ವಾರ್ತಾ ಮತ್ತು ಪ್ರಸಾರ ಸಚಿವಾಲಯ
iffi banner
0 2

ಐ ಎಫ್‌ ಎಫ್‌ ಐ 2024ರಲ್ಲಿ ಅದ್ದೂರಿ ಪ್ರೀಮಿಯರ್‌ ಗಳು ಮತ್ತು ರೆಡ್ ಕಾರ್ಪೆಟ್ ಕಾರ್ಯಕ್ರಮಗಳು ದೃಶ್ಯ ವೈಭವ ನೀಡಲಿವೆ

ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (ಐ ಎಫ್‌ ಎಫ್‌ ಐ) 55ನೇ ಆವೃತ್ತಿಯು ತನ್ನ ಬಹು ನಿರೀಕ್ಷಿತ ಗಾಲಾ ಪ್ರೀಮಿಯರ್‌ ಗಳು ಮತ್ತು ರೆಡ್ ಕಾರ್ಪೆಟ್ ಕಾರ್ಯಕ್ರಮಗಳೊಂದಿಗೆ ಪ್ರೇಕ್ಷಕರನ್ನು ಆಕರ್ಷಿಸಲು ಸಿದ್ಧವಾಗಿದೆ. ಈ ಉತ್ಸವವು ಸಿನಿಮೀಯ ಕಲಾತ್ಮಕತೆಯ ಅದ್ಭುತ ಆಚರಣೆಯಾಗಿದೆ, ಜಾಗತಿಕ ಸಿನಿಮಾ ಪ್ರತಿಭೆಯನ್ನು ಪ್ರದರ್ಶಿಸುತ್ತದೆ ಮತ್ತು ಸಿನಿಮಾದ ಮೂಲಕ ಅಸಾಮಾನ್ಯ ಕಥೆಗಳನ್ನು ಹೇಳುತ್ತದೆ. ಈ ಭವ್ಯವಾದ ಮೂರನೇ ಆವೃತ್ತಿಯೊಂದಿಗೆ, ಐ ಎಫ್‌ ಎಫ್‌ ಐ 2024 ಪ್ರೇಕ್ಷಕರಿಗೆ ಮರೆಯಲಾಗದ ಅನುಭವವನ್ನು ನೀಡುತ್ತದೆ ಮತ್ತು ಸಿನಿಮಾ ಪ್ರೇಮಿಗಳನ್ನು ಚಲನಚಿತ್ರಗಳ ಜಗತ್ತಿನೊಂದಿಗೆ ಸಂಪರ್ಕಿಸುತ್ತದೆ.

ಜಾಗತಿಕ ಮತ್ತು ಪ್ರಾದೇಶಿಕ ಸಿನಿಮಾಗಳ ಭವ್ಯ ಪ್ರದರ್ಶನ

ಈ ವರ್ಷದ ಗಾಲಾ ಪ್ರೀಮಿಯರ್ ಲೈನ್-ಅಪ್ ಪ್ರೇಕ್ಷಕರಿಗೆ ಹಲವಾರು ಆಕರ್ಷಣೆಗಳನ್ನು ಹೊಂದಿರುತ್ತದೆ, ಆಯ್ದ ಚಲನಚಿತ್ರಗಳು, ವೆಬ್ ಸರಣಿಗಳು ಮತ್ತು ಸಾಕ್ಷ್ಯಚಿತ್ರಗಳನ್ನು ಪ್ರದರ್ಶಿಸುತ್ತದೆ.

2024ರ ಗಾಲಾ ಪ್ರೀಮಿಯರ್ ಗಳಲ್ಲಿ, ಭಾಷೆಗಳು ಮತ್ತು ಸಂಸ್ಕೃತಿಗಳಾದ್ಯಂತ ಚಲನಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ. ಇದರಲ್ಲಿ ಒಂಬತ್ತು ವಿಶ್ವ ಪ್ರೀಮಿಯರ್‌ ಗಳು, ನಾಲ್ಕು ಏಷ್ಯಾ ಪ್ರೀಮಿಯರ್‌ ಗಳು, ಒಂದು ಇಂಡಿಯಾ ಪ್ರೀಮಿಯರ್ ಮತ್ತು ಒಂದು ವಿಶೇಷ ಪ್ರದರ್ಶನ ಇರುತ್ತವೆ.

