬುದರ ಆಧಾರದ ಮೇಲೆ ವಿಕಸಿತ್ ಭಾರತ್' ಗೆ ಚೌಕಟ್ಟನ್ನು ಪ್ರಧಾನಮಂತ್ರಿಗಳು ಹಂಚಿಕೊಂಡಿದ್ದಾರೆ. ವಿಶ್ವದ ಅತ್ಯಂತ ಜನಪ್ರಿಯ ನಾಯಕರಾದ ನರೇಂದ್ರ ಮೋದಿ ಜೀ ಅವರಿಗೆ 'ಸಾಗರಮಂಥನ್ - ದಿ ಓಶಿಯನ್ಸ್ ಡೈಲಾಗ್' ಯಶಸ್ಸಿಗಾಗಿ ಒಳನೋಟ ಮತ್ತು ದೂರದೃಷ್ಟಿಯ ಸಂದೇಶಕ್ಕಾಗಿ ಆಳವಾದ ಮೆಚ್ಚುಗೆಯನ್ನು ನೀಡಲು ಬಯಸುತ್ತದೆ ಎಂದು ತಿಳಿಸಿದರು.

 

*****


(Release ID: 2074894) Visitor Counter : 17