ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
azadi ka amrit mahotsav

ಭುವನೇಶ್ವರದಲ್ಲಿ ನವೆಂಬರ್ 14 ಮತ್ತು 15 ರಂದು 'ಚಿಂತನ ಶಿಬಿರ'ವನ್ನು ಆಯೋಜಿಸಲಿರುವ ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ


2030ರ ವೇಳೆಗೆ 500 ಜಿ.ಡಬ್ಲ್ಯೂ ಗುರಿಯನ್ನು ಸಾಧಿಸಲು ಮತ್ತು 2047ರ ವೇಳೆಗೆ 1800 ಜಿ.ಡಬ್ಲ್ಯೂ ನ ಮುಂದಿನ ಗುರಿಯತ್ತ ಸಾಗುವ ಕಾರ್ಯತಂತ್ರಗಳ ಕುರಿತು 'ಚಿಂತನ ಶಿಬಿರ'ದಲ್ಲಿ ಚರ್ಚೆ ನಡೆಯಲಿದೆ

Posted On: 13 NOV 2024 9:59AM by PIB Bengaluru

ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯವು (ಎಂ.ಎನ್.ಆರ್.ಇ) 2024 ರ ನವೆಂಬರ್ 14 ಮತ್ತು 15 ರಂದು ಐಟಿಸಿ, ಭುವನೇಶ್ವರ, ಒಡಿಶಾದಲ್ಲಿ ಎರಡು ದಿನಗಳ 'ಚಿಂತನ ಶಿಬಿರ' ವನ್ನು ಆಯೋಜಿಸುತ್ತಿದೆ. ಈ 'ಚಿಂತನ ಶಿಬಿರ' ವು 2030ರ ವೇಳೆಗೆ 500 ಜಿ.ಡಬ್ಲ್ಯೂ ಗುರಿಯನ್ನು ಸಾಧಿಸುವ ಕಾರ್ಯತಂತ್ರಗಳ ಮೇಲೆ ಕೇಂದ್ರೀಕರಿಸುತ್ತದೆ ಮತ್ತು 2047ರ ವೇಳೆಗೆ 1800 ಜಿ.ಡಬ್ಲ್ಯೂ ನ ಮುಂದಿನ ಗುರಿಯತ್ತ ಚರ್ಚೆ ನಡೆಯಲಿದೆ.

ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಶ್ರೀ ಪ್ರಲ್ಹಾದ್ ಜೋಶಿ ಅವರು ನವೆಂಬರ್ 14 ರಂದು ಬೆಳಿಗ್ಗೆ 9 ಗಂಟೆಗೆ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಒಡಿಶಾದ ಮುಖ್ಯಮಂತ್ರಿ ಶ್ರೀ ಮೋಹನ್ ಚರಣ್ ಮಾಝಿ; ಕೇಂದ್ರದ ಹೊಸ ಮತ್ತು ನವೀಕರಿಸಬಹುದಾದ ಇಂಧನ ರಾಜ್ಯ ಸಚಿವ ಶ್ರೀ ಶ್ರೀಪಾದ್ ಯೆಸ್ಸೋ ನಾಯಕ್; ಒಡಿಶಾದ ಇಂಧನ ಸಚಿವ ಶ್ರೀ ಕನಕ ವರ್ಧನ್ ಸಿಂಗ್ ದೇವ್; ಮತ್ತು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಇಲಾಖೆಯ ಕಾರ್ಯದರ್ಶಿ ಶ್ರೀ ಪ್ರಶಾಂತ್ ಕುಮಾರ್ ಸಿಂಗ್ ಅವರು ಸಹ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಈ ಚಿಂತನ ಶಿಬಿರವು, ಕ್ಷೇತ್ರದ ಪ್ರಮುಖ ನಿರ್ಧಾರ ತೆಗೆದುಕೊಳ್ಳುವವರು, ಹಣಕಾಸು ಸಂಸ್ಥೆಗಳು, ಕೈಗಾರಿಕೋದ್ಯಮಿಗಳು, ಸಿಇಒಗಳು ಮತ್ತು ಭಾರತದ ನವೀಕರಿಸಬಹುದಾದ ಇಂಧನ ಪ್ರಯಾಣಕ್ಕೆ ಅವಿಭಾಜ್ಯವಾಗಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರಮುಖ ಅಧಿಕಾರಿಗಳನ್ನು ಒಂದು ವೇದಿಕೆಯಲ್ಲಿ ಒಟ್ಟುಗೂಡಿಸುವ ಗುರಿಯನ್ನು ಹೊಂದಿದೆ. ವಿವಿಧ ವಿಷಯಾಧಾರಿತ ಅಧಿವೇಶನಗಳ ಮೂಲಕ ಇಂಧನ ವಲಯದಲ್ಲಿನ ಪ್ರಮುಖ ಮತ್ತು ಉದಯೋನ್ಮುಖ ಸಮಸ್ಯೆಗಳ ಕುರಿತು ಭಾಗವಹಿಸುವವರು ಚರ್ಚೆ ನಡೆಸಲಿದ್ದಾರೆ.