ರೋಮಾಂಚನಕಾರಿ ಕ್ರೈಂ ಥ್ರಿಲ್ಲರ್‌ ಗಳಿಂದ ಹೃದಯ ಸ್ಪರ್ಶಿ ಕೌಟುಂಬಿಕ ಡ್ರಾಮಾಗಳು ಮತ್ತು ಚಿಂತನೆಗೆ ಪ್ರೇರೇಪಿಸುವ ಸಾಮಾಜಿಕ ಸಮಸ್ಯೆಗಳವರೆಗೆ, ಈ ವರ್ಷದ ಚಲನಚಿತ್ರ ಶ್ರೇಣಿಯು ಪ್ರತಿಯೊಬ್ಬ ಸಿನಿಮಾ ಪ್ರೇಮಿಯನ್ನು ಆಕರ್ಷಿಸುತ್ತದೆ. ಹಿಂದಿ, ಇಂಗ್ಲಿಷ್, ಮರಾಠಿ, ಮಲಯಾಳಂ ಮತ್ತು ತೆಲುಗು ಸೇರಿದಂತೆ ಬಹು ಭಾಷೆಗಳಿಂದ ವಿಶೇಷ ಚಲನಚಿತ್ರಗಳ ಪ್ರದರ್ಶನವು ಐ ಎಫ್‌ ಎಫ್‌ ಐ 2024 ಅನ್ನು ಜಾಗತಿಕ ಮತ್ತು ಪ್ರಾದೇಶಿಕ ಸಿನಿಮಾಗಳ ಅಂತರ್ಗತ ಆಚರಣೆಯಾಗಿಸುತ್ತದೆ.

ದಿ ಪಿಯಾನೋ ಲೆಸನ್, ಝೀರೋ ಸೆ ರೀಸ್ಟಾರ್ಟ್, ಸಾಲಿ ಮೊಹಬ್ಬತ್, ಸ್ನೋಫ್ಲವರ್, ಪುಣೆ ಹೈವೇ, ಹಜಾರ್ ವಾಲಾ ಶೋಲೆ ಪಹಿಲಾ ಮಾನುಷ್, ದಿ ಮೆಹ್ತಾ ಬಾಯ್ಸ್, ಜಬ್ ಖುಲಿ ಕಿತಾಬ್, ಹಿಸಾಬ್ ಬರಾಬರ್, ಮಿಸೆಸ್, ಫಾರ್ಮಾ, ವಿಕಟಕವಿ, ಹೆಡ್‌ಹಂಟಿಂಗ್ ಟು ಬೀಟ್‌ಬಾಕ್ಸಿಂಗ್, ಮೋನಾನಾ 2, ಮತ್ತು ರಾಣಾ ದಗ್ಗುಬಾಟಿ ಶೋ ಚಿತ್ರೋತ್ಸವದ ಗಮನಾರ್ಹ ಚಿತ್ರಗಳಾಗಿವೆ. ಈ ಚಲನಚಿತ್ರಗಳು ಗಡಿಗಳನ್ನು ಮೀರುವ ಭರವಸೆ ನೀಡುತ್ತವೆ, ಹೊಸ ಕಥೆ ಹೇಳುವ ಸ್ವರೂಪಗಳನ್ನು ಅನ್ವೇಷಿಸುತ್ತವೆ ಮತ್ತು ಒಂದುಗೂಡಿಸಲು ಮತ್ತು ಪ್ರೇರೇಪಿಸಲು ಸಿನಿಮಾದ ಶಕ್ತಿಯನ್ನು ಎತ್ತಿ ತೋರಿಸುವ ಅನುಭವಗಳ ಶ್ರೀಮಂತ ಚಿತ್ರಣವನ್ನು ನೀಡುತ್ತವೆ.

ತಾರೆಯರು ಮತ್ತು ಗ್ಲಾಮರ್ನಿಂದ ತುಂಬಿರುವ ರೆಡ್ ಕಾರ್ಪೆಟ್

ಐ ಎಫ್‌ ಎಫ್‌ ಐ 2024 ರೆಡ್ ಕಾರ್ಪೆಟ್ ಕಾರ್ಯಕ್ರಮಗಳು ಮಿನುಗು ತಾರೆಯರೊಂದಿಗೆ ಪ್ರೇಕ್ಷಕರನ್ನು ಆಕರ್ಷಿಸುತ್ತವೆ. ಅಲ್ಲಿ ಹೆಸರಾಂತ ಚಲನಚಿತ್ರ ನಿರ್ಮಾಪಕರು, ನಟ-ನಟಿಯರು ಮತ್ತು ಸಿನಿಮಾ ಜಗತ್ತಿನ ದಿಗ್ಗಜರು ತಮ್ಮ ಉಪಸ್ಥಿತಿಯೊಂದಿಗೆ ಈ ಸಂದರ್ಭವನ್ನು ವಿಶೇಷವಾಗಿಸುತ್ತಾರೆ.

