ಪ್ರಧಾನ ಮಂತ್ರಿಯವರ ಕಛೇರಿ
ಇಟಲಿಯ ಮಂತ್ರಿಗಳ ಮಂಡಳಿಯ ಅಧ್ಯಕ್ಷರನ್ನು ಭೇಟಿಯಾದ ಪ್ರಧಾನಮಂತ್ರಿ
Posted On:
19 NOV 2024 8:34AM by PIB Bengaluru
ರಿಯೊ ಡಿ ಜನೈರೊದಲ್ಲಿ ನಡೆಯುವ ಜಿ20 ಶೃಂಗಸಭೆಯ ಸಂದರ್ಭದಲ್ಲಿ ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಇಟಾಲಿಯನ್ ಗಣರಾಜ್ಯದ ಮಂತ್ರಿಗಳ ಪರಿಷತ್ತಿನ ಅಧ್ಯಕ್ಷೆ ಘನತೆವೆತ್ತ ಶ್ರೀಮತಿ ಜಾರ್ಜಿಯಾ ಮೆಲೊನಿ ಅವರನ್ನು ಭೇಟಿಯಾದರು. ಕಳೆದ ಎರಡು ವರ್ಷಗಳಲ್ಲಿ ಉಭಯ ಪ್ರಧಾನಮಂತ್ರಿಗಳ ನಡುವಿನ ಐದನೇ ಭೇಟಿ ಇದಾಗಿದೆ. ಜೂನ್ 2024 ರಲ್ಲಿ ಇಟಲಿಯ ಪುಗ್ಲಿಯಾದಲ್ಲಿ ಪ್ರಧಾನ ಮಂತ್ರಿ ಮೆಲೋ ಶ್ರೀಮತಿ ಜಾರ್ಜಿಯಾ ಮೆಲೊನಿ ಅವರ ಅಧ್ಯಕ್ಷತೆಯಲ್ಲಿ ಜಿ7 ಶೃಂಗಸಭೆಯ ಸಂದರ್ಭದಲ್ಲಿ ಉಭಯ ನಾಯಕರು ಕೊನೆಯದಾಗಿ ಭೇಟಿಯಾಗಿದ್ದರು. ಸವಾಲಿನ ಈ ಸಂದರ್ಭದದಲ್ಲಿ ಜಿ7 ಅನ್ನು ಮುನ್ನಡೆಸಿದ್ದಕ್ಕಾಗಿ ಶ್ರೀಮತಿ ಜಾರ್ಜಿಯಾ ಮೆಲೊನಿ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದರು.
ಪುಗ್ಲಿಯಾದಲ್ಲಿ ಅವರು ನಡೆಸಿದ ಚರ್ಚೆಯ ನಂತರ, ಉಭಯ ನಾಯಕರು ಭಾರತ-ಇಟಲಿ ವ್ಯೂಹಾತ್ಮಕ ಪಾಲುದಾರಿಕೆಯನ್ನು ಮುಂದುವರೆಸುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು, ಮತ್ತು ಮುಂದಿನ ಐದು ವರ್ಷಗಳವರೆಗೆ ಅವರ ದೃಷ್ಟಿಕೋನವನ್ನು ವಿವರಿಸುವ ಜಂಟಿ ಕಾರ್ಯತಂತ್ರದ ಕ್ರಿಯಾ ಯೋಜನೆ 2025-29 ಅನ್ನು ಘೋಷಿಸಿದರು. ಭಾರತ-ಇಟಲಿ ನಡುವಿನ ವ್ಯೂಹಾತ್ಮಕ ಪಾಲುದಾರಿಕೆಯ ಕ್ರಿಯಾ ಯೋಜನೆಯು ವ್ಯಾಪಾರ ಮತ್ತು ಹೂಡಿಕೆ, ವಿಜ್ಞಾನ ಮತ್ತು ತಂತ್ರಜ್ಞಾನ, ಹೊಸ ಮತ್ತು ಉದಯೋನ್ಮುಖ ತಂತ್ರಜ್ಞಾನಗಳು, ಶುದ್ಧ ಇಂಧನ, ಬಾಹ್ಯಾಕಾಶ, ರಕ್ಷಣೆ, ಸಂಪರ್ಕ ಮತ್ತು ಜನರಿಂದ ಜನರ ನೇರ ಸಂಪರ್ಕಗಳು ಮುಂತಾದ ವಿಷಯಗಳಲ್ಲಿ ಹಾಗೂ ಇತರ ಪ್ರಮುಖ ವಲಯಗಳಲ್ಲಿ ಜಂಟಿ ಸಹಯೋಗಗಳು, ಕಾರ್ಯಕ್ರಮಗಳು ಮತ್ತು ಉಪಕ್ರಮಗಳನ್ನು ಅನುಸರಿಸುತ್ತದೆ.