ಪ್ರಮುಖ ಸಭಾ ಅಧಿವೇಶನಗಳು ಈ ಕೆಳಗಿನ ವಿಷಯಗಳನ್ನು ಒಳಗೊಂಡಿರುತ್ತವೆ:

ದಿನ 1: 14ನೇ ನವೆಂಬರ್ 2024

  • ಪ್ರಧಾನಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆ: 1 ಕೋಟಿ ಮೇಲ್ಛಾವಣಿ ಸೌರ ಘಟಕಗಳನ್ನು ಸಾಧಿಸುವುದು
  • ಭಾರತದಲ್ಲಿ ಸೌರ ಪೂರಕ ಉತ್ಪಾದನೆಯನ್ನು ಉತ್ತೇಜಿಸುವುದು
  • ಭೂಮಿ ಮತ್ತು ಸ್ಥಳಾಂತರಿಸುವಿಕೆ - ಭಾರತೀಯ “ಯುಟಿಲಿಟಿ ಸ್ಕೇಲ್ ಪ್ಲಾಂಟ್” ಗಳನ್ನು ವೇಗಗೊಳಿಸಲು ಪ್ರಮುಖ ಉಪಕ್ರಮಗಳನ್ನು ಸಕ್ರಿಯಗೊಳಿಸುವುದು
  • ಗಣಿಗಳಿಂದ ಮಾಡ್ಯೂಲ್ ಗಳ ವರೆಗೆ: ಜಾಗತಿಕ ಸೌರ ಶಕ್ತಿ ಉತ್ಪಾದನಾ ಕೇಂದ್ರವಾಗಿ ಭಾರತವನ್ನು ರೂಪಿಸುವುದು
  • ಜಾಗತಿಕ ಗಾಳಿ ಶಕ್ತಿ ಉತ್ಪಾದನಾ ಕೇಂದ್ರವಾಗಿ ಭಾರತವನ್ನು ರೂಪಿಸುವುದು
  • ಮುಂದಿನ ಆರ್.ಇ ಸಾಮರ್ಥ್ಯ ಮತ್ತು ಪ್ರಸರಣ ಸಿದ್ಧತೆಯ ನಡುವೆ ಹೊಂದಾಣಿಕೆ ರೂಪಿಸುವುದು
  • ಕೃಷಿ ಸೌರೀಕರಣ - ಸೌರ ಪಂಪ್ ಗಳ ಅನುಷ್ಠಾನವನ್ನು ಸಾಧಿಸುವ ಮಾರ್ಗ, ಫೀಡರ್ ಗಳ ಸೌರೀಕರಣ ಮತ್ತು ಕೃಷಿ - ಸೌರೀಕರಣ ಗಳ ಏಕೀಕರಣ ವ್ಯವಸ್ಥೆಗಳನ್ನು ರೂಪಿಸುವುದು
  • ಭಾರತದ ಗಾಳಿ ಶಕ್ತಿ - ಕಡಲಾಚೆಯ ಗ್ರಿಡ್ ಗಳ ಏಕೀಕರಣಕ್ಕಾಗಿ ಮುಂದಿನ ದಾರಿ ಕಂಡು ಹಿಡಿಯುವುದು