ಈ ಉತ್ಸವವು ಸಿನಿಮಾ ದಿಗ್ಗಜರು ಮತ್ತು ಉದಯೋನ್ಮುಖ ತಾರೆಗಳನ್ನು ಒಳಗೊಂಡಿರುವ ಗ್ಲಿಟ್ಜ್ ಮತ್ತು ಗ್ಲಾಮರ್‌ ನ ಅನೇಕ ಮರೆಯಲಾಗದ ಸಂಜೆಗಳನ್ನು ಆಯೋಜಿಸುತ್ತದೆ. ರಾಣಾ ದಗ್ಗುಬಾಟಿ, ವಿಧು ವಿನೋದ್ ಚೋಪ್ರಾ, ಸನ್ಯಾ ಮಲ್ಹೋತ್ರಾ, ವಿಕ್ರಾಂತ್ ಮಾಸ್ಸೆ, ಆರ್ ಮಾಧವನ್, ಎಆರ್ ರೆಹಮಾನ್ ಮತ್ತು ಸೌರಭ್ ಶುಕ್ಲಾ ಅವರಂತಹ ಚಿತ್ರರಂಗದ ಗಣ್ಯರು ರೆಡ್ ಕಾರ್ಪೆಟ್ ಮೇಲೆ ನಡೆದು ಸಿನಿಮಾದ ಮ್ಯಾಜಿಕ್ ಅನ್ನು ಹರಡಲಿದ್ದಾರೆ. ಈ ಸಂಭ್ರಮದಲ್ಲಿ ಚಿತ್ರರಂಗದ ಹಾಗೂ ಮಾಧ್ಯಮದವರ ದಂಡೇ ಇರುತ್ತದೆ.

ರೆಡ್ ಕಾರ್ಪೆಟ್ ವಿಭಾಗವು ಐ ಎಫ್‌ ಎಫ್‌ ಐ ನ ಬಹು ನಿರೀಕ್ಷಿತ ಈವೆಂಟ್‌ ಗಳಲ್ಲಿ ಒಂದಾಗಿದೆ, ಸಿನಿಮಾ ಪ್ರೇಮಿಗಳಿಗೆ ತಮ್ಮ ನೆಚ್ಚಿನ ತಾರೆಗಳು ಮತ್ತು ಚಲನಚಿತ್ರ ನಿರ್ಮಾತೃಗಳಿಗೆ ಹತ್ತಿರವಾಗಲು ಅನನ್ಯ ಅವಕಾಶವನ್ನು ನೀಡುತ್ತದೆ. ಅಬ್ಬರದ ಫ್ಯಾಶನ್ ಜೊತೆಗೆ, ಪ್ರತಿಭೆ, ಸೃಜನಶೀಲತೆ ಮತ್ತು ಸಿನಿಮಾದ ಸಾಂಸ್ಕೃತಿಕ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಲು ಇದೊಂದು ಅವಕಾಶವಾಗಿದೆ.

ಶ್ರೇಷ್ಠತೆ ಮತ್ತು ಗ್ಲಾಮರ್ ಪರಂಪರೆ

ಇತ್ತೀಚಿನ ವರ್ಷಗಳಲ್ಲಿ, ಗಾಲಾ ಪ್ರೀಮಿಯರ್‌ ಗಳು ಐ ಎಫ್‌ ಎಫ್‌ ಐ ನ ಪರಂಪರೆಯ ವಿಶಿಷ್ಟ ಲಕ್ಷಣಗಳಾಗಿವೆ. ಇದು ಅತ್ಯುತ್ತಮ ಸಿನಿಮಾವನ್ನು ಪ್ರದರ್ಶಿಸುವಾಗ ಚಲನಚಿತ್ರ ಕಲಾತ್ಮಕತೆ ಮತ್ತು ಪ್ರತಿಭೆಯ ಸಂಯೋಜನೆಯನ್ನು ಪ್ರತಿನಿಧಿಸುತ್ತದೆ. ಈ ವಿಶಿಷ್ಟತೆಯು ಚಲನಚಿತ್ರ ಜಗತ್ತನ್ನು ವ್ಯಾಖ್ಯಾನಿಸುತ್ತದೆ.

