ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಅವರು ಐ.ಎಫ್.ಎಫ್.ಐ. 2024ರಲ್ಲಿ ಅದ್ಭುತ ಕಾರ್ಯಕ್ರಮಗಳ ಸರಣಿಯನ್ನು ಅನಾವರಣಗೊಳಿಸಿದರು; ಉತ್ಸವದಲ್ಲಿ ಗೋವಾದ ಸಂಸ್ಕೃತಿ ಮತ್ತು ಸಿನಿಮಾದ ಶ್ರೇಷ್ಠತೆಯ ಮುಖ್ಯಾಂಶಗಳನ್ನು ಪ್ರದರ್ಶಿಸಲಾಗುವುದು
ಐ.ಎಫ್.ಎಫ್.ಐ. ಪರೇಡ್ ನಲ್ಲಿ ಗೋವಾದ ಆಕಾಶವು ಸ್ಕೈ ಲ್ಯಾಂಟರ್ನ್ ಗಳಿಂದ ಬೆಳಗಲಿದೆ: ಪ್ರಮೋದ್ ಸಾವಂತ್
ʼಕ್ರಿಯೇಟಿವ್ ಮೈಂಡ್ಸ್ ಆಫ್ ಟುಮಾರೊʼ ಸ್ಪರ್ಧೆಗೆ 1032 ಚಿತ್ರಗಳನ್ನು ಸ್ವೀಕರಿಸಲಾಗಿದೆ: ಐ.ಎಫ್.ಎಫ್.ಐ. ಈ ವರ್ಷ ಯುವ ಚಲನಚಿತ್ರ ನಿರ್ಮಾಪಕರ ಮೇಲೆ ಕೇಂದ್ರೀಕರಿಸಿದೆ: ಪೃಥುಲ್ ಕುಮಾರ್, ಎಂ.ಡಿ. ಎನ್.ಎಫ್.ಡಿ.ಸಿ.
ವಾರ್ತಾ ಮತ್ತು ಪ್ರಸಾರ ಸಚಿವಾಲಯ (ಭಾರತ ಸರ್ಕಾರ), ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ (ಎನ್.ಎಫ್.ಡಿ.ಸಿ.) ಮತ್ತು ಗೋವಾ ಸರ್ಕಾರವು ಎಂಟರ್ ಟೈನ್ಮೆಂಟ್ ಸೊಸೈಟಿ ಆಫ್ ಗೋವಾ (ಇ.ಎಸ್.ಜಿ.) ಮೂಲಕ ಜಂಟಿಯಾಗಿ ಆಯೋಜಿಸಲಾದ ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ (ಐ.ಎಫ್.ಎಫ್.ಐ. ) 55ನೇ ಆವೃತ್ತಿ , 2024ರ ನವೆಂಬರ್ 20 ರಿಂದ 28 ರವರೆಗೆ ಸುಂದರವಾದ ಗೋವಾ ರಾಜ್ಯದಲ್ಲಿ ನಡೆಯಲು ಸಿದ್ಧವಾಗಿದೆ. ಈ ವರ್ಷದ ಉತ್ಸವವು ವೈವಿಧ್ಯಮಯ ನಿರೂಪಣೆಗಳು, ನವೀನ ಧ್ವನಿಗಳು ಮತ್ತು ಸಾಂಸ್ಕೃತಿಕ ವಿನಿಮಯವನ್ನು ಉತ್ತೇಜಿಸುವ ಸಿನಿಮೀಯ ಸಂಭ್ರಮಾಚರಣೆಯ ಭರವಸೆ ನೀಡುತ್ತದೆ.