ದಿನ 2: 15ನೇ ನವೆಂಬರ್ 2024

  • ಡಿಸ್ಕಮ್ ಗಳಿಂದ “ಆರ್.ಇ. ಪವರ್ ಆಫ್ಟೇಕ್ “ ಅನ್ನು ಖಾತ್ರಿಪಡಿಸುವಲ್ಲಿರುವ ತಂತ್ರ – ಅಡಚಣೆಗಳ ನಿವಾರಣೆ, ನೂತನ ಸಾಧ್ಯತೆಗಳು ಮತ್ತು ಮುಂದಿನ ಅವಕಾಶಗಳು
  • ರಾಷ್ಟ್ರೀಯ ಜೈವಿಕ ಶಕ್ತಿ ಕಾರ್ಯಕ್ರಮ - ಭಾರತೀಯ ಶಕ್ತಿಯ ಗುಚ್ಛದಲ್ಲಿ ಜೈವಿಕ ಅನಿಲದ ಉದಯೋನ್ಮುಖ ಪಾತ್ರಗಳನ್ನು ಸಾಧಿಸುವ ಕ್ರಮಗಳು
  • ಭಾರತದಲ್ಲಿ ಇಂಧನ ಸಂಗ್ರಹದ ಉದಯೋನ್ಮುಖ ಅವಕಾಶಗಳು - ಬ್ಯಾಟರಿ ಶಕ್ತಿ ಸಂಗ್ರಹಣೆ ಮತ್ತು ಪಂಪ್ಡ್ ಸ್ಟೋರೇಜ್ ತಂತ್ರಜ್ಞಾನಗಳ ಮೇಲೆ ಕೇಂದ್ರೀಕರಿಸಿ ಚರ್ಚೆ
  • ಭಾರತದಲ್ಲಿನ ಸಣ್ಣ ಜಲವಿದ್ಯುತ್ ಸ್ಥಾವರಗಳಿಗೆ ಸಮಗ್ರ ಕಾರ್ಯತಂತ್ರವನ್ನು ಅಭಿವೃದ್ಧಿಪಡಿಸುವುದು
  • ಗ್ರೀನ್ ಹೈಡ್ರೋಜನ್ ಹಾರಿಜಾನ್ಸ್ - ಎಲೆಕ್ಟ್ರೋಲೈಜರ್ ಉತ್ಪಾದನಾ ವ್ಯವಸ್ಥೆ ಬೆಳೆಸುವುದು ಮತ್ತು ಆಫ್ಟೇಕ್ ವ್ಯವಸ್ಥೆಗಳಿಗಾಗಿ ಕಾರ್ಯತಂತ್ರಗಳು
  • ಭಾರತದ ಡಿಕಾರ್ಬೊನೈಸೇಶನ್ ವ್ಯವಸ್ಥೆಯಲ್ಲಿ ಸೌರ ಉಷ್ಣದ ಪಾತ್ರ - ವಸತಿ, ಸಂಗ್ರಹಣೆ ಮತ್ತು ಕೈಗಾರಿಕಾ ಬಳಕೆಗಳು
  • ಈಶಾನ್ಯ ರಾಜ್ಯಗಳು, ಗುಡ್ಡಗಾಡು ರಾಜ್ಯಗಳು ಮತ್ತು ದ್ವೀಪ ಪ್ರದೇಶಗಳಲ್ಲಿ ನವೀಕರಿಸಬಹುದಾದ ಇಂಧನ ವ್ಯವಸ್ಥೆಗಳ ಏಕೀಕರಣ
  • ಹಣಕಾಸು ಮತ್ತು ವ್ಯಾಪಾರ ಮಾದರಿಗಳಲ್ಲಿ ನಾವೀನ್ಯತೆ
  • ಭಾರತದ ಇಂಧನ ಪರಿವರ್ತನೆಗೆ ಶಕ್ತಿ ನೀಡಲು ಕೌಶಲ್ಯ-ಸಿದ್ಧ ಕಾರ್ಯಪಡೆಯನ್ನು ಅಭಿವೃದ್ಧಿಪಡಿಸುವುದು.

15ನೇ ನವೆಂಬರ್ 2024 ರಂದು ಸಂಜೆ 4:00 ಗಂಟೆಗೆ ಸಮಾರೋಪ ಸಮಾರಂಭದೊಂದಿಗೆ ಚಿಂತನ ಶಿಬಿರವು ಮುಕ್ತಾಯಗೊಳ್ಳಲಿದೆ. ಚಿಂತನ ಶಿಬಿರದ ಪ್ರತಿ ವಿಷಯಗಳ ಅಧಿವೇಶನದ ಪ್ರಮುಖ ಟಿಪ್ಪಣಿ ತಯಾರಿಸಲಾಗುವುದು ಮತ್ತು ಎರಡು ದಿನಗಳ ಕಾರ್ಯಕ್ರಮದಲ್ಲಿ ಮುಂದಿನ ಭವಿಷ್ಯದ ಕಾರ್ಯತಂತ್ರಗಳನ್ನು ಚರ್ಚಿಸಲಾಗುವುದು.

 

*****


(Release ID: 2073238) Visitor Counter : 16


Read this release in: Urdu , English , Hindi , Odia , Tamil