ಅದರ ಹಿಂದಿನ ಆವೃತ್ತಿಗಳಲ್ಲಿ, ಗಾಲಾ ಪ್ರೀಮಿಯರ್‌ ಗಳ ವಿಭಾಗವು ಐ ಎಫ್‌ ಎಫ್‌ ಐ ನ ಸ್ಥಾನಮಾನವನ್ನು ಪ್ರಧಾನ ಜಾಗತಿಕ ಚಲನಚಿತ್ರೋತ್ಸವವಾಗಿ ಉನ್ನತೀಕರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ಹಿಂದಿನ ಗಾಲಾ ಪ್ರೀಮಿಯರ್‌ಗಳು ದೃಶ್ಯಂ 2, ಭೇದಿಯಾ, ಕಡಕ್ ಸಿಂಗ್, ಗಾಂಧಿ ಟಾಕ್ಸ್ ಮತ್ತು ಅಂತರಾಷ್ಟ್ರೀಯ ಸರಣಿ ಫೌಡಾ (ಸೀಸನ್ 4) ನಂತಹ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಚಲನಚಿತ್ರಗಳನ್ನು ಒಳಗೊಂಡಿದ್ದವು. ಖ್ಯಾತ ನಟರಾದ ಸಲ್ಮಾನ್ ಖಾನ್, ಅಜಯ್ ದೇವಗನ್, ನವಾಜುದ್ದೀನ್ ಸಿದ್ದಿಕಿ, ವರುಣ್ ಧವನ್, ವಿಜಯ್ ಸೇತುಪತಿ, ಅದಿತಿ ರಾವ್ ಹೈದರಿ ಮುಂತಾದವರು ರೆಡ್ ಕಾರ್ಪೆಟ್ ಮೇಲೆ ಮಿಂಚಿದರು.

ಮರೆಯಲಾಗದ ಚಿತ್ರೋತ್ಸವದ ಅನುಭವ

ವಿಶ್ವ ದರ್ಜೆಯ ಚಲನಚಿತ್ರಗಳು, ತಾರೆಯರಿಂದ ಕೂಡಿದ ರೆಡ್ ಕಾರ್ಪೆಟ್ ಮತ್ತು ಪ್ರೇಕ್ಷಕರಿಗೆ ಸಿನಿಮಾದ ಮ್ಯಾಜಿಕ್‌ ನೊಂದಿಗೆ ಸಂಪರ್ಕ ಸಾಧಿಸಲು ಒಂದು ಅನನ್ಯ ಅವಕಾಶದೊಂದಿಗೆ, 55 ನೇ ಐ ಎಫ್‌ ಎಫ್‌ ಐ ಚಲನಚಿತ್ರ ಕ್ರಾಫ್ಟ್, ಗ್ಲಾಮರ್ ಮತ್ತು ಸಾಂಸ್ಕೃತಿಕ ಸಂಭ್ರಮದ ರೋಮಾಂಚನಕಾರಿ ಪ್ರಯಾಣವನ್ನು ಆನಂದಿಸಲು ಸಿನಿಮಾ ಪ್ರೇಮಿಗಳನ್ನು ಆಹ್ವಾನಿಸುತ್ತದೆ. ಇದೊಂದು ವಿಶಿಷ್ಟ ಚಲನಚಿತ್ರೋತ್ಸವವಾಗಿದ್ದು ಅದನ್ನು ಬೇರೆಯದಕ್ಕೆ ಹೋಲಿಸಲಾಗುವುದಿಲ್ಲ. ಐ ಎಫ್‌ ಎಫ್‌ ಐ 2024 ಅತ್ಯುತ್ತಮ ಜಾಗತಿಕ ಮತ್ತು ಪ್ರಾದೇಶಿಕ ಪ್ರತಿಭೆಗಳನ್ನು ಪ್ರದರ್ಶಿಸುವ ವಿಶಿಷ್ಟ ಚಲನಚಿತ್ರಗಳನ್ನು ಪ್ರೇಕ್ಷಕರಿಗೆ ತಲುಪಿಸುವ ಗುರಿಯನ್ನು ಹೊಂದಿದೆ. 

ಗಾಲಾ ಪ್ರೀಮಿಯರ್‌ ಗಳ ವೇಳಾಪಟ್ಟಿ ಮತ್ತು ರೆಡ್-ಕಾರ್ಪೆಟ್ ಅತಿಥಿಗಳು

ದಿನಾಂಕ

ಪ್ರದರ್ಶನ ಸಮಯ

ಚಲನಚಿತ್ರ/ಯೋಜನೆ

ರೆಡ್ ಕಾರ್ಪೆಟ್ ಅತಿಥಿಗಳು

ನವೆಂಬರ್ 21, 2024

ಮಧ್ಯಾಹ್ನ 12:30

ಪಿಯಾನೋ ಲೆಸನ್‌

 

ನವೆಂಬರ್ 21, 2024

ಸಂಜೆ 4:30

ರಾಣಾ ದಗ್ಗುಬಾಟಿ ಶೋ

ರಾಣಾ ದಗ್ಗುಬಾಟಿ

ನವೆಂಬರ್ 21, 2024

ಸಂಜೆ 5:45

ಝೀರೋ ಸೆ ರಿಸ್ಟಾರ್ಟ್‌

ವಿಧು ವಿನೋದ್ ಚೋಪ್ರಾ, ವಿಕ್ರಾಂತ್ ಮಾಸ್ಸೆ, ಮೇಧಾ ಶಂಕರ್, ಅನಂತ್ ವಿಜಯ್ ಜೋಶಿ, ಅಂಶುಮಾನ್ ಪುಷ್ಕರ್, ಶಾಂತನು ಮೊಯಿತ್ರಾ, ಸ್ವಾನಂದ್ ಕಿರ್ಕಿರೆ, ಜಸ್ಕುನ್ವರ್ ಕೊಹ್ಲಿ

ನವೆಂಬರ್ 22, 2024

ಮಧ್ಯಾಹ್ನ 12

ಸ್ನೋ ಫ್ಲವರ್

ಛಾಯಾ ಕದಮ್, ವೈಭವ್ ಮಾಂಗ್ಲೆ, ಸರ್ಫರಾಜ್ ಆಲಂ ಸಫು, ಗಜೇಂದ್ರ ವಿಠಲ್ ಅಹಿರೆ, ದೀಪಕ್ ಕುಮಾರ್, ರೇಖಾ ಭಗತ್

22 ನವೆಂಬರ್ 2024

ಸಂಜೆ 5:00

ಸಾಲಿ ಮಮೊಹಬ್ಬತ್

ದಿವ್ಯೇಂದು ಶರ್ಮಾ, ತೀಸ್ಕಾ ಚೋಪ್ರಾ, ಮನೀಶ್ ಮಲ್ಹೋತ್ರಾ, ಜ್ಯೋತಿ ದೇಶಪಾಂಡೆ, ದಿನೇಶ್ ಮಲ್ಹೋತ್ರಾ

ನವೆಂಬರ್ 22, 2024

ಸಂಜೆ 5:45

ಮಿಸಸ್‌

ಸನ್ಯಾ ಮಲ್ಹೋತ್ರಾ, ಆರತಿ ಕಡವ್, ಹರ್ಮನ್ ಬವೇಜಾ

ನವೆಂಬರ್ 23, 2024

ಸಂಜೆ 4:30

ವಿಕಟಕವಿ

ನರೇಶ್ ಅಗಸ್ತ್ಯ, ಮೇಘಾ ಆಕಾಶ್, ರಾಮ್ ತಲ್ಲೂರಿ, ಪ್ರದೀಪ್ ಮದ್ದಾಲಿ

ನವೆಂಬರ್ 23, 2024

ಸಂಜೆ 5:30

ಪುಣೆ ಹೈವೇ

ಅಮಿತ್ ಸಾಧ್, ಮಂಜರಿ ಫಡ್ನಿಸ್, ಕೇತಕಿ ನಾರಾಯಣ್, ಅನುಭವ್ ಪಾಲ್, ಶಿಶಿರ್ ಶರ್ಮಾ, ಸ್ವಪ್ನಿಲ್ ಅಜಗಾಂವ್ಕರ್, ಸುದೀಪ್ ಮೋದಕ್, ರಾಹುಲ್ ಡಿ'ಕುನ್ಹಾ, ಬಗ್ಸ್ ಭಾರ್ಗವ ಕೃಷ್ಣ, ಸೀಮಾ ಮೊಹಾಪಾತ್ರ, ಜಹಾನಾರಾ ಭಾರ್ಗವ