ಗೋವಾದ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್, ಗೋವಾದ ಎಂಟರ್ಟೈನ್ಮೆಂಟ್ ಸೊಸೈಟಿಯ ಉಪಾಧ್ಯಕ್ಷರಾದ ಶ್ರೀಮತಿ ದೆಲಿಯಾಲಾ ಲೋಬೋ, ಎನ್.ಎಫ್.ಡಿ.ಸಿ. ವ್ಯವಸ್ಥಾಪಕ ನಿರ್ದೇಶಕರು ಹಾಗು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಜಂಟಿ ಕಾರ್ಯದರ್ಶಿ ಶ್ರೀ ಪೃಥುಲ್ ಕುಮಾರ್ ಅವರು ಇಂದು ಐ.ಎಫ್.ಎಫ್.ಐ ಮೀಡಿಯಾ ಸೆಂಟರ್ ನಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿದರು. ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಜಂಟಿ ಕಾರ್ಯದರ್ಶಿ, ಶ್ರೀಮತಿ ವೃಂದಾ ದೇಸಾಯಿ, ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಜಂಟಿ ಕಾರ್ಯದರ್ಶಿ ಹಾಗು ಶ್ರೀಮತಿ ಸ್ಮಿತಾ ವತ್ಸ್ ಶರ್ಮಾ, ಮಹಾನಿರ್ದೇಶಕರು; ಪಿಐಬಿ, ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಮತ್ತು ಪಿಐಬಿ ಹಾಗು ಇ.ಎಸ್.ಜಿ. ಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಈ ವರ್ಷದ ಹೊಸ ಉಪಕ್ರಮಗಳನ್ನು ವಿವರಿಸಿದ ಡಾ.ಸಾವಂತ್, ಐ.ಎಫ್.ಎಫ್.ಐ. ಪರೇಡ್ ನ ಮಾರ್ಗದಲ್ಲಿ ‘ಸ್ಕೈ ಲ್ಯಾಂಟರ್ನ್’ ಸ್ಪರ್ಧೆಯ ಚಿತ್ರಗಳನ್ನು ಪ್ರದರ್ಶಿಸಲಾಗುವುದು ಮತ್ತು ಭಾಗವಹಿಸುವವರಿಗೆ ನಗದು ಬಹುಮಾನಗಳನ್ನು ನೀಡಲಾಗುವುದು ಎಂದು ತಿಳಿಸಿದರು. ನವೆಂಬರ್ 22 ರಂದು ಇ.ಎಸ್.ಜಿ. ಕಚೇರಿಯ ಆವರಣದಿಂದ ಕಲಾ ಅಕಾಡೆಮಿವರೆಗೆ ಐ.ಎಫ್.ಎಫ್.ಐ. ಪರೇಡ್ ಅನ್ನು ಆಯೋಜಿಸಲಾಗಿದೆ.
ಚಲನಚಿತ್ರೋತ್ಸವದಲ್ಲಿ 81 ದೇಶಗಳ 180 ಅಂತಾರಾಷ್ಟ್ರೀಯ ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ. ಉತ್ಸವ ನಡೆಯುವ ಸ್ಥಳಗಳಲ್ಲಿ ಪ್ರಯಾಣಿಸಲು ಅನುಕೂಲವಾಗುವಂತೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುವುದು. ಸ್ಥಳೀಯ ಪ್ರತಿಭೆ ಮತ್ತು ಸಂಸ್ಕೃತಿಯನ್ನು ಆಚರಿಸುವ 14 ಚಲನಚಿತ್ರಗಳನ್ನು ಪ್ರದರ್ಶಿಸುವ ಗೋವಾ ಚಲನಚಿತ್ರಗಳ ವಿಶೇಷ ವಿಭಾಗವಿರುತ್ತದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಶ್ರೀ ಪೃಥುಲ್ ಕುಮಾರ್, ಎನ್.ಎಫ್.ಡಿ.ಸಿ. ವ್ಯವಸ್ಥಾಪಕ ನಿರ್ದೇಶಕರು, ಉತ್ಸವದಲ್ಲಿ ಯೂಟ್ಯೂಬ್ ಪ್ರಭಾವಿಗಳ ಸಂಘವು ಗೂಗಲ್ ಮತ್ತು My Gov ಪ್ಲಾಟ್ಫಾರ್ಮ್ ಗಳ ಪಾಲುದಾರಿಕೆಯ ಮೂಲಕ ಖಾತ್ರಿಪಡಿಸಲ್ಪಟ್ಟಿದೆ ಎಂದು ಹೇಳಿದರು. ಫಿಲ್ಮ್ ಬಜಾರ್ ನಲ್ಲಿ ಆಸ್ಟ್ರೇಲಿಯನ್ ಫಿಲ್ಮ್ ಪೆವಿಲಿಯನ್ ಅನ್ನು ಪ್ರದರ್ಶಿಸಲಾಗುತ್ತದೆ. ಈ ಉತ್ಸವದಲ್ಲಿ ಚಲನಚಿತ್ರೋದ್ಯಮದ ಖ್ಯಾತರಾದ ವಿಧು ವಿನೋದ್ ಚೋಪ್ರಾ, ಎ.ಆರ್. ರೆಹಮಾನ್, ವಿಕ್ರಾಂತ್ ಮಾಸ್ಸೆ, ಆರ್. ಮಾಧವನ್, ನೀಲ್ ನಿತಿನ್ ಮುಖೇಶ್, ಕೀರ್ತಿ ಕುಲ್ಹಾರಿ, ಅರ್ಜುನ್ ಕಪೂರ್, ಭೂಮಿ ಪೆಡ್ನೇಕರ್, ರಾಕುಲ್ ಪ್ರೀತ್ ಸಿಂಗ್, ನುಶ್ರತ್ ಭರುಚ್ಚಾ, ಸನ್ಯಾ ಮಲ್ಹೋತ್ರಾ, ಇಲಿಯಾನಾ ಡಿಕ್ರೂಜ್, ಬೊಮನ್ ಇರಾನಿ, ಪಂಕಜ್ ಕಪೂರ್, ಅಪರ್ಶಕ್ತಿ ಕ್ರೂರನಾ, ಪ್ರಖಿ ಗಾಂಧಿ, ಸಾಯಿ ತಮ್ಹಂಕರ್, ವಿಷ್ಣು ಮಂಚು, ಪ್ರಭುದೇವ, ಕಾಜಲ್ ಅಗರ್ವಾಲ್, ಸೌರಭ್ ಶುಕ್ಲಾ ಮತ್ತು ಇತರರು ಪಾಲ್ಗೊಳ್ಳಲ್ಲಿದ್ದಾರೆ.
ಎನ್.ಎಫ್.ಡಿ.ಸಿ. ವ್ಯವಸ್ಥಾಪಕ ನಿರ್ದೇಶಕರು, ಈ ವರ್ಷ 6500 ಪ್ರತಿನಿಧಿಗಳು ನೋಂದಾಯಿಸಿದ್ದಾರೆ ಎಂದು ತಿಳಿಸಿದ್ದು, ಕಳೆದ ವರ್ಷಕ್ಕಿಂತ ಶೇಕಡಾ 25ರಷ್ಟು ಹೆಚ್ಚಳವಾಗಿದೆ. ಚಿತ್ರೋತ್ಸವವನ್ನು ಚಿತ್ರಪ್ರೇಮಿಗಳಿಗೆ ಹೆಚ್ಚು ಹತ್ತಿರವಾಗಿಸಲು, ಈ ವರ್ಷ ಇನ್ನೂ 6 ಪರದೆಗಳು ಮತ್ತು ಶೇಕಡಾ 45 ರಷ್ಟು ಹೆಚ್ಚಿನ ಸ್ಕ್ರೀನಿಂಗ್ ಥಿಯೇಟರ್ ಗಳು ಲಭ್ಯವಾಗಲಿವೆ.
ಶ್ರೀ ಪೃಥುಲ್ ಕುಮಾರ್ ಅವರು ಚಲನಚಿತ್ರೋದ್ಯಮದ ವಿವಿಧ ಅಂಶಗಳ ಆಳವಾದ ತಿಳುವಳಿಕೆಯೊಂದಿಗೆ ಚಲನಚಿತ್ರ ವ್ಯವಹಾರದ ಎಲ್ಲಾ ವಿಭಾಗಗಳನ್ನು ಪತ್ರಕರ್ತರಿಗೆ ಪರಿಚಯಿಸಲು ಪತ್ರಿಕಾ ಪ್ರವಾಸವನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು. ಐ.ಎಫ್.ಎಫ್.ಐ. 2024 ಯುವ ಚಲನಚಿತ್ರ ನಿರ್ಮಾಪಕರ ಮೇಲೆ ಕೇಂದ್ರೀಕರಿಸಿದೆ ಮತ್ತು ಕಳೆದ ವರ್ಷ ಸ್ವೀಕರಿಸಿದ 550ಕ್ಕೆ ಹೋಲಿಸಿದರೆ ಸಿಎಂಒಟಿ ವಿಭಾಗದಲ್ಲಿ ದಾಖಲೆಯ 1032 ಚಿತ್ರಗಳನ್ನು ಸ್ವೀಕರಿಸಲಾಗಿದೆ ಎಂದು ಶ್ರೀ ಕುಮಾರ್ ಹೇಳಿದರು.
ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಪಿಐಬಿ, ಮಹಾನಿರ್ದೇಶಕರಾದ ಶ್ರೀಮತಿ ಸ್ಮಿತಾ ವತ್ಸ್ ಶರ್ಮಾ ಭಾರತ ಸರ್ಕಾರದ ಮಾಧ್ಯಮಗಳಲ್ಲಿ ಉತ್ಸವದ ಹೆಚ್ಚುತ್ತಿರುವ ಮನವಿ ಮತ್ತು ಪ್ರಾದೇಶಿಕ ಪ್ರಾತಿನಿಧ್ಯವನ್ನು ಬೆಳೆಸುವಲ್ಲಿ ಅದರ ಗಮನಾರ್ಹ ದಾಪುಗಾಲುಗಳನ್ನು ಒತ್ತಿಹೇಳಿದರು. ಮಾಧ್ಯಮ ಪ್ರತಿನಿಧಿಗಳಿಂದ ಹೆಚ್ಚಿನ ಸಂಖ್ಯೆಯ ಅರ್ಜಿಗಳು ಬಂದಿವೆ ಎಂದು ಅವರು ತಿಳಿಸಿದರು. ಒಟ್ಟು 840 ಅರ್ಜಿಗಳಿದ್ದು, ಅವುಗಳಲ್ಲಿ 284 ಗೋವಾದಿಂದ ಬಂದಿವೆ. ದೇಶದ ಎಲ್ಲೆಡೆ ಉತ್ಸವದ ವ್ಯಾಪ್ತಿಯನ್ನು ವಿಸ್ತರಿಸಲು, ಪಿಐಬಿ ಯ ಪ್ರಾದೇಶಿಕ ಕಚೇರಿಗಳು ಕೊಂಕಣಿ ಭಾಷೆಯಲ್ಲಿ ಮಾಧ್ಯಮ ಬಿಡುಗಡೆಗಳನ್ನು ಒಳಗೊಂಡಂತೆ ಆಯಾ ಭಾಷೆಗಳಲ್ಲಿ ಮಾಧ್ಯಮ ಬಿಡುಗಡೆಗಳನ್ನು ನೀಡುತ್ತವೆ.
ಎನ್.ಎಫ್.ಡಿ.ಸಿ. ವ್ಯವಸ್ಥಾಪಕ ನಿರ್ದೇಶಕರ ಪವರ್ ಪಾಯಿಂಟ್ ಪ್ರಸ್ತುತಿಯನ್ನು ನೋಡಲು ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ
*****
(Release ID: 2074690)
Visitor Counter : 42