ಎರಡು ಕಡೆಯವರು ಹಲವಾರು ವಿಷಯಗಳಲ್ಲಿ ನಿಯಮಿತವಾಗಿ ಮಂತ್ರಿಗಳ ಹಂತದಲ್ಲಿ ಮತ್ತು ಅಧಿಕೃತ ಸಂವಾದಗಳನ್ನು ನಡೆಸುತ್ತಾರೆ. ಸಹ-ಉತ್ಪಾದನೆ, ಸಂಬಂಧಿತ ಕೈಗಾರಿಕೆಗಳು ಮತ್ತು ಸಂಸ್ಥೆಗಳ ನಡುವಿನ ಸಹಯೋಗಗಳು, ನಾವೀನ್ಯತೆ ಮತ್ತು ಚಲನಶೀಲತೆ ದ್ವಿಪಕ್ಷೀಯ ಪಾಲುದಾರಿಕೆಗೆ ಆವೇಗ ಮತ್ತು ಮತ್ತಷ್ಟು ಆಳವನ್ನು ಒದಗಿಸುತ್ತದೆ ಮತ್ತು ಎರಡೂ ದೇಶಗಳ ಆರ್ಥಿಕತೆಗಳು ಮತ್ತು ಜನರಿಗೆ ಪ್ರಯೋಜನವನ್ನು ನೀಡುತ್ತದೆ.
ಉಭಯ ನಾಯಕರು ತಮ್ಮ ಸಂವಾದವನ್ನು ಮುಂದುವರೆಸಲು , ಪ್ರಜಾಪ್ರಭುತ್ವ, ಕಾನೂನಿನ ನಿಯಮ ಮತ್ತು ಸುಸ್ಥಿರ ಅಭಿವೃದ್ಧಿಯ ತಮ್ಮ ಹಂಚಿಕೆಯ ಮೌಲ್ಯಗಳನ್ನು ಎತ್ತಿಹಿಡಿಯಲು ಮತ್ತು ಬಹುಪಕ್ಷೀಯ ಹಾಗೂ ಜಾಗತಿಕ ವೇದಿಕೆಗಳಲ್ಲಿ ಒಟ್ಟಾಗಿ ಕೆಲಸ ಮಾಡಲು ಅವಕಾಶವನ್ನು ಸದಾ ಎದುರು ನೋಡುತ್ತಿದ್ದಾರೆ. ಉಭಯ ದೇಶಗಳು ಸ್ಥಾಪಕ ಸದಸ್ಯರಾಗಿರುವ ಜಾಗತಿಕ ಜೈವಿಕ ಇಂಧನ ಒಕ್ಕೂಟ ಮತ್ತು ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ ಸೇರಿದಂತೆ ಬಹುಪಕ್ಷೀಯ ಕಾರ್ಯತಂತ್ರದ ಉಪಕ್ರಮಗಳ ಅನುಷ್ಠಾನಕ್ಕಾಗಿ ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸಲು ಉಭಯ ನಾಯಕರು ಒಪ್ಪಿಕೊಂಡರು.
*****
(Release ID: 2074596)
Visitor Counter : 9
Read this release in:
English
,
Urdu
,
Marathi
,
Hindi
,
Assamese
,
Bengali
,
Manipuri
,
Punjabi
,
Gujarati
,
Tamil
,
Telugu
,
Malayalam