ನವೆಂಬರ್ 24, 2024

12 ಮಧ್ಯಾಹ್ನ

ಶೋಲೆ ಟ್ರೈಲರ್ +

ಹಜಾರ್ ವೇಲಾ ಶೋಲೆ

ಪೆಹ್ಲಿಲಾ ಮನುಸ್

 

ರಮೇಶ್ ಸಿಪ್ಪಿ + ಸೋನಾಲಿ ಕುಲಕರ್ಣಿ, ಸಿದ್ಧಾರ್ಥ್ ಜಾದವ್, ದಿಲೀಪ್ ಪ್ರಭಾವಲ್ಕರ್, ಹೃಷಿಕೇಶ್ ಗುಪ್ತೆ, ಶೆಹಜಾದ್ ಸಿಪ್ಪಿ

ನವೆಂಬರ್ 25, 2024

ಸಂಜೆ 4:30

ಕಣ್ಣಪ್ಪ (ಶೋಕೇಸ್

ವಿಷ್ಣು ಮಂಚು, ಪ್ರಭುದೇವ, ಕಾಜಲ್ ಅಗರ್ವಾಲ್, ಆರ್ ಶರತ್ಕುಮಾರ್, ಮೋಹನ್ ಬಾಬು, ಮುಖೇಶ್ ಕುಮಾರ್ ಸಿಂಗ್

ನವೆಂಬರ್ 25, 2024

ಸಂಜೆ 5:15

ಮೆಹ್ತಾ ಬಾಯ್ಸ್

ಬೊಮನ್ ಇರಾನಿ, ಅವಿನಾಶ್ ತಿವಾರಿ, ಶ್ರೇಯಾ ಚೌಧರಿ, ದಾನೇಶ್ ಇರಾನಿ

ನವೆಂಬರ್ 26, 2024

ಸಂಜೆ 5:00

ಜಬ್ ಖುಲಿ ಕಿತಾಬ್

ಡಿಂಪಲ್ ಕಪಾಡಿಯಾ, ಪಂಕಜ್ ಕಪೂರ್, ಅಪರಶಕ್ತಿ ಖುರಾನಾ, ಮಾನಸಿ ಪರೇಖ್, ಸಮೀರ್ ಸೋನಿ, ಸುಪ್ರಿಯಾ ಪಾಠಕ್, ಸೌರಭ್ ಶುಕ್ಲಾ, ಸಮೀರ್ ನಾಯರ್, ನರೇನ್ ಕುಮಾರ್

ನವೆಂಬರ್ 26, 2024

ಸಂಜೆ 5:45

ಹಿಸಾಬ್‌ ಬರಾಬರ್

ಆರ್ ಮಾಧವನ್, ಕೀರ್ತಿ ಕುಲ್ಹಾರಿ, ನೀಲ್ ನಿತಿನ್ ಮುಖೇಶ್, ಅಶ್ವನಿ ಧೀರ್

ನವೆಂಬರ್ 27, 2024

ಸಂಜೆ 5:15

ಫಾರ್ಮಾ (ಸರಣಿ)

ನಿವಿನ್ ಪೌಲಿ, ರಜಿತ್ ಕಪೂರ್, ಆಲೇಖ್ ಕಪೂರ್, ನರೇನ್, ಶ್ರುತಿ ರಾಮಚಂದ್ರನ್, ವೀಣಾ ನಂದಕುಮಾರ್

ನವೆಂಬರ್ 27, 2024

ಸಂಜೆ 5:45

ಹೆಡ್‌ಹಂಟಿಂಗ್  ಟು ಬೀಟ್‌ಬಾಕ್ಸಿಂಗ್‌

ಎಆರ್ ರೆಹಮಾನ್, ರೋಹಿತ್ ಗುಪ್ತಾ, ಅಮಿತ್ ಮಲಿಕ್, ಮಣಿಲ್ ಗುಪ್ತಾ

 

ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು https://iffigoa.org/gala-premier/3rd-edition ಗೆ ಭೇಟಿ ನೀಡಿ.

 

*****

iffi reel

(Release ID: 2074234) Visitor Counter